logo
ಕನ್ನಡ ಸುದ್ದಿ  /  ಜೀವನಶೈಲಿ  /  Jiotv Premium Plans: 28 ದಿನಕ್ಕೆ 398 ರೂಪಾಯಿ ಪಾವತಿಸಿದ್ರೆ ಸಾಕು, ಜಿಯೋ ಟಿವಿಯಲ್ಲಿನ್ನು 14 ಒಟಿಟಿಗಳ ಕಂಟೆಂಟ್ ವೀಕ್ಷಿಸಬಹುದು

JioTV Premium Plans: 28 ದಿನಕ್ಕೆ 398 ರೂಪಾಯಿ ಪಾವತಿಸಿದ್ರೆ ಸಾಕು, ಜಿಯೋ ಟಿವಿಯಲ್ಲಿನ್ನು 14 ಒಟಿಟಿಗಳ ಕಂಟೆಂಟ್ ವೀಕ್ಷಿಸಬಹುದು

HT Kannada Desk HT Kannada

Dec 16, 2023 05:50 AM IST

ಜಿಯೋಟಿವಿ ಪ್ರೀಮಿಯಂ ಪ್ಲಾನ್

  • ಜಿಯೋ ಪ್ರೀಪೇಯ್ಡ್ ಗ್ರಾಹಕರಿಗೆ ಜಿಯೋಟಿವಿ ಪ್ರೀಮಿಯಂ ಪ್ಲಾನ್ ಪರಿಚಯಿಸಿದ ರಿಲಯನ್ಸ್ ಜಿಯೋ. 28 ದಿನಕ್ಕೆ 398 ರೂಪಾಯಿ, 84 ದಿನಕ್ಕೆ 1198 ರೂಪಾಯಿ, 365 ದಿನಗಳಿಗೆ 4498 ರೂಪಾಯಿ ಪಾವತಿಸಿ ಸಬ್‌ಸ್ಕ್ರೈಬ್ ಮಾಡಿದರೆ 14 ಒಟಿಟಿಗಳ ಕಂಟೆಂಟ್‌ ಅನ್ನು ನಿರಂತರವಾಗಿ ಅಡಚಣೆ ಇಲ್ಲದೇ ವೀಕ್ಷಿಸಬಹುದು. ಇದರ ವಿವರ ಇಲ್ಲಿದೆ.

ಜಿಯೋಟಿವಿ ಪ್ರೀಮಿಯಂ ಪ್ಲಾನ್
ಜಿಯೋಟಿವಿ ಪ್ರೀಮಿಯಂ ಪ್ಲಾನ್ (JioTV)

ರಿಲಯನ್ಸ್ ಜಿಯೋ ಕಂಪನಿಯು ತನ್ನ ಜಿಯೋ ಪ್ರೀಪೇಯ್ಡ್ ಗ್ರಾಹಕರಿಗಾಗಿ ಹೊಸ ಜಿಯೋಟಿವಿ ಪ್ರೀಮಿಯಂ ಪ್ಲಾನ್ ಅನ್ನು ಶುಕ್ರವಾರ (ಡಿ.15) ಪರಿಚಯಿಸಿದೆ. ತಿಂಗಳ, ಮೂರು ತಿಂಗಳ ಮತ್ತು ವರ್ಷದ ಪ್ಯಾಕೇಜ್ ಹೊಂದಿರುವ ಈ ಪ್ಲಾನ್‌ನಲ್ಲಿ ಜಿಯೋ ಪ್ರೀಪೇಯ್ಡ್‌ ಬಳಕೆದಾರರು ನಿರಂತರ, ಕೊನೆಗೊಳ್ಳದ ಮನರಂಜನೆಯನ್ನು ಆನಂದಿಸಬಹುದು ಎಂಬ ಭರವಸೆಯನ್ನು ರಿಲಯನ್ಸ್‌ ಜಿಯೋ ನೀಡಿದೆ.

ಟ್ರೆಂಡಿಂಗ್​ ಸುದ್ದಿ

ಮಾವಿನಹಣ್ಣಿನಿಂದ ತಯಾರಿಸಬಹುದು ಒಂದಲ್ಲ, ಎರಡಲ್ಲ ಮೂರು ಬಗೆಯ ಪಾಯಸ; ಈ ಭಾನುವಾರ ನೀವೂ ಮನೆಯಲ್ಲಿ ಟ್ರೈ ಮಾಡಿ, ರೆಸಿಪಿ ಇಲ್ಲಿದೆ

Relationship tips: ವರ್ಷಗಳು ಸರಿದರೂ ದಾಂಪತ್ಯದಲ್ಲಿ ಪ್ರೀತಿಯ ತಾಜಾತನ ಉಳಿಬೇಕು ಅಂದ್ರೆ ಈ 4 ನಿಯಮಗಳನ್ನು ತಪ್ಪದೇ ಪಾಲಿಸಿ

Brain Teaser: 212=25, 214=47 ಆದ್ರೆ, 215 = ಎಷ್ಟು? ಗಣಿತದಲ್ಲಿ ನೀವು ಜಾಣರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಪಾಯಸದಿಂದ ಕೇಸರಿಬಾತ್‌ವರೆಗೆ, ಬಾಯಲ್ಲಿ ನೀರೂರಿಸುವ ಮಾವಿನಹಣ್ಣಿನ ಸಾಂಪ್ರದಾಯಿಕ ತಿನಿಸುಗಳಿವು; ಈ ರೆಸಿಪಿಗಳನ್ನು ನೀವೂ ಟ್ರೈ ಮಾಡಿ

ಈ ಪ್ಲಾನ್‌ಗಳ ಪೈಕಿ ಯಾವುದನ್ನೇ ಆದರೂ ಜಿಯೋ ಪ್ರೀಪೇಯ್ಡ್ ಗ್ರಾಹಕರು ಖರೀದಿಸಿದರೆ, ಅವರಿಗೆ ಅನಿಯಮಿತ ಡೇಟಾ, ಧ್ವನಿ, ಎಸ್ಸೆಮ್ಮೆಸ್ ಹಾಗೂ 14 ಪ್ರಮುಖ ಒಟಿಟಿ (ಓವರ್ ದಿ ಟಾಪ್)ಗಳ ಚಂದಾದಾರಿಕೆಯನ್ನು ಪಡೆಯಬಹುದು. 1000 ರೂಪಾಯಿ ಮೌಲ್ಯದ ಒಟಿಟಿ ಚಂದಾದಾರಿಕೆ ಯಾವುದೇ ಹೆಚ್ಚುವರಿ ಶುಲ್ಕ ಇಲ್ಲದೆ ಬಳಕೆದಾರರಿಗೆ ದೊರೆಯುತ್ತದೆ.

ಜಿಯೋಟಿವಿ ಪ್ರೀಮಿಯಂ ಪ್ಲಾನ್ ತಿಂಗಳಿಗೆ 398 ರೂಪಾಯಿಯೊಂದಿಗೆ ಆರಂಭವಾಗುತ್ತದೆ. ಅಂದ ಹಾಗೆ ಈ 14 ಒಟಿಟಿಗಳಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಹಾಗೂ ಪ್ರಾದೇಶಿಕ ಕಂಟೆಂಟ್ ಲಭ್ಯವಾಗುತ್ತದೆ. ಡಿಜಿಟಲ್ ಟಿವಿ, ಕ್ರೀಡಾ, ಒರಿಜಿನಲ್ಸ್, ಟೀವಿ ಶೋ ಮುಂತಾದವು ದೊರೆಯುತ್ತವೆ. ಪ್ರೀಪೇಯ್ಡ್ ಸೆಗ್ಮಂಟ್‌ನಲ್ಲಿ ವಾರ್ಷಿಕ ಪ್ಲಾನ್ ಖರೀದಿ ಮಾಡುವಂಥ ಗ್ರಾಹಕರಿಗಾಗಿಯೇ ಒನ್ ಕ್ಲಿಕ್ ಕಾಲ್ ಸೆಂಟರ್‌ನ ನೆರವು ಕೂಡ ದೊರೆಯುತ್ತದೆ.

ಜಿಯೋಟಿವಿ ಪ್ರೀಮಿಯಂ ಪ್ಲಾನ್ ಖರೀದಿಸಿದರೆ ಯಾವ್ಯಾವ ಆಪ್‌ಗಳು ದೊರೆಯುತ್ತವೆ ಎಂದು ಗಮನಿಸುವುದಾದರೆ, ಜಿಯೋ ಸಿನಿಮಾ ಪ್ರೀಮಿಯಂ, ಡಿಸ್ನಿ+ ಹಾಟ್ ಸ್ಟಾರ್, ಝೀ5, ಸೋನಿಲೈವ್ ಮುಂತಾದ ರಾಷ್ಟ್ರೀಯ ಆಪ್‌ಗಳು, ಪ್ರೈಮ್ ವಿಡಿಯೋ (ಮೊಬೈಲ್), ಲಯನ್ಸ್ ಗೇಟ್ ಪ್ಲೇ, ಡಿಸ್ಕವರಿ+, ಡಾಕ್ಯುಬೇ ಮುಂತಾದ ಅಂತಾರಾಷ್ಟ್ರೀಯ ಆಪ್‌ಗಳು, ಸನ್ ನೆಕ್ಸ್ಟ್, ಹೊಯ್ ಚೊಯ್, ಪ್ಲಾನೆಟ್ ಮರಾಠಿ, ಚೌಪಾಲ್, ಎಪಿಕ್ ಆನ್, ಕಂಚಾ ಲಂಕಾ ಮುಂತಾದ ಪ್ರಾದೇಶಿಕ ಆಪ್‌ಗಳು ಸಿಗುತ್ತವೆ.

ಜಿಯೋಟಿವಿ ಪ್ರೀಮಿಯಂ ಪ್ಲಾನ್ ಖರೀದಿಸಿದವರಿಗೆ ವಿವಿಧ ಒಟಿಟಿಗಳಿಗೆ ಪ್ರತ್ಯೇಕವಾಗಿ ಸಬ್‌ಸ್ಕ್ರೈಬ್ ಆಗಬೇಕಾದ ಅಗತ್ಯ ಇರುವುದಿಲ್ಲ. ಹಲವು ಲಾಗಿನ್ ಐಡಿ ಬೇಕು, ಪ್ರತಿ ಆಪ್‌ಗೂ ಪ್ರತ್ಯೇಕವಾಗಿ ಪಾಸ್ ವರ್ಡ್ ಹಾಕಬೇಕು ಎಂಬ ಕಿರಿಕಿರಿಯೂ ಇರುವುದಿಲ್ಲ. ಜಿಯೋ ಟಿವಿ ಪ್ರೀಮಿಯಂನಲ್ಲೇ 14 ಆಪ್‌ಗಳ ಕಂಟೆಂಟ್‌ಗಳು ದೊರೆಯುತ್ತದೆ.

ಗ್ರಾಹಕರು ತಮಗೆ ಬೇಕಾದ ಕಂಟೆಂಟ್ ಇದರಲ್ಲಿ ಹುಡುಕುವುದು ಸಹ ಸುಲಭವಾಗಿದ್ದು, ಶಿಫಾರಸಿಗಾಗಿಯೇ ಉತ್ತಮ ಹುಡುಕಾಟದ ಎಂಜಿನ್ ವ್ಯವಸ್ಥೆ ಇದೆ. ಅದೇ ರೀತಿ ಗ್ರಾಹಕರು ತಮ್ಮ ಆದ್ಯತೆಯಂತೆ ಮಾಸಿಕ, ತ್ರೈಮಾಸಿಕ ಹಾಗೂ ವಾರ್ಷಿಕ ಪ್ಲಾನ್ ಗಳ ವ್ಯಾಲಿಡಿಟಿಯನ್ನು ಆರಿಸಿಕೊಳ್ಳಬಹುದು. ಒಂದೇ ಕ್ಲಿಕ್ ನಲ್ಲಿ ಕಸ್ಟಮರ್ ಕೇರ್ ಕಾಲ್ ಬ್ಯಾಕ್ ಸೇವೆ ಲಭ್ಯ ಇದ್ದು, ವಾರ್ಷಿಕ ಪ್ಲಾನ್ ರೀಚಾರ್ಜ್‌ಗೆ ಇಎಂಐ ಸೌಲಭ್ಯ ಸಹ ದೊರೆಯಲಿದೆ.

ಜಿಯೋ ಟಿವಿ ಪ್ರೀಮಿಯಂ ಒಟಿಟಿ ಕಂಟೆಂಟ್ ಬಳಸುವುದು ಹೇಗೆ ಎನ್ನುವುದನ್ನು ವಿವರಿಸುವುದಾದರೆ, ಮೊದಲಿಗೆ ಜಿಯೋಟಿವಿ ಪ್ರೀಮಿಯಂನ ಮಾಸಿಕ, ತ್ರೈಮಾಸಿಕ ಅಥವಾ ವಾರ್ಷಿಕ ಪ್ಲಾನ್ ನೊಂದಿಗೆ ರೀಚಾರ್ಜ್ ಮಾಡಬೇಕು. ಅದಾಗಿ, ಅದೇ ಜಿಯೋ ಮೊಬೈಲ್ ಫೋನ್ ಸಂಖ್ಯೆಯೊಂದಿಗೆ ಜಿಯೋ ಟಿವಿ ಆಪ್ ಗೆ ಸೈನ್ ಇನ್ ಆಗಬೇಕು. ಜಿಯೋಟಿವಿ ಪ್ರೀಮಿಯಂ ಟ್ಯಾಬ್ ಮೂಲಕವಾಗಿ ಪ್ರೀಮಿಯಂ ಒಟಿಟಿ ಆಪ್ ಕಂಟೆಂಟ್ ಅನ್ನು ಆನಂದಿಸಬಹುದು. ಪ್ರತ್ಯೇಕವಾದ ಲಾಗಿನ್ ಅಥವಾ ಪಾಸ್ ವರ್ಡ್ ಅಗತ್ಯ ಇಲ್ಲ.

ಬಳಕೆದಾರರ ಮೈಜಿಯೋ ಕೂಪನ್ ವಿಭಾಗದಲ್ಲಿ ದೊರೆಯುವ ಕೂಪನ್ ಮೂಲಕವಾಗಿ ಜಿಯೋಸಿನಿಮಾ ಪ್ರೀಮಿಯಂ ಸಬ್ ಸ್ಕ್ರಿಪ್ಷನ್ ದೊರೆಯುತ್ತದೆ. ಪ್ರೀಮಿಯಂ ಕಂಟೆಂಟ್ ಬೇಕು ಅಂತಾದಲ್ಲಿ ಜಿಯೋಸಿನಿಮಾ ಆಪ್ ನಲ್ಲಿ ಕೂಪನ್ ರಿಡೀಮ್ ಮಾಡಬೇಕು.

ತಮ್ಮ ಬಳಿ ಇರುವಂಥ ಆಯಾ ಆಪ್ ಮೂಲಕವಾಗಿ ಪ್ರೈಮ್ ವಿಡಿಯೋ (ಮೊಬೈಲ್) ಮತ್ತು ಡಿಸ್ನಿ+ ಹಾಟ್ ಸ್ಟಾರ್ ಕಂಟೆಂಟ್ ಗಳನ್ನು ನೋಡಬಹುದು. ಮೈಜಿಯೋ ಮೂಲಕ ಬಳಕೆದಾರರು ಅಮೆಜಾನ್ ಪ್ರೈಮ್ ಸಬ್ ಸ್ಕ್ರಿಪ್ಷನ್ ಸಕ್ರಿಯಗೊಳಿಸಬೇಕಾಗುತ್ತದೆ. ಆಪ್ ಗೆ ಲಾಗಿನ್ ಆಗುವಾಗ ಡಿಸ್ನಿ+ ಹಾಟ್ ಸ್ಟಾರ್ ಆಕ್ಟಿವೇಟ್ ಆಗುತ್ತದೆ.

    ಹಂಚಿಕೊಳ್ಳಲು ಲೇಖನಗಳು