Summer Tips: ಬಿರು ಬೇಸಿಗೆಯಲ್ಲೂ ಕಾರ್‌ನಲ್ಲಿ ರೋಡ್ ಟ್ರಿಪ್ ಮಾಡ್ತೀರಾ, ಹಾಗಿದ್ರೆ ಈ ಮುನ್ನೆಚ್ಚರಿಕೆಗಳನ್ನು ಮರಿಬೇಡಿ
May 06, 2024 08:00 AM IST
ಬಿರು ಬೇಸಿಗೆಯಲ್ಲೂ ಕಾರ್‌ನಲ್ಲಿ ರೋಡ್ ಟ್ರಿಪ್ ಮಾಡ್ತೀರಾ, ಹಾಗಿದ್ರೆ ಈ ಮುನ್ನೆಚ್ಚರಿಕೆಗಳನ್ನು ಮರಿಬೇಡಿ
- ಹೊರಗಡೆ ಸುಡು ಬಿಸಿಲಿದ್ರೂ ಬೇಸಿಗೆ ದಿನಗಳಲ್ಲಿ ರೋಡ್ ಟ್ರಿಪ್ ಮಾಡುವವರ ಸಂಖ್ಯೆ ಕಡಿಮೆಯೇನಿಲ್ಲ. ನೀವು ಈ ಬೇಸಿಗೆಯಲ್ಲಿ ಕಾರಿನಲ್ಲಿ ರೋಡ್ ಟ್ರಿಪ್ ಮಾಡುವ ಪ್ಲಾನ್ ಇದ್ರೆ ನಿಮಗಾಗಿ ಇಲ್ಲಿದೆ ಒಂದಿಷ್ಟು ಟಿಪ್ಸ್. ಈ ಮುನ್ನೆಚ್ಚರಿಕೆಗಳನ್ನು ಪಾಲಿಸಿ ರೋಡ್ ಟ್ರಿಪ್ ಎಂಜಾಯ್ ಮಾಡಿ.
ಪ್ರವಾಸ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಕೆಲವರು ಮಳೆ, ಚಳಿ, ಬಿಸಿಲು ಏನೇ ಇದ್ರೂ ಪ್ರವಾಸ ಮಾಡಲು ಹಿಂಜರಿಯುವುದಿಲ್ಲ. ಈಗ ಸುಡು ಬಿಸಿಲು, ಹಾಗಂತ ಕೆಲವರು ಮನೆಯಲ್ಲಿ ಕುಳಿತುಕೊಳ್ಳುವುದಿಲ್ಲ. ಫ್ಯಾಮಿಲಿ ಇದ್ದವರಿಗಂತೂ ಮಕ್ಕಳಿಗೆ ಬೇಸಿಗೆ ರಜೆ. ಸೋ ಎಲ್ಲರೂ ಸೇರಿ ಟ್ರಿಪ್ ಮಾಡುವ ಪ್ಲಾನ್ ಮಾಡಿರಬಹುದು. ಎಲ್ಲರೂ ಸೇರಿ ಎಂದಾಗ ಕಾರ್‌ನಲ್ಲಿ ಹೋಗುವುದೇ ಬೆಸ್ಟ್ ಎಂದುಕೊಳ್ಳುತ್ತೀರಿ. ಬೇಸಿಗೆಯಲ್ಲಿ ರೋಡ್‌ಟ್ರಿಪ್ ಮಾಡುವುದು ಹಲವರಿಗೆ ಖುಷಿ ನೀಡುತ್ತದೆ. ಆದರೆ ಬಿಸಿಲು ಹೆಚ್ಚಿರುವ ಸಮಯದಲ್ಲಿ ಕಾರ್‌ನಲ್ಲಿ ರೋಡ್ ಟ್ರಿಪ್ ಮಾಡುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಬೇಕು. ಹಾಗಾದರೆ ಬೇಸಿಗೆಯಲ್ಲಿ ಕಾರಿನಲ್ಲಿ ರೋಡ್ ಟ್ರಿಪ್ ಮಾಡುವಂತಿದ್ದರೆ ಮುನ್ನೆಚ್ಚರಿಕೆ ಹೇಗಿರಬೇಕು.
ನೀರಿನ ಬಾಟಲಿಗಳಿರಲಿ
ಬೇಸಿಗೆಯಲ್ಲಿ ಕಾರ್‌ನಲ್ಲಿ ರೋಡ್ ಟ್ರಿಪ್ ಮಾಡ್ತೀರಿ ಅಂತಾದ್ರೆ ನೀವು ಸಾಕಷ್ಟು ನೀರಿನ ಬಾಟಲಿಗಳನ್ನು ಕಾರಿನಲ್ಲಿ ಇರಿಸಿಕೊಂಡಿರಬೇಕು. ಇಲ್ಲದೇ ಹೋದರೆ ತೊಂದರೆ ಎದುರಾಗಬಹುದು. ಯಾಕೆಂದರೆ ನೀವು ಹೋಗುವ ಜಾಗದಲ್ಲೆಲ್ಲಾ ನೀರು ಸಿಗುತ್ತದೆ ಎನ್ನುವ ಭರವಸೆ ಇರುವುದಿಲ್ಲ. ಜೊತೆಗೆ ಕಾರಿನ ಎಂಜಿನ್ ಹೀಟ್ ಆಗುವುದರಿಂದ ಕೂಡ ನೀರು ಅವಶ್ಯವಾಗುತ್ತದೆ. ಜೊತೆಗೆ ಸಿಕ್ಕ ಸಿಕ್ಕ ನೀರು ಕುಡಿಯುವುದರಿಂದ ಆರೋಗ್ಯ ಕೆಡಬಹುದು. ಬೇಸಿಗೆ ಟ್ರಿಪ್‌ನಲ್ಲಿ ನೀರು ಅತ್ಯವಶ್ಯ.
ಸಾಧ್ಯವಾದಷ್ಟು ಬಿರುಬಿಸಿಲಿನಲ್ಲಿ ಕಾರು ಓಡಿಸದೇ ಇರುವುದು ಉತ್ತಮ
ದಿನವಿಡೀ ಓಡುವ ಕಾರನ್ನು ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ಓಡಿಸದೇ ಇರುವುದು ಉತ್ತಮ. ಇದರಿಂದ ಕಾರಿನ ಟೈರ್ ಹಾಗೂ ಎಂಜಿನ್‌ಗಳಿಗೆ ಸಹಾಯವಾಗುತ್ತದೆ. ಕೆಲವೊಮ್ಮೆ ಉರಿ ಬಿಸಿಲಿನಲ್ಲಿ ಎಂಜಿನ್‌ಗಳು ಹೊತ್ತಿ ಉರಿಯುವ ಸಾಧ್ಯತೆಯೂ ಇದೆ. ಹಾಗಾಗಿ ಮಧ್ಯಾಹ್ನದ ಬಿಸಿಲಿನಲ್ಲಿ ಕಾರು ಓಡಿಸಬೇಡಿ.
ಗ್ಲಾಸ್ ಇಳಿಸಿಕೊಳ್ಳಿ
ಕಾರಿನಲ್ಲಿ ಟ್ರಿಪ್ ಮಾಡುವ ಪ್ಲಾನ್ ಇದ್ದರೆ ಕಿಟಕಿ ಗ್ಲಾಸ್‌ಗಳನ್ನು ಇಳಿಸಿಕೊಳ್ಳಿ. ಇದರಿಂದ ತಾಜಾ ಗಾಳಿ ಕಾರಿನೊಳಗೆ ಬರುತ್ತದೆ. ಬಹಳ ಹೊತ್ತು ಕಾರಿನ ಏಸಿಯಲ್ಲಿ ಕುಳಿತುಕೊಳ್ಳುವುದು ಒಳ್ಳೆಯದಲ್ಲ. ಸಂಜೆ ಹಾಗೂ ಬೆಳಗಿನ ಗೊತ್ತು ಕಿಟಕಿ ಗ್ಲಾಸ್ ಇಳಿಸಿಕೊಂಡು ನಿಧಾನಕ್ಕೆ ಹೋಗಿ.
ಫುಲ್ ಟ್ಯಾಂಕ್ ಮಾಡಿಸಬೇಡಿ
ಸಾಮಾನ್ಯವಾಗಿ ಕಾರಿನಲ್ಲಿ ರೋಡ್ ಟ್ರಿಪ್ ಮಾಡುವ ಫುಲ್ ಟ್ಯಾಂಕ್ ಪೆಟ್ರೊಲ್, ಡಿಸೇಲ್ ಹಾಕಿಸುವುದು ಸಹಜ. ಆದರೆ
ಬೇಸಿಗೆಯಲ್ಲಿ ತಾಪಮಾನ ಏರಿಕೆಯಾಗುವ ಕಾರಣ ಫುಲ್ ಟ್ಯಾಂಕ್ ಮಾಡಿಸುವುದು ಅಪಾಯ. ಇದರಿಂದ ಕಾರು ಸ್ಫೋಟಗೊಳ್ಳಬಹುದು. ಒಂದು ಲೀಟರ್ ಡಿಸೇಲ್ ಅಥವಾ ಪೆಟ್ರೋಲ್ ಬಾಟಲಿಯಲ್ಲಿ ತುಂಬಿಸಿಟ್ಟುಕೊಳ್ಳಿ
ಮಕ್ಕಳ, ಸಾಕುಪ್ರಾಣಿಗಳನ್ನು ಕಾರಿನಲ್ಲಿ ಬಿಡಬೇಡಿ
ಕಾರಿನಲ್ಲಿ ಟ್ರಾವೆಲ್ ಮಾಡುವಾಗ ದಾರಿ ಮಧ್ಯೆ ನಿಲ್ಲಿಸಿ ಊಟ ಮಾಡುವುದು, ಚಹಾ ಕುಡಿಯುವುದು ಇಂತಹ ಅಭ್ಯಾಸಗಳು ಸಹಜ. ಆದರೆ ಬೇಸಿಗೆಯಲ್ಲಿ ಕಾರಿನಲ್ಲಿ ಗ್ಲಾಸ್ ಏರಿಸಿ ಮಕ್ಕಳು ಹಾಗೂ ಸಾಕುಪ್ರಾಣಿಗಳನ್ನು ತಪ್ಪಿಯೂ ಇರಿಸಿ ಹೋಗಬೇಡಿ. ಇದರಿಂದ ಅಪಾಯ ಖಚಿತ. ಅವರ ಪ್ರಾಣಕ್ಕೂ ತೊಂದರೆಯಾಗಬಹುದು.
ಒಂದಿಷ್ಟು ಆಹಾರಗಳನ್ನು ಜೊತೆಗೆ ತೆಗೆದುಕೊಂಡು ಹೋಗಿ
ಕಾರ್‌ನಲ್ಲಿ ರೋಡ್ ಟ್ರಿಪ್ ಹೋಗುವುದು ಎಲ್ಲಿ ಬೇಕಾದ್ರೂ ನಿಲ್ಲಿಸಿ ತಿನ್ನಬಹುದು ಎನ್ನುವ ಯೋಚನೆ ಬೇಡ. ಸಾಧ್ಯವಾದಷ್ಟು ಕೆಲ ದಿನಗಳ ಕಾಲ ಬರುವ ಆಹಾರಗಳನ್ನು ಮನೆಯಿಂದಲೇ ತೆಗೆದುಕೊಂಡು ಹೋಗಿ. ಇದರಿಂದ ಆರೋಗ್ಯವೂ ಕೆಡುವುದಿಲ್ಲ.
ಫಸ್ಟ್ ಏಡ್ ಬಾಕ್ಸ್
ಫಸ್ಟ್ ಏಡ್ ಬಾಕ್ಸ್ ಎಲ್ಲಾ ಸಮಯದಲ್ಲೂ ಕಾರಿನಲ್ಲೇ ಇರಬೇಕು. ಇದು ಬೇಸಿಗೆ ರೋಡ್‌ಟ್ರಿಪ್‌ಗೂ ಬಹಳ ಅವಶ್ಯ.
ಕಾರು ಸರ್ವೀಸ್ ಮಾಡಿಸಿ
ಈ ಎಲ್ಲಕ್ಕಿಂತ ಮುಖ್ಯವಾದದ್ದು ಬೇಸಿಗೆಯಲ್ಲಿ ರೋಡ್ ಟ್ರಿಪ್ ಮಾಡುವ ಮೊದಲೇ ಕಾರನ್ನು ಸರ್ವೀಸ್ ನೀಡಿ. ಟೈರ್, ಎಂಜಿನ್ ಎಲ್ಲವನ್ನೂ ಪರಿಶೀಲಿಸಲು ಹೇಳಿ. ಇದು ಬಹಳ ಮುಖ್ಯ. ಇದರಿಂದ ದಾರಿ ಮಧ್ಯೆದಲ್ಲಿ ನೀವು ತೊಂದರೆ ಎದುರಿಸುವುದು ತಪ್ಪುತ್ತದೆ.