logo
ಕನ್ನಡ ಸುದ್ದಿ  /  ಜೀವನಶೈಲಿ  /  World Suicide Prevention Day 2022: ಆತ್ಮಹತ್ಯೆ ಮಾಡೋಕೇನು ಕಾರಣ? ಇಲ್ಲಿದೆ ಒಂದು ಅವಲೋಕನ.

World Suicide Prevention Day 2022: ಆತ್ಮಹತ್ಯೆ ಮಾಡೋಕೇನು ಕಾರಣ? ಇಲ್ಲಿದೆ ಒಂದು ಅವಲೋಕನ.

Umesh Kumar S HT Kannada

Sep 10, 2022 07:44 AM IST

ವಿಶ್ವ ಆತ್ಮಹತ್ಯೆ ತಡೆ ದಿನ

    • World Suicide Prevention Day 2022 (WSPD 2022): ಆತ್ಮಹತ್ಯೆಗೆ ಬಹುಮುಖ್ಯ ಕಾರಣ ಕೌಟುಂಬಿಕ ಸಮಸ್ಯೆ ಮತ್ತು ಗಂಭೀರ ಅನಾರೋಗ್ಯ. ಇನ್ನುಳಿದವುಗಳ ಪ್ರಮಾಣ ಕಡಿಮೆ. HTಕನ್ನಡದ ಜತೆಗೆ ಅವಲೋಕನಕ್ಕೆ ನೆರವಾಗಿದ್ದಾರೆ ಬೆಂಗಳೂರಿನ ಇಎಸ್‌ಐಸಿ ಎಂಎಚ್‌ ಎಂಸಿ ಪಿಜಿಐಎಂಎಸ್‌ಆರ್‌ನ ಸೈಕ್ಯಾಟ್ರಿ ವಿಭಾಗದ ಸೀನಿಯರ್‌ ಸ್ಪೆಷಲಿಸ್ಟ್‌ ಡಾ.ಧನಂಜಯ ಎಸ್‌.
ವಿಶ್ವ ಆತ್ಮಹತ್ಯೆ ತಡೆ ದಿನ
ವಿಶ್ವ ಆತ್ಮಹತ್ಯೆ ತಡೆ ದಿನ

ಮನುಷ್ಯನನ್ನು ಆತ್ಮಹತ್ಯೆಯ ಸನ್ನಿವೇಶಕ್ಕೆ ತಳ್ಳುವ ಕಾರಣಗಳು ಅನೇಕ. ಎನ್‌ಸಿಆರ್‌ಬಿ ಡೇಟಾ ಪ್ರಕಾರ ಹೇಳುವುದಾದರೆ, ಕೌಟುಂಬಿಕ ಸಮಸ್ಯೆ, ಗಂಭೀರ ಅನಾರೋಗ್ಯ, ಮಾದಕ ದ್ರವ್ಯ ಮತ್ತು ಮದ್ಯ ವ್ಯಸನ, ವೈವಾಹಿಕ ಬಿಕ್ಕಟ್ಟು, ಲವ್‌ ಅಫೇರ್ಸ್‌, ಸಾಲ/ ದಿವಾಳಿತನ, ವೃತ್ತಿಪರ ವಿಚಾರ, ಬಡತನ ಮತ್ತು ಇತರೆ ಕಾರಣಗಳು. ಕೋವಿಡ್‌ನಿಂದಲೂ ಆತ್ಮಹತ್ಯೆ ಪ್ರಕರಣ ಕಳೆದ ವರ್ಷ ಹೆಚ್ಚಾಗಿದೆ. ಐಸೋಲೇಷನ್‌ ಮನುಷ್ಯನನ್ನು ಒಂಟಿತನಕ್ಕೆ ತಳ್ಳಿಬಿಡುತ್ತದೆ.

ಟ್ರೆಂಡಿಂಗ್​ ಸುದ್ದಿ

Personality Test: ಚಿತ್ರವನ್ನು ಕಂಡಾಕ್ಷಣ ನಿಮಗೆ ಮೊದಲು ಕಂಡಿದ್ದೇನು? ನಿಮ್ಮ ವ್ಯಕ್ತಿತ್ವದ ಕುರಿತ ರಹಸ್ಯ ವಿಚಾರ ತಿಳಿಸುತ್ತೆ ಈ ಚಿತ್ರ

Brain Teaser: 212=25, 214=47 ಆದ್ರೆ, 215 = ಎಷ್ಟು? ಗಣಿತದಲ್ಲಿ ನೀವು ಜಾಣರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ನುಡಿಯ ನೇತಾರ ನಾಲಿಗೆ: ಉಪ್ಪು, ಹುಳಿ, ಸಿಹಿ ತಿಳಿಯುವ ಜಿಹ್ವೆಗೆ ಖಾರವೇಕೆ ಗೊತ್ತಾಗಲ್ಲ? ನಾಲಿಗೆ ಬಗ್ಗೆ ನಿಮಗೆಷ್ಟು ಗೊತ್ತು? -ಜ್ಞಾನ ವಿಜ್ಞಾನ

World Hypertension Day: ಸೈಲೆಂಟ್‌ ಕಿಲ್ಲರ್‌ ಆಗಿ ಕಾಡುತ್ತಿದೆ ಅಧಿಕ ರಕ್ತದೊತ್ತಡ; ಆರಂಭಿಕ ಹಂತದ ಈ ಚಿಹ್ನೆಗಳನ್ನ ನಿರ್ಲಕ್ಷ್ಯ ಮಾಡದಿರಿ

ಎನ್‌ಸಿಆರ್‌ಬಿ ಡೇಟಾ ಪ್ರಕಾರ ಕಳೆದ ವರ್ಷ ದಾಖಲಾದ ಒಟ್ಟು ಆತ್ಮಹತ್ಯೆ ಪ್ರಕರಣದಲ್ಲಿ ಯಾವ ಕಾರಣದ್ದು ಎಷ್ಟು ಪಾಲು ಎಂದು ಗಮನಿಸುವುದಾದರೆ, ಕೌಟುಂಬಿಕ ಸಮಸ್ಯೆಗೆ ಶೇಕಡ 33.2, ಗಂಭೀರ ಅನಾರೋಗ್ಯಕ್ಕೆ ಶೇಕಡ 18.6, ಡ್ರಗ್‌ ಅಬ್ಯೂಸ್‌/ಆಲ್ಕೋಹಾಲಿಕ್‌ ಅಡಿಕ್ಷನ್‌ಗೆ ಶೇಕಡ 6.4, ವೈವಾಹಿಕ ಬಿಕ್ಕಟ್ಟಿಗೆ ಶೇಕಡ 4.8, ಲವರ್‌ ಅಫೇರ್ಸ್‌ಗೆ ಶೇಕಡ 4.6, ಸಾಲ ಮತ್ತು ದಿವಾಳಿತನದ ಕಾರಣಕ್ಕೆ ಶೇಕಡ 3.9, ನಿರುದ್ಯೋಗದ ಕಾರಣ ಶೇಕಡ 2.2, ಪರೀಕ್ಷೆಯಲ್ಲ ಫೇಲಾದುದಕ್ಕೆ ಶೇಕಡ 1, ವೃತ್ತಿಪರ ಕಾರಣಗಳಿಗೆ ಶೇಕಡ 1.6, ಬಡತನದ ಕಾರಣ ಶೇಕಡ 1.1 ಆತ್ಮಹತ್ಯೆಗಳಾಗಿವೆ. ಈ ಪೈಕಿ ದೊಡ್ಡ ಪಾಲು ಕೌಟುಂಬಿಕ ಸಮಸ್ಯೆ ಮತ್ತು ಗಂಭೀರ ಕಾಯಿಲೆಗಳದ್ದು ಎಂಬುದು ಗಮನಾರ್ಹ.

<p>ಆತ್ಮಹತ್ಯೆ ಪ್ರಕರಣದಲ್ಲಿ ಯಾವ ಕಾರಣದ್ದು ಎಷ್ಟು ಪಾಲು</p>

ಅನಾರೋಗ್ಯದ ಪೈಕಿ ಪ್ಯಾಂಕ್ರಿಯಾಟಿಕ್‌ ಕ್ಯಾನ್ಸರ್‌ ತುಂಬ ನೋವುಕೊಡುವಂಥದ್ದು. ಅದನ್ನು ತಡೆದುಕೊಳ್ಳುವುದು ಎಲ್ಲರಿಂದಲೂ ಆಗದು. ಅದು ಕೂಡ ಆತ್ಮಹತ್ಯೆಗೆ ಒಂದು ಕಾರಣ. ಡ್ರಗ್‌ ಅಬ್ಯೂಸ್‌ ಮತ್ತು ಆಲ್ಕೋಹಾಲಿಕ್‌ ಅಡಿಕ್ಷನ್‌ ಎಂಬುದು ಒಂದು ವಿಷ ವರ್ತುಲ.

ಇಲ್ಲಿ ವಿಷ ವರ್ತುಲ ಎಂದರೆ ಬೇಜಾರಾಗಿದೆ ಎಂದು ಸುಲಭದಲ್ಲಿ ಸುಖ ಬೇಕು ಎಂದು ಡ್ರಗ್ಸ್‌ ಮತ್ತು ಆಲ್ಕೋಹಾಲ್‌ ವ್ಯಸನಕ್ಕೆ ಬೀಳುವುದು. ಎಷ್ಟೋ ಜನ ಕೆನೆಬೀಸ್‌ ತಗೊಳ್ತಾರೆ. ಅದರಿಂದ ಖುಷಿ ಸಿಗುತ್ತೆ ಎಂಬ ಭಾವನೆ ಅವರದ್ದು. ಎಷ್ಟೋ ಜನ ಆಲ್ಕೋಹಾಲ್‌ ತಗೊಳ್ತಾರೆ, ಎಷ್ಟೋ ಜನ ಬೇರೆ ಬೇರೆ ಡ್ರಗ್ಸ್‌ ತಗೊಳ್ತಾರೆ. ಹೆಚ್ಚು ಖಿನ್ನತೆಗೆ ಒಳಗಾದಾಗ ಹೆಚ್ಚು ಹೆಚ್ಚು ವ್ಯಸನಕ್ಕೆ ಒಳಗಾಗುತ್ತಾರೆ.

ಡ್ರಗ್ಸ್‌ ಮತ್ತು ಆಲ್ಕೊಹಾಲ್‌ ಡಿಪ್ರೆಶನ್‌ ಹೆಚ್ಚಿಸುತ್ತದೆ. ಅದು ತಾತ್ಕಾಲಿಕ ಧೈರ್ಯವನ್ನು ತುಂಬುತ್ತದೆಯೇ ಹೊರತು ಖಿನ್ನತೆಯನ್ನು ಕಡಿಮೆ ಮಾಡದು. ಮನುಷ್ಯತ್ವದ ಮನಸ್ಸನ್ನು ಹದಗೆಡುವಂತೆ ಮಾಡಿ ಅಪಾಯಕಾರಿ ಕ್ರಮಕ್ಕೆ ಮುಂದಾಗಲು ಪ್ರೇರಣೆ ಕೊಡುತ್ತದೆ ಎಂಬುದನ್ನು ಗಮನಿಸಬೇಕು.

ಆತ್ಮಹತ್ಯೆ ಮಾಡಿಕೊಂಡವರಲ್ಲಿ ಪುರುಷರೇ ಹೆಚ್ಚು!

<p>ಆತ್ಮಹತ್ಯೆ ಮಾಡಿಕೊಂಡವರ ವಯೋಮಾನ, ಲಿಂಗ ಮತ್ತು ಸಂಖ್ಯೆ&nbsp;</p>

ಕಳೆದ ವರ್ಷದ ಡೇಟಾ ಪ್ರಕಾರ, ಆತ್ಮಹತ್ಯೆ ಮಾಡಿಕೊಂಡವರ ಪೈಕಿ ಪುರುಷರ ಸಂಖ್ಯೆಯೇ ಹೆಚ್ಚಿದೆ. ಪುರುಷರ ಮತ್ತು ಸ್ತ್ರೀಯರ ಅನುಪಾನ ಗಮನಿಸಿದರೆ 2020ರಲ್ಲಿ 70.9 : 29.1 ಇದ್ದದ್ದು, 2021ರಲ್ಲಿ 72.5 : 27.4 ಆಗಿದೆ.

ಸ್ತ್ರೀಯರ ವಿಚಾರಕ್ಕೆ ಬಂದರೆ ಆತ್ಮಹತ್ಯೆ ಮಾಡಿಕೊಂಡವರೆಲ್ಲ ವೈವಾಹಿಕ ವಿಚಾರಕ್ಕೆ ವಿಶೇಷವಾಗಿ ವರದಕ್ಷಿಣೆ ಮತ್ತು ಬಂಜೆತನದ ಕಾರಣ ಪ್ರಾಣ ತ್ಯಾಗ ಮಾಡಿದವರು. ಇನ್ನು 18 ವರ್ಷದೊಳಗಿನವರ ಪ್ರಕರಣಗಳನ್ನು ಗಮನಿಸಿದರೆ ಹೆಚ್ಚು ಹೆಣ್ಮಕ್ಕಳೇ ಇದ್ದಾರೆ.

ಸಾಮಾನ್ಯವಾಗಿ 18 ರಿಂದ 30 ವರ್ಷ ಮತ್ತು 30ರಿಂದ 45 ವರ್ಷದೊಳಗಿನವರು ಈ ರೀತಿಯ ಸನ್ನಿವೇಶಕ್ಕೆ ಹತ್ತಿರವಾಗುತ್ತಾರೆ. ಈ ಎರಡೂ ವಯೋಮಾನದವರ ಪಾಲು ಶೇಕಡ 34.5 ಮತ್ತು ಶೇಕಡ 31.7 ಇದೆ.

ವೃತ್ತಿಪರವಾಗಿ ಗಮನಿಸುವುದಾದರೆ…

<p>ವೃತ್ತಿಪರವಾಗಿ ಗಮನಿಸುವುದಾದರೆ ದಿನಗೂಲಿ ನೌಕರರ ಪಾಲೇ ಹೆಚ್ಚು, ನಂತರದ ಸ್ಥಾನದಲ್ಲಿ ಗೃಹಿಣಿಯರಿದ್ದಾರೆ.&nbsp;</p>

ಆತ್ಮಹತ್ಯೆ ಪ್ರಕರಣದಲ್ಲಿ ಮಹಿಳೆಯರ ಒಟ್ಟು ಸಂಖ್ಯೆ ತೆಗೆದುಕೊಂಡಾಗ ಶೇಕಡ 51.5ರಷ್ಟು (45,026ರಲ್ಲಿ 23,179 ) ಗೃಹಿಣಿಯರೇ ಇದ್ದಾರೆ. ಒಟ್ಟಾರೆ ಪ್ರಕರಣದಲ್ಲಿ ಇವರ ಪಾಲು ಶೇಕಡ 14.1 (1,64,033 ರಲ್ಲಿ 23,179 )ಇದೆ. ದಿನಗೂಲಿ ನೌಕರರ ಪಾಲು ಶೇಕಡ 25.6 ಇದೆ.

World Suicide Prevention Day 2022 (WSPD 2022): ಇಂದು ವಿಶ್ವ ಆತ್ಮಹತ್ಯೆ ತಡೆ ದಿನ."ಕ್ರಿಯೆಯ ಮೂಲಕ ಭರವಸೆ ಮೂಡಿಸಿ" (Creating Hope Through Action) ಎಂಬುದು ಥೀಮ್‌. ಈ ಕುರಿತ ವಿಚಾರವನ್ನು HTಕನ್ನಡದ ಜತೆಗೆ ಶೇರ್‌ ಮಾಡಿದ್ದಾರೆ ಬೆಂಗಳೂರಿನ ESIC MH MC ಪಿಜಿಐಎಂಎಸ್‌ಆರ್‌ನ ಸೈಕ್ಯಾಟ್ರಿ ವಿಭಾಗದ ಸೀನಿಯರ್‌ ಸ್ಪೆಷಲಿಸ್ಟ್‌ ಡಾ.ಧನಂಜಯ ಎಸ್‌. - WSPD 2022: ಪ್ರಾಣ ತ್ಯಜಿಸದಂತೆ ಸೀತೇನ ತಡೆದಿದ್ದ ಹನುಮ; ನೀವೂ ಆಗಿ ಸೂಸೈಡ್‌ ಗೇಟ್‌ ಕೀಪರ್‌..

    ಹಂಚಿಕೊಳ್ಳಲು ಲೇಖನಗಳು