logo
ಕನ್ನಡ ಸುದ್ದಿ  /  Nation And-world  /  4.3 Magnitude Earthquake Hits Gujarat's Rajkot

Gujarat Rajkot earthquake: ಗುಜರಾತ್‌ನ ರಾಜಕೋಟ್‌ನಲ್ಲಿ 4.3 ತೀವ್ರತೆಯ ಭೂಕಂಪ

HT Kannada Desk HT Kannada

Feb 26, 2023 04:37 PM IST

Representational image

    • The quake struck at around 3:21 pm with a depth of 10 km.
Representational image
Representational image

ಗುಜರಾತ್‌ನ ರಾಜ್‌ಕೋಟ್ ಜಿಲ್ಲೆಯಲ್ಲಿ ಭಾನುವಾರ ಮಧ್ಯಾಹ್ನ 4.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಮಾಹಿತಿ ನೀಡಿದೆ.

ಟ್ರೆಂಡಿಂಗ್​ ಸುದ್ದಿ

Tik Tok Star Murder: ಖ್ಯಾತ ಟಿಕ್‌ ಟಾಕ್‌ ಸ್ಟಾರ್‌ ಓಂ ಫಹಾದ್‌ ಭೀಕರ ಹತ್ಯೆ, ಕಾರಣವೇನು

Gold Rate: ಬಡವರಿಗೆ ಗಗನ ಕುಸುಮವಾಯ್ತು ಚಿನ್ನ; ಮತ್ತಷ್ಟು ಹೆಚ್ಚಾಯ್ತು ಬೆಳ್ಳಿ , ಬಂಗಾರದ ಬೆಲೆ

ಇವಿಎಂ ವಿವಿಪ್ಯಾಟ್ ಪ್ರಕರಣ; ಅಡ್ಡ ಪರಿಶೀಲನೆ ಮಾಡಿ ಎಂದವರ ವಿರುದ್ಧ ಸುಪ್ರೀಂ ಕೋರ್ಟ್ ಗರಂ, ಎಲ್ಲಾ ಅರ್ಜಿಗಳು ವಜಾ

ರಸ್ತೆ ಮೇಲೆ ಕಾಣಸಿಕ್ತು ತಲೆಕೆಳಗಾದ ಕಾರು, ಅಪಘಾತವಾಗಿಲ್ಲ, ಪಲ್ಟಿಯಾಗಿಲ್ಲ, ಕುತೂಹಲ ಕೆರಳಿಸಿದೆ ಈ ವೈರಲ್ ವಿಡಿಯೋ

ಇಂದು ಅಪರಾಹ್ನ 3:21 ಗಂಟೆಗೆ ಭೂಕಂಪ ದಾಖಲಾಗಿದೆ. ಭೂಮಿಯ ಸುಮಾರು 10 ಕಿ.ಮೀ. ಆಳದಲ್ಲಿ ಭೂಕಂಪ ಸಂಭವಿಸಿದೆ.

"ಭೂಕಂಪ ತೀವ್ರತೆ: 6-02-2023 ರಂದು 15:21:12 IST ಸಮಯದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದೆ. ಲ್ಯಾಟ್: 24.61 ಮತ್ತು ಉದ್ದ: 69.96, ಆಳ: 10 ಕಿಮೀ, ಸ್ಥಳ: ರಾಜ್‌ಕೋಟ್‌ನ 270 ಕಿಮೀ ವ್ಯಾಪ್ತಿ" ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಟ್ವೀಟ್‌ ಮಾಡಿದೆ.

ಭೂಕಂಪದಿಂದ ಯಾವುದೇ ಆಸ್ತಿ, ಜೀವ ಹಾನಿ ವರದಿಯಾಗಿಲ್ಲ. ಕಳೆದ ವಾರ ಗುಜರಾತ್‌ನ ಅಮ್ರೆಲ್ಲಿ ಜಿಲ್ಲೆಯಲ್ಲಿ 3.4 ಮತ್ತು 3.1 ತೀವ್ರತೆಯ ಎರಡು ಭೂಕಂಪ ಸಂಭವಿಸಿತ್ತು.

ಗುಜರಾತ್‌ನ ಕಚ್‌ ಜಿಲ್ಲೆಯಲ್ಲಿ 2001ರಲ್ಲಿ ಸಂಭವಿಸಿದ ಭೀಕರ ಭೂಕಂಪಕ್ಕೆ 13,800 ಜನರು ಬಲಿಯಾಗಿದ್ದರು. ಈ ಘಟನೆಯಲ್ಲಿ 1.67 ಲಕ್ಷ ಜನರು ಗಾಯಗೊಂಡಿದ್ದರು.

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.

ಭಾರತಕ್ಕೆ ಭೂಕಂಪ ಭೀತಿ

ಭಾರತೀಯ ಟೆಕ್ಟೋನಿಕ್ ಪ್ಲೇಟ್ ಪ್ರತಿ ವರ್ಷ ಸುಮಾರು 5 ಸೆಂಟಿಮೀಟರ್ ಚಲಿಸುತ್ತಿದೆ. ಇದು ಹಿಮಾಲಯದ ಉದ್ದಕ್ಕೂ ಒತ್ತಡದ ಶೇಖರಣೆಗೆ ಕಾರಣವಾಗುತ್ತದೆ ಮತ್ತು ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದ ಭೂಕಂಪಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಪ್ರಮುಖ ಹವಾಮಾನ ವಿಜ್ಞಾನಿ ಮತ್ತು ಭೂವಿಜ್ಞಾನ ತಜ್ಞರು ಎಚ್ಚರಿಸಿದ್ದಾರೆ.

ಹೈದರಾಬಾದ್ ಮೂಲದ ನ್ಯಾಷನಲ್ ಜಿಯೋಫಿಸಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ (ಎನ್‌ಜಿಆರ್‌ಐ) ಮುಖ್ಯ ವಿಜ್ಞಾನಿ ಮತ್ತು ಭೂಕಂಪಶಾಸ್ತ್ರಜ್ಞ ಡಾ ಎನ್ ಪೂರ್ಣಚಂದ್ರ ರಾವ್ ಮಂಗಳವಾರ ಎಎನ್‌ಐ ಜತೆ ಈ ವಿಚಾರ ಹಂಚಿಕೊಂಡಿದ್ದಾರೆ.

ಭೂಮಿಯ ಮೇಲ್ಮೈ ನಿರಂತರವಾಗಿ ಚಲನೆಯಲ್ಲಿರುವ ವಿವಿಧ ಪ್ಲೇಟ್‌ಗಳನ್ನು ಒಳಗೊಂಡಿದೆ. ಭಾರತೀಯ ಟೆಕ್ಟೋನಿಕ್ ಪ್ಲೇಟ್ ಪ್ರತಿ ವರ್ಷ 5 ಸೆಂಟಿಮೀಟರ್‌ ಚಲಿಸುತ್ತಿದೆ. ಹಿಮಾಲಯದ ಉದ್ದಕ್ಕೂ ಒತ್ತಡದ ಶೇಖರಣೆಗೆ ಕಾರಣವಾಗುತ್ತದೆ ಮತ್ತು ದೊಡ್ಡ ಭೂಕಂಪಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಅವರು ವಿವರಿಸಿದ್ದಾರೆ. ಈ ಕುರಿತು ಹೆಚ್ಚಿನ ವಿವರ ಪಡೆಯಲು ಈ ವರದಿ ಓದಿ.


ಹಿಮಾಚಲ ಪ್ರದೇಶದ ಧರ್ಮಶಾಲಾದಿಂದ ಉತ್ತರಕ್ಕೆ 56 ಕಿಮೀ ದೂರದಲ್ಲಿ ಸೋಮವಾರ ರಾತ್ರಿ 10.38 ಕ್ಕೆ 3.6 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪನದ ಕೇಂದ್ರವು ಭೂಮಿಯ ಮೇಲ್ಮೈಯಿಂದ 10 ಕಿಮೀ ಆಳದಲ್ಲಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.

ಟರ್ಕಿ ಮತ್ತು ಸಿರಿಯಾ ಪರಿಸ್ಥಿತಿ ಹೇಗಿದೆ?

ಎರಡು ವಾರಗಳ ಹಿಂದೆ ಪ್ರಬಲ ಭೂಕಂಪ ಸಂಭವಿಸಿದ ಟರ್ಕಿಯಲ್ಲಿ ಮತ್ತೆರಡು ಭೂಕಂಪಗಳು ಎರಡು ದಿನಗಳ ಹಿಂದೆ ಸಂಭವಿಸಿವೆ.

ಸೋಮವಾರ ಮಧ್ಯರಾತ್ರಿಯ ನಂತರ ಟರ್ಕಿ ಮತ್ತು ಸಿರಿಯಾ ಗಡಿಯಲ್ಲಿ ಈ ಭೂಕಂಪಗಳು ಸಂಭವಿಸಿವೆ. ಇದು ಈಗಾಗಲೇ ಎಲ್ಲವನ್ನು ಕಳೆದುಕೊಂಡಿರುವ ಜನರಲ್ಲಿ ಮತ್ತಷ್ಟು ಆತಂಕವನ್ನು ಹೆಚ್ಚಿಸಿದೆ. ಫೆಬ್ರವರಿ 6 ರಂದು ಸಂಭವಿಸಿದ 7.8 ತೀವ್ರತೆಯ ಭೂಕಂಪದಿಂದಾಗಿ ಟರ್ಕಿ ಮತ್ತು ಸಿರಿಯಾದಲ್ಲಿ ಲಕ್ಷಾಂತರ ಮನೆಗಳು ಕುಸಿದಿವೆ. ಪರಿಹಾರ ಕಾರ್ಯಗಳು ಇನ್ನೂ ನಡೆಯುತ್ತಿವೆ. ಈ ಕುರಿತು ವಿವರ ಇಲ್ಲಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು