logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  9 Saal 9 Sawaal: ಮೋದಿ ಸರ್ಕಾರಕ್ಕೆ 9 ವರ್ಷ, ಕಾಂಗ್ರೆಸ್‌ ಹಾಕಿದ 9 ಸವಾಲುಗಳೇನು; ಬಿಜೆಪಿ ಪ್ರತಿಕ್ರಿಯೆ ಏನು, ವಿದ್ಯಮಾನದ ವಿವರ ಇಲ್ಲಿದೆ

9 saal 9 sawaal: ಮೋದಿ ಸರ್ಕಾರಕ್ಕೆ 9 ವರ್ಷ, ಕಾಂಗ್ರೆಸ್‌ ಹಾಕಿದ 9 ಸವಾಲುಗಳೇನು; ಬಿಜೆಪಿ ಪ್ರತಿಕ್ರಿಯೆ ಏನು, ವಿದ್ಯಮಾನದ ವಿವರ ಇಲ್ಲಿದೆ

HT Kannada Desk HT Kannada

May 27, 2023 06:41 AM IST

ನವದೆಹಲಿಯಲ್ಲಿ ಶುಕ್ರವಾರ (ಮೇ 26) ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಜೈರಾಮ್ ರಮೇಶ್ ಪಕ್ಷದ ನಾಯಕರಾದ ಸುಪ್ರಿಯಾ ಶ್ರೀನಾಟೆ (ಎಲ್) ಮತ್ತು ಪವನ್ ಖೇರಾ (ಆರ್) ಮತ್ತು ಇತರರು 9 ಸಾಲ್‌ 9 ಸವಾಲ್‌ ಡಾಕ್ಯುಮೆಂಟ್‌ ಅನ್ನು ಬಿಡುಗಡೆ ಮಾಡಿದರು.

  • 9 saal 9 sawaal: ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಪಕ್ಷದ ಮಾಜಿ ಮುಖ್ಯಸ್ಥ ರಾಹುಲ್ ಗಾಂಧಿ (Rahul Gandhi) ಯವರು ಎತ್ತಿರುವ ನಿರ್ಣಾಯಕ ವಿಷಯಗಳನ್ನು ಆಧರಿಸಿಯೇ 9 ಪ್ರಶ್ನೆಗಳನ್ನು ಪ್ರಧಾನಿ ಮೋದಿ (PM Modi)ಯವರಿಗೆ ಕೇಳಲಾಗಿದೆ ಎಂದು ಕಾಂಗ್ರೆಸ್‌ ಹೇಳಿದೆ. ಈ ಪ್ರಶ್ನೆಗಳು ಸುಳ್ಳಿನ ಕಂತೆ ಎಂದು ಬಿಜೆಪಿ ತಿರುಗೇಟು ನೀಡಿದೆ. ಈ ವಿದ್ಯಮಾನದ ವಿವರ ಇಲ್ಲಿದೆ.

ನವದೆಹಲಿಯಲ್ಲಿ ಶುಕ್ರವಾರ (ಮೇ 26) ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಜೈರಾಮ್ ರಮೇಶ್ ಪಕ್ಷದ ನಾಯಕರಾದ ಸುಪ್ರಿಯಾ ಶ್ರೀನಾಟೆ (ಎಲ್) ಮತ್ತು ಪವನ್ ಖೇರಾ (ಆರ್) ಮತ್ತು ಇತರರು 9 ಸಾಲ್‌ 9 ಸವಾಲ್‌ ಡಾಕ್ಯುಮೆಂಟ್‌ ಅನ್ನು ಬಿಡುಗಡೆ ಮಾಡಿದರು.
ನವದೆಹಲಿಯಲ್ಲಿ ಶುಕ್ರವಾರ (ಮೇ 26) ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಜೈರಾಮ್ ರಮೇಶ್ ಪಕ್ಷದ ನಾಯಕರಾದ ಸುಪ್ರಿಯಾ ಶ್ರೀನಾಟೆ (ಎಲ್) ಮತ್ತು ಪವನ್ ಖೇರಾ (ಆರ್) ಮತ್ತು ಇತರರು 9 ಸಾಲ್‌ 9 ಸವಾಲ್‌ ಡಾಕ್ಯುಮೆಂಟ್‌ ಅನ್ನು ಬಿಡುಗಡೆ ಮಾಡಿದರು. (PTI)

ಲೋಕಸಭೆ ಚುನಾವಣೆ (Loksabha Election)ಗೆ ಕಾಂಗ್ರೆಸ್‌ ಸಜ್ಜಾಗುತ್ತಿದ್ದು, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಶುರುಮಾಡಿದೆ. ಮೋದಿ ಸರ್ಕಾರಕ್ಕೆ 9 ವರ್ಷ ಆಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ 9 ಪ್ರಶ್ನೆ (9 saal 9 sawaal)ಗಳನ್ನು ಮುಂದಿರಿಸಿದೆ. ಇದಕ್ಕೆ ಬಿಜೆಪಿ ಪ್ರತಿಕ್ರಿಯಿಸಿದ್ದು, ಎಲ್ಲವೂ ಸುಳ್ಳುಗಳ ಸರಮಾಲೆ ಎಂದು ಟೀಕಿಸಿದೆ. ಈ ವಿದ್ಯಮಾನದ ಪೂರ್ಣ ವಿವರ ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

Viral Video: ತೂಕ ಇಳಿಸುವ ಹುಚ್ಚು, ಜಿಮ್‌ನಲ್ಲಿ ಚಿತ್ರಹಿಂಸೆ ಕೊಟ್ಟು ಪುತ್ರನನ್ನು ಕೊಂದ ಪಾಪಿ ಪತಿ, ಕಣ್ಣೀರು ಹಾಕಿದ ತಾಯಿ

ಐಸಿಎಸ್‌ಇ ಐಎಸ್‌ಸಿ ಫಲಿತಾಂಶ ಪ್ರಕಟ, 10ನೇ ತರಗತಿ ಪ್ರಮಾಣ ಶೇ 99.47, ಐಎಸ್‌ಸಿ ಫಲಿತಾಂಶ ಶೇ 98.19

ಇಂದು ಬೆಳಗ್ಗೆ 11 ಗಂಟೆಗೆ ಸಿಐಎಸ್‌ಇ 10, 12ನೇ ತರಗತಿ ಫಲಿತಾಂಶ ಪ್ರಕಟ; ಲಿಂಕ್, ವೆಬ್‌ಸೈಟ್ ವಿವರ ಇಲ್ಲಿದೆ -ICSE Result

Gold Rate Today: ಭಾನುವಾರ ಚಿನ್ನ, ಬೆಳ್ಳಿ ಎರಡರ ದರವೂ ಹೆಚ್ಚಳ; ಆಭರಣ ಖರೀದಿಸುವ ಯೋಚನೆ ಇದ್ದರೆ ಇಂದಿನ ಬೆಲೆ ಗಮನಿಸಿ

ಬೆಲೆ ಏರಿಕೆ, ನಿರುದ್ಯೋಗ ಮತ್ತು ರೈತರ ಆದಾಯದಂತಹ ವಿಷಯಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಒಂಬತ್ತು ಪ್ರಶ್ನೆಗಳನ್ನು ಕೇಳಿತ್ತು. ಅಲ್ಲದೆ, ಅವರ ಅಧಿಕಾರಾವಧಿಯಲ್ಲಿ ಆಗಿರುವ "ದ್ರೋಹ" ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿತ್ತು.

ಸೋಷಿಯಲ್ ಮೀಡಿಯಾದಲ್ಲಿ '9 ಸಾಲ್, 9 ಸವಾಲ್' ಹ್ಯಾಷ್‌ ಟ್ಯಾಗ್‌ ಬಳಸಿ ಪ್ರಶ್ನೆಗಳ ಪಟ್ಟಿಯನ್ನು ಪೋಸ್ಟ್ ಮಾಡಿದ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ, ಬಿಜೆಪಿಯು "ಸುಳ್ಳು ಭರವಸೆಗಳು ಮತ್ತು ಸಾರ್ವಜನಿಕರ ಸಂಕಷ್ಟದ ಮೇಲೆ 9 ವರ್ಷದ ಹಳೆಯ ಕಟ್ಟಡವನ್ನು ನಿರ್ಮಿಸಿದೆ!" ಎಂದು ನೂತನ ಸಂಸತ್‌ ಭವನ ನಿರ್ಮಾಣದ ಬಗ್ಗೆ ಟೀಕೆ ಮಾಡಿದ್ದಾರೆ.

9 ಸಾಲ್, 9 ಸವಾಲ್ (9 Saal, 9 Sawaal)

  1. ಆರ್ಥಿಕತೆ: ಭಾರತದಲ್ಲಿ ಹಣದುಬ್ಬರ ಮತ್ತು ನಿರುದ್ಯೋಗ ಏಕೆ ಗಗನ ಮುಖಿಯಾಗಿದೆ? ಶ್ರೀಮಂತರು ಏಕೆ ಶ್ರೀಮಂತರಾದರು ಮತ್ತು ಬಡವರು ಯಾಕೆ ಬಡವರಾದರು? ಆರ್ಥಿಕ ಅಸಮಾನತೆ ಹೆಚ್ಚುತ್ತಿರುವಾಗಲೂ ಸಾರ್ವಜನಿಕ ಆಸ್ತಿಯನ್ನು ಪ್ರಧಾನಿ ಮೋದಿಯವರ ಸ್ನೇಹಿತರಿಗೆ ಯಾಕೆ ಮಾರಾಟ ಮಾಡಲಾಗುತ್ತಿದೆ?
  2. ಕೃಷಿ ಮತ್ತು ಕೃಷಿಕರು: ಮೂರು ಕರಾಳ ಕಾನೂನನ್ನು ರದ್ದುಪಡಿಸುವ ಸಂದರ್ಭದಲ್ಲಿ ರೈತರೊಂದಿಗೆ ಮಾಡಿಕೊಂಡ ಒಪ್ಪಂದಗಳನ್ನು ಯಾಕೆ ಗೌರವಿಸಲಾಗಿಲ್ಲ? ಎಂಎಸ್‌ಪಿ ಯನ್ನು ಏಕೆ ಕಾನೂನುಬದ್ಧವಾಗಿ ಖಾತರಿಪಡಿಸಿಲ್ಲ? ಕಳೆದ 9 ವರ್ಷಗಳಿಂದ ರೈತರ ಆದಾಯ ಯಾಕೆ ದ್ವಿಗುಣವಾಗಿಲ್ಲ
  3. ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತ: ನಿಮ್ಮ ಸ್ನೇಹಿತ ಅದಾನಿ ಅವರ ಲಾಭಕ್ಕಾಗಿ ಜನರ ಕಷ್ಟದಿಂದ ಗಳಿಸಿದ ಉಳಿತಾಯಗಳಾದ ಎಲ್‌ಐಸಿ ಮತ್ತು ಎಸ್‌ಬಿಐ ಅನ್ನು ಏಕೆ ಅಪಾಯಕ್ಕೆ ತಳ್ಳುತ್ತಿದ್ದೀರಿ? ಕಳ್ಳರನ್ನು ತಪ್ಪಿಸಿಕೊಳ್ಳಲು ಏಕೆ ಬಿಡುತ್ತಿದ್ದೀರಿ? ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಆಗಿರುವ ಅತಿರೇಕದ ಭ್ರಷ್ಟಾಚಾರದ ಬಗ್ಗೆ ನೀವು ಏಕೆ ಮೌನವಾಗಿದ್ದೀರಿ ಮತ್ತು ನೀವು ಭಾರತೀಯರನ್ನು ಯಾಕೆ ಸಂಕಷ್ಟಕ್ಕೆ ತಳ್ಳುತ್ತಿದ್ದೀರಿ?
  4. ಚೀನಾ ಮತ್ತು ರಾಷ್ಟ್ರೀಯ ಭದ್ರತೆ: 2020 ರಲ್ಲಿ ಚೀನಾಗೆ ನೀವು ಕ್ಲೀನ್ ಚಿಟ್ ಕೊಟ್ಟ ನಂತರವೂ ಅವರು ಭಾರತೀಯ ಭೂಪ್ರದೇಶವನ್ನು ಆಕ್ರಮಿಸಿಕೊಳ್ಳುವುದನ್ನು ಯಾಕೆ ಮುಂದುವರಿಸಿದ್ದಾರೆ? ಚೀನಾದ ಜತೆಗೆ ನಡೆಸಿದ 18 ಸಭೆಗಳು ವಿಫಲವಾಗಿದ್ದು, ಚೀನಾದವರು ಭಾರತೀಯ ಪ್ರದೇಶವನ್ನು ನೀಡಲು ನಿರಾಕರಿಸುತ್ತಾರೆ ಮತ್ತು ಬದಲಿಗೆ ತಮ್ಮ ಆಕ್ರಮಣಕಾರಿ ತಂತ್ರಗಳನ್ನು ಯಾಕೆ ಮುಂದುವರಿಸಿದ್ದಾರೆ?
  5. ಸಾಮಾಜಿಕ ಸಾಮರಸ್ಯ: ನೀವು ಚುನಾವಣಾ ಲಾಭಕ್ಕಾಗಿ ಉದ್ದೇಶಪೂರ್ವಕವಾಗಿಯೇ ದ್ವೇಷದ ರಾಜಕಾರಣವನ್ನು ಬಳಸುತ್ತಿದ್ದೀರಿ ಮತ್ತು ಸಮಾಜದಲ್ಲಿ ಭಯದ ವಾತಾವರಣವನ್ನು ಯಾಕೆ ಹೆಚ್ಚಿಸುತ್ತಿದ್ದೀರಿ?
  6. ಸಾಮಾಜಿಕ ನ್ಯಾಯ: ನಿಮ್ಮ ದಬ್ಬಾಳಿಕೆಯ ಸರ್ಕಾರವು ಸಾಮಾಜಿಕ ನ್ಯಾಯದ ಅಡಿಪಾಯವನ್ನು ಯಾಕೆ ಕ್ರಮಬದ್ಧವಾಗಿ ನಾಶಪಡಿಸುತ್ತಿದೆ? ಮಹಿಳೆಯರು, ದಲಿತರು, ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳ ಬಗ್ಗೆಯಾಕೆ ಮೌನವಾಗಿದ್ದೀರಿ? ಜಾತಿ ಗಣತಿ ಬೇಡಿಕೆಯನ್ನು ನಿರ್ಲಕ್ಷಿಸುತ್ತಿರುವುದು ಏತಕ್ಕೆ?
  7. ಪ್ರಜಾಪ್ರಭುತ್ವ ಮತ್ತು ಫೆಡರಲಿಸಂ: ಕಳೆದ 9 ವರ್ಷಗಳ ಅವಧಿಯಲ್ಲಿ ನೀವು ನಮ್ಮ ಸಾಂವಿಧಾನಿಕ ಮೌಲ್ಯಗಳು ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳನ್ನು ದುರ್ಬಲಗೊಳಿಸಿರುವುದು ಯಾಕೆ? ವಿರೋಧ ಪಕ್ಷಗಳು ಮತ್ತು ನಾಯಕರ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿರುವುದೇಕೆ? ಮತ್ತು ಜನರಿಂದ ಆಯ್ಕೆಯಾದ ಸರ್ಕಾರಗಳನ್ನು ಅಸ್ಥಿರಗೊಳಿಸಲು ನೀವೇಕೆ ಹಣದ ಬಲವನ್ನು ಬಳಸುತ್ತಿದ್ದೀರಿ?
  8. ಕಲ್ಯಾಣ ಯೋಜನೆಗಳು: ಬಡವರು, ನಿರ್ಗತಿಕರು ಮತ್ತು ಬುಡಕಟ್ಟು ಜನಾಂಗದವರ ಕಲ್ಯಾಣಕ್ಕಾಗಿ ಯೋಜನೆಗಳನ್ನು ಅವರ ಬಜೆಟ್‌ನಲ್ಲಿ ಕಡಿತಗೊಳಿಸಿ ನಿರ್ಬಂಧಿತ ನಿಯಮಗಳನ್ನು ಮಾಡುವ ಮೂಲಕ ಅವರನ್ನು ಇನ್ನಷ್ಟು ದುರ್ಬಲಗೊಳಿಸುತ್ತಿರುವುದು ಏಕೆ?
  9. ಕೋವಿಡ್‌-19 ನಿರ್ವಹಣೆಯಲ್ಲಿ ಲೋಪ: ಕೋವಿಡ್‌-19 ನಿಂದ 40 ಲಕ್ಷಕ್ಕೂ ಹೆಚ್ಚು ಜನರ ದುರಂತ ಸಾವಿನ ಹೊರತಾಗಿಯೂ, ಅವರ ಕುಟುಂಬಗಳಿಗೆ ಪರಿಹಾರ ನೀಡಲು ಮೋದಿ ಸರ್ಕಾರ ನಿರಾಕರಿಸಿದ್ದು ಯಾಕೆ? ಲಕ್ಷಗಟ್ಟಲೆ ಕಾರ್ಮಿಕರನ್ನು ಮನೆಗೆ ಮರಳುವಂತೆ ಮಾಡಿದ ಲಾಕ್‌ಡೌನ್ ಅನ್ನು ನೀವು ಇದ್ದಕ್ಕಿದ್ದಂತೆ ಯಾಕೆ ವಿಧಿಸಿದ್ದು? ಆಗ ಜನರಿಗೆ ಯಾವುದೇ ಬೆಂಬಲವನ್ನೇಕೆ ನೀಡಲಿಲ್ಲ?

ಮೋದಿ ಸರ್ಕಾರಕ್ಕೆ 9 ವರ್ಷ ಆಚರಣೆಗೆ ಬಿಜೆಪಿ ಸಜ್ಜಾಗುತ್ತಿರುವಾಗಲೇ ಕಾಂಗ್ರೆಸ್‌ ಪ್ರಶ್ನೆಗಳ ಸರಮಾಲೆ

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಒಂಬತ್ತು ವರ್ಷಗಳ ಆಡಳಿತವನ್ನು ಆಚರಿಸಲು ಬಿಜೆಪಿ ಪಾಳಯ ಸಜ್ಜಾಗುತ್ತಿರುವಾಗ, ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆ ಸುಪ್ರಿಯಾ ಶ್ರೀನತೆ ಅವರು ಕೇಂದ್ರ ಸರ್ಕಾರವು ಈಗ ತಮ್ಮ "ವೈಫಲ್ಯ"ಗಳ 'ಮಹೋತ್ಸವ' ಉತ್ಸವವನ್ನು ಆಚರಿಸಬೇಕು ಎಂದು ಕಿಡಿಕಾರಿದರು.

ಪ್ರಧಾನಿ ನರೇಂದ್ರ ಮೋದಿಯವರ ಒಂಬತ್ತು ವರ್ಷಗಳ ಆಡಳಿತದ ಕುರಿತು ಕಾಂಗ್ರೆಸ್ ಪಕ್ಷವು ಕೇಳಿರುವ ಒಂಬತ್ತು ಪ್ರಶ್ನೆಗಳನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಶುಕ್ರವಾರ ತಳ್ಳಿಹಾಕಿದ್ದು, ಅವುಗಳನ್ನು 'ಸುಳ್ಳಿನ ಕಂತೆ ಮತ್ತು ವಂಚನೆಯ ಪರ್ವತ' ಎಂದು ಕರೆದಿದೆ. ಈ ಪ್ರಶ್ನೆಗಳು ಕಾಂಗ್ರೆಸ್‌ನ “ಪ್ರಧಾನಿ ನರೇಂದ್ರ ಮೋದಿಯವರ ಮೇಲಿನ ದ್ವೇಷದ” ಫಲಿತಾಂಶ ಎಂದು ಬಿಜೆಪಿ ಸಂಸದ ರವಿಶಂಕರ್‌ ಪ್ರಸಾದ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

    ಹಂಚಿಕೊಳ್ಳಲು ಲೇಖನಗಳು