logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Afcat 2 2023: ವಾಯುಪಡೆಗೆ ಸೇರುವಿರಾ? ಆಫ್‌ಕ್ಯಾಟ್‌ ಪರೀಕ್ಷೆಗೆ ಜೂನ್‌ 30ರ ಮೊದಲು ಅರ್ಜಿ ಸಲ್ಲಿಸಿ, ಇಲ್ಲಿದೆ ಸಂಪೂರ್ಣ ವಿವರ

AFCAT 2 2023: ವಾಯುಪಡೆಗೆ ಸೇರುವಿರಾ? ಆಫ್‌ಕ್ಯಾಟ್‌ ಪರೀಕ್ಷೆಗೆ ಜೂನ್‌ 30ರ ಮೊದಲು ಅರ್ಜಿ ಸಲ್ಲಿಸಿ, ಇಲ್ಲಿದೆ ಸಂಪೂರ್ಣ ವಿವರ

Praveen Chandra B HT Kannada

May 22, 2023 06:33 AM IST

AFCAT 2 2023: ವಾಯುಪಡೆ ಸೇರುವಿರಾ? ಆಫ್‌ಕ್ಯಾಟ್‌ ಪರೀಕ್ಷೆಗೆ ಜೂನ್‌ 30ರ ಮೊದಲು ಅರ್ಜಿ ಸಲ್ಲಿಸಿ, ಇಲ್ಲಿದೆ ಸಂಪೂರ್ಣ ವಿವರ

    • Air Force Common Admission Test: ಈ ವರ್ಷದ ಎರಡನೇ ಅವಧಿಯ ಆಫ್‌ಕ್ಯಾಟ್‌ (AFCAT 2 2023) ಪರೀಕ್ಷೆಗೆ ಜೂನ್‌ 1ರಿಂದ ಜೂನ್‌ 30ರವರೆಗೆ ಅವಕಾಶವಿದೆ. ಫ್ಲಯಿಂಗ್‌ ವಿಭಾಗ ಮತ್ತು ಗ್ರೌಂಡ್‌ ಡ್ಯೂಟಿ (ಟೆಕ್ನಿಕಲ್‌ ಮತ್ತು ನಾನ್‌ ಟೆಕ್ನಿಕಲ್‌) ವಿಭಾಗದ 276 ಹುದ್ದೆಗಳ ಭರ್ತಿಗೆ ಭಾರತೀಯ ವಾಯುಪಡೆಯ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದೆ.
AFCAT 2 2023: ವಾಯುಪಡೆ ಸೇರುವಿರಾ? ಆಫ್‌ಕ್ಯಾಟ್‌ ಪರೀಕ್ಷೆಗೆ ಜೂನ್‌ 30ರ ಮೊದಲು ಅರ್ಜಿ ಸಲ್ಲಿಸಿ, ಇಲ್ಲಿದೆ ಸಂಪೂರ್ಣ ವಿವರ
AFCAT 2 2023: ವಾಯುಪಡೆ ಸೇರುವಿರಾ? ಆಫ್‌ಕ್ಯಾಟ್‌ ಪರೀಕ್ಷೆಗೆ ಜೂನ್‌ 30ರ ಮೊದಲು ಅರ್ಜಿ ಸಲ್ಲಿಸಿ, ಇಲ್ಲಿದೆ ಸಂಪೂರ್ಣ ವಿವರ

ಭಾರತೀಯ ವಾಯುಪಡೆಯಲ್ಲಿ ಗ್ರೂಪ್‌-ಎ ಗೆಜೆಟೆಡ್‌ ಆಫೀಸರ್‌ ಆಗಲು ಬಯಸುವವರಿಗೆ ಇಲ್ಲೊಂದು ಅವಕಾಶವಿದೆ. ಏರ್‌ಫೋರ್ಸ್‌ನಲ್ಲಿ ಗ್ರೂಪ್‌-ಎ ಗೆಜೆಟೆಡ್‌ ಆಫೀಸರ್‌ಗಳನ್ನು ಭರ್ತಿ ಮಾಡುವ ಸಲುವಾಗಿ ವಾಯುಪಡೆಯು ವರ್ಷಕ್ಕೆ ಎರಡು ಬಾರಿ ಭಾರತೀಯ ವಾಯುಪಡೆಯ ಸಾಮಾನ್ಯ ಪ್ರವೇಶ ಪರೀಕ್ಷೆ (Air Force Common Admission Test) ನಡೆಸುತ್ತಿದೆ. AFCAT 2 2023 ಪರೀಕ್ಷೆಗೆ ಜೂನ್‌ 1, 2023ರಿಂದ ಅರ್ಜಿ ಸಲ್ಲಿಸಬಹುದು.

ಟ್ರೆಂಡಿಂಗ್​ ಸುದ್ದಿ

ತಿರುಮಲ ತಿರುಪತಿಯಲ್ಲಿ ನವದಂಪತಿಗೆ ವಿಶೇಷ ಶ್ರೀವಾರಿ ದರ್ಶನ ಟಿಕೆಟ್ ಪ್ರಕಟಿಸಿದ ಟಿಟಿಡಿ; ಎಷ್ಟಿವೆ ಕೋಟಾ, ದರ ಇತ್ಯಾದಿ ವಿವರ

Gold Rate Today: ಮತ್ತೆ ಆರಂಭವಾಯ್ತು ಚಿನ್ನ, ಬೆಳ್ಳಿ ದರದಲ್ಲಿನ ಏರಿಳಿತ; ಶನಿವಾರ ಚಿನ್ನದ ದರ ಇಳಿಕೆ, ಬೆಳ್ಳಿ ಏರಿಕೆ

Explainer: ಪ್ರಜ್ವಲ್ ರೇವಣ್ಣ ಪಲಾಯನಕ್ಕೆ ಪವರ್‌ ತುಂಬಿದ ರಾಜತಾಂತ್ರಿಕ ಪಾಸ್‌ಪೋರ್ಟ್; ಏನಿದರ ವಿಶೇಷ?

Closing Bell: ಮುಂಬೈ ಷೇರುಪೇಟೆಯ ವಾರಾಂತ್ಯದಲ್ಲಿ ಸೆನ್ಸೆಕ್ಸ್ 732 ಅಂಕಗಳ ಕುಸಿತ; ಈ ಪರಿ ಮಾರುಕಟ್ಟೆ ತಲ್ಲಣಕ್ಕೆ ಕಾರಣವೇನು

ಅರ್ಜಿ ಸಲ್ಲಿಕೆಗೆ ಆರಂಭಿಕ ದಿನಾಂಕ: 01-06-2023

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 30-06-2023

ಅರ್ಜಿ ಶುಲ್ಕ: 250 ರೂ.

ಕೋರ್ಸ್‌ಗಳ ಆರಂಭ: ಜನವರಿ, 2024

ಸಹಾಯವಾಣಿ: 020-25503105 / 020-25503106

ವೆಬ್‌ ವಿಳಾಸ: https://afcat.cdac.in/AFCAT

ಭಾರತೀಯ ವಾಯುಪಡೆಯು ಗ್ರೂಪ್‌ ಎ ಗೆಜೆಟೆಡ್‌ ಆಫೀಸರ್‌ ಹುದ್ದೆಗಳ ನೇಮಕಕ್ಕೆ ಪ್ರತಿ ವರ್ಷ ಅಫ್‌ಕ್ಯಾಟ್‌ (ಭಾರತೀಯ ವಾಯುಪಡೆಯ ಸಾಮಾನ್ಯ ಪ್ರವೇಶ ಪರೀಕ್ಷೆ) ನಡೆಸುತ್ತದೆ. ಈ ಮೂಲಕ ಫ್ಲಯಿಂಗ್‌ ವಿಭಾಗ ಮತ್ತು ಗ್ರೌಂಡ್‌ ಡ್ಯೂಟಿ (ಟೆಕ್ನಿಕಲ್‌ ಮತ್ತು ನಾನ್‌ ಟೆಕ್ನಿಕಲ್‌) ವಿಭಾಗದಲ್ಲಿ ಆಫೀಸರ್‌ಗಳ ನೇಮಕ ಮಾಡಿಕೊಳ್ಳಲಾಗುತ್ತದೆ. 2024ರ ಜನವರಿ ತಿಂಗಳಿನಿಂದ ಆರಂಭವಾಗಲಿರುವ ಕೋರ್ಸ್‌ಗೆ ಇದೀಗ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದರೊಂದಿಗೆ ಎನ್‌ಸಿಸಿ ಸ್ಪೆಷಲ್‌ ಎಂಟ್ರಿ ಸ್ಕೀಮ್‌ಗೂ (ಫ್ಲಯಿಂಗ್‌ ಬ್ರ್ಯಾಂಚ್‌) ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಜೂನ್‌ 1, 2023ರಿಂದ ಜೂನ್‌ 30ರ ತನಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ರಾಜ್ಯದಲ್ಲಿಯೂ ಪರೀಕ್ಷಾ ಕೇಂದ್ರಗಳಿರಲಿವೆ.

ಹುದ್ದೆಗಳ ವಿವರ

ಆಫ್‌ಕ್ಯಾಟ್‌ ಎಂಟ್ರಿ: ಫ್ಲೈಯಿಂಗ್‌ ವಿಭಾಗದಲ್ಲಿ 11, ಗ್ರೌಂಡ್‌ ಡ್ಯೂಟಿ (ಟೆಕ್ನಿಕಲ್‌)- 151, ಗ್ರೌಂಡ್‌ ಡ್ಯೂಟಿ (ನಾನ್‌ ಟೆಕ್ನಿಕಲ್‌)- 114 ಹುದ್ದೆಗಳಿವೆ. ಎನ್‌ಸಿಸಿ ಸ್ಪೆಷಲ್‌ ಎಂಟ್ರಿ ಮೂಲಕ ಫ್ಲೈಯಿಂಗ್‌ ವಿಭಾಗದಲ್ಲಿ ನೇಮಕ ಮಾಡಲಾಗುತ್ತಿದೆ. ಎನ್‌ಸಿಸಿ ಅಭ್ಯರ್ಥಿಗಳಿಗೆ ಫ್ಲೈಯಿಂಗ್‌ ವಿಭಾಗದಲ್ಲಿ ಶೇಕಡ 10 ಸೀಟು ನೀಡಲಾಗುತ್ತಿದೆ. ಎನ್‌ಸಿಸಿ ಏರ್‌ ವಿಂಗ್‌ ಸೀನಿಯರ್‌ ಡಿವಿಷನ್‌ ಸಿ ಸರ್ಟಿಫಿಕೇಟ್‌ ಪಡೆದಿರಬೇಕು.

ಆಫ್‌ಕ್ಯಾಟ್‌ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳೇನು?

ಫ್ಲಯಿಂಗ್‌ ಬ್ರಾಂಚ್‌ಗೆ (ಶಾರ್ಟ್‌ ಸವೀರ್‍ಸ್‌ ಕಮಿಷನ್‌) ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಷಯವನ್ನು ವ್ಯಾಸಂಗ ಮಾಡಿ ಶೇಕಡಾ 60 ಅಂಕಗಳೊಂದಿಗೆ ಬಿಇ/ಬಿಟೆಕ್‌ ತೇರ್ಗಡೆಯಾಗಿರಬೇಕು. ಗ್ರೌಂಡ್‌ ಡ್ಯೂಟಿ -ಟೆಕ್ನಿಕಲ್‌ ಬ್ರಾಂಚ್‌ಗೆ (ಪರ್ಮನೆಂಟ್‌/ಶಾರ್ಟ್‌ ಸವೀರ್‍ಸ್‌ ಕಮೀಷನ್‌) ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಾಲ್ಕು ವರ್ಷಗಳ ಎಂಜಿನಿಯರಿಂಗ್‌ ಪದವಿಯ ಎಲ್ಲಾ ಪತ್ರಿಕೆಗಳಲ್ಲಿ ಶೇ. 60 ರಷ್ಟು ಅಂಕ ಗಳಿಸಿ ತೇರ್ಗಡೆಯಾಗಿರಬೇಕು. ನಿಗದಿತ ವಿದ್ಯಾರ್ಹತೆಗೆ ಸಂಬಂಧಪಟ್ಟಂತೆ ಅಂತಿಮ ಪದವಿಯಲ್ಲಿ ತೇರ್ಗಡೆಯಾಗಿರುವ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಬಹುದಾಗಿದೆ.

ಗ್ರೌಂಡ್‌ ಡ್ಯೂಟಿ- ನಾನ್‌ ಟೆಕ್ನಿಕಲ್‌ ಬ್ರಾಂಚ್‌ಗೆ(ಪರ್ಮನೆಂಟ್‌/ಶಾರ್ಟ್‌ ಸವೀರ್ಸ್‌ ಕಮೀಷನ್‌) ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಲು ಅರ್ಹರು.

ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟು?

ಫ್ಲಯಿಂಗ್‌ ಬ್ರಾಂಚ್‌ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 20ರಿಂದ 24 ವರ್ಷದೊಳಗಿನವರಾಗಿರಬೇಕು. ಗ್ರೌಂಡ್‌ ಡ್ಯೂಟಿ (ಟೆಕ್ನಿಕಲ್‌-ನಾನ್‌ ಟೆಕ್ನಿಕಲ್‌) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ ಹಾಗೂ ಗರಿಷ್ಠ 26 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

    ಹಂಚಿಕೊಳ್ಳಲು ಲೇಖನಗಳು