logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Operation Trident: ಏನಿದು ಆಪರೇಷನ್‌ ಟ್ರೈಡೆಂಟ್?:‌ ಕರಾಚಿ ಬಂದರು ಉಡೀಸ್‌ ಮಾಡಿದ ಯೋಜನೆ ಬಗ್ಗೆ ನಿಮಗೆಷ್ಟು ಗೊತ್ತು?

Operation Trident: ಏನಿದು ಆಪರೇಷನ್‌ ಟ್ರೈಡೆಂಟ್?:‌ ಕರಾಚಿ ಬಂದರು ಉಡೀಸ್‌ ಮಾಡಿದ ಯೋಜನೆ ಬಗ್ಗೆ ನಿಮಗೆಷ್ಟು ಗೊತ್ತು?

HT Kannada Desk HT Kannada

Dec 04, 2022 02:55 PM IST

ಭಾರತೀಯ ನೌಕಾಪಡೆ ದಿನ

    • ದೇಶಾದ್ಯಂತ ಇಂದು(ಡಿ.04-ಭಾನುವಾರ) ಭಾರತೀಯ ನೌಕಾಸೇನೆ ದಿನ ಆಚರಣೆ ನಡೆಯುತ್ತಿದ್ದು, ದೇಶದ ಸಮುದ್ರ ಗಡಿಗಳ ರಕ್ಷಣೆಯಲ್ಲಿ ನಿರತವಾಗಿರುವ ನೌಕಾ ವೀರರಿಗೆ ದೇಶ ನಮಿಸುತ್ತಿದೆ. ಪಾಕಿಸ್ತಾನದ ಕರಾಚಿ ಬಂದರಿನ ಮೇಲೆ, ಭಾರತೀಯ ನೌಕಾಸೇನೆ ನಡೆಸಿದ 'ಆಪರೇಷನ್ ಟ್ರೈಡೆಂಟ್' ಹೆಸರಿನ ಕಾರ್ಯಾಚರಣೆ ಇತಿಹಾಸವನ್ನು ಸ್ಮರಿಸಲಾಗುತ್ತಿದೆ. 'ಆಪರೇಷನ್ ಟ್ರೈಡೆಂಟ್' ಕುರಿತ ಮಾಹಿತಿ ಇಲ್ಲಿದೆ..
ಭಾರತೀಯ ನೌಕಾಪಡೆ ದಿನ
ಭಾರತೀಯ ನೌಕಾಪಡೆ ದಿನ

ನವದೆಹಲಿ: ದೇಶಾದ್ಯಂತ ಇಂದು(ಡಿ.04-ಭಾನುವಾರ) ಭಾರತೀಯ ನೌಕಾಸೇನೆ ದಿನ ಆಚರಣೆ ನಡೆಯುತ್ತಿದ್ದು, ದೇಶದ ಸಮುದ್ರ ಗಡಿಗಳ ರಕ್ಷಣೆಯಲ್ಲಿ ನಿರತವಾಗಿರುವ ನೌಕಾ ವೀರರಿಗೆ ದೇಶ ನಮಿಸುತ್ತಿದೆ. ಪಾಕಿಸ್ತಾನದ ಕರಾಚಿ ಬಂದರಿನ ಮೇಲೆ, ಭಾರತೀಯ ನೌಕಾಸೇನೆ ನಡೆಸಿದ ದಾಳಿಯ ಇತಿಹಾಸವನ್ನು ಸ್ಮರಿಸಲಾಗುತ್ತಿದೆ.

ಟ್ರೆಂಡಿಂಗ್​ ಸುದ್ದಿ

ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವಾ ದರ್ಶನ ಟಿಕೆಟ್ ಬಿಡುಗಡೆ, ಆಗಸ್ಟ್‌ ತಿಂಗಳ ಕೋಟಾ ಹಂಚಿಕೆಗೆ ಅರ್ಜಿ ಸಲ್ಲಿಕೆ ಶುರು

Gold Rate Today: ತುಸು ಇಳಿಕೆಯ ಬೆನ್ನಲ್ಲೇ ಭಾನುವಾರ ದುಪ್ಪಟ್ಟು ಏರಿಕೆಯಾಯ್ತು ಬಂಗಾರದ ಬೆಲೆ; ಇಂದು ಬೆಳ್ಳಿ ದರವೂ ಹೆಚ್ಚಳ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

ನವದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ನಡೆದ ಭಾರತೀಯ ನೌಕಾಪಡೆದ ದಿನ ಕಾರ್ಯಕ್ರಮದಲ್ಲಿ, ಭಾರತದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್‌) ಅನಿಲ್‌ ಚೌಹಾಣ್‌, ಭಾರತೀಯ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಆರ್‌. ಹರಿ ಕುಮಾರ್, ಭಾರತೀಯ ವಾಯುಸೇನೆ ಮುಖ್ಯಸ್ಥ ವಿಆರ್‌ ಚೌಧರಿ ಹಾಗೂ ಭಾರತೀಯ ಭೂಸೇನೆಯ ಉಪ ಮುಖ್ಯಸ್ಥ ಲೆ.ಜ. ಬಿಎಸ್‌ ರಾಜು ಸೇರಿದಂತೆ ಮೂರೂ ಸಶಸ್ತ್ರ ಪಡೆಗಳ ಹಿರಿಯ ಸೈನ್ಯಾಧಿಕಾರಿಗಳು ಭಾಗವಹಿಸಿದ್ದರು.

ಆಪರೇಷನ್‌ ಟ್ರೈಡೆಂಟ್:‌

1971ರ ಇಂಡೋ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಪಾಕಿಸ್ತಾನದ ಬಂದರು ನಗರವಾದ ಕರಾಚಿಯಲ್ಲಿ, ಭಾರತೀಯ ನೌಕಾಪಡೆಯು ಆಕ್ರಮಣಕಾರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. 'ಆಪರೇಷನ್ ಟ್ರೈಡೆಂಟ್' ಹೆಸರಿನ ಕಾರ್ಯಾಚರಣೆಯಲ್ಲಿ, ಮೊಟ್ಟ ಮೊದಲ ಬಾರಿಗೆ ಭಾರತೀಯ ನೌಕಾಪಡೆಯು ಹಡಗು ವಿರೋಧಿ ಕ್ಷಿಪಣಿಗಳನ್ನು ಬಳಕೆ ಮಾಡಿತು.

ಡಿಸೆಂಬರ್ 4, 1971ರಲ್ಲಿ 'ಆಪರೇಷನ್ ಟ್ರೈಡೆಂಟ್' ಕಾರ್ಯಾಚರಣೆಯುಮ ಡಿಸೆಂಬರ್‌ 5ರ ವರೆಗೂ ಮುಂದುವರೆಯಿತು. ಸತತ 24 ಗಂಟೆಗಳ ಕಾಲ ನಡೆದ ಈ ಕಾರ್ಯಾಚರಣೆಯು, ಪಾಕಿಸ್ತಾನದ ಹಡಗುಗಳು ಮತ್ತು ಇತರ ನೌಕಾ ಸೌಲಭ್ಯಗಳಿಗೆ ಭಾರೀ ಹಾನಿಯನ್ನುಂಟುಮಾಡಿತು.

ಈ ಕಾರ್ಯಾಚರಣೆಯಲ್ಲಿ ಭಾರತವು ಯಾವುದೇ ನಷ್ಟವನ್ನು ಅನುಭವಿಸದಿದ್ದರೂ, ಪಾಕಿಸ್ತಾನವು ಮೈನ್‌ಸ್ವೀಪರ್, ವಿಧ್ವಂಸಕ, ಮದ್ದುಗುಂಡುಗಳನ್ನು ಸಾಗಿಸುವ ಸರಕು ಹಡಗು ಮತ್ತು ಕರಾಚಿಯಲ್ಲಿ ಇಂಧನ ಸಂಗ್ರಹ ಟ್ಯಾಂಕ್‌ಗಳನ್ನು ಕಳೆದುಕೊಂಡಿತು. ಮತ್ತೊಂದು ವಿಧ್ವಂಸಕ ಯುದ್ಧ ನೌಕೆ ಕೂಡ ಭಾರೀ ಪೆಟ್ಟು ತಿಂದಿತು.

ಯುದ್ಧಪೀಡಿತ ಪೂರ್ವ ಪಾಕಿಸ್ತಾನ(ಇಂದಿನ ಬಾಂಗ್ಲಾದೇಶ)ಕ್ಕೆ ಸೈನಿಕರನ್ನು ಮತ್ತು ಶಸ್ತ್ರಾಸ್ತ್ರಗಳನ್ನು ರವಾನಿಸಲು, ಪಾಕಿಸ್ತಾನ ನೌಕಾಸೇನೆಯು ಕರಾಚಿ ಬಂದರನ್ನು ಅವಲಂಬಿಸಿತ್ತು. ಹೀಗಾಗಿ ಈ ಬಂದರನ್ನು ನಾಶಪಡಿಸುವುದು ನಾಶ ಭಾರತೀಯ ನೌಕಾಸೇನೆಗೆ ಅತ್ಯಂತ ಮಹತ್ವದ್ದಾಗಿತ್ತು.

'ಆಪರೇಷನ್ ಟ್ರೈಡೆಂಟ್', ಕರಾಚಿ ಬಂದರಿನಿಂದ ಬಾಂಗ್ಲಾದೇಶಕ್ಕೆ ಸೈನಿಕ ನೆರವು ನೀಡುತ್ತಿದ್ದ ಪಾಕಿಸ್ತಾನ ನೌಕಾಸೇನೆಯ ಬೆನ್ನುಮೂಳೆಯನ್ನೇ ಮುರಿಯಿತು. ಈ ಕಾರ್ಯಾಚರಣೆ ಯಶಸ್ಸಿನಿಂದಾಗಿ, ಬಾಂಗ್ಲಾದೇಶದಲ್ಲಿ ಯುದ್ಧದಲ್ಲಿ ನಿರತವಾಗಿದ್ದ ಭಾರತೀಯ ಭೂಸೇನೆಗೆ ಸುಲಭ ಗೆಲುವು ಲಭಿಸಿತು.

ಭಾರತೀಯ ನೌಕಾಸೇನೆಯ 'ಆಪರೇಷನ್ ಟ್ರೈಡೆಂಟ್' ಕಾರ್ಯಾಚರಣೆ ಬಳಿಕ, ಡಿ.07ರಂದು ಕೈಗೊಂಡ 'ಆಪರೇಷನ್ ಪೈಥಾನ್' ಕಾರ್ಯಾಚರಣೆ ಕೂಡ ಯಶಸ್ವಿಯಾಯಿತು. ಈ ಹಿನ್ನೆಲೆಯಲ್ಲಿ ಪ್ರತಿವರ್ಷಡಿ.01ರಿಂದ ಡಿ.07ರವರೆಗೆ ಭಾರತೀಯ ನೌಕಾಸೇನೆಯು ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ.

1971ರ ಯುದ್ದದ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ 'ಆಪರೇಷನ್ ಟ್ರೈಡೆಂಟ್' ಕಾರ್ಯಾಚರಣೆ ಸ್ಮರಣಾರ್ಥವಾಗಿ, ಪ್ರತಿ ವರ್ಷ ಡಿ.04ರಂದು ಭಾರತೀಯ ನೌಕಾಪಡೆ ದಿನ ಆಚರಿಸಲಾಗುತ್ತದೆ.

ಇಂದಿನ ಪ್ರಮುಖ ಸುದ್ದಿಗಳು

BJP hits back to Congress: ಬಿಜೆಪಿ ರೌಡಿ ಮೋರ್ಚಾ ಡಾಟ್ ಕಾಮ್ ಹೆಸರಿನಲ್ಲಿ ಪ್ರತ್ಯೇಕ ವೆಬ್ ಸೈಟ್; ಕಾಂಗ್ರೆಸ್ ಗೆ ಬಿಜೆಪಿ ತಿರುಗೇಟು

ಬಿಜೆಪಿ ರೌಡಿ ಮೋರ್ಚಾ ಡಾಟ್ ಕಾಮ್ ಹೆಸರಿನಲ್ಲಿ ಪ್ರತ್ಯೇಕ ವೆಬ್ ಸೈಟ್ ತೆರೆದು ಮುಂದಿನ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಹೆಸರಿನಲ್ಲಿ ರೌಡಿಗಳ ಹೆಸರುಗಳನ್ನು ಕಾಂಗ್ರೆಸ್ ಪ್ರಕಟಿಸಿದೆ. ಇದಕ್ಕೆ ಬಿಜೆಪಿ ಕೂಡ ತಿರುಗೇಟು ನೀಡಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

Baba vanga predictions 2023: 12 ತಿಂಗಳು ಜಗತ್ತಿಗೆ ಘೋರ ನರಕ, ಕಣ್ಣಿಲ್ಲದ ಬಾಬಾ ವಂಗಾ ನುಡಿದ ಭವಿಷ್ಯವಾಣಿಗೆ ಜಗತ್ತಿಗೆ ನಡುಕ, ಏನಾಗುತ್ತೆ

ಬಲ್ಗೇರಿಯಾದ ಬಾಬಾ ವಂಗಾ ತನ್ನ ಭವಿಷ್ಯ ನುಡಿಗಳಿಂದ ವಿಶ್ವದಲ್ಲಿಯೇ ಜನಪ್ರಿಯತೆ ಪಡೆದಿದ್ದಾರೆ. ಜಗತ್ತಿಗೆ ಭವಿಷ್ಯದಲ್ಲಿ ಏನಾಗಲಿದೆ ಎಂದು ಈಕೆ ನುಡಿದ ಹಲವು ಭವಿಷ್ಯಗಳು ನಿಜವಾಗಿವೆ. 9/11 ಬಾಂಬ್‌ ದಾಳಿ, ಕುರ್ಸಕ್‌ ಸಬ್‌ ಮೆರಿನ್‌ ಟ್ರಾಜಿಡಿ ಸೇರಿದಂತೆ ಈಕೆ ನುಡಿದಿದ್ದದ ಹಲವು ಭವಿಷ್ಯವಾಣಿಗಳು ನಿಜವಾಗಿವೆ. ವಿಶೇಷವೆಂದರೆ, ಈಕೆ ತನ್ನ ಸಾವಿನ ಕುರಿತೂ ಭವಿಷ್ಯ ನುಡಿದಿದ್ದಾಳೆ. ಮುಂದಿನ ಹನ್ನೆರಡು ತಿಂಗಳು ಜಗತ್ತಿನ ಭವಿಷ್ಯ ಹೇಗಿರಲಿದೆ ಎಂದು ಈಕೆ ನುಡಿದ ಭವಿಷ್ಯ ಈಗ ಮಹತ್ವ ಪಡೆದುಕೊಂಡಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ