ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Baba Vanga Predictions 2023: 12 ತಿಂಗಳು ಜಗತ್ತಿಗೆ ಘೋರ ನರಕ, ಕಣ್ಣಿಲ್ಲದ ಬಾಬಾ ವಂಗಾ ನುಡಿದ ಭವಿಷ್ಯವಾಣಿಗೆ ಜಗತ್ತಿಗೆ ನಡುಕ, ಏನಾಗುತ್ತೆ

Baba vanga predictions 2023: 12 ತಿಂಗಳು ಜಗತ್ತಿಗೆ ಘೋರ ನರಕ, ಕಣ್ಣಿಲ್ಲದ ಬಾಬಾ ವಂಗಾ ನುಡಿದ ಭವಿಷ್ಯವಾಣಿಗೆ ಜಗತ್ತಿಗೆ ನಡುಕ, ಏನಾಗುತ್ತೆ

ಮುಂದಿನ ಹನ್ನೆರಡು ತಿಂಗಳು (Baba vanga predictions 2023) ಜಗತ್ತಿನ ಭವಿಷ್ಯ ಹೇಗಿರಲಿದೆ ಎಂದು ಈಕೆ ನುಡಿದ ಭವಿಷ್ಯ ಈಗ ಮಹತ್ವ ಪಡೆದುಕೊಂಡಿದೆ.

12 ತಿಂಗಳು ಜಗತ್ತಿಗೆ ಘೋರ ನರಕ, ಕಣ್ಣಿಲ್ಲದ ಬಾಬಾ ವಂಗಾ ನುಡಿದ ಭವಿಷ್ಯವಾಣಿಗೆ ಜಗತ್ತಿಗೆ ನಡುಕ
12 ತಿಂಗಳು ಜಗತ್ತಿಗೆ ಘೋರ ನರಕ, ಕಣ್ಣಿಲ್ಲದ ಬಾಬಾ ವಂಗಾ ನುಡಿದ ಭವಿಷ್ಯವಾಣಿಗೆ ಜಗತ್ತಿಗೆ ನಡುಕ

ನವದೆಹಲಿ: ಬಲ್ಗೇರಿಯಾದ ಬಾಬಾ ವಂಗಾ ತನ್ನ ಭವಿಷ್ಯ ನುಡಿಗಳಿಂದ ವಿಶ್ವದಲ್ಲಿಯೇ ಜನಪ್ರಿಯತೆ ಪಡೆದಿದ್ದಾರೆ. ಜಗತ್ತಿಗೆ ಭವಿಷ್ಯದಲ್ಲಿ ಏನಾಗಲಿದೆ ಎಂದು ಈಕೆ ನುಡಿದ ಹಲವು ಭವಿಷ್ಯಗಳು ನಿಜವಾಗಿವೆ. 9/11 ಬಾಂಬ್‌ ದಾಳಿ, ಕುರ್ಸಕ್‌ ಸಬ್‌ ಮೆರಿನ್‌ ಟ್ರಾಜಿಡಿ ಸೇರಿದಂತೆ ಈಕೆ ನುಡಿದಿದ್ದದ ಹಲವು ಭವಿಷ್ಯವಾಣಿಗಳು ನಿಜವಾಗಿವೆ. ವಿಶೇಷವೆಂದರೆ, ಈಕೆ ತನ್ನ ಸಾವಿನ ಕುರಿತೂ ಭವಿಷ್ಯ ನುಡಿದಿದ್ದಾಳೆ. ಮುಂದಿನ ಹನ್ನೆರಡು ತಿಂಗಳು ಜಗತ್ತಿನ ಭವಿಷ್ಯ ಹೇಗಿರಲಿದೆ ಎಂದು ಈಕೆ ನುಡಿದ ಭವಿಷ್ಯ ಈಗ ಮಹತ್ವ ಪಡೆದುಕೊಂಡಿದೆ.

ಟ್ರೆಂಡಿಂಗ್​ ಸುದ್ದಿ

ಈಕೆಯ ಭವಿಷ್ಯವಾಣಿ ಪ್ರಕಾರ, ಮುಂದಿನ ಹನ್ನೆರಡು ತಿಂಗಳು ಭೂಮಿಯಲ್ಲಿ ಹಲವು ಮಹತ್ವದ ಬದಲಾವಣೆಗಳಾಗಲಿವೆ. ಅಣುಬಾಂಬ್‌ ಸ್ಪೋಟದಿಂದ ಮಹಾನಾಶ ಉಂಟಾಗಬಹುದು. ಮುಂದಿನ ಹನ್ನೆರಡು ತಿಂಗಳಲ್ಲಿ ಲ್ಯಾಬ್‌ನಲ್ಲಿ ಮಕ್ಕಳ ಜನನ ಸೇರಿದಂತೆ ಹಲವು ವೈಜ್ಞಾನಿಕ ಆವಿಷ್ಕಾರಗಳೂ ಉಂಟಾಗಬಹುದು. ಇಷ್ಟು ಮಾತ್ರವಲ್ಲದೆ, ಅನ್ಯ ಗ್ರಹದ ಜೀವಿಗಳು ಭೂಮಿ ಮೇಲೆ ದಾಳಿಯಾಗಬಹುದು, ಸೌರ ಸುನಾಮಿ ಉಂಟಾಗಬಹುದು ಎಂದು ಈಕೆ ಭವಿಷ್ಯ ನುಡಿದಿದ್ದಾರೆ.

ವಿಶೇಷವೆಂದರೆ, ವಂಗಾ ಬಾಬಾ ಈಗ ಜೀವಂತವಿಲ್ಲ. ಈಕೆ ಈ ಹಿಂದೆ ನುಡಿದ ಭವಿಷ್ಯವನ್ನು ಈಗ ಹೇಳಲಾಗಿದೆ. ಈ ಜಗತ್ತಿನಲ್ಲಿ ಘಟಿಸಲಿರುವ ದುರಂತ ಸನ್ನಿವೇಶದ ಭವಿಷ್ಯ, “ಬಾಬಾ ವಂಗಾ' ಎಂದೇ ಖ್ಯಾತರಾಗಿದ್ದ ಬಲ್ಲೇರಿಯಾ ದೇಶದ ಅಂಧ ಮಹಿಳೆ ಈ ಹಿಂದೆ ಭವಿಷ್ಯ ಹೇಳುವುದಕ್ಕೆ ಸೀಮಿತರಾಗಿದ್ದರು. ಭವಿಷ್ಯದ ಕುರಿತು ಈಕೆ ಹೇಳುವ ಭವಿಷ್ಯವಾಣಿಗಳನ್ನು ದಾಖಲಿಸಿಡಲಾಗಿತ್ತು. ಪ್ರತಿವರ್ಷ ಏನಾಗಲಿದೆ ಎಂದು ಈಕೆಯಿಂದ ಭವಿಷ್ಯ ನುಡಿಸಲಾಗಿತ್ತು.

2ನೇ ವರ್ಷಕ್ಕೆ ದೃಷ್ಟಿ ಕಳೆದುಕೊಂಡು ಅಂಧತ್ವಕ್ಕೆ ಜಾರಿದ ಮಂಗಾ, 1996ರಲ್ಲಿ ನಿಧನರಾದರು. ಅವರು ನುಡಿದ ಭವಿಷ್ಯಗಳಲ್ಲಿ ಶೇ.85ರಷ್ಟು ನಿಖರವಾಗಿವೆ. 9/11 ಅಮೆರಿಕ ಮೇಲಿನ ಉಗ್ರದಾಳಿ, ಪ್ರಿನ್ಸ್‌ ಡಯಾನಾ ಸಾವು, ಬರಾಕ್ ಒಬಾಮ ಅಮೆರಿಕದ ಅಧ್ಯಕ್ಷರಾಗುವ ಕುರಿತು ವಂಗಾ ಸಾಕಷ್ಟು ವರ್ಷಗಳ ಮೊದಲೇ ನಿಖರವಾಗಿ ಹೇಳಿದ್ದರು. ಇಂತಹ ಅನೇಕ ಭವಿಷತ್ತಿನ ಘಟನೆಗಳನ್ನು ಹೇಳಿರುವುದರಿಂದ ಮುಂದಿನ ವರ್ಷದ ಆಘಾತದ ಆರಂಭವು ಎಲ್ಲರನ್ನೂ ಕಾಡುತ್ತಿದೆ.

2023ರಲ್ಲಿಯೇ ಇನ್ನೊಂದು ಭೂಮಂಡಲವನ್ನು ಮಂಕಾಗಿಸುತ್ತದೆ. ಸ್ಥಾವರವೊಂದು ಸ್ಫೋಟಿಸಿ ಅಪಾರ ಜೀವಹಾನಿ ಉಂಟಾಗುತ್ತದೆ ಎಂದು ಅವರು ಹೇಳಿದ್ದಾರೆ. ಉಕ್ರೇನ್‌ನ ಅಣು ಸ್ಥಾವರದ ಸುತ್ತ ರಷ್ಯಾದ ಯುದ್ಧ ವಿಮಾನಗಳು ಗಿರಕಿ ಹಾಕುತ್ತಿರುವ ಈ ಸಂದರ್ಭದಲ್ಲಿ ಬಾಬಾ ವಂಗಾ ಭವಿಷ್ಯ ನಿಜವಾಗುವ ಆತಂಕ ಹಲವರನ್ನು ಕಾಡತೊಡಗಿದೆ.

ಭವಿಷ್ಯವಾಣಿ ಎನ್ನುವುದು ನಿಜವಾಗಬಹುದು ಅಥವಾ ಸುಳ್ಳಾಗಬಹುದು. ಸುಳ್ಳು ಭವಿಷ್ಯ ಹೇಳುವವರೂ ಸಾಕಷ್ಟು ಜನರು ಇರುತ್ತಾರೆ. ಕೆಲವೊಬ್ಬರ ಭವಿಷ್ಯಗಳು ನಿಜವಾಗುತ್ತ ಇರುತ್ತವೆ. ಎರಡು ಕಣ್ಣಿಲ್ಲದ ಬಾಬಾ ವಂಗ ಹೇಳಿದ ಕೆಲವು ಭವಿಷ್ಯ ನಿಜವಾಗಿರುವುದರಿಂದ ಸಾಕಷ್ಟು ಜನರು ಬಾಬಾ ವಂಗಾ ಭವಿಷ್ಯವನ್ನು ಗಂಭೀರವಾಗಿ ಪರಿಗಣಿಸುತ್ತಾರೆ.

ಏಷ್ಯಾದ ಹಲವು ದೇಶಗಳಲ್ಲಿ ಭೀಕರ ಪ್ರವಾಹ ಉಂಟಾಗಲಿದೆ ಎಂದು ಬಾಬಾ ವಂಗಾ ಹೇಳಿದ ಭವಿಷ್ಯ ನಿಜವಾಗಿದೆ. ಈ ವರ್ಷ. ಪಾಕಿಸ್ತಾನ ಪ್ರವಾಹದಿಂದ ಸಾಕಷ್ಟು ಸಂಕಷ್ಟಕ್ಕೆ ಈಡಾಗಿದೆ. ಇಟಲಿಯ ಹಲವು ನಗರಗಳು ಈ ವರ್ಷ ಬರಗಾಲದಿಂದ ಸಂಕಷ್ಟಕ್ಕೆ ಈಡಾಗಿದೆ. ಇದೇ ರೀತಿ ಬರಗಾಲದ ಸಮಸ್ಯೆಯ ಕುರಿತು ಇವರು ಕೆಲವು ದೇಶಗಳಿಗೆ ನೀಡಿದ ಮುನ್ಸೂಚನೆಯೂ ನಿಜವಾಗಿದೆ.

ಆದರೆ ಬಾಬಾ ವಂಗನ ಹಲವು ಭವಿಷ್ಯವಾಣಿಗಳು ನಿಜವಾಗಿಲ್ಲ ಎನ್ನುವುದನ್ನೂ ಗಮನಿಸಬೇಕು. ಯುರೋಪ್‌ನಲ್ಲಿ 2016ರಲ್ಲಿ ದೊಡ್ಡ ಯುದ್ಧ ನಡೆಯಲಿದೆ ಎಂದಿದ್ರು. ಅದು ನಿಜವಾಗಿಲ್ಲ. 2010-14ರಲ್ಲಿ ಭೀಕರ ಪರಮಾಣು ಯುದ್ಧ ನಡೆಯುತ್ತದೆ ಎಂದಿದ್ರು. ಅದೂ ನಿಜವಾಗಿಲ್ಲ. ಆದರೆ, ಜಗತ್ತಿಗೆ ಭವಿಷ್ಯದಲ್ಲಿ ಪರಮಾಣು ಯುದ್ಧದ ಆತಂಕ ಇರೋದು ನಿಜ. ಈ ಬಾಬಾ ತುಂಬಾ ಬುದ್ಧಿವಂತಿಕೆಯಿಂದ ಇಂತಹ ಭವಿಷ್ಯಗಳನ್ನು ನುಡಿದಿದ್ದರು ಎಂದೆನಿಸುತ್ತದೆ.

ಈ ವರ್ಷ ಮಿಡತೆಗಳ ಹಾವಳಿ ಹೆಚ್ಚಿರಲಿದೆ ಎಂದು ಇವರ ಭವಿಷ್ಯವಾಣಿಯನ್ನು ವಿಶ್ಲೇಷಿಸಲಾಗಿತ್ತು. ಹಲವು ದೇಶಗಳು ಮಿಡತೆಗಳ ಹಾವಳಿಯಿಂದ ಸಾಕಷ್ಟು ತೊಂದರೆ ಅನುಭವಿಸಿವೆ. ಮೊದಲೆಲ್ಲ ಮಿಡತೆಗಳನ್ನು ಯುದ್ಧವಾಗಿ ಮತ್ತೊಂದು ದೇಶಕ್ಕೆ ಬಿಡಲಾಗುತ್ತಿತ್ತು. ಬೆಳೆ ನಾಶ ಮಾಡುವ ಮಿಡತೆಗಳನ್ನು ಶತ್ರು ದೇಶಕ್ಕೆ ಕಳುಹಿಸಿ ಆ ದೇಶದ ಆರ್ಥಿಕತೆಯನ್ನು, ಕೃಷಿಯನ್ನು ಸರ್ವನಾಶ ಮಾಡುವ ಹುನ್ನಾರ ಇದರಲ್ಲಿ ಇರುತ್ತಿತ್ತು. ಭಾರತವು ಮುಂದಿನ ವರ್ಷ ಮಿಡತೆಗಳ ಹಾವಳಿಯಿಂದ ತೊಂದರೆ ಅನುಭವಿಸಲಿದೆ ಎಂದು ಬಾಬಾ ವಂಗ ಹೇಳಿದ್ದರು.

IPL_Entry_Point