logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Maruti Evx: ಟ್ರೆಂಡ್ ಸೆಟ್ ಮಾಡೋಕೆ ಬರ್ತಿದೆ ಮಾರುತಿ ಇವಿಎಕ್ಸ್‌; 2025ಕ್ಕೆ ಲಾಂಚ್ ಆಗುವ ಈ ಎಲೆಕ್ಟ್ರಿಕ್ ಕಾರಿನ ಬೆಲೆ ಹೀಗಿದೆ

Maruti eVX: ಟ್ರೆಂಡ್ ಸೆಟ್ ಮಾಡೋಕೆ ಬರ್ತಿದೆ ಮಾರುತಿ ಇವಿಎಕ್ಸ್‌; 2025ಕ್ಕೆ ಲಾಂಚ್ ಆಗುವ ಈ ಎಲೆಕ್ಟ್ರಿಕ್ ಕಾರಿನ ಬೆಲೆ ಹೀಗಿದೆ

Raghavendra M Y HT Kannada

Nov 24, 2023 04:36 PM IST

ಮಾರುತಿ ಇವಿಎಕ್ಸ್‌ ಕಾರು

  • ಮಾರುತಿ ಸುಜುಕಿ ತನ್ನ ಮೊಟ್ಟಮೊದಲ ಎಲೆಕ್ಟ್ರಿಕ್ ಕಾರನ್ನು 2025ಕ್ಕೆ ಮಾರುಕಟ್ಟೆಗೆ ತರುತ್ತಿದೆ. ಈ ಕಾರಿನ ವೈಶಿಷ್ಟ್ಯ ಹಾಗೂ ಬೆಲೆಯನ್ನು ತಿಳಿಯಿರಿ. 

ಮಾರುತಿ ಇವಿಎಕ್ಸ್‌ ಕಾರು
ಮಾರುತಿ ಇವಿಎಕ್ಸ್‌ ಕಾರು

ಬೆಂಗಳೂರು: ಪೆಟ್ರೋಲ್, ಡೀಸೆಲ್ ಕಾರುಗಳ ಜಮಾನಾ ಮುಗೀತಾ ಬಂತು. ಈಗ ಏನಿದ್ದರೂ ಎಲಿಕ್ಟ್ರಿಕ್ ಕಾರುಗಳದ್ದೇ ಹವಾ. ಭಾರತೀಯ ಮಾರುಕಟ್ಟೆಗೆ ವಿವಿಧ ಕಂಪನಿಗಳು ಇವಿಗಳು ಎಂಟ್ರಿ ಕೊಟ್ಟಿದ್ದು, ಬೇಡಿಕೆಯೂ ಹೆಚ್ಚಾಗುತ್ತಲೇ ಇದೆ.

ಟ್ರೆಂಡಿಂಗ್​ ಸುದ್ದಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

SBI FD Rate Hike: ಸ್ಥಿರ ಠೇವಣಿಗಳ ಬಡ್ಡಿದರ ಹೆಚ್ಚಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ; ಎಸ್‌ಬಿಐ ಎಫ್‌ಡಿಗಳ ಬಡ್ಡಿದರ ವಿವರ ಹೀಗಿದೆ

ದೇಶದ ಪ್ರಮುಖ ಆಟೋಮೊಬೈಲ್ ಸಂಸ್ಥೆಗಳಲ್ಲಿ ಒಂದಾಗಿರುವ ಮಾರುತಿ ಸುಜುಕಿ ಮಾತ್ರ ಈ ವಿಚಾರದಲ್ಲಿ ಕಾದು ನೋಡುವ ತಂತ್ರವನ್ನು ಅನುಸರಿಸಿತ್ತು. ಇದೀಗ ತಾನು ಕೂಡ ಯಾರಿಗೂ ಕಮ್ಮಿ ಇಲ್ಲ ಎಂಬಂತೆ ಎಲೆಕ್ಟ್ರಿಕ್ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಭರ್ಜರಿ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಇದರ ಭಾಗವಾಗಿಯೇ ದೇಶದ ಪ್ರಮುಖ ಕಾರು ತಯಾರಿಕಾ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಸ್ವಲ್ಪ ದೊಡ್ಡ ಮಟ್ಟದಲ್ಲೇ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡುತ್ತಿದೆ. 2023ರ ಜನವರಿಯಲ್ಲಿ ನಡೆದಿದ್ದ ಆಟೋ ಎಕ್ಸ್‌ಪೋದಲ್ಲಿ ಮಾರುತಿ ಇವಿಎಕ್ಸ್‌ ಎಸ್‌ಯುವಿಯನ್ನು (Maruti eVX SUV) ಅನಾವರಣಗೊಳಿಸಿತ್ತು. ಇದು ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ಮಾದರಿಯ ಕಾರು. ಟೊಯೋಟಾ ಸಹಯೋಗದಲ್ಲಿ ಈ ಕಾರನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಎಂಜಿ ಝಡ್‌ಎಸ್ ಇವಿ ಹಾಗೂ ಮುಂಬರುವ ಟಾಟಾ ಕರ್ವ್ (Curvv EV), ಕ್ರೆಟಾ ಇವಿ ಮತ್ತು ಸೆಲ್ಟೋಸ್ ಇವಿ ಕಾರಿಗಳಿಗೆ ಮಾರುತಿ ಇವಿಎಕ್ಸ್‌ ಎಸ್‌ಯುವಿ ಸ್ಪರ್ಧೆಯನ್ನು ನೀಡಲಿದೆ. ಕೆಲ ತಿಂಗಳುಗಳ ಹಿಂದೆಯೇ ಈ ಕಾರು ಪರೀಕ್ಷಾರ್ಥವಾಗಿ ರಸ್ತೆಗೆ ಇಳಿದಿದ್ದು, ಚಾರ್ಜಿಂಗ್ ಮಾಡುತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ವಿನ್ಯಾಸ ತುಂಬಾ ಚೆನ್ನಾಗಿದೆ ಎಂದು ಕಾರು ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಾರುತಿ ಇವಿಎಕ್ಸ್‌ ಎಸ್‌ಯುವಿ ವೈಶಿಷ್ಟ್ಯಗಳೇನು?

ಮಾರುತಿ ಇವಿಎಕ್ಸ್ ಎಲೆಕ್ಟ್ರಿಕ್ ಕಾನ್ಸೆಪ್ಟ್ ಮಾದರಿಯ ಈ ಹೊಸ ಕಾರು ಎಲ್‌ ಆಕಾರದ ಹೆಡ್‌ಲ್ಯಾಂಪ್‌ಗಳೊಂದಿಗೆ ಬರುತ್ತಿದೆ. ಬಂಪರ್ ಅನ್ನು ನವೀಕರಿಸಲಾಗಿದ್ದು, ತುಂಬಾ ಸ್ಟೈಲಿಶ್ ಆಗಿದೆ. ಇನ್ನ ಮುಂಭಾಗದಲ್ಲಿ ಸುಜುಕಿ ಲೋಗೋ ಮೊದಲಿಗಿಂತ ಸ್ವಲ್ಪ ಎತ್ತರದಲ್ಲಿದೆ. ಹೊರಭಾಗಕ್ಕಿಂತ ಒಳಭಾಗದಲ್ಲಿ ಫ್ಯೂಚರಿಸ್ಟಿಕ್ ಆಗಿ ಕಾಣುತ್ತಿದೆ. ವಿಶಾಲವಾದ ಡ್ಯುಯಲ್ ಸ್ಕ್ರೀನ್ ಸೆಟಪ್, ಪ್ಲೋಟಿಂಗ್ ಸೆಂಟರ್ ಕನ್ಸೋಲ್ ಒಳಗೊಂಡಿದೆ. ಬಟನ್‌ಗಳ ಬದಲಾಗಿ ಟಚ್ ಸ್ಕ್ರೀನ್‌ನಲ್ಲಿ ಬರುತ್ತಿರುವುದು ಇದರ ಮತ್ತೊಂದು ವಿಶೇಷ. ಇವುಗಳ ಜೊತೆಗೆ ಗ್ರಾಹಕರಣ ಅಭಿರುಚಿಗೆ ತಕ್ಕಂತೆ ಮಾರ್ಪಾಡು ಮಾಡಲಾಗುತ್ತದೆ. ಈ ಕಾರು ಪ್ರೀಮಿಯಂ ಫೀಚರ್ಸ್ ಹೊಂದಿದ್ದು, 360 ಡಿಗ್ರಿ ವೀವ್ ಕ್ಯಾಮೆರಾ, ಕನಿಷ್ಠ 6 ಏರ್ ಬ್ಯಾಗ್ಸ್‌, ಸೇಫ್ಟಿ ಕಿಟ್ ಕೂಡ ಮಾರುತಿ ಇವಿಎಕ್ಸ್‌ನಲ್ಲಿ ಇರಲಿದೆ.

ಒಮ್ಮೆ ಚಾರ್ಜ್ ಮಾಡಿದರೆ ಎಷ್ಟು ಕಿಲೋಮೀಟರ್ ಓಡುತ್ತೆ?

ಮಾರುತಿ ಸಂಸ್ಥೆಗೆ ಇದು ಮೊದಲ ಎಲೆಕ್ಟ್ರಿಕ್ ಕಾರು ಆಗಿರುವುದರಿಂದ ಬೆಸ್ಟ್ ಎನಿಸಿಕೊಳ್ಳಲು ಉತ್ತಮ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. 60 ಕಿಲೋ ಬ್ಯಾಟರಿ ಪ್ಯಾಕ್, ಒಮ್ಮೆ ಚಾರ್ಜ್ ಮಾಡಿದರೆ ಕನಿಷ್ಠ 550 ಕಿಲೋ ಮೀಟರ್ ಓಡುವ ಸಾಮರ್ಥ್ಯವನ್ನು ಹೊಂದಿರಲಿದೆ ಎಂದು ಸಂಸ್ಥೆ ಹೇಳಿಕೊಂಡಿದ್ದು, ಗುಜರಾತ್‌ನಲ್ಲಿರುವ ಸಂಸ್ಥೆಯ ಘಟಕದಲ್ಲೇ ಈ ಕಾರನ್ನು ತಯಾರು ಮಾಡಲಾಗುತ್ತದೆ.

ಮಾರುತಿ ಇವಿಎಕ್ಸ್ ಎಸ್‌ಯುವಿ ಕಾರಿನ ಬೆಲೆ ಎಷ್ಟು?

ಮಧ್ಯಮ ವರ್ಗದ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಇವಿಎಕ್ಸ್ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದ್ದು, ಈ ಕಾರಿನ ಬೆಲೆ 18 ಲಕ್ಷದಿಂದ 22 ಲಕ್ಷ ರೂಪಾಯಿ (ಎಕ್ಸ್‌ಶೋರೂಂ ಬೆಲೆ) ವರೆಗೆ ಇರಲಿದೆ. ಭಾರತದ ಗ್ರಾಹಕರು ಮಾತ್ರವಲ್ಲದೆ, ವಿದೇಶಗಳಲ್ಲೂ ಗ್ರಾಹಕರನ್ನು ಹೊಂದಲು ಪ್ಲಾನ್ ಮಾಡಿಕೊಳ್ಳುತ್ತಿದೆ. ನೂತನ ಎಲೆಕ್ಟ್ರಿಕ್ ಕಾರುಗಳನ್ನು ರಪ್ತು ಮಾಡುವ ಗುರಿಯನ್ನು ಹಾಕಿಕೊಂಡಿದೆ. ಮೊದಲು ಯೂರೋಪಿಯನ್ ದೇಶಗಳಿಗೆ ರಫ್ತು ಮಾಡಲಿದ್ದು, ಆ ಬಳಿಕ ಹಂತ ಹಂತವಾಗಿ ಇತರೆ ದೇಶಗಳಿಗೂ ವಿಸ್ತರಿಸುವ ಯೋಜನೆಯನ್ನು ಹಾಕಿಕೊಂಡಿದೆ. ಭಾರತದಲ್ಲಿ 2025ಕ್ಕೆ ಮಾರುತಿ ಇವಿಎಕ್ಸ್‌ ಅವನ್ನು ಬಿಡುಗಡೆ ಮಾಡಲಾಗುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ