logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Innova Crysta: ಇನ್ನೋವಾ ಕ್ರಿಸ್ಟಾ ಬುಕಿಂಗ್ ಆರಂಭಿಸಿದ ಟೊಯೊಟಾ; ಇದರ ವಿಶೇಷತೆಗಳತ್ತ ಒಮ್ಮೆ ಕಣ್ಣಾಡಿಸಿ

Innova Crysta: ಇನ್ನೋವಾ ಕ್ರಿಸ್ಟಾ ಬುಕಿಂಗ್ ಆರಂಭಿಸಿದ ಟೊಯೊಟಾ; ಇದರ ವಿಶೇಷತೆಗಳತ್ತ ಒಮ್ಮೆ ಕಣ್ಣಾಡಿಸಿ

HT Kannada Desk HT Kannada

Jan 27, 2023 09:40 PM IST

ಇನ್ನೋವಾ ಕ್ರಿಸ್ಟಾ

    • ಇನ್ನೋವಾ ಹೈಕ್ರಾಸ್ ಬಿಡುಗಡೆಯ ಬಳಿಕ ಈಗ ಹೊಸ ಇನ್ನೋವಾ ಕ್ರಿಸ್ಟಾ ಬುಕಿಂಗ್ ಪ್ರಾರಂಭವಾಗಿದ್ದು, ಇದು ಟೊಯೊಟಾದ ಬಹು ತಂತ್ರಜ್ಞಾನ ವಿಧಾನಕ್ಕೆ ಸಾಕ್ಷಿಯಾಗಿದೆ.
ಇನ್ನೋವಾ ಕ್ರಿಸ್ಟಾ
ಇನ್ನೋವಾ ಕ್ರಿಸ್ಟಾ

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ತನ್ನ ಹೊಸ ಇನ್ನೋವಾ ಕ್ರಿಸ್ಟಾ ಕಾರಿನ ಬುಕಿಂಗ್ ಪ್ರಾರಂಭಿಸಿದೆ. 2005ರಲ್ಲಿ ಮಾರುಕಟ್ಟೆಗೆ ಪರಿಚಯಿಸಿದಾಗಿನಿಂದ, ಈ ವಾಹನವು ಭಾರತದಲ್ಲಿ ಮನೆಮಾತಾಗಿದೆ. ಆರಾಮದಾಯಕ, ಸುರಕ್ಷತೆ, ಐಷಾರಾಮಿ ಮತ್ತು ಶಕ್ತಿಶಾಲಿ ವಾಹನವು ಗ್ರಾಹಕರ ಮೆಚ್ಚುಗೆಯನ್ನು ಗಳಿಸಿದೆ. ವಿಶ್ವಾಸಾರ್ಹ ಸಂಸ್ಥೆಯ ವಾಹನವು ಜನರ ಮನಗೆದ್ದಿದೆ.

ಟ್ರೆಂಡಿಂಗ್​ ಸುದ್ದಿ

Gold Rate Today: ಭಾನುವಾರ ಚಿನ್ನ, ಬೆಳ್ಳಿ ಎರಡರ ದರವೂ ಹೆಚ್ಚಳ; ಆಭರಣ ಖರೀದಿಸುವ ಯೋಚನೆ ಇದ್ದರೆ ಇಂದಿನ ಬೆಲೆ ಗಮನಿಸಿ

ಭಾರತದ ಅತಿದೊಡ್ಡ ಬಜಾಜ್ ಪಲ್ಸರ್‌ ಮಾರುಕಟ್ಟೆಗೆ; ಪಲ್ಸರ್ NS400Z ಬೈಕ್‌ ದರ 1.85 ಲಕ್ಷ ರೂ, ವಿನ್ಯಾಸ ವಿಶೇಷ ವಿವರ ಹೀಗಿದೆ

ತಿರುಮಲ ತಿರುಪತಿಯಲ್ಲಿ ನವದಂಪತಿಗೆ ವಿಶೇಷ ಶ್ರೀವಾರಿ ದರ್ಶನ ಟಿಕೆಟ್ ಪ್ರಕಟಿಸಿದ ಟಿಟಿಡಿ; ಎಷ್ಟಿವೆ ಕೋಟಾ, ದರ ಇತ್ಯಾದಿ ವಿವರ

Gold Rate Today: ಮತ್ತೆ ಆರಂಭವಾಯ್ತು ಚಿನ್ನ, ಬೆಳ್ಳಿ ದರದಲ್ಲಿನ ಏರಿಳಿತ; ಶನಿವಾರ ಚಿನ್ನದ ದರ ಇಳಿಕೆ, ಬೆಳ್ಳಿ ಏರಿಕೆ

ಹೊಸ ಇನ್ನೋವಾ ಕ್ರಿಸ್ಟಾ ಈಗ ಅತ್ಯಾಧುನಿಕ ಫ್ರಂಟ್ ಫ್ಯಾಸಿಯಾದೊಂದಿಗೆ ಬಿಡುಗಡೆಯಾಗಿದೆ. ದೃಢವಾದ ನೋಟಕ್ಕಾಗಿ ನಿರ್ದಿಷ್ಟ ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಇದನ್ನು ವಿನ್ಯಾಸಗೊಳಿಸಲಾಗಿದೆ. ಆ ಮೂಲಕ ಭಾರತೀಯ ಕುಟುಂಬಗಳು, ಉದ್ಯಮಿಗಳು, ಕಾರ್ಪೋರೇಟ್ಸ್ ಮತ್ತು ಫ್ಲೀಟ್ ಮಾಲೀಕರ ಅಗತ್ಯಗಳನ್ನು ಇದು ಪೂರೈಸುತ್ತದೆ.

ಇತ್ತೀಚೆಗೆ ಬಿಡುಗಡೆಯಾದ ಇನ್ನೋವಾ ಹೈಕ್ರಾಸ್ ಕೂಡಾ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ಇದನ್ನು ಅನುಸರಿಸಿ ಹೊಸ ಇನ್ನೋವಾ ಕ್ರಿಸ್ಟಾ ಬುಕಿಂಗ್‌ ಆರಂಭಿಸಲಾಗಿದೆ. ಇದು ಅದರ ಹೊರನೋಟ, ಸುಧಾರಿತ ತಂತ್ರಜ್ಞಾನ, ಆರಾಮದ ಜೊತೆಗೆ ಸುರಕ್ಷತೆ ಮತ್ತು ಚಾಲನೆ ಮಾಡಲು ಅತ್ಯುತ್ತಮ ಅನುಭವ ನೀಡಲಿದೆ. ಏಕಾಂಗಿಯಾಗಿ ಅಥವಾ ಕುಟುಂಬದೊಂದಿಗೆ ಪ್ರಯಾಣಿಸಲು ಪ್ರತಿ ಸಂದರ್ಭಕ್ಕೂ ಸೂಕ್ತವೆನಿಸು ವಾಹನ ಇದಾಗಿದೆ.

ಇನ್ನೋವಾ ಹೈಕ್ರಾಸ್ ಬಿಡುಗಡೆಯ ಬಳಿಕ ಈಗ ಹೊಸ ಇನ್ನೋವಾ ಕ್ರಿಸ್ಟಾ ಬುಕಿಂಗ್ ಪ್ರಾರಂಭವಾಗಿದ್ದು, ಇದು ಟೊಯೊಟಾದ ಬಹು ತಂತ್ರಜ್ಞಾನ ವಿಧಾನಕ್ಕೆ ಸಾಕ್ಷಿಯಾಗಿದೆ. ಡೀಸೆಲ್ ಪವರ್ ಟ್ರೇನ್ ಹೊಂದಲು ಬಯಸುವವರಿಗೂ ಇದು ಲಭ್ಯವಿದೆ.

ಈ ಬಗ್ಗೆ ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನ ಸೇಲ್ಸ್ ಮತ್ತು ಸ್ಟ್ರಾಟೆಜಿಕ್ ಮಾರ್ಕೆಟಿಂಗ್ ವಿಭಾಗದ ಉಪಾಧ್ಯಕ್ಷ ಅತುಲ್ ಸೂದ್ ಮಾತನಾಡಿ, 2005ರಲ್ಲಿ ಬಿಡುಗಡೆಯಾದಾಗಿನಿಂದ ಭಾರತದಲ್ಲಿ ಇನ್ನೋವಾ ಪ್ರಯಾಣವು ಹೊಸ ಮೈಲಿಗಲ್ಲುಗಳಿಂದ ಕೂಡಿದೆ. ಪ್ರಶ್ನಾತೀತ ಸೆಗ್ಮೆಂಟ್ ಲೀಡರ್ ಆಗಿರುವುದರ ಹೊರತಾಗಿ, ಈ ವಾಹನವು ತನ್ನ ಎಲ್ಲಾ ಅವತಾರಗಳಲ್ಲಿ ದೇಶಾದ್ಯಂತ ಅಪಾರ ಮೆಚ್ಚುಗೆಯನ್ನು ಗಳಿಸಿದೆ. ಈ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ಟೊಯೊಟಾದ ಗುಣಮಟ್ಟ, ಬಾಳಿಕೆ ಮತ್ತು ವಿಶ್ವಾಸಾರ್ಹತೆಯ ಗುಣಲಕ್ಷಣಗಳನ್ನು ದೃಢಪಡಿಸಿದೆ. ನಾವು ಇಂದು ಹೊಸ ಇನ್ನೋವಾ ಕ್ರಿಸ್ಟಾ ಡೀಸೆಲ್‌ ಕಾರಿನ ಬುಕಿಂಗ್ ತೆರೆದಿದ್ದೇವೆ. ಗ್ರಾಹಕರ ನೆಚ್ಚಿನ ಎಂಪಿವಿ ಈಗ ನಾಲ್ಕು ಗ್ರೇಡ್‌ಗಳಲ್ಲಿ ಲಭ್ಯವಿದೆ. ಸರಿ ಸಾಟಿಯಿಲ್ಲದ ಆರಾಮ ಮತ್ತು ಸುರಕ್ಷತೆಯ ಪ್ರಯಾಣಕ್ಕೆ ಹೆಸರುವಾಸಿಯಾದ ವಾಹನವನ್ನು ಬಯಸುವ ಗ್ರಾಹಕರಿಗೆ ಈ ವಾಹನವು ಪರಿಪೂರ್ಣ ಆಯ್ಕೆಯಾಗಿದೆ.

ಹೊಸ ಇನ್ನೋವಾ ಕ್ರಿಸ್ಟಾ ಮತ್ತು ಇನ್ನೋವಾ ಹೈಕ್ರಾಸ್ ಈಗ ವಿತರಕರು ಮತ್ತು ಆನ್‌ಲೈನ್‌ ಬುಕಿಂಗ್‌ಗೆ ಲಭ್ಯವಿದೆ. ತಮ್ಮ ನೆಚ್ಚಿನ ಇನ್ನೋವಾವನ್ನು ಬಯಸುವ ನಮ್ಮ ಗ್ರಾಹಕರು ತಮ್ಮ ಡ್ರೈವ್ ಅನ್ನು ಆನಂದಿಸಲು ಅನೇಕ ಪವರ್ ಟ್ರೇನ್ ಆಯ್ಕೆಯನ್ನು ಹೊಂದಿದ್ದಾರೆ ಎಂದು ತಿಳಿಸಲು ನಾವು ಸಂತಸಪಡುತ್ತೇವೆ.

ಇಂದಿನಿಂದ ಹೊಸ ಇನ್ನೋವಾ ಕ್ರಿಸ್ಟಾ ಬುಕಿಂಗ್ 50,000 ರೂಪಾಯಿಗೆ ಲಭ್ಯವಿದೆ. ಗ್ರಾಹಕರು ಈಗ ಡೀಲರ್ ಔಟ್‌ಲೆಟ್‌ಗಳಲ್ಲಿ ಮತ್ತು www.toyotabharat.com ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು. ಹೊಸ ಇನ್ನೋವಾ ಕ್ರಿಸ್ಟಾ G, GX, VX &ZX , ಎಂಬ ನಾಲ್ಕು ಗ್ರೇಡ್‌ಗಳಲ್ಲಿ ಲಭ್ಯವಿದೆ. ಅಲ್ಲದೆ ವೈಟ್ ಪಿಯರ್ಲ್ ಕ್ರಿಸ್ಟಲ್ ಶೈನ್, ಸೂಪರ್ ವೈಟ್, ಸಿಲ್ವರ್, ಆಟಿಟ್ಯೂಡ್ ಬ್ಲ್ಯಾಕ್ ಮತ್ತು ಅವಂತ್ ಗ್ರೇಸ್ ಬ್ರೋನ್ಸ್ ಎಂಬ ಐದು ಬಣ್ಣಗಳಲ್ಲಿ ಲಭ್ಯವಿದೆ.

2.4 ಲೀಟರ್ ಡೀಸೆಲ್ ಎಂಜಿನ್ ವಾಹನ ಇದಾಗಿದ್ದು, ಹಲವಾರು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. 7 ಎಸ್ ಆರ್ ಎಸ್ ಏರ್ ಬ್ಯಾಗ್‌ಗಳು, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಹಿಲ್-ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್, ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್), ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ (ಇಬಿಡಿ) ಮತ್ತು ಬ್ರೇಕ್ ಅಸಿಸ್ಟ್ (ಬಿಎ), 3-ಪಾಯಿಂಟ್ ಸೀಟ್ ಬೆಲ್ಟ್ ಮತ್ತು ಹೆಡ್ ರೆಸ್ಟ್ ಒಳಗೊಂಡಿದೆ.

    ಹಂಚಿಕೊಳ್ಳಲು ಲೇಖನಗಳು