logo
ಕನ್ನಡ ಸುದ್ದಿ  /  Nation And-world  /  Business News Share Market Closing Bell June 6 Sensex Nifty Rises Marginally Stock Market News In Kannada Pcp

Closing Bell: ನೀರಸ ಪ್ರದರ್ಶನ ತೋರಿದ ಷೇರುಪೇಟೆ, ವಾಹನ, ರಿಯಾಲ್ಟಿ ಷೇರುಗಳಿಗೆ ಬೇಡಿಕೆ, ಐಟಿ ಷೇರುಗಳ ಕುಸಿತ

Praveen Chandra B HT Kannada

Jun 06, 2023 03:56 PM IST

Closing Bell: ನೀರಸ ಪ್ರದರ್ಶನ ತೋರಿದ ಷೇರುಪೇಟೆ, ವಾಹನ, ರಿಯಾಲ್ಟಿ ಷೇರುಗಳಿಗೆ ಬೇಡಿಕೆ, ಐಟಿ ಷೇರುಗಳ ಕುಸಿತ

    • Stock Market Updates: ಸೆನ್ಸೆಕ್ಸ್‌ 5.41 ಅಂಕ ಏರಿಕೆ ಕಂಡು 62,792.88ಕ್ಕೆ ವಹಿವಾಟು ಮುಗಿಸಿದೆ. ಇದೇ ಸಮಯದಲ್ಲಿ ನಿಫ್ಟಿಯು 5.15 ಅಂಕ ಏರಿಕೆ ಕಂಡು 18,599ಕ್ಕೆ ವಹಿವಾಟು ಮುಗಿಸಿದೆ.
Closing Bell: ನೀರಸ ಪ್ರದರ್ಶನ ತೋರಿದ ಷೇರುಪೇಟೆ, ವಾಹನ, ರಿಯಾಲ್ಟಿ ಷೇರುಗಳಿಗೆ ಬೇಡಿಕೆ, ಐಟಿ ಷೇರುಗಳ ಕುಸಿತ
Closing Bell: ನೀರಸ ಪ್ರದರ್ಶನ ತೋರಿದ ಷೇರುಪೇಟೆ, ವಾಹನ, ರಿಯಾಲ್ಟಿ ಷೇರುಗಳಿಗೆ ಬೇಡಿಕೆ, ಐಟಿ ಷೇರುಗಳ ಕುಸಿತ (REUTERS)

ಬೆಂಗಳೂರು: ಭಾರತೀಯ ಷೇರುಪೇಟೆ ಮಂಗಳವಾರ ನೀರಸ ಪ್ರದರ್ಶನ ತೋರಿ ವಹಿವಾಟು ಮುಗಿಸಿವೆ. ಸೆನ್ಸೆಕ್ಸ್‌ 5.41 ಅಂಕ ಏರಿಕೆ ಕಂಡು 62,792.88ಕ್ಕೆ ವಹಿವಾಟು ಮುಗಿಸಿದೆ. ಇದೇ ಸಮಯದಲ್ಲಿ ನಿಫ್ಟಿಯು 5.15 ಅಂಕ ಏರಿಕೆ ಕಂಡು 18,599ಕ್ಕೆ ವಹಿವಾಟು ಮುಗಿಸಿದೆ.

ಟ್ರೆಂಡಿಂಗ್​ ಸುದ್ದಿ

Gold Rate Today: ಏರಿಕೆಯ ಪರ್ವದ ನಡುವೆ ತುಸು ಇಳಿಕೆಯಾಗಿ ಖುಷಿ ಹೆಚ್ಚಿಸಿದ ಚಿನ್ನದ ದರ; ಇಂದು ಬೆಳ್ಳಿ ಬೆಲೆ ಸ್ಥಿರ

10 ಗ್ರಾಂ ಚಿನ್ನಕ್ಕೆ 2 ಲಕ್ಷ ಆಗುವ ಕಾಲ ದೂರವಿಲ್ಲ, ಏಕೆ ಏರುತ್ತಿದೆ ಬಂಗಾರದ ಬೆಲೆ? ಇಲ್ಲಿದೆ ನೀವು ತಿಳಿಯಬೇಕಾದ 9 ಅಂಶಗಳು

Gold Rate Today: ಸೋಮವಾರ ತಟಸ್ಥವಾಗುವ ಮೂಲಕ ಕೊಂಚ ನೆಮ್ಮದಿ ಮೂಡಿಸಿದ ಹಳದಿ ಲೋಹ, ಇಂದು ಬೆಳ್ಳಿ ದರವೂ ಇಳಿಕೆ

Tik Tok Star Murder: ಖ್ಯಾತ ಟಿಕ್‌ ಟಾಕ್‌ ಸ್ಟಾರ್‌ ಓಂ ಫಹಾದ್‌ ಭೀಕರ ಹತ್ಯೆ, ಕಾರಣವೇನು

ಇಂದಿನ ವಹಿವಾಟಿನಲ್ಲಿ ಬ್ಲೂ-ಚಿಪ್ ನಿಫ್ಟಿ 50 ಸೂಚ್ಯಂಕವು 5 ಪಾಯಿಂಟ್‌ಗಳ ಏರಿಕೆಯೊಂದಿಗೆ 18,599 ಕ್ಕೆ ಕೊನೆಗೊಂಡಿತು. ಮುಂಬೈ ಷೇರುಪೇಟೆಯು ಪಾಯಿಂಟ್‌ ಏರಿಕೆಯೊಂದಿಗೆ 62,792 ಕ್ಕೆ ತಲುಪಿದೆ. ನಿಫ್ಟಿ ವಲಯವಾರು 15 ಸೂಚ್ಯಂಕದಲ್ಲಿ 9 ಏರಿಕೆ ದಾಖಲಿಸಿವೆ.

ಐಟಿ ಸೂಚ್ಯಂಕದ ಎಳೆತಕ್ಕೆ ಟೆಕ್ ಮಹೀಂದ್ರಾ, ಇನ್ಫೋಸಿಸ್, ಟಿಸಿಎಸ್, ಎಚ್‌ಸಿಎಲ್ ಟೆಕ್ ಮತ್ತು ವಿಪ್ರೋ ಕೊಡುಗೆ ಹೆಚ್ಚಿತ್ತು. ವಲಯವಾರು ಸೂಚ್ಯಂಕಗಳ ಪೈಕಿ ಐಟಿ ಶೇ.1.8ರಷ್ಟು ಕುಸಿದಿದೆ. ವಾಹನ ಮತ್ತು ರಿಯಾಲ್ಟಿ ಷೇರುಗಳು ಏರುಮುಖ ದಾಖಲಿಸಿವೆ.

ವೇತನ ಪ್ರಗತಿಯ ನಿಧಾನಗತಿ, ನಿರುದ್ಯೋಗ ದರವು 53 ವರ್ಷಗಳ ಕನಿಷ್ಠ ಮಟ್ಟಕ್ಕೆ ಏರಿರುವುದು ಮತ್ತು ಫೆಡರಲ್‌ ಸರಕಾರ ಜೂನ್‌ 14ರಂದು ನಡೆಸಲಿರುವ ನೀತಿನಿರೂಪಣಾ ಸಭೆಯಿಂದಾಗಿ ಬಹುತೇಕ ಏಷ್ಯಾ ಷೇರುಪೇಟೆಗಳು ಇಳಿಕೆ ಕಂಡಿವೆ.

ದೇಶೀಯವಾಗಿ ಭಾರತದ ಹೂಡಿಕೆದಾರರು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ಮಾನಿಟರಿ ಪಾಲಿಸಿ ನಿರ್ಣಯದ ಮೇಲೆ ಕಣ್ಣಿಟ್ಟಿದ್ದಾರೆ. ಈ ಸಭೆಯು ಜೂನ್‌ 8ರಂದು ನಡೆಯಲಿದೆ. ಭಾರತದ ಕೇಂದ್ರ ಬ್ಯಾಂಕ್‌ ಈ ವಾರ ತನ್ನ ಪ್ರಮುಖ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆ ಮಾಡದಿರುವ ನಿರೀಕ್ಷೆಯಿದೆ ಎಂದು ರಾಯಿಟರ್ಸ್‌ ಅರ್ಥಶಾಸ್ತ್ರಜ್ಞರ ಪೋಲ್‌ನಿಂದ ತಿಳಿದುಬಂದಿದೆ.

ಉದ್ಯೋಗಸ್ಥ ಮಹಿಳೆಗೆ ಹಣ ಉಳಿತಾಯ ಮಾಡಲು 50:30:20 ನಿಯಮ

ಭಾರತೀಯ ಮಹಿಳೆ ಕೇವಲ ಗೃಹಿಣಿಯಲ್ಲ. ಆಕೆ ವೇತನ ಪಡೆಯುವ ಉದ್ಯೋಗಿ, ಹೂಡಿಕೆದಾರಳೂ ಹೌದು. ಇಷ್ಟು ಮಾತ್ರವಲ್ಲದೆ ಸಣ್ಣ ಕಂಪನಿಯಿಂದ ಹಿಡಿದು ದೊಡ್ಡ ಕಂಪನಿಯನ್ನೂ ಮುನ್ನಡೆಸುತ್ತಿದ್ದಾರೆ. ಉಳಿತಾಯದ ವಿಷಯದಲ್ಲಿ ಪುರುಷರಿಗಿಂತ ಮಹಿಳೆಯರು ಒಂದು ಹೆಜ್ಜೆ ಮುಂದು. ಹನಿ ಹನಿಗೂಡಿದರೆ ಹಳ್ಳ ಎಂದು ತಿಳಿದುಕೊಂಡ ಮಹಿಳೆಯರು ಜತನದಿಂದ ಹಣ ಉಳಿತಾಯ ಮಾಡುತ್ತಾರೆ. ಮಹಿಳೆಯರು ಇನ್ನಷ್ಟು ಉತ್ತಮವಾಗಿ ಹಣ ಉಳಿತಾಯ ಮಾಡಲು 50:30:20 ಎಂಬ ಗೋಲ್ಡನ್‌ ನಿಯಮವನ್ನು ಇಲ್ಲಿ ಪರಿಚಯಿಸಲಾಗಿದೆ. ಲೇಖನ ಓದಲು ಇಲ್ಲಿ ಕ್ಲಿಕ್‌ ಮಾಡಿ

ವೇತನದ ಹಣದಲ್ಲಿ ಪ್ರತಿತಿಂಗಳು ಉಳಿತಾಯ ಮಾಡುವುದು ಹೇಗೆ?

ಹತ್ತಿಪ್ಪತ್ತು ಸಾವಿರ ರೂ. ವೇತನವನ್ನು ತಿಂಗಳಿಗೆ ಪಡೆಯುವವರು ಅತ್ಯುತ್ತಮ ಸೌಕರ್ಯಗಳೊಂದಿಗೆ ಬದುಕುತ್ತಿರಬಹುದು. ಐವತ್ತು ಸಾವಿರ, ಒಂದು ಲಕ್ಷ ರೂ. ವೇತನ ಪಡೆಯುವವರು ಇನ್ನೊಬ್ಬರ ಬಳಿ ಸದಾ ಸಾಲ ಕೇಳುತ್ತ ಇರಬಹುದು. ಅತ್ಯುತ್ತಮ ವೇತನ ಇರುವವರೂ ಕ್ರೆಡಿಟ್‌ ಕಾರ್ಡ್‌ ಬಿಲ್‌ಗಳನ್ನು ಪಾವತಿಸಲಾಗದೆ ಪರಿತಪಿಸುತ್ತ ಇರಬಹುದು. ಉದ್ಯೋಗಿಗಳಲ್ಲಿ ಹೆಣ್ಮಕ್ಕಳು ಉಳಿತಾಯ ಮಾಡುವುದರಲ್ಲಿ ಮುಂದಿರುತ್ತಾರೆ. ಗಂಡಸರು ತಮ್ಮ ಹಣ ಖರ್ಚು ಮಾಡುವುದರಲ್ಲಿ ಮುಂದಿರುತ್ತಾರೆ. ಆದರೆ, ಈಗ ಹಣ ಉಳಿತಾಯದಲ್ಲಿ ಯುವಕರು, ಯುವತಿಯರು ಸೇರಿದಂತೆ ಸಮಸ್ತ ಉದ್ಯೋಗಿಗಳು ಜಾಣರಾಗಿರುತ್ತಾರೆ. ವೇತನದ ಹಣದಲ್ಲಿ ಉಳಿತಾಯ ಮಾಡಲು ಬಯಸುವವರಿಗೆ ಇಲ್ಲಿ ವಿಶೇಷ ಲೇಖನ ನೀಡಲಾಗಿದೆ.

    ಹಂಚಿಕೊಳ್ಳಲು ಲೇಖನಗಳು