logo
ಕನ್ನಡ ಸುದ್ದಿ  /  Nation And-world  /  Canara Bank Q3: Canara Bank Quarterly Results Check Details Here

Canara Bank Q3: ಕೆನರಾಬ್ಯಾಂಕ್‌ ತ್ರೈಮಾಸಿಕ ಫಲಿತಾಂಶ ಪ್ರಕಟ; 2882 ಕೋಟಿ ರೂಪಾಯಿ ನಿವ್ವಳ ಲಾಭ

HT Kannada Desk HT Kannada

Jan 24, 2023 05:03 PM IST

ಕೆನರಾ ಬ್ಯಾಂಕಿನ ಎಕ್ಸಿಕ್ಯೂಟಿವ್‌ ಡೈರೆಕ್ಟರ್‌ ಕೆ.ಸತ್ಯನಾರಾಯಣ ರಾಜು

  • Canara Bank Q3: ಕೆನರಾ ಬ್ಯಾಂಕಿನ ಈ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದ ಆರ್ಥಿಕ ಫಲಿತಾಂಶ ಪ್ರಕಟವಾಗಿದೆ. ಇದರಂತೆ, ನಿವ್ವಳ ಲಾಭ ಶೇಕಡ 91.88 ಏರಿಕೆ ಆಗಿದೆ. ಕಾರ್ಯಾಚರಣೆಯ ಲಾಭ ಕೂಡ ವರ್ಷದಿಂದ ವರ್ಷದ ಲೆಕ್ಕಾಚಾರದಲ್ಲಿ ಶೇಕಡ 19.80 ಬೆಳವಣಿಗೆ ಕಂಡಿದೆ.

ಕೆನರಾ ಬ್ಯಾಂಕಿನ ಎಕ್ಸಿಕ್ಯೂಟಿವ್‌ ಡೈರೆಕ್ಟರ್‌ ಕೆ.ಸತ್ಯನಾರಾಯಣ ರಾಜು
ಕೆನರಾ ಬ್ಯಾಂಕಿನ ಎಕ್ಸಿಕ್ಯೂಟಿವ್‌ ಡೈರೆಕ್ಟರ್‌ ಕೆ.ಸತ್ಯನಾರಾಯಣ ರಾಜು (canara bank)

ಬೆಂಗಳೂರು: ಕೆನರಾಬ್ಯಾಂಕ್ ಈ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದ ಕೊನೆಗೆ ಜಾಗತಿಕ ವ್ಯವಹಾರದಲ್ಲಿ ಶೇಕಡ 19.80 ಬೆಳವಣಿಗೆ ದಾಖಲಿಸಿದೆ. ವರ್ಷದಿಂದ ವರ್ಷಕ್ಕೆ ಪರಿಗಣಿಸಲ್ಪಡುವ ಈ ಬೆಳವಣಿಗೆ ಪ್ರಕಾರ 2022ರ ಡಿಸೆಂಬರ್‌ 31ಕ್ಕೆ ಕೊನೆಯಾದ ತ್ರೈಮಾಸಿಕದಲ್ಲಿ ಜಾಗತಿಕ ವ್ಯವಹಾರ 20,00,000 ಕೋಟಿ ರೂಪಾಯಿ ದಾಟಿದೆ ಎಂದು ಬ್ಯಾಂಕಿನ ಎಕ್ಸಿಕ್ಯೂಟಿವ್‌ ಡೈರೆಕ್ಟರ್‌ ಕೆ.ಸತ್ಯನಾರಾಯಣ ರಾಜು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

10 ಗ್ರಾಂ ಚಿನ್ನಕ್ಕೆ 2 ಲಕ್ಷ ಆಗುವ ಕಾಲ ದೂರವಿಲ್ಲ, ಏಕೆ ಏರುತ್ತಿದೆ ಬಂಗಾರದ ಬೆಲೆ? ಇಲ್ಲಿದೆ ನೀವು ತಿಳಿಯಬೇಕಾದ 9 ಅಂಶಗಳು

Gold Rate Today: ಸೋಮವಾರ ತಟಸ್ಥವಾಗುವ ಮೂಲಕ ಕೊಂಚ ನೆಮ್ಮದಿ ಮೂಡಿಸಿದ ಹಳದಿ ಲೋಹ, ಇಂದು ಬೆಳ್ಳಿ ದರವೂ ಇಳಿಕೆ

Tik Tok Star Murder: ಖ್ಯಾತ ಟಿಕ್‌ ಟಾಕ್‌ ಸ್ಟಾರ್‌ ಓಂ ಫಹಾದ್‌ ಭೀಕರ ಹತ್ಯೆ, ಕಾರಣವೇನು

Gold Rate: ಬಡವರಿಗೆ ಗಗನ ಕುಸುಮವಾಯ್ತು ಚಿನ್ನ; ಮತ್ತಷ್ಟು ಹೆಚ್ಚಾಯ್ತು ಬೆಳ್ಳಿ , ಬಂಗಾರದ ಬೆಲೆ

ಕೆನರಾ ಬ್ಯಾಂಕಿನ ಈ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದ ಆರ್ಥಿಕ ಫಲಿತಾಂಶ ಪ್ರಕಟವಾಗಿದೆ. ಇದರಂತೆ, ನಿವ್ವಳ ಲಾಭ ಶೇಕಡ 91.88 ಏರಿಕೆ ಆಗಿದೆ. ಕಾರ್ಯಾಚರಣೆಯ ಲಾಭ ಕೂಡ ವರ್ಷದಿಂದ ವರ್ಷದ ಲೆಕ್ಕಾಚಾರದಲ್ಲಿ ಶೇಕಡ 19.80 ಬೆಳವಣಿಗೆ ಕಂಡಿದೆ.

ಡಿಸೆಂಬರ್ 2021 ಹಾಗೂ ಡಿಸೆಂಬರ್ 2022 ಹೋಲಿಕೆ ಹೋಲಿಸಿದ ಆರ್ಥಿಕ ಫಲಿತಾಂಶದ ಮುಖ್ಯಾಂಶಗಳು ಈ ರೀತಿ ಇವೆ.

ಜಾಗತಿಕ ವ್ಯವಹಾರದಲ್ಲಿ ಶೇಕಡ13.63 ಬೆಳವಣಿಗೆ ಆಗಿದ್ದು, 20,00,000 ಕೋಟಿ ರೂಪಾಯಿ ದಾಟಿರುತ್ತದೆ. ಅದೇ ರೀತಿ, ನಿವ್ವಳ ಲಾಭ 2882 ಕೋಟಿ ರೂಪಾಯಿ ತಲುಪಿದೆ (ಡಿಸೆಂಬರ್ 2021ರಲ್ಲಿ 1502 ಕೋಟಿ ರೂಪಾಯಿ ನಿವ್ವಳ ಲಾಭ).

ಕಾರ್ಯಾಚರಣೆ ಲಾಭ ಶೇಕಡ 19.80 ಬೆಳವಣಿಗೆ ಮತ್ತು ಮೊತ್ತ 6952 ಕೋಟಿ ರೂಪಾಯಿ ಆಗಿದೆ. ಅಂತೆಯೇ, ಜಾಗತಿಕ ಮುಂಗಡದಲ್ಲಿ ಶೇಕಡ 16.65 ಬೆಳವಣಿಗೆ ಆಗಿದೆ. ಚಿನ್ನಾಭರಣದ ಮೇಲಿನ ಸಾಲದಲ್ಲಿ ಶೇಕಡ 34.21 ಬೆಳವಣಿಗೆಯೊಂದಿಗೆ, 1,15,286 ಕೋಟಿ ರೂಪಾಯಿ ತಲುಪಿದೆ.

ನಿವ್ವಳ ಬಡ್ಡಿ ಆದಾಯದಲ್ಲಿ ಶೇಕಡ 23.81, ಬಡ್ಡಿಯೇತರ ಆದಾಯದಲ್ಲಿ ಶೇಕಡ 10.35, ಶುಲ್ಕ ಆಧಾರಿತ ಆದಾಯದಲ್ಲಿ ಶೇಕಡ 13.02 ಬೆಳವಣಿಗೆ ದಾಖಲಾಗಿದೆ. ಇನ್ನು, ವೆಚ್ಚ-ಆದಾಯದ ಅನುಪಾತ 184 ಬಿಪಿಎಸ್ ಇಳಿದಿದೆ.

ರಿಟೇಲ್‌ ಸಾಲದ ವಹಿವಾಟು

ರಿಟೇಲ್-ಕೃಷಿ-ಎಂಎಸ್ಎಂಇ ಕ್ಷೇತ್ರಗಳಿಗೆ ನೀಡಲಾದ ಸಾಲಗಳಲ್ಲಿ ಶೇಕಡ 13.81 ಬೆಳವಣಿಗೆಯೊಂದಿಗೆ, ಒಟ್ಟಾರೆ ಮುಂಗಡಗಳ ಶೇಕಡ 54 ಆಗಿರುತ್ತದೆ. ರಿಟೇಲ್ ಸಾಲಗಳಲ್ಲಿ ಶೇಕಡ 11.30 ಬೆಳವಣಿಗೆಯಾಗಿದೆ. ಗೃಹ ಸಾಲಗಳಲ್ಲಿ ಶೇಕಡ 15.81 ಬೆಳವಣಿಗೆಯಾಗಿದೆ.

ಎನ್‌ಪಿಎ ವಿವರ ಹೀಗಿದೆ..

ಸ್ಥೂಲ ನಿಷ್ಕ್ರಿಯ ಆಸ್ತಿಗಳ ಅನುಪಾತ 191 ಬಿಪಿಎಸ್ ಇಳಿದು ಶೇಕಡ 5.89ಕ್ಕೆ ತಲುಪಿದೆ. ನಿವ್ವಳ ನಿಷ್ಕ್ರಿಯ ಆಸ್ತಿಗಳ ಅನುಪಾತದಲ್ಲಿ 90 ಬಿಪಿಎಸ್ ಇಳಿಕೆಯೊಂದಿಗೆ ಶೇಕಡ 1.96 ತಲುಪಿದೆ.

ಇನ್ನು, ಪ್ರಾವಿಶನ್ ಕವರೇಜ್ ಅನುಪಾತ (ಪಿಸಿಆರ್) ಶೇಕಡ 86.32 ಆಗಿರುತ್ತದೆ. ಅಂದರೆ 306 ಬಿಪಿಎಸ್ ಉತ್ತಮಗೊಂಡಿದೆ.

ಸಿ ಆರ್ ಎ ಅರ್ ಅನುಪಾತ 2022ರ ಡಿಸೆಂಬರ್‌ನಲ್ಲಿ ಶೇಕಡ 16.72 ಆಗಿರುತ್ತದೆ. ಇದರಲ್ಲಿ ಸಿ ಇ ಟಿ 1 ಅನುಪಾತ ಶೇಕಡ 11.45 ಆಗಿರುತ್ತದೆ.

ಈಕ್ವಿಟಿ ಮೇಲಿನ ವಾಪಸಾತಿ ಅನುಪಾತದಲ್ಲಿ 630 ಬಿಪಿಎಸ್ ಬೆಳವಣಿಗೆಯೊಂದಿಗೆ ಶೇಕಡ 18.38 ಆಗಿರುತ್ತದೆ.

ಬ್ಯಾಂಕ್‌ ವ್ಯವಹಾರಗಳು

ಜಾಗತಿಕ ವ್ಯವಹಾರದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡ 13.63 ಬೆಳವಣಿಗೆಯೊಂದಿಗೆ 20,14,443 ಕೋಟಿ ರೂಪಾಯಿ ತಲುಪಿದೆ. ಒಟ್ಟಾರೆ ಜಾಗತಿಕ ಠೇವಣಿಯಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡ 11.51 ಬೆಳೆದು 1163470 ಕೋಟಿ ರೂಪಾಯಿ ತಲುಪಿದೆ. ಒಟ್ಟಾರೆ ಜಾಗತಿಕ ಮುಂಗಡದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡ 16.65 ಬೆಳವಣಿಗೆಯೊಂದಿಗೆ 850973 ಕೋಟಿ ರೂಪಾಯಿ ತಲುಪಿದೆ.

ದೇಶೀಯ ಠೇವಣಿಯಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡ 9.21 ಬೆಳವಣಿಗೆಯೊಂದಿಗೆ 1079700 ಕೋಟಿ ರೂಪಾಯಿ ತಲುಪಿದೆ. ದೇಶೀಯ ಮುಂಗಡದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡ 14.11 ಬೆಳವಣಿಗೆಯೊಂದಿಗೆ 800907 ಕೋಟಿ ರೂಪಾಯಿ ತಲುಪಿದೆ.

ರಿಟೇಲ್ ಸಾಲಗಳಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡ 11.30 ಬೆಳವಣಿಯೊಂದಿಗೆ 137007 ಕೋಟಿ ರೂಪಾಯಿ ತಲುಪಿದೆ. ಗೃಹಸಾಲಗಳಲ್ಲಿ ಶೇಕಡ 15.81 ಬೆಳವಣಿಗೆಯೊಂದಿಗೆ 81916 ಕೋಟಿ ರೂಪಾಯಿ ತಲುಪಿದೆ. ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳ ಸಾಲ, ವರ್ಷದಿಂದ ವರ್ಷಕ್ಕೆ ಶೇಕಡ 20.61 ಬೆಳವಣಿಗೆಯೊಂದಿಗೆ 203312 ಕೋಟಿ ರೂಪಾಯಿ ಆಗಿರುತ್ತದೆ.

    ಹಂಚಿಕೊಳ್ಳಲು ಲೇಖನಗಳು