logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Tripura Election: ಕಮ್ಯುನಿಸ್ಟರು ಕ್ರಿಮಿನಲ್‌ಗಳು, ಕಾಂಗ್ರೆಸ್ಸಿಗರು ಭ್ರಷ್ಟರು: ಅಮಿತ್‌ ಶಾ ವಾಗ್ದಾಳಿ

Tripura election: ಕಮ್ಯುನಿಸ್ಟರು ಕ್ರಿಮಿನಲ್‌ಗಳು, ಕಾಂಗ್ರೆಸ್ಸಿಗರು ಭ್ರಷ್ಟರು: ಅಮಿತ್‌ ಶಾ ವಾಗ್ದಾಳಿ

Praveen Chandra B HT Kannada

Feb 06, 2023 06:43 PM IST

Tripura election: ಕಮ್ಯುನಿಸ್ಟರು ಕ್ರಿಮಿನಲ್‌ಗಳು, ಕಾಂಗ್ರೆಸ್ಸಿಗರು ಭ್ರಷ್ಟರು: ಅಮಿತ್‌ ಶಾ

    • Amit Shah in Tripura: "ಕಮ್ಯುನಿಸ್ಟರು ಕ್ರಿಮಿನಲ್‌ಗಳು ಮತ್ತು ಕಾಂಗ್ರೆಸ್ಸಿಗರು ಭ್ರಷ್ಟರು, ಇಬ್ಬರೂ ಜನರು, ರಾಜ್ಯದೊಂದಿಗೆ ಆಟವಾಡಿದ್ದಾರೆ. ಸುಮಾರು 30 ವರ್ಷಗಳ ಕಮ್ಯುನಿಸ್ಟರ ಆಡಳಿತ, ಸುಮಾರು 15 ವರ್ಷಗಳ ಕಾಂಗ್ರೆಸ್ ಆಡಳಿತ ಮತ್ತು ಕೇವಲ 5 ವರ್ಷಗಳ ಆಡಳಿತದ ಪರಿಣಾಮಗಳನ್ನು ವಿಶ್ಲೇಷಿಸಿ ನೋಡಿ. ಬಿಜೆಪಿ ಎಂದರೆ ಏನು ಎನ್ನುವ ಪ್ರಶ್ನೆಗೆ ನೀವು ಉತ್ತರ ಪಡೆಯುವಿರಿ" ಎಂದು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅಮಿತ್‌ ಶಾ ಹೇಳಿದ್ದಾರೆ.
Tripura election: ಕಮ್ಯುನಿಸ್ಟರು ಕ್ರಿಮಿನಲ್‌ಗಳು, ಕಾಂಗ್ರೆಸ್ಸಿಗರು ಭ್ರಷ್ಟರು: ಅಮಿತ್‌ ಶಾ
Tripura election: ಕಮ್ಯುನಿಸ್ಟರು ಕ್ರಿಮಿನಲ್‌ಗಳು, ಕಾಂಗ್ರೆಸ್ಸಿಗರು ಭ್ರಷ್ಟರು: ಅಮಿತ್‌ ಶಾ (PTI)

ತ್ರಿಪುರಾ: ದೇಶಾದ್ಯಂತ ಚುನಾವಣಾ ಪ್ರೇರಿತ ಭಾಷಣಗಳು, ಘೋಷಣೆಗಳು, ವಾಗ್ದಾಳಿಗಳು ಹೆಚ್ಚುತ್ತಿದ್ದು, ವಿವಿಧ ರಾಜ್ಯಗಳಲ್ಲಿ ರಾಜಕೀಯ ನಾಯಕರು ಮತದಾರರನ್ನು ಸೆಳೆಯಲು ನಾನಾ ಕಸರತ್ತು ಈಗಲೇ ಆರಂಭಿಸಿದ್ದಾರೆ. ಸದ್ಯದಲ್ಲಿಯೇ ತ್ರಿಪುರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅಲ್ಲಿ ಇಂದು ಕೇಂದ್ರ ಸಚಿವ ಅಮಿತ್‌ ಶಾ ಎದುರಾಳಿ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Viral Video: ತೂಕ ಇಳಿಸುವ ಹುಚ್ಚು, ಜಿಮ್‌ನಲ್ಲಿ ಚಿತ್ರಹಿಂಸೆ ಕೊಟ್ಟು ಪುತ್ರನನ್ನು ಕೊಂದ ಪಾಪಿ ಪತಿ, ಕಣ್ಣೀರು ಹಾಕಿದ ತಾಯಿ

ಐಸಿಎಸ್‌ಇ ಐಎಸ್‌ಸಿ ಫಲಿತಾಂಶ ಪ್ರಕಟ, 10ನೇ ತರಗತಿ ಪ್ರಮಾಣ ಶೇ 99.47, ಐಎಸ್‌ಸಿ ಫಲಿತಾಂಶ ಶೇ 98.19

ಇಂದು ಬೆಳಗ್ಗೆ 11 ಗಂಟೆಗೆ ಸಿಐಎಸ್‌ಇ 10, 12ನೇ ತರಗತಿ ಫಲಿತಾಂಶ ಪ್ರಕಟ; ಲಿಂಕ್, ವೆಬ್‌ಸೈಟ್ ವಿವರ ಇಲ್ಲಿದೆ -ICSE Result

Gold Rate Today: ಭಾನುವಾರ ಚಿನ್ನ, ಬೆಳ್ಳಿ ಎರಡರ ದರವೂ ಹೆಚ್ಚಳ; ಆಭರಣ ಖರೀದಿಸುವ ಯೋಚನೆ ಇದ್ದರೆ ಇಂದಿನ ಬೆಲೆ ಗಮನಿಸಿ

ತ್ರಿಪುರಾದಲ್ಲಿ ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ (ಮಾರ್ಕ್ಸ್‌ವಾದಿ) ಮತ್ತು ಕಾಂಗ್ರೆಸ್‌ ಪಕ್ಷಗಳು ರಾಜ್ಯದ ಮತ್ತು ಜನರ ಹಿತಾಸಕ್ತಿ ಮರೆತಿವೆ ಎಂದು ಅಮಿತ್‌ ಶಾ ಹೇಳಿದ್ದಾರೆ. ಆದರೆ, ತ್ರಿಪುರಾದಲ್ಲಿ ಬಿಜೆಪಿ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪವನ್ನು ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

"ಕಮ್ಯುನಿಸ್ಟರು ಕ್ರಿಮಿನಲ್‌ಗಳು ಮತ್ತು ಕಾಂಗ್ರೆಸ್ಸಿಗರು ಭ್ರಷ್ಟರು, ಇಬ್ಬರೂ ಜನರು, ರಾಜ್ಯದೊಂದಿಗೆ ಆಟವಾಡಿದ್ದಾರೆ. ಸುಮಾರು 30 ವರ್ಷಗಳ ಕಮ್ಯುನಿಸ್ಟರ ಆಡಳಿತ, ಸುಮಾರು 15 ವರ್ಷಗಳ ಕಾಂಗ್ರೆಸ್ ಆಡಳಿತ ಮತ್ತು ಕೇವಲ 5 ವರ್ಷಗಳ ಆಡಳಿತದ ಪರಿಣಾಮಗಳನ್ನು ವಿಶ್ಲೇಷಿಸಿ ನೋಡಿ. ಬಿಜೆಪಿ ಎಂದರೆ ಏನು ಎನ್ನುವ ಪ್ರಶ್ನೆಗೆ ನೀವು ಉತ್ತರ ಪಡೆಯುವಿರಿ" ಎಂದು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅಮಿತ್‌ ಶಾ ಹೇಳಿದ್ದಾರೆ.

ಬಡವರ ಕಲ್ಯಾಣಕ್ಕಾಗಿ ಬಿಜೆಪಿಯು ತ್ರಿಪುರಾ ರಾಜ್ಯದಲ್ಲಿ ಪಾರದರ್ಶಕ ಸರ್ಕಾರ ನಡೆಸುತ್ತಿದೆ ಎಂದು ಶಾ ಹೇಳಿದ್ದಾರೆ. "ಎಡಪಂಥೀಯರು ಹಗರಣಗಳನ್ನು ಮಾಡುತ್ತಿದ್ದರು, ಕಾಂಗ್ರೆಸ್ ಹಗರಣಗಳನ್ನು ಮಾಡುತ್ತಿದ್ದರು, ಇಂದು ಇಬ್ಬರೂ ಒಟ್ಟಾಗಿದ್ದಾರೆ, ಅದೇ ಸಮಯದಲ್ಲಿ, ಬಿಜೆಪಿಯ ಮೇಲೆ ಯಾರೂ ಒಂದೇ ಒಂದು ಹಗರಣದ ಆರೋಪವನ್ನು ಮಾಡಲು ಸಾಧ್ಯವಿಲ್ಲ, ಮೋದಿ ಜಿ ನಾಯಕತ್ವದಲ್ಲಿ ಬಿಜೆಪಿ ಪಾರದರ್ಶಕ ಸರ್ಕಾರವನ್ನು ನಡೆಸಿದೆ. ಬಡವರ ಕಲ್ಯಾಣಕ್ಕಾಗಿ ಸರ್ಕಾರ ಕೆಲಸ ಮಾಡುತ್ತಿದೆ" ಎಂದು ಅವರು ಹೇಳಿದ್ದಾರೆ.

ತ್ರಿಪುರಾದಲ್ಲಿ ಬಿಜೆಪಿ ಸರಕಾರ ಮಾಡುತ್ತಿರುವ ಕೆಲಸಗಳನ್ನು ಉಲ್ಲೇಖಿಸಿದ ಶಾ "ರಾಜ್ಯದಲ್ಲಿ ಆದಿವಾಸಿಗಳ ಮೇಲೆ ನಡೆಸುತ್ತಿದ್ದ ಅನ್ಯಾಯ ಕೊನೆಗೊಂಡಿದೆ" ಎಂದು ಹೇಳಿದ್ದಾರೆ.

"ತ್ರಿಪುರಾದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಅಪರಾಧ ಪ್ರಮಾಣವು ಶೇಕಡಾ 30 ರಷ್ಟು ಕಡಿಮೆಯಾಗಿದೆ. ನಾವು ಯಾವುದೇ ಸಿಪಿಎಂ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಮಾತನಾಡುತ್ತಿಲ್ಲ. ಆದರೆ 2016-18 ರ ನಡುವೆ 250 ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಕೊಲ್ಲಲ್ಪಟ್ಟರು. 5 ವರ್ಷಗಳ ನಂತರ ನಾನು ನಿಮ್ಮ ಮುಂದೆ ನಿಂತಿದ್ದೇನೆ. ರಾಜ್ಯದಲ್ಲಿ 27 ವರ್ಷಗಳ ಕಮ್ಯುನಿಸ್ಟರ ದುರಾಡಳಿತವನ್ನು ಬಿಜೆಪಿ ಬದಲಾಯಿಸಿದೆ ಎಂದು ಹೆಮ್ಮೆಯಿಂದ ಹೇಳಬಲ್ಲೆ. ತ್ರಿಪುರಾದಲ್ಲಿ 27 ವರ್ಷಗಳಿಂದ ಹಿಂಸಾಚಾರ ನಡೆಯುತ್ತಿತ್ತು ಅದನ್ನು ಬದಲಾಯಿಸುವ ಕೆಲಸವನ್ನು ಬಿಜೆಪಿ ಮಾಡಿದೆ. ಆಗುತ್ತಿದ್ದ ಅನ್ಯಾಯ 27 ವರ್ಷಗಳಿಂದ ಆದಿವಾಸಿ ಸಹೋದರ ಸಹೋದರಿಯರಿಗೆ ಮಾಡಿದ ಅನ್ಯಾಯವನ್ನು ಕೊನೆಗಾಣಿಸಲು ಬಿಜೆಪಿ ಶ್ರಮಿಸಿದೆ" ಎಂದು ಅವರು ಹೇಳಿದರು.

"ಈಶಾನ್ಯದಲ್ಲಿ 9,000 ಕ್ಕೂ ಹೆಚ್ಚು ಭಯೋತ್ಪಾದಕರನ್ನು ಶರಣಾಗಲು ಮತ್ತು ನಿರಾಶ್ರಿತರಿಗೆ ಶಾಶ್ವತ ನೆಲೆ ಕಲ್ಪಿಸುವ ಕೆಲಸವನ್ನು ಬಿಜೆಪಿ ಮಾಡಿದೆ" ಎಂದು ಶಾ ಹೇಳಿದ್ದಾರೆ.

"ಈ 5 ವರ್ಷಗಳು ತ್ರಿಪುರಾಕ್ಕೆ ಶಾಂತಿ ಮತ್ತು ಸಮೃದ್ಧಿಯನ್ನು ತಂದಿವೆ. ಆದರೆ ಈ 5 ವರ್ಷಗಳು ಸಾಕಾಗುವುದಿಲ್ಲ, ಪ್ರಯಾಣ ಮುಂದುವರೆಸಬೇಕು. ತ್ರಿಪುರಾ ಅಭಿವೃದ್ಧಿ ಹೊಂದುವುದಿದ್ದರೆ ಅದು ಬಿಜೆಪಿಯಿಂದ ಮಾತ್ರ ಸಾಧ್ಯ. ಅದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದಿಂದ ಮಾತ್ರ ಸಾಧ್ಯ" ಎಂದು ಅವರು ಹೇಳಿದ್ದಾರೆ. "ನಾವು ರಾಜ್ಯದಲ್ಲಿ ಬುಡಕಟ್ಟು ಜನರ ಅಭಿವೃದ್ಧಿಗಾಗಿ ಮಾತ್ರ ಕೆಲಸ ಮಾಡಿದಲ್ಲ. ನೌಕರರ ಅಭಿವೃದ್ಧಿಗಾಗಿ ಏಳನೇ ವೇತನ ಆಯೋಗವನ್ನು ಜಾರಿಗೆ ತಂದಿದ್ದೇವೆ" ಎಂದರು.

ತ್ರಿಪುರದಲ್ಲಿ ವಿಧಾನಸಭೆ ಚುನಾವಣೆಯು ಫೆಬ್ರವರಿ 16ರಂದು ನಡೆಯಲಿದೆ. ಮತ ಎಣಿಕೆಯು ಮಾರ್ಚ್‌ ಎರಡರಂದು ನಡೆಯಲಿದೆ. ಮೇಘಾಲಯ ಮತ್ತು ನಾಗಲ್ಯಾಂಡ್‌ ಮತಗಳ ಜತೆಗೆ ತ್ರಿಪುರಾದ ಮತಎಣಿಕೆ ನಡೆಯಲಿದೆ.

    ಹಂಚಿಕೊಳ್ಳಲು ಲೇಖನಗಳು