logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Hindu Rashtra: ಸಾಂಸ್ಕೃತಿಕ ಪರಿಕಲ್ಪನೆಯಡಿ ಸಂಘವು ಹಿಂದೂ ರಾಷ್ಟ್ರವನ್ನು ಪ್ರತಿಪಾದಿಸುತ್ತದೆ: ದತ್ತಾತ್ರೇಯ ಹೊಸಬಾಳೆ

Hindu Rashtra: ಸಾಂಸ್ಕೃತಿಕ ಪರಿಕಲ್ಪನೆಯಡಿ ಸಂಘವು ಹಿಂದೂ ರಾಷ್ಟ್ರವನ್ನು ಪ್ರತಿಪಾದಿಸುತ್ತದೆ: ದತ್ತಾತ್ರೇಯ ಹೊಸಬಾಳೆ

HT Kannada Desk HT Kannada

Mar 15, 2023 10:25 AM IST

ದತ್ತಾತ್ರೇಯ ಹೊಸಬಾಳೆ

    • ಹಿಂದೂ ರಾಷ್ಟ್ರ ಎಂಬುದು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್‌)ದ ಸಾಂಸ್ಕೃತಿಕ ಪರಿಕಲ್ಪನೆಯಾಗಿದ್ದು, ಒಂದು ರಾಷ್ಟ್ರವಾಗಿ ಭಾರತವನ್ನು ನಾವು ಹಿಂದೂ ರಾಷ್ಟ್ರವೆಂದು ಪರಿಗಣಿಸುತ್ತೇವೆ ಎಂದು ಆರ್‌ಎಸ್‌ಎಸ್‌ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ. ಪಾಣಿಪತ್‌ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಹೊಸಬಾಳೆ ಮಾತನಾಡಿದರು.
ದತ್ತಾತ್ರೇಯ ಹೊಸಬಾಳೆ
ದತ್ತಾತ್ರೇಯ ಹೊಸಬಾಳೆ (ANI)

ಪಾಣಿಪತ್:‌ ಹಿಂದೂ ರಾಷ್ಟ್ರ ಎಂಬುದು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್‌)ದ ಸಾಂಸ್ಕೃತಿಕ ಪರಿಕಲ್ಪನೆಯಾಗಿದ್ದು, ಒಂದು ರಾಷ್ಟ್ರವಾಗಿ ಭಾರತವನ್ನು ನಾವು ಹಿಂದೂ ರಾಷ್ಟ್ರವೆಂದು ಪರಿಗಣಿಸುತ್ತೇವೆ ಎಂದು ಆರ್‌ಎಸ್‌ಎಸ್‌ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

SBI FD Rate Hike: ಸ್ಥಿರ ಠೇವಣಿಗಳ ಬಡ್ಡಿದರ ಹೆಚ್ಚಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ; ಎಸ್‌ಬಿಐ ಎಫ್‌ಡಿಗಳ ಬಡ್ಡಿದರ ವಿವರ ಹೀಗಿದೆ

ಪಾಣಿಪತ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದತ್ತಾತ್ರೇಯ ಹೊಸಬಾಳೆ, ರಾಜ್ಯ ಮತ್ತು ರಾಷ್ಟ್ರದ ಪರಿಕಲ್ಪನೆಗಳು ಬೇರೆಬೇರೆಯಾಗಿದ್ದು, ರಾಜ್ಯವು ಜನರಿಂದ ಚುನಾಯಿಸಲ್ಪಟ್ಟ ಸರ್ಕಾರದಿಂದ ನಡೆಯುತ್ತದೆ. ಆದರೆ ರಾಷ್ಟ್ರವು ಆ ನಿರ್ದಿಷ್ಟ ಭೂಭಾಗದ ಜನರ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ನಾವು ಭಾರತವನ್ನು ಹಿಂದೂ ರಾಷ್ಟ್ರ ಎಂದು ಪರಿಗಣಿಸುತ್ತೇವೆ ಎಂದು ಹೊಸಬಾಳೆ ಅಭಿಪ್ರಾಯಪಟ್ಟಿದ್ದಾರೆ.

ಸಂಘವು ಹಿಂದೂ ರಾಷ್ಟ್ರದ ಕುರಿತು ಅನೇಕ ಬಾರಿ ಚರ್ಚೆ ಮಾಡಿದೆ. ಸಂಘ ವಿರೋಧಿಗಳು ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ರಾಜ್ಯದ ನೆಲೆಗಟ್ಟಿನಲ್ಲಿ ನೋಡುತ್ತಿದ್ದಾರೆ. ಆದರೆ ಅಸಲಿಗೆ ಅದು ರಾಷ್ಟ್ರದ ನೆಲೆಗಟ್ಟಿನಲ್ಲಿ ನೋಡಬೇಕಾದ ಸಂಗತಿಯಾಗಿದೆ. ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಭಾರತವನ್ನು ಹಿಂದೂ ರಾಷ್ಟ್ರ ಎಂದು ಕರೆಯುವುದನ್ನು ತಪ್ಪು ಎಂದು ಹೇಳುವುದರಲ್ಲಿ ಅರ್ಥವಿಲ್ಲ ಎಂದು ಹೊಸಬಾಳೆ ಹೇಳಿದರು.

ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಭಾರತವನ್ನು ಒಂದುಗೂಡಿಸುವ ಕಾರ್ಯವನ್ನು ಆರ್‌ಎಸ್‌ಎಸ್‌ ಮೊದಲಿನಿಂದಲೂ ಮಾಡಿಕೊಂಡು ಬಂದಿದೆ. ರಾಜಕೀಯ ಸ್ವರೂಪ ಹೊಂದಿರುವ ರಾಜ್ಯಕ್ಕೂ, ಸಾಂಸ್ಕೃತಿಕ ಸ್ವರೂಪ ಹೊಂದಿರುವ ರಾಷ್ಟ್ರಕ್ಕೂ ಭಿನ್ನ ಚೌಕಟ್ಟನ್ನು ಒದಗಿಸಲು ಸಂಘ ಶ್ರಮಿಸುತ್ತಿದೆ. ಸಾಂಸ್ಕೃತಿಕವಾಗಿ ಒಂದಾಗಿರುವ ಸಮಸ್ತ ಭಾರತೀಯರು ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ದತ್ತಾತ್ರೇಯ ಹೊಸಬಾಳೆ ಭರವಸೆ ವ್ಯಕ್ತಪಡಿಸಿದರು.

ಸಂಘವು ಜನಸಂಖ್ಯೆ ಅಸಮತೋಲನದ ಬಗ್ಗೆ ಮಾತನಾಡುತ್ತದೆಯೇ ಹೊರತು, ಜನಸಂಖ್ಯೆ ನಿಯಂತ್ರಣದ ಬಗ್ಗೆ ಅಲ್ಲ ಎಂದೂ ಇದೇ ವೇಳೆ ದತ್ತಾತ್ರೇಯ ಹೊಸಬಾಳೆ ಇದೇ ವೇಳೆ ಸ್ಪಷ್ಟಪಡಿಸಿದರು.

ಇನ್ನು ಅಖಿಲ ಭಾರತೀಯ ಪ್ರತಿನಿಧಿ ಸಭಾ (ಎಬಿಪಿಎಸ್) ವಾರ್ಷಿಕ ಸಮ್ಮೇಳನದ ಕುರಿತು ಮಾಹಿತಿ ನೀಡಿದ ದತ್ತಾತ್ರೇಯ ಹೊಸಬಾಳೆ, ಮಾರ್ಚ್ 12 ರಿಂದ ಮಾರ್ಚ್ 14ರವರೆಗೆ ನಡೆದ ಸಭೆ ಯಶಸ್ವಿಯಾಗಿದೆ ಎಂದು ತಿಳಿಸಿದರು. ಆರ್‌ಎಸ್‌ಎಸ್‌ ಶತಮಾನೋತ್ಸವ ಕಾರ್ಯಸೂಚಿಯನ್ನೂ ಈ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಹೊಸಬಾಳೆ ಸ್ಪಷ್ಟಪಡಿಸಿದರು.

ಎಬಿಪಿಎಸ್ ವಾರ್ಷಿಕ ಸಭೆಯಲ್ಲಿ ರಾಷ್ಟ್ರದಾದ್ಯಂತ ಎಲ್ಲಾ ರಾಜ್ಯಗಳಿಂದ ಸುಮಾರು 1,400 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. 2022-23ರ ಕಾರ್ಯ ವಿಮರ್ಶೆ ಮತ್ತು ಅನುಭವಗಳ ಆಧಾರದ ಮೇಲೆ, 2023-24ಕ್ಕೆ ಕಾರ್ಯಕ್ರಮಗಳು ಮತ್ತು ನೀತಿಗಳನ್ನು ಈ ಸಭೆ ದೃಢೀಕರಿಸಿತು ಎಂದು ದತ್ತಾತ್ರೇಯ ಹೊಸಬಾಳೆ ಮಾಹಿತಿ ನೀಡಿದರು.

ಎಬಿಪಿಎಸ್ ವಾರ್ಷಿಕ ಸಭೆಯಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, ಆರ್‌ಎಎಸ್‌ಎಸ್‌ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.

ಒಟ್ಟಿನಲ್ಲಿ ಹಿಂದೂ ರಾಷ್ಟ್ರದ ಪರಿಕಲ್ಪನೆ ಬಗ್ಗೆ ಆರ್‌ಎಸ್‌ಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ನೀಡಿರುವ ಹೇಳಿಕೆ ಇದೀಗ ದೇಶದ ಗಮನ ಸೆಳೆದಿದೆ ಎಂದು ಹೇಳಬಹುದು.

ಇಂದಿನ ಪ್ರಮುಖ ಸುದ್ದಿಗಳು

BJP Plan:‌ ಕರ್ನಾಟಕದಲ್ಲಿ ಗುಜರಾತ್‌ 'ಎಲೆಕ್ಷನ್‌ ಪ್ಲ್ಯಾನ್‌' ಕೈಬಿಟ್ಟ ಬಿಜೆಪಿ: ಚಿಂತಕರ ಚಾವಡಿಯ 'ಭಿನ್ನ ವಿಧಾನ' ಏನು?

ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಗೆ ಗುಜರಾತ್‌ ರಣತಂತ್ರದ ಮೊರೆ ಹೋಗದಿರಲು ಬಿಜೆಪಿ ನಿರ್ಧರಿಸಿದೆ. ಕರ್ನಾಟಕಕ್ಕೆ ಸಂಬಂಧಿಸಿದಂತೆ ಗುಜರಾತ್‌ ಚುನಾವಣಾ ಮಾದರಿಗೆ ವಿರಾಮ ನೀಡಲಿರುವ ಬಿಜೆಪಿ, ವಿಭಿನ್ನ ರಾಜಕೀಯ ಹಾಗೂ ಮತದಾನದ ವಿಧಾನಕ್ಕೆ ಮನ್ನಣೆ ನೀಡುವ ನಿರ್ಣಯ ಕೈಗೊಂಡಿದೆ. ಕರ್ನಾಟಕ ದಿಗ್ವಿಜಯಕ್ಕಾಗಿ ಬಿಜೆಪಿ ರೂಪಿಸಿರುವ ರಣತಂತ್ರವೇನು ಎಂಬುದರ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ