logo
ಕನ್ನಡ ಸುದ್ದಿ  /  Nation And-world  /  Horoscope Today Astrological Prediction For September 27 2022

Horoscope Today: ಈ ರಾಶಿಯ ವ್ಯಾಪಾರಿಗಳಿಗೆ ಇಂದು ಒಳ್ಳೆ ದಿನವಲ್ಲ; ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ

HT Kannada Desk HT Kannada

Sep 27, 2022 06:13 AM IST

ಇಂದಿನ ರಾಶಿ ಭವಿಷ್ಯ ತಿಳಿಯಿರಿ (ಫೋಟೋ-HT)

  • ನಿಮ್ಮ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ? ಶುಭವೇ, ಅಶುಭವೇ? ಶುಭ ಸಂಖ್ಯೆ ಸೇರಿ ಪಂಚಾಗ, ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ.

ಇಂದಿನ ರಾಶಿ ಭವಿಷ್ಯ ತಿಳಿಯಿರಿ (ಫೋಟೋ-HT)
ಇಂದಿನ ರಾಶಿ ಭವಿಷ್ಯ ತಿಳಿಯಿರಿ (ಫೋಟೋ-HT)

ಮೇಷ ರಾಶಿ

ಟ್ರೆಂಡಿಂಗ್​ ಸುದ್ದಿ

Hassan Sex Scandal: ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಬಗ್ಗೆ ಬಿಜೆಪಿ ನಾಯಕ ಅಮಿತ್ ಶಾ ಮೊದಲ ಪ್ರತಿಕ್ರಿಯೆ, ಕಾನೂನು ಕ್ರಮಕ್ಕೆ ಆಗ್ರಹ

ಕೋವಿಡ್ 19 ಎಝೆಡ್ ಲಸಿಕೆ ವಿರಳವಾಗಿ ಟಿಟಿಎಸ್‌ಗೆ ಕಾರಣವಾಗುತ್ತೆ, ಲಂಡನ್ ಕೋರ್ಟ್‌ಗೆ ಅಸ್ಟ್ರಾಜೆನೆಕಾ ಅಫಿಡವಿಟ್, ಕೋವಿಶೀಲ್ಡ್ ಕೊಟ್ಟ ಕಂಪನಿ

ಅಮೆಜಾನ್ ಗ್ರೇಟ್ ಸಮ್ಮರ್‌ ಸೇಲ್‌ 2024; ಮೇ 2ರ ಮಧ್ಯಾಹ್ನದಿಂದ ಶುರು, ವಿವಿಧ ಉತ್ಪನ್ನಗಳ ಮೇಲೆ ವೈವಿಧ್ಯದ ಡೀಲ್‌ ಮತ್ತು ಡಿಸ್ಕೌಂಟ್‌

10 ಗ್ರಾಂ ಚಿನ್ನಕ್ಕೆ 2 ಲಕ್ಷ ಆಗುವ ಕಾಲ ದೂರವಿಲ್ಲ, ಏಕೆ ಏರುತ್ತಿದೆ ಬಂಗಾರದ ಬೆಲೆ? ಇಲ್ಲಿದೆ ನೀವು ತಿಳಿಯಬೇಕಾದ 9 ಅಂಶಗಳು

ಹೆಚ್ಚಿನ ಗಳಿಕೆಯೊಂದಿಗೆ ನಿಮ್ಮ ಜೀವನಶೈಲಿ ಸುಧಾರಿಸುವ ಸಾಧ್ಯತೆಯಿದೆ. ನಿಮ್ಮ ಕನಸಿನ ಯೋಜನೆಗಾಗಿ ಹೊರಗಿನವರ ಬೆಂಬಲ ಸಿಗಲಿದೆ. ನೀವು ನಂಬಿದಂತೆ ಕುಟುಂಬದ ಹಿರಿಯರಿಂದ ಬೆಂಬಲ ಸಿಗದಿರುವ ಸಾಧ್ಯತೆ ಇದೆ. ಶೈಕ್ಷಣಿಕ ರಂಗದಲ್ಲಿ ನಿಮ್ಮ ಅತ್ಯುತ್ತಮ ಪ್ರದರ್ಶನ ಮುಂಚೂಣಿಯಲ್ಲಿರಿಸುತ್ತದೆ. ಅದೃಷ್ಟ ಸಂಖ್ಯೆ: 22

ವೃಷಭ ರಾಶಿ

ನೀವು ಆರ್ಥಿಕವಾಗಿ ಸದೃಢರಾಗುವಿರಿ. ಕಚೇರಿಯಲ್ಲಿ ನಿಮಗೆ ನ್ಯಾಯಯುತವಾಗಿ ಸಿಗಬೇಕಾಗಿರುವುದು ಸಿಗುತ್ತದೆ. ಉತ್ತಮ ಆಹಾರ ನಿಯಂತ್ರಣ ಮತ್ತು ಸಕ್ರಿಯ ಜೀವನವು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ. ಇಂದು ಮನೆಯಲ್ಲಿ ಉದ್ವಿಗ್ನತೆ ಸಾಧ್ಯತೆ ಇದೆ, ಆದರೆ ನೀವು ಸ್ವಲ್ಪ ಕೂಲ್ ಆಗಿರಬೇಕು. ಅದೃಷ್ಟ ಸಂಖ್ಯೆ: 2

ಮಿಥುನ ರಾಶಿ

ಲಾಭದಾಯಕ ಒಪ್ಪಂದವನ್ನು ಮಾಡಿಕೊಳ್ಳುತ್ತೀರಿ. ಅದು ನಿಮಗೆ ಬಹಳಷ್ಟು ಹಣವನ್ನು ತರುವ ಸಾಧ್ಯತೆಯಿದೆ. ಪರಿಪೂರ್ಣ ಫಿಟ್ ಆಗಲು ಜಿಮ್‌ಗೆ ಹೋಗಲು ಮನಸು ಮಾಡುತ್ತೀರಿ. ನಿಮ್ಮ ಕೆಲಸವು ಹೆಚ್ಚಾಗಬಹುದು. ಅದಕ್ಕೆ ಹೆಚ್ಚುವರಿ ಸಮಯವನ್ನು ನೀಡುವ ಬಗ್ಗೆ ಯೋಚಿಸುತ್ತೀರಿ. ಅದೃಷ್ಟ ಸಂಖ್ಯೆ: 3

ಕರ್ಕಾಟಕ ರಾಶಿ

ನೀವು ತುಂಬಾ ಯೋಚಿಸಿ ಹೂಡಿಕೆ ಮಾಡಿದ ಯೋಜನೆವು ನಿಮ್ಮನ್ನು ಆರ್ಥಿಕವಾಗಿ ಸದೃಢವಾಗಿಡಲು ನೆರವಾಗುತ್ತದೆ. ಬೇಡಿಕೆ ಕಡಿಮೆಯಾಗುವುದರಿಂದ ವ್ಯಾಪಾರದಲ್ಲಿರುವವರಿಗೆ ಇದು ಒಳ್ಳೆಯ ದಿನವಲ್ಲ. ರಜೆಯಿಂದಾಗಿ ಪ್ರವಾಸಕ್ಕೆ ನಿಮ್ಮನ್ನು ಬೇರೊಬ್ಬರು ಆಹ್ವಾನಿಸಬಹುದು. ಅದೃಷ್ಟ ಸಂಖ್ಯೆ: 9

ಸಿಂಹ ರಾಶಿ

ಸೌಹಾರ್ದ ಸ್ಪರ್ಧೆಯಲ್ಲಿ ನಿಮ್ಮ ದೈಹಿಕ ಸಾಮರ್ಥ್ಯದಿಂದ ನೀವು ಇತರರನ್ನು ಅಚ್ಚರಿಗೊಳಿಸುವ ಸಾಧ್ಯತೆಯಿದೆ. ಹಣವನ್ನು ಸಾಗಿಸುವಾಗ ಹೆಚ್ಚಿನ ಜಾಗರೂಕರಾಗಿರಿ. ವಿಶೇಷ ಕಾರ್ಯಕ್ರಮ ಅಥವಾ ಪಾರ್ಟಿಗೆ ಆಹ್ವಾನ ಇಲ್ಲದಿದ್ದಕ್ಕೆ ನೀವು ನಿರಾಸೆ ಅನುಭವಿಸಬಹುದು. ದೂರದ ಪ್ರಯಾಣದ ಸಾಧ್ಯತೆ ಇದೆ. ಆಸ್ತಿ ವಿವಾದದಲ್ಲಿ ನಿಮಗೆ ನ್ಯಾಯ ಸಿಗಲಿದೆ. ಅದೃಷ್ಟ ಸಂಖ್ಯೆ: 2

ಕನ್ಯಾರಾಶಿ

ಕುಟುಂಬದ ಹಿರಿಯರು ನಿಮ್ಮ ಖರ್ಚು, ವೆಚ್ಚಗಳನ್ನು ನಿಯಂತ್ರಿಸಲು ಪ್ರಯತ್ನಿಸಬಹುದು. ಸಂಗಾತಿಯು ಇಷ್ಟಪಡದ ಅಭ್ಯಾಸವನ್ನು ತೊಡೆದುಹಾಕಲು ನಿಮಗೆ ಕಷ್ಟವಾಗಬಹುದು. ನೀವು ಇಂದು ಸಣ್ಣ ಸೂಚನೆ ಮೇರೆಗೆ ಪ್ರಯಾಣ ಮಾಡುವ ಸಾಧ್ಯತೆ ಇದೆ. ಕ್ಯಾಂಪಸ್ ಸೆಲೆಕ್ಷನ್ ಕೆಲವರಿಗೆ ಲಾಭದಾಯಕ ಉದ್ಯೋಗವನ್ನು ಪಡೆಯಲು ಸಹಾಯ ಮಾಡುತ್ತದೆ. ಅದೃಷ್ಟ ಸಂಖ್ಯೆ: 17

ತುಲಾ ರಾಶಿ

ಯಾವುದೇ ತೊಂದರೆಗಳಿಲ್ಲದೆ ತುರ್ತು ಹಣವನ್ನು ಸಂಗ್ರಹಿಸಲು ಮುಂದಾಗುತ್ತೀರಿ. ಕೆಲಸದ ವಿಚಾರದಲ್ಲಿ ಮೇಲಾಧಿಕಾರಿಗಳಿಗೆ ಇರುವ ಗೊಂದಲವನ್ನು ಪರಿಹರಿಸುತ್ತೀರಿ. ಜಂಕ್ ಫುಡ್ ಅನ್ನು ಇಷ್ಟಪಡುವವರು ತಮ್ಮ ಜೀವನಶೈಲಿಯನ್ನು ಬದಲಾಯಿಸಬೇಕಾಗಬಹುದು. ನೀವು ತೊಂದರೆಗಳನ್ನು ನಿವಾರಿಸಲು ಮತ್ತು ದೀರ್ಘ ಪ್ರಯಾಣವನ್ನು ಆರಾಮದಾಯಕವಾಗಿಸಲು ಸಾಧ್ಯವಾಗುತ್ತದೆ. ಅದೃಷ್ಟ ಸಂಖ್ಯೆ: 11

ವೃಶ್ಚಿಕ ರಾಶಿ

ಉತ್ತಮ ಹಣಕಾಸಿನ ನಿರ್ವಹಣೆಯು ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಹೆಚ್ಚಿಸುತ್ತದೆ. ನಿಮ್ಮಲ್ಲಿ ಕೆಲವರು ಮತ್ತೆ ಮೊದಲಿನಂತೆ ಉತ್ತಮ ಸ್ಥಿತಿಗೆ ಬರುವ ಸಾಧ್ಯತೆ ಇದೆ. ಕುಟುಂಬದ ಪಾರ್ಟಿಗೆ ಹಾಜರಾಗುವುದು ಕೆಲವರಿಗೆ ಇಷ್ಟವಾಗುತ್ತದೆ. ಅದು ನಿಮಗೆ ಹೆಚ್ಚಿನ ಖುಷಿ ನೀಡುತ್ತದೆ. ರಸ್ತೆ ಅಥವಾ ರೈಲು ಮಾರ್ಗವಾಗಿ ಪ್ರಯಾಣಿಸುವವರು ಸಮಸ್ಯೆಗಳನ್ನು ಎದುರಿಸಬಹುದು. ಅದೃಷ್ಟ ಸಂಖ್ಯೆ: 8

ಧನು ರಾಶಿ

ಆರೋಗ್ಯದ ವಿಷಯಗಳು ಹೆಚ್ಚಾಗಿ ಚಿಂತಿಸುವಂತೆ ಮಾಡುತ್ತದೆ. ಆದರೆ ಆರೋಗ್ಯದ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವತ್ತೆ ಯೋಚನೆ ಮಾಡಿ. ಇವತ್ತಿನ ಪ್ರಯಾಣವು ನಿಮಗೆ ಹೊಸ ಅವಕಾಶಗಳನ್ನು ತರುತ್ತದೆ. ಹಣಕಾಸಿನ ವಿಷಯದಲ್ಲಿ ನೀವು ಸ್ವಲ್ಪ ಜಾಗರೂಕರಾಗಿರಬೇಕಾಗಬಹುದು. ಕೆಲವು ಆಸ್ತಿ ಸಮಸ್ಯೆಗಳು ನಿಮ್ಮನ್ನು ಆಕ್ರಮಿಸಿಕೊಳ್ಳುವ ಸಾಧ್ಯತೆಯಿದೆ. ಅದೃಷ್ಟ ಸಂಖ್ಯೆ: 18

ಮಕರ ರಾಶಿ

ಆರ್ಥಿಕವಾಗಿ, ನೀವು ಸ್ವಲ್ಪ ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆ ಇದೆ. ಆದರೆ ಇದು ತಾತ್ಕಾಲಿಕ ಹಂತವಾಗಿರುತ್ತದೆ. ಯಶಸ್ವಿಯಾಗಿ ಪೂರ್ಣಗೊಂಡ ಯೋಜನೆಯು ನಿಮ್ಮನ್ನು ಪ್ರತಿಷ್ಠೆಯ ಸ್ಥಾನಕ್ಕೆ ತರುತ್ತದೆ. ನೀವು ಮಾಡುತ್ತಿರುವ ಸಹಾಯಕ್ಕಾಗಿ ಕುಟುಂಬದ ಹಿರಿಯರು ನಿಮ್ಮನ್ನು ಶ್ಲಾಘಿಸುತ್ತಾರೆ. ಅದೃಷ್ಟ ಸಂಖ್ಯೆ: 7

ಕುಂಭ ರಾಶಿ

ನಿಮ್ಮ ಹಣಕಾಸಿನ ಬಗ್ಗೆ ಸ್ವಲ್ಪ ಕಾಳಜಿ ವಹಿಸಬೇಕಾಗುತ್ದೆ. ಕೆಲಸದಲ್ಲಿ ಸವಾಲಿನ ಪರಿಸ್ಥಿತಿಯನ್ನು ಕೆಲವರು ಉತ್ತಮವಾಗಿ ನಿಭಾಯಿಸುವ ಸಾಧ್ಯತೆಯಿದೆ. ಕ್ಷುಲ್ಲಕ ವಿಷಯಕ್ಕೆ ಸಂಗಾತಿಯೊಂದಿಗೆ ಜಗಳವು ಮನೆಯ ವಾತಾವರಣವನ್ನು ಹಾಳುಮಾಡುತ್ತದೆ. ಅದೃಷ್ಟ ಸಂಖ್ಯೆ: 2

ಮೀನ ರಾಶಿ

ನೀವು ಕೆಲಸದ ಯೋಜನೆಯಲ್ಲಿ ಹಿಂದುಳಿಯುವ ಸಾಧ್ಯತೆ ಇದ್ದು, ನಿಭಾಯಿಸಲು ಕಷ್ಟವಾಗಬಹುದು. ನೀವು ಇಷ್ಟಪಡದ ಪ್ರವಾಸವು ಆಸಕ್ತಿದಾಯಕವಾಗಬಹುದು, ಆದ್ದರಿಂದ ಅದರ ಬಗ್ಗೆ ಎರಡನೇ ಬಾರಿ ಯೋಚಿಸುವುದನ್ನು ಬಿಡಿ. ಖರ್ಚು ವೆಚ್ಚಗಳು ಹೆಚ್ಚಾಗುವ ಸಾಧ್ಯತೆಗಳು ಇವೆ. ಅದೃಷ್ಟ ಸಂಖ್ಯೆ: 7

ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್‌ ಮತ್ತು ಟ್ವಿಟರ್‌ ನಲ್ಲಿ ಫಾಲೋಮಾಡಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು