logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Pm Modi: ಮಣಿಪುರದೊಂದಿಗೆ ಇಡೀ ಭಾರತವಿದೆ, ರಾಜ್ಯದಲ್ಲಿ ಶಾಂತಿ ನೆಲೆಸುತ್ತಿದೆ; ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಪ್ರಧಾನಿ ಮೋದಿ ವಿಶ್ವಾಸ

PM Modi: ಮಣಿಪುರದೊಂದಿಗೆ ಇಡೀ ಭಾರತವಿದೆ, ರಾಜ್ಯದಲ್ಲಿ ಶಾಂತಿ ನೆಲೆಸುತ್ತಿದೆ; ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಪ್ರಧಾನಿ ಮೋದಿ ವಿಶ್ವಾಸ

HT Kannada Desk HT Kannada

Aug 15, 2023 09:53 AM IST

ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸತತ 10ನೇ ಬಾರಿ ಉದೇಶದ ಜನರನ್ನು ಉದ್ದೇಶಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದ್ದಾರೆ. (PTI)

  • ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಘಟನೆಗಳ ಬಗ್ಗೆ ಕೆಂಪು ಕೋಟೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಇಡೀ ಭಾರತ ಮಣಿಪುರದೊಂದಿಗೆ ಇದೆ ಎಂದಿದ್ದಾರೆ.

ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸತತ 10ನೇ ಬಾರಿ ಉದೇಶದ ಜನರನ್ನು ಉದ್ದೇಶಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದ್ದಾರೆ. (PTI)
ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸತತ 10ನೇ ಬಾರಿ ಉದೇಶದ ಜನರನ್ನು ಉದ್ದೇಶಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದ್ದಾರೆ. (PTI)

ದೆಹಲಿ: ಮಣಿಪುರದಲ್ಲಿ (Manipur) ಶಾಂತಿ ಮರುಸ್ಥಾಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Gold Rate Today: ತುಸು ಇಳಿಕೆಯಾದ್ರೂ ಗ್ರಾಹಕರಿಗೆ ಸಂತಸ ನೀಡದ ಚಿನ್ನದ ಬೆಲೆ; ಇಂದು ಕೂಡ ಬೆಳ್ಳಿ ದರ ಹೆಚ್ಚಳ

ಆರ್ಡರ್‌ ಮಾಡಿದ್ದು ಪನೀರ್‌ ಟಿಕ್ಕಾ, ಬಂದಿದ್ದು ಚಿಕನ್‌ ಸ್ಯಾಂಡ್‌ವಿಚ್‌; 50 ಲಕ್ಷ ರೂ.ಗೆ ಕೇಸ್‌ ಹಾಕಿದ ಮಹಿಳೆ !

Sam Pitroda: ಜನಾಂಗೀಯ ಹೇಳಿಕೆ ವಿವಾದ ನಂತರ ಕಾಂಗ್ರೆಸ್‌ ಹುದ್ದೆ ತೊರೆದ ಪಿಟ್ರೋಡಾ

ಸ್ಯಾಮ್ ಪಿತ್ರೋಡಾ ಜನಾಂಗೀಯ ಹೇಳಿಕೆ; ದುರದೃಷ್ಟಕರ ಎನ್ನುತ್ತ ವಿವಾದದಿಂದ ಅಂತರ ಕಾಯ್ದುಕೊಂಡ ಕಾಂಗ್ರೆಸ್ ಪಕ್ಷ, ಪ್ರಧಾನಿ ಮೋದಿ ಏನಂದ್ರು

77ನೇ ಸ್ವಾತಂತ್ರ್ಯ ದಿನಾಚರಣೆ (Independence Day 2023) ಹಿನ್ನೆಲೆಯಲ್ಲಿ ದೆಹಲಿಯ ಕೆಂಪು ಕೋಟೆಯಲ್ಲಿ ಭಾರತವನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ಮೋದಿ, ಮಣಿಪುರದಲ್ಲಿ ಶಾಂತಿಯ ಮೂಲಕ ಪರಿಹಾರದ ಮಾರ್ಗವನ್ನು ಕಂಡುಕೊಳ್ಳಲಾಗುವುದು ಎಂದಿದ್ದಾರೆ.

ಕಳೆದ ಕೆಲವು ದಿನಗಳಲ್ಲಿ ಈಶಾನ್ಯ ರಾಜ್ಯಗಳಲ್ಲಿ ನಡೆದ ಹಿಂಸಾಚಾರದಲ್ಲಿ, ಅದರಲ್ಲೂ ವಿಶೇಷವಾಗಿ ಮಣಿಪುರದಲ್ಲಿ ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ತಾಯಿ ಮತ್ತು ಹೆಣ್ಣು ಮಕ್ಕಳ ಗೌರವಕ್ಕೆ ಧಕ್ಕೆಯಾಗಿದೆ. ಆದರೆ ಕಳೆ ಕೆಲ ದಿನಗಳಿಂದ ಶಾಂತಿ ನೆಲೆಸಿರುವ ವರದಿಯಾಗಿದೆ ಎಂದು ಹೇಳಿದ್ದಾರೆ.

ಇಡೀ ಭಾರತ ಮಣಿಪುರದೊಂದಿಗೆ ಇದೆ. ಅಲ್ಲಿನ ಜನರು ಶಾಂತಿ ಮರುಸ್ಥಾಪಿಸಬೇಕು. ಶಾಂತಿಯ ಮೂಲಕವೇ ಪರಿಹಾರದ ಮಾರ್ಗವನ್ನು ಕಂಡುಕೊಳ್ಳಲಾಗುವುದು ಎಂದು ಪ್ರಧಾನಿ ಮೋದಿ ತಮ್ಮ ಸ್ವಾತಂತ್ರ್ಯ ಭಾಷಣದಲ್ಲಿ ತಿಳಿಸಿದ್ದಾರೆ.

ಇದೇ ವೇಳೆ ನೈಸರ್ಗಿಕ ವಿಕೋಪದಿಂದ ಊಹಿಸಲಾಗದಷ್ಟು ಬಿಕ್ಕಟ್ಟಿನಿಂದ ಸಂತ್ರಸ್ತರಾದವರಿಗೆ ಸಂತಾಪ ಸೂಚಿಸಿರುವ ಪ್ರಧಾನಿ ಮೋದಿ, ಈ ವರ್ಷ ದೇಶದ ಹಲವು ರಾಜ್ಯಗಳು ನೈಸರ್ಗಿಕ ಬಿಕ್ಕಟ್ಟು ಕಂಡಿವೆ. ಎಲ್ಲಾ ಸಂತ್ರಸ್ತ ಕುಟುಂಬಗಳಿಗೆ ನಾನು ನನ್ನ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇನೆ. ಈ ಸವಾಲನ್ನು ಜಯಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡುತ್ತವೆ ಎಂದು ಜನರಿಗೆ ಭರವಸೆ ನೀಡುತ್ತಿದ್ದೇನೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಇತಿಹಾಸಿಕ ಕೆಂಪು ಕೋಟೆ ಮೇಲೆ ಸತತ 10ನೇ ಸ್ವಾತಂತ್ರ್ಯ ದಿನಾಚರಣೆಯ ಭಾಷಣ ಮಾಡಿದ್ದಾರೆ. ದೇಶದ ನಾಗರಿಕರನ್ನು ಉದ್ದೇಶಿ ಮಾತನಾಡಿದ ನಮೋ, ‘ಪರಿವಾರ್ಜನ್’ ಅಥವಾ ಕುಟುಂಬದ ಸದಸ್ಯರು ಎಂಬ ಪದವನ್ನು ಪದೇ ಪದೆ ಬಳಸಿದರು.

ತಮ್ಮ ಹಿಂದಿನ ಭಾಷಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡುವಾಗ ‘ನನ್ನ ಪ್ರೀತಿಯ ಸಹೋದರ ಸಹೋದರಿಯರೇ’ ಎಂದು ಭಾಷಣ ಆರಂಭಿಸುತ್ತಿದ್ದರು.

2014 ರಿಂದಲೂ ಪ್ರತಿ ಸ್ವಾತಂತ್ರ್ಯ ದಿನದಂದು ವರ್ಣರಂಜಿತ ಪೇಟಗಳನ್ನು ಧರಿಸುವ ಸಂಪ್ರದಾಯಕ್ಕೆ ಅನುಗುಣವಾಗಿ, ಐತಿಹಾಸಿಕ ಕೆಂಪು ಕೋಟೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪ್ರಧಾನಿ ಮೋದಿ ಅವರು ಬಿಳಿ ಕುರ್ತಾ ಮತ್ತು ರಾಜಸ್ಥಾನಿ ಬಂಧನಿ ಪ್ರಿಂಟ್ ಪೇಟವನ್ನು ಧರಿಸಿದ್ದರು. ಇದು ಹಳದಿ, ಹಸಿರು ಮತ್ತು ಕೆಂಪು ಮಿಶ್ರಿತ ಉದ್ದನೆಯ ಬಾಲ ಇರುವ ಪೇಟ. ಕುರ್ತಾ ಮೇಲೆ ಕಪ್ಪು ಬಣ್ಣದ ವಿ-ನೆಕ್ ಜಾಕೆಟ್ ಧರಿಸಿದ್ದರು.

    ಹಂಚಿಕೊಳ್ಳಲು ಲೇಖನಗಳು