logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Defence Budget: ಚೀನಾ ಮಣಿಸುವ ಗ್ಲೇಮ್‌ ಪ್ಲ್ಯಾನ್: ಶೇಕಡಾ 13ರಷ್ಟು ಹೆಚ್ಚಳಗೊಂಡ ಭಾರತದ ರಕ್ಷಣಾ ಬಜೆಟ್‌

Defence Budget: ಚೀನಾ ಮಣಿಸುವ ಗ್ಲೇಮ್‌ ಪ್ಲ್ಯಾನ್: ಶೇಕಡಾ 13ರಷ್ಟು ಹೆಚ್ಚಳಗೊಂಡ ಭಾರತದ ರಕ್ಷಣಾ ಬಜೆಟ್‌

HT Kannada Desk HT Kannada

Feb 02, 2023 10:01 AM IST

ಸಾಂದರ್ಭಿಕ ಚಿತ್ರ

    • ಭಾರತವು ಬುಧವಾರ 5.94 ಟ್ರಿಲಿಯನ್ (72.6 ಶತಕೋಟಿ ಡಾಲರ್) ರಕ್ಷಣಾ ವೆಚ್ಚವನ್ನು 2023-24 ಹಣಕಾಸು ವರ್ಷದಲ್ಲಿ ಪ್ರಸ್ತಾಪಿಸಿದೆ. ಹಿಂದಿನ ಅವಧಿಯ ಆರಂಭಿಕ ಅಂದಾಜಿಗಿಂತ‌ ಇದು ಶೇಕಡಾ 13ರಷು ಹೆಚ್ಚಾಗಿದೆ, ಚೀನಾದೊಂದಿಗಿನ ತನ್ನ ಉದ್ವಿಗ್ನ ಗಡಿಯಲ್ಲಿ ಹೆಚ್ಚಿನ ಯುದ್ಧ ವಿಮಾನಗಳು ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿಯ ಗುರಿಯನ್ನು ಭಾರತ ಹೊಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (HT_PRINT)

ನವದೆಹಲಿ: ಭಾರತವು ಬುಧವಾರ 5.94 ಟ್ರಿಲಿಯನ್ (72.6 ಶತಕೋಟಿ ಡಾಲರ್) ರಕ್ಷಣಾ ವೆಚ್ಚವನ್ನು 2023-24 ಹಣಕಾಸು ವರ್ಷದಲ್ಲಿ ಪ್ರಸ್ತಾಪಿಸಿದೆ. ಹಿಂದಿನ ಅವಧಿಯ ಆರಂಭಿಕ ಅಂದಾಜಿಗಿಂತ‌ ಇದು ಶೇಕಡಾ 13ರಷು ಹೆಚ್ಚಾಗಿದೆ, ಚೀನಾದೊಂದಿಗಿನ ತನ್ನ ಉದ್ವಿಗ್ನ ಗಡಿಯಲ್ಲಿ ಹೆಚ್ಚಿನ ಯುದ್ಧ ವಿಮಾನಗಳು ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿಯ ಗುರಿಯನ್ನು ಭಾರತ ಹೊಂದಿದೆ.

ಟ್ರೆಂಡಿಂಗ್​ ಸುದ್ದಿ

ಆರ್ಡರ್‌ ಮಾಡಿದ್ದು ಪನೀರ್‌ ಟಿಕ್ಕಾ, ಬಂದಿದ್ದು ಚಿಕನ್‌ ಸ್ಯಾಂಡ್‌ವಿಚ್‌; 50 ಲಕ್ಷ ರೂ.ಗೆ ಕೇಸ್‌ ಹಾಕಿದ ಮಹಿಳೆ !

Sam Pitroda: ಜನಾಂಗೀಯ ಹೇಳಿಕೆ ವಿವಾದ ನಂತರ ಕಾಂಗ್ರೆಸ್‌ ಹುದ್ದೆ ತೊರೆದ ಪಿಟ್ರೋಡಾ

ಸ್ಯಾಮ್ ಪಿತ್ರೋಡಾ ಜನಾಂಗೀಯ ಹೇಳಿಕೆ; ದುರದೃಷ್ಟಕರ ಎನ್ನುತ್ತ ವಿವಾದದಿಂದ ಅಂತರ ಕಾಯ್ದುಕೊಂಡ ಕಾಂಗ್ರೆಸ್ ಪಕ್ಷ, ಪ್ರಧಾನಿ ಮೋದಿ ಏನಂದ್ರು

ಪೂರ್ವದವರು ಚೀನೀಯರಂತೆ: ಸ್ಯಾಮ್ ಪಿತ್ರೋಡಾ ಜನಾಂಗೀಯ ಹೇಳಿಕೆ ವಿವಾದ, ಕಾಂಗ್ರೆಸ್ ನಾಯಕನ 5 ಹಳೆಯ ವಿವಾದಗಳಿವು

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ 2023-24ರ ವಾರ್ಷಿಕ ಬಜೆಟ್‌ನಲ್ಲಿ, ಸುಮಾರು 550 ಶತಕೋಟಿ ಮೊತ್ತದ ಫೆಡರಲ್ ವೆಚ್ಚವನ್ನು ಅನಾವರಣಗೊಳಿಸಿದ ಕಾರಣ, ರಕ್ಷಣಾ ಬಂಡವಾಳದ ವೆಚ್ಚಕ್ಕಾಗಿ 1.63 ಟ್ರಿಲಿಯನ್‌ಗಳನ್ನು ಮೀಸಲಿಟ್ಟರು. ಇದು ಹೊಸ ಶಸ್ತ್ರಾಸ್ತ್ರಗಳು, ವಿಮಾನಗಳು, ಯುದ್ಧನೌಕೆಗಳು ಮತ್ತು ಇತರ ಮಿಲಿಟರಿ ಯಂತ್ರಾಂಶಗಳ ಖರೀದಿಯನ್ನು ಒಳಗೊಂಡಿರುತ್ತದೆ.

2023-24ರಲ್ಲಿ ಸೇನಾ ವೇತನ ಮತ್ತು ಪ್ರಯೋಜನಗಳಿಗೆ 2.77 ಟ್ರಿಲಿಯನ್, ನಿವೃತ್ತ ಸೈನಿಕರಿಗೆ 1.38 ಟ್ರಿಲಿಯನ್ ಪಿಂಚಣಿ ಮತ್ತು ಇತರ ಚಟುವಟಿಕೆಗಳಿಗಾಗಿ ಹೆಚ್ಚಿನ ಮೊತ್ತವನ್ನು ವಿನಿಯೋಗಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್‌ ಸ್ಪಷ್ಟಪಡಿಸಿದ್ದಾರೆ.

ಮಾರ್ಚ್‌ನಲ್ಲಿ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದ ರಕ್ಷಣಾ ಬಜೆಟ್ ಅನ್ನು, ಹಿಂದಿನ ಅಂದಾಜು 5.25 ಟ್ರಿಲಿಯನ್‌ಗಳಿಂದ 5.85 ಟ್ರಿಲಿಯನ್‌ಗೆ ಪರಿಷ್ಕರಿಸಿರುವುದಾಗಿ ನಿರ್ಮಲಾ ಸೀತಾರಾಮನ್‌ ಘೋಷಿಸಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಮಿಲಿಟರಿಯನ್ನು ಆಧುನೀಕರಿಸುವ ವೆಚ್ಚವನ್ನು ಹೆಚ್ಚಿಸಿದ್ದಾರೆ, ಆದರೆ ಎರಡು ವಿವಾದಾಸ್ಪದ ಗಡಿಗಳಲ್ಲಿ ನಿಯೋಜಿಸಲಾದ ಪಡೆಗಳಿಗೆ ಶಸ್ತ್ರಾಸ್ತ್ರ ಪೂರೈಸಲು, ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವ ಅವರ ಸರ್ಕಾರದ ಬದ್ಧತೆಯನ್ನು ಪ್ರಧಾನಿ ಮೋದಿ ಒತ್ತಿ ಹೇಳಿದ್ದಾರೆ.

"ಚುನಾವಣೆ ಪೂರ್ವ ಬಜೆಟ್‌ನಲ್ಲಿ ಇತರ ಆದ್ಯತೆಗಳನ್ನು ಸಮತೋಲನಗೊಳಿಸುವಾಗ, ರಕ್ಷಣಾ ಪಡೆಗಳಿಗೆ ಸಮಂಜಸವಾದ ಹಣವನ್ನು ನಿಯೋಜಿಸಲು ಸರ್ಕಾರ ಪ್ರಯತ್ನಿಸಿದೆ.." ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಚೀನಾದೊಂದಿಗೆ ಹೆಚ್ಚುತ್ತಿರುವ ಘರ್ಷಣೆಯ ದೃಷ್ಟಿಯಿಂದ, ಭಾರತಕ್ಕೆ ಹೆಚ್ಚಿನ ನಿಧಿಯ ಅಗತ್ಯವಿದೆ ಎಂದೂ ರಕ್ಷಣಾ ತಜ್ಞರು ಹೇಳಿದ್ದಾರೆ.

ರಕ್ಷಣಾ ಬಜೆಟ್‌ ಜಿಡಿಪಿಯ ಸುಮಾರು ಶೇ.2ರಷ್ಟಿದೆ ಎಂದು ಅಂದಾಜಿಸಲಾಗಿದೆ. ಆದರೆ 2022ರ ಹಂಚಿಕೆಗಳಲ್ಲಿ ಚೀನಾದ 1.45 ಟ್ರಿಲಿಯನ್ ಯುವಾನ್ (230 ಶತಕೋಟಿ ಡಾಲರ್) ಗಿಂತ ಇನ್ನೂ ಕಡಿಮೆಯಾಗಿದೆ.

"ಸಶಸ್ತ್ರ ಪಡೆಗಳ ಬಜೆಟ್‌ನಲ್ಲಿ ಒಟ್ಟಾರೆ ಹೆಚ್ಚಳವು ನಿರೀಕ್ಷಿತವಾಗಿದೆ, ಆದರೆ ಕಾರ್ಯಾಚರಣೆಯ ಸಾಮರ್ಥ್ಯಗಳನ್ನು ಹೆಚ್ಚಿಸಲು ಅವರು ಕೇಳಿದ್ದಕ್ಕಿಂತ ಕಡಿಮೆ ಕೊಡಲಾಗಿದೆ.." ಎಂದು ಮಾಜಿ ಹಣಕಾಸು ಸಲಹೆಗಾರ ಅಮಿತ್ ಕೌಶಿಶ್ ಹೇಳಿದ್ದಾರೆ.

ಭಾರತವು ಬಲಿಷ್ಠ ನೌಕಾಪಡೆ ನಿರ್ಮಾಣಕ್ಕಾಗಿ ಸುಮಾರು 242 ಶತಕೋಟಿ ರೂಪಾಯಿಗಳನ್ನು (3 ಬಿಲಿಯನ್ ಡಾಲರ್) ಮತ್ತು ವಾಯುಪಡೆಗೆ 571.4 ಶತಕೋಟಿ ರೂಪಾಯಿಗಳನ್ನು (7 ಶತಕೋಟಿ ಡಾಲರ್) ಖರ್ಚು ಮಾಡಲು ಯೋಜಿಸಿದೆ.‌

ದಕ್ಷಿಣ ಏಷ್ಯಾದ ದೈತ್ಯ ರಾಷ್ಟ್ರವಾದ ಭಾರತ, ತನ್ನ ಸಶಸ್ತ್ರ ಪಡೆಗಳಲ್ಲಿ 1.38 ಮಿಲಿಯನ್ ಜನರನ್ನು ನೇಮಿಸಿಕೊಂಡಿದೆ. ಪರಮಾಣು-ಶಸ್ತ್ರಸಜ್ಜಿತ ಪ್ರತಿಸ್ಪರ್ಧಿಗಳಾದ ಚೀನಾ ಮತ್ತು ಪಾಕಿಸ್ತಾನದ ಗಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನು ನಿಯೋಜಿಸಲಾಗಿದೆ.

ರಕ್ಷಣಾ ಬಜೆಟ್ ಹಂಚಿಕೆಗಳು ಮಿಲಿಟರಿ ನಿರೀಕ್ಷೆಗಳಿಗಿಂತ ಕಡಿಮೆಯಿದ್ದರೂ, ಎರಡು ವರ್ಷಗಳ ಸಾಂಕ್ರಾಮಿಕ ನಿರ್ಬಂಧಗಳಿಂದ ಆರ್ಥಿಕತೆಯು ಚೇತರಿಸಿಕೊಂಡಂತೆ ಅವು ಬೆಳೆಯುವ ಸಾಧ್ಯತೆಯಿದೆ ಎಂದು ರಕ್ಷಣಾ ತಜ್ಞರು ಇದೇ ವೇಳೆ ಭರವಸೆ ವ್ಯಕ್ತಪಡಿಸಿದ್ದಾರೆ.

ಭಾರತ ಮತ್ತು ಚೀನಾ 3,500-ಕಿಲೋಮೀಟರ್ (2,100-ಮೈಲಿ) ಗಡಿಯನ್ನು ಹಂಚಿಕೊಂಡಿವೆ. 1962ರಲ್ಲಿ ಉಭಯ ರಾಷ್ಟ್ರಗಳ ನಡುವೆ ಭೀಕರ ನೇರ ಕದನ ನಡೆದಿದೆ. 2020ರಲ್ಲಿ ಲಡಾಖ್‌ನಲ್ಲಿ ಉಭಯ ದೇಶಗಳ ಸೇನೆಗಳು ಮುಖಾಮುಖಿಯಾಗಿವೆ. ಆದರೆ ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆಗಳ ನಂತರ ಸದ್ಯ ಉದ್ವಿಗ್ನತೆ ಕಡಿಮೆಗೊಂಡಿದೆ.

ಆದರೆ ಕಳೆದ ವರ್ಷ ಹೊಸ ಅರುಣಾಚಲ ಪ್ರದೇಶದ ತವಾಂಗ್‌ ಸೆಕ್ಟರ್‌ನಲ್ಲಿ ಭಾರತ-ಚೀನಾ ಸೈನಿಕರ ನಡುವೆ ಘರ್ಷಣೆ ನಡೆದಿದೆ. ಆದರೆ ಈ ಘರ್ಷಣೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು