logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Rajya Sabha Elections 2024: ರಾಜ್ಯಸಭೆ ಪ್ರವೇಶಿಸಲಿದ್ದಾರೆ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾಗಾಂಧಿ, ಅವರು ತುಂಬುವುದು ಯಾರ ಸ್ಥಾನ?

Rajya Sabha Elections 2024: ರಾಜ್ಯಸಭೆ ಪ್ರವೇಶಿಸಲಿದ್ದಾರೆ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾಗಾಂಧಿ, ಅವರು ತುಂಬುವುದು ಯಾರ ಸ್ಥಾನ?

Umesha Bhatta P H HT Kannada

Feb 14, 2024 02:37 PM IST

ರಾಜ್ಯಸಭೆ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಿದ ಸೋನಿಯಾಗಾಂಧಿ

    • Sonia Gandhi ಕಾಂಗ್ರೆಸ್‌ ನಾಯಕಿ ಸೋನಿಯಾಗಾಂಧಿ ಅವರು ರಾಜಸ್ತಾನದಿಂದ ರಾಜ್ಯಸಭೆಗೆ ಬುಧವಾರವೇ ಉಮೇದುವಾರಿಕೆ ಸಲ್ಲಿಸಿದ್ದು. ಲೋಕಸಭೆ ಚುನಾವಣೆ ಕಣದಿಂದ ದೂರ ಉಳಿಯಲಿದ್ದಾರೆ. 
ರಾಜ್ಯಸಭೆ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಿದ ಸೋನಿಯಾಗಾಂಧಿ
ರಾಜ್ಯಸಭೆ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಿದ ಸೋನಿಯಾಗಾಂಧಿ

ದೆಹಲಿ: ಸತತ ಎರಡೂವರೆ ದಶಕದಿಂದ ಲೋಕಸಭೆಯ ಸದಸ್ಯರಾಗಿರುವ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾಗಾಂಧಿ ಅವರು ಇನ್ನು ಮುಂದೆ ಮೇಲ್ಮನೆ ಪ್ರವೇಶಿಸುವರು. ಅಂದರೆ ರಾಜ್ಯಸಭಾ ಸದಸ್ಯರಾಗಿ ರಾಜಕೀಯ ಜೀವನ ಮುಂದುವರೆಸುವರು. ಬುಧವಾರ ಕಾಂಗ್ರೆಸ್‌ ಪ್ರಕಟಿಸಿರುವ ರಾಜ್ಯಸಭಾ ಚುನಾವಣೆ ಅಭ್ಯರ್ಥಿಗಳ ಪಟ್ಟಿಯಲ್ಲಿ ಸೋನಿಯಾಗಾಂಧಿ ಅವರ ಹೆಸರಿದೆ. ಅವರು ರಾಜಸ್ತಾನದಿಂದ ರಾಜ್ಯಸಭೆ ಸದಸ್ಯರಾಗುವರು. ಚುನಾವಣೆಗೆ ಅವರು ಜೈಪುರದಲ್ಲಿ ನಾಮಪತ್ರವನ್ನು ಕೂಡ ಸಲ್ಲಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವಾ ದರ್ಶನ ಟಿಕೆಟ್ ಬಿಡುಗಡೆ, ಆಗಸ್ಟ್‌ ತಿಂಗಳ ಕೋಟಾ ಹಂಚಿಕೆಗೆ ಅರ್ಜಿ ಸಲ್ಲಿಕೆ ಶುರು

Gold Rate Today: ತುಸು ಇಳಿಕೆಯ ಬೆನ್ನಲ್ಲೇ ಭಾನುವಾರ ದುಪ್ಪಟ್ಟು ಏರಿಕೆಯಾಯ್ತು ಬಂಗಾರದ ಬೆಲೆ; ಇಂದು ಬೆಳ್ಳಿ ದರವೂ ಹೆಚ್ಚಳ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

ಸೋನಿಯಾಗಾಂಧಿ ಅವರು ಐದಾರು ವರ್ಷಗಳಿಂದಲೇ ರಾಜಕೀಯದಲ್ಲಿದ್ದರೂ ಸಕ್ರಿಯವಾಗಿಲ್ಲ. ಕಾಂಗ್ರೆಸ್‌ನ ಉಸ್ತುವಾರಿಯನ್ನು ರಾಹುಲ್‌ ಗಾಂಧಿ ಅವರಿಗೆ ಬಿಟ್ಟುಕೊಟ್ಟಿದ್ದಾರೆ. ತಾವು ಪ್ರತಿನಿಧಿಸುವ ಉತ್ತರ ಪ್ರದೇಶದ ರಾಯ್‌ ಬರೇಲಿ ಕ್ಷೇತ್ರದಿಂದಲೂ ಸ್ಪರ್ಧಿಸುವುದಿಲ್ಲ ಎನ್ನುವ ಚರ್ಚೆಗಳಿದ್ದವು. ಅದು ಖಚಿತವಾಗಿದ್ದು, ಸೋನಿಯಾಗಾಂಧಿ ಅವರು ರಾಜಕೀಯದಲ್ಲಿದ್ದರೂ ರಾಜ್ಯಸಭೆಯಲ್ಲಿರುವರು. ಸೋನಿಯಾಗಾಂಧಿ ಅವರ ಪುತ್ರಿ ಪ್ರಿಯಾಂಕಾ ಗಾಂಧಿ ಅವರು ರಾಯ್‌ ಬರೇಲಿಯಿಂದ ಸ್ಪರ್ಧಿಸಬಹುದೇ ಎನ್ನುವ ಕುತೂಹಲವಿದ್ದು. ಸೋನಿಯಾ ಆ ಕ್ಷೇತ್ರ ಬಿಡುತ್ತಿರುವುದರಿಂದ ಬಹುತೇಕ ಪ್ರಿಯಾಂಕ ಅವರೇ ಅಲ್ಲಿ ಕಣಕ್ಕಿಳಿಯಬಹುದು ಎನ್ನಲಾಗುತ್ತಿದೆ.

ಎರಡೂವರೆ ದಶಕದ ಹಾದಿ

ಸೋನಿಯಾಗಾಂಧಿ ಅವರು ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಪತ್ನಿ ಹಾಗೂ ಇಂದಿರಾಗಾಂಧಿ ಅವರ ಸೊಸೆ. ಆದರೆ ರಾಜೀವ್‌ ಗಾಂಧಿ ನಿಧನ ನಂತರವೂ ಸಕ್ರಿಯ ರಾಜಕೀಯಕ್ಕೆ ಬಂದಿರಲಿಲ್ಲ. 1999 ಮೊದಲ ಬಾರಿಗೆ ಅವರು ಚುನಾವಣೆ ರಾಜಕೀಯದಲ್ಲಿ ಕಾಣಿಸಿಕೊಂಡರು. ಮೊದಲ ಬಾರಿಗೆ ಉತ್ತರ ಪ್ರದೇಶದ ಅಮೇಥಿಯಿಂದ ಸ್ಪರ್ಧೆ ಮಾಡಿದ್ದರು. ಇದರೊಟ್ಟಿಗೆ ಕರ್ನಾಟಕದ ಬಳ್ಳಾರಿ ಕ್ಷೇತ್ರದಲ್ಲೂ ಕಣಕ್ಕಿಳಿದರು. ಎರಡೂ ಕಡೆಯೂ ಗೆದ್ದು ಆನಂತರ ಬಳ್ಳಾರಿ ಕ್ಷೇತ್ರಕ್ಕೆ ರಾಜೀನಾಮೆ ನೀಡಿ ಮೂಲ ಕ್ಷೇತ್ರ ಅಮೇಥಿ ಉಳಿಸಿಕೊಂಡಿದ್ದರು. ಇದಾದ ಮರು ವರ್ಷದಿಂದ ತಮ್ಮ ಕುಟುಂಬದ ಸಾಂಪ್ರದಾಯಿಕ ಕ್ಷೇತ್ರ ರಾಯ್‌ ಬರೇಲಿಗೆ ಸ್ಥಳಾಂತರಗೊಂಡು ಅಲ್ಲಿಂದ ಸತತವಾಗಿ ಗೆಲ್ಲುತ್ತಲೇ ಬಂದಿದ್ದಾರೆ. ಕಳೆದ ಬಾರಿಯೂ ಅವರು ಕ್ಷೇತ್ರ ಉಳಿಸಿಕೊಂಡಿದ್ದರು.

ಈಗ ಅವರಿಗೆ 75 ವರ್ಷ. ಈ ಕಾರಣದಿಂದ ಸಕ್ರಿಯ ರಾಜಕೀಯದಿಂದ ದೂರ ಉಳಿಯಬಹುದು ಎನ್ನಲಾಗುತ್ತಿತ್ತು. ಈಗ ಲೋಕಸಭೆ ಚುನಾವಣೆ ರಾಜಕೀಯದಿಂದ ಮೊದಲ ಹಂತವಾಗಿ ದೂರ ಸರಿದಿದ್ದು. ಮೊದಲ ಬಾರಿಗೆ ರಾಜ್ಯಸಭೆಗೆ ಪ್ರವೇಶಿಸಲು ಸಿದ್ದತೆ ಮಾಡಿಕೊಂಡಿದ್ದಾರೆ.

ರಾಜಸ್ತಾನದಲ್ಲಿ ಅವರು ಕಣಕ್ಕಿಳಿಯುತ್ತಿದ್ದು, ಮೊದಲಿನಿಂದಲೂ ಇಲ್ಲಿ ಗೆಲ್ಲುತ್ತಿದ್ದುದು ಮಾಜಿ ಪ್ರಧಾನಿ ಮನಮೋಹನಸಿಂಗ್‌. ಅವರು ಈ ಅವಧಿಯಲ್ಲೂ ಗೆದ್ದಿದ್ದರು. ಏಪ್ರಿಲ್‌ನಲ್ಲಿ ಅವರ ಅವಧಿ ಅಂತ್ಯವಾಗಲಿದ್ದು, ಆ ಸ್ಥಾನವನ್ನು ಸೋನಿಯಾಗಾಂಧಿ ತುಂಬುತ್ತಿರುವುದು ವಿಶೇಷ. ಮನಮೋಹನ್‌ ಸಿಂಗ್‌ ಅವರಿಗೂ ಈಗ ಆರೋಗ್ಯ ಸರಿಯಿಲ್ಲ. ಐದು ದಶಕದ ರಾಜಕೀಯ ಜೀವನದ ನಂತರ ಅವರು ನಿವೃತ್ತರಾಗಲಿದ್ಧಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ