logo
ಕನ್ನಡ ಸುದ್ದಿ  /  ಕರ್ನಾಟಕ  /  Lok Sabha Elections 2024: ಲೋಕಸಭೆ ಚುನಾವಣೆ ಟಿಕೆಟ್‌ಗೆ ಕುಟುಂಬ ರಾಜಕಾರಣ, ಕರ್ನಾಟಕ ಮೂರೂ ಪಕ್ಷಗಳ ವಂಶವೃಕ್ಷ !

Lok Sabha Elections 2024: ಲೋಕಸಭೆ ಚುನಾವಣೆ ಟಿಕೆಟ್‌ಗೆ ಕುಟುಂಬ ರಾಜಕಾರಣ, ಕರ್ನಾಟಕ ಮೂರೂ ಪಕ್ಷಗಳ ವಂಶವೃಕ್ಷ !

Umesha Bhatta P H HT Kannada

Feb 08, 2024 08:00 AM IST

google News

ಲೋಕಸಭೆ ಚುನಾವಣೆಗೆ ಮೂರೂ ಪಕ್ಷಗಳಲ್ಲಿ ಕುಟುಂಬ ರಾಜಕಾರಣ ಜೋರಾಗಿಯೇ ಇದೆ.

    • Family Politics ಲೋಕಸಭೆ ಚುನಾವಣೆಗೆ ದಿನಗಣನೆ ನಡುವೆ ಟಿಕೆಟ್‌ ಲಾಬಿಯೂ ಜೋರಾಗಿದೆ. ಕರ್ನಾಟಕದಲ್ಲಿ ಮೂರು ಪಕ್ಷಗಳಲ್ಲೂ ಕುಟುಂಬದವರಿಗೆ ಟಿಕೆಟ್‌ ಪಡೆಯುವ ಪ್ರಯತ್ನ ಒಂದಿಲ್ಲೊಂದು ಕ್ಷೇತ್ರದಲ್ಲಿಯೇ ನಡೆದಿದೆ.
ಲೋಕಸಭೆ ಚುನಾವಣೆಗೆ ಮೂರೂ ಪಕ್ಷಗಳಲ್ಲಿ ಕುಟುಂಬ ರಾಜಕಾರಣ ಜೋರಾಗಿಯೇ ಇದೆ.
ಲೋಕಸಭೆ ಚುನಾವಣೆಗೆ ಮೂರೂ ಪಕ್ಷಗಳಲ್ಲಿ ಕುಟುಂಬ ರಾಜಕಾರಣ ಜೋರಾಗಿಯೇ ಇದೆ.

ಬೆಂಗಳೂರು: ರಾಜಕಾರಣಕ್ಕೂ ಕುಟುಂಬಗಳಿಗೆ ಬಿಡಿಸಲಾಗದ ನಂಟು. ಅದು ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಉಂಟು. ಇದರಿಂದ ಕರ್ನಾಟಕವೇನೂ ಹೊರತಾಗಿಲ್ಲ. ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಗೆ ತಯಾರಿಯಾಗುತ್ತಿರುವ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ನಲ್ಲೂ ಟಿಕೆಟ್‌ ಬಯಸಿರುವವರಲ್ಲಿ ಕಾರ್ಯಕರ್ತರಿಗಿಂತ ಕುಟುಂಬದವರ ಸಂಖ್ಯೆಯೇ ಹೆಚ್ಚು. ಇದರಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಮುಂಚೂಣಿಯಲ್ಲಿದ್ದರೆ ಬಿಜೆಪಿ ಕೂಡ ಇದರಿಂದ ಹಿಂದೆ ಬಿದ್ದಿಲ್ಲ.

ಕಾಂಗ್ರೆಸ್‌ನಲ್ಲೇ ಅಧಿಕ

28 ಲೋಕಸಭಾ ಕ್ಷೇತ್ರದಲ್ಲಿ ಬಹುಪಾಲು ಕಾಂಗ್ರೆಸ್‌ಗೆ ಕುಟುಂಬದ ನಂಟಿನ ದೊಡ್ಡ ಪಟ್ಟಿಯೇ ಇದೆ.

  • ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ತಮ್ಮ ಪುತ್ರನಿಗೆ, ಚಿಕ್ಕೋಡಿಯಲ್ಲಿ ಸಚಿವ ಸತೀಶ್‌ ಜಾರಕಿಹೊಳಿ ತಮ್ಮ ಪುತ್ರ ಇಲ್ಲವೇ ಪುತ್ರಿಗೆ, ಶಾಸಕ ಲಕ್ಷ್ಮಣ ಸವದಿ ತಮ್ಮ ಪುತ್ರನಿಗೆ ಟಿಕೆಟ್‌ ಕೇಳುತ್ತಿದ್ದಾರೆ.
  • ದಾವಣಗೆರೆಯಲ್ಲಿ ಈಗಾಗಲೇ ಎರಡು ಕ್ಷೇತ್ರದಲ್ಲೂ ಶಾಸಕತ್ವ ಹೊಂದಿರುವ ಶಾಮನೂರು ಕುಟುಂಬ ಅವಕಾಶಕ್ಕೆ ಕೇಳುತ್ತಿದೆ. ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಪತ್ನಿ ಹೆಸರು ಇಲ್ಲಿ ಮುಂಚೂಣಿಯಲ್ಲಿದೆ.

ಇದನ್ನೂ ಓದಿರಿ: Kerala News: ಕೇಂದ್ರದ ವಿರುದ್ದ ಪ್ರತಿಭಟನೆ ಈಗ ಕೇರಳ ಸರದಿ, ಫೆ 8ರಂದು ಪಿಣರಾಯಿ ವಿಜಯನ್‌ ನೇತೃತ್ವದಲ್ಲಿ ಹೋರಾಟ

  • ಚಾಮರಾಜನಗರ ಕ್ಷೇತ್ರಕ್ಕೆ ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರ ಪುತ್ರ ಸುನೀಲ್‌ ಬೋಸ್‌ಗೆ ಅವಕಾಶ ನೀಡುವಂತೆ ಒತ್ತಡ ಹೇರಲಾಗಿದೆ.
  • ಶಿವಮೊಗ್ಗದಲ್ಲಿ ಸಚಿವ ಮಧುಬಂಗಾರಪ್ಪ ತಮ್ಮ ಸಹೋದರಿ ಗೀತಾ ಶಿವರಾಜಕುಮಾರ್‌ಗೆ ಟಿಕೆಟ್‌ ಕೊಡಿಸುವ ಪ್ರಯತ್ನದಲ್ಲಿದ್ದಾರೆ.
  • ಬೆಂಗಳೂರು ಉತ್ತರದಲ್ಲಿ ಶಾಸಕ ಹ್ಯಾರಿಸ್‌ಗೆ ಅವಕಾಶ ನೀಡಿ ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿರುವ ಅವರ ಪುತ್ರನಿಗೆ ವಿಧಾನಸಭೆ ಟಿಕೆಟ್‌ ನೀಡುವ ಇರಾದೆಯೂ ಇದೆ. ಇದೇ ಕ್ಷೇತ್ರಕ್ಕೆ ಸಚಿವ ದಿನೇಶ್‌ ಗುಂಡೂರಾವ್‌ ಟಿಕೆಟ್‌ಗಾಗಿ ತಮ್ಮ ಪತ್ನಿ ಟಬೂ ಪರವಾಗಿ ಬ್ಯಾಟಿಂಗ್‌ ಆಡುತ್ತಿರುವ ಮಾಹಿತಿಯಿದೆ.
  • ಬೆಂಗಳೂರು ದಕ್ಷಿಣದಲ್ಲಿ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ಮತ್ತೊಂದು ಅವಕಾಶ ಕೇಳುತ್ತಿರುವ ಮಾಹಿತಿಯಿದೆ.
  • ಚಿಕ್ಕಬಳ್ಳಾಪುರಕ್ಕೆ ಮಾಜಿ ಸಚಿವ ಎಂ.ಆರ್.ಸೀತಾರಾಂ ಪುತ್ರ ರಕ್ಷಾ ರಾಮಯ್ಯ ಹೆಸರು ಪ್ರಬಲವಾಗಿದೆ.

ಇದನ್ನೂ ಓದಿರಿ: ಬ್ರೇಕ್‌ಫಾಸ್ಟ್‌ಗೆ ಏನ್ಮಾಡೋದು ಅನ್ನೋ ಚಿಂತೆ ಬಿಡಿ, ಸಿಂಪಲ್‌ ಆಗಿ ಕ್ಯಾಬೇಜ್‌ ಪಲಾವ್‌ ಮಾಡ್ಕೊಳ್ಳಿ, ರೆಸಿಪಿ ಇಲ್ಲಿದೆ

  • ಬೀದರ್‌ನಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸೋತ ಮಾಜಿ ಸಚಿವ ಬಸವರಾಜ ಪಾಟೀಲ್‌ ಹುಮ್ನಾಬಾದ್‌ ಪುತ್ರ ರಾಜಶೇಖರ್‌ ಹುಮ್ನಾಬಾದ್‌ಗೆ ಟಿಕೆಟ್‌ ಎನ್ನಲಾಗುತ್ತಿದೆ. ಇವರ ಸಹೋದರ ಇಲ್ಲಿ ಎಂಎಲ್ಸಿ. ಇದೇ ಕೇತ್ರಕ್ಕೆ ಸಚಿವ ಈಶ್ವರ ಖಂಡ್ರೆ ತಮ್ಮ ಪುತ್ರನಿಗೆ ಟಿಕೆಟ್‌ ಕೇಳುತ್ತಿರುವ ಮಾಹಿತಿಯಿದೆ
  • ಕಲಬುರಗಿಯಲ್ಲಿ ಅಖಿಲ ಭಾರತ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ, ಮಾಜಿ ಅಧಿಕಾರಿ ರಾಧಾಕೃಷ್ಣ ಅವರ ಹೆಸರು ಮುಂಚೂಣಿಯಲ್ಲಿದೆ
  • ಕೋಲಾರಕ್ಕೆ ಹಾಲಿ ಸಚಿವ ಕೆ.ಎಚ್‌.ಮುನಿಯಪ್ಪ ಹೆಸರಿದೆ. ಅವರ ಪುತ್ರ ರೂಪಾ ಶಶಿಧರ್‌ ಹಾಲಿ ಕೆಜಿಎಫ್‌ ಶಾಸಕಿ.
  • ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ, ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ.
  • ಕೊಪ್ಪಳದಲ್ಲಿ ಹಾಲಿ ಶಾಸಕ ರಾಘವೇಂದ್ರ ಹಿಟ್ನಾಳ್‌ ಸಹೋದರಗೆ ಟಿಕೆಟ್‌ ಪಡೆಯುವ ಪ್ರಯತ್ನಗಳೂ ನಡೆದಿವೆ.
  • ಕರ್ನಾಟಕ ಕಾಂಗ್ರೆಸ್‌ನ ಏಕೈಕ ಸಂಸದ ಬೆಂಗಳೂರು ಗ್ರಾಮಾಂತರಕ್ಕೆ ಡಿ.ಕೆ.ಸುರೇಶ್‌ ಅವರೇ ಅಭ್ಯರ್ಥಿ. ಅವರ ಅಣ್ಣ ಡಿಕೆ ಶಿವಕುಮಾರ್‌ ಡಿಸಿಎಂ. ಸಂಬಂಧಿಕರಾದ ಡಾ.ರಂಗನಾಥ್‌, ರವಿ ಶಾಸಕರು.

ಇದನ್ನೂ ಓದಿರಿ: ಇಂಗ್ಲೆಂಡ್ ವಿರುದ್ಧದ 3 ಹಾಗೂ 4ನೇ ಟೆಸ್ಟ್‌ಗೂ ವಿರಾಟ್ ಕೊಹ್ಲಿ ಅಲಭ್ಯ; 5ನೇ ಪಂದ್ಯಕ್ಕೂ ಮರಳೋದು ಅನುಮಾನ

  • ಹಾವೇರಿ- ಗದಗ ಕ್ಷೇತ್ರಕ್ಕೆ ಸಚಿವ ಎಚ್‌.ಕೆ.ಪಾಟೀಲ್‌ ಅವರ ಸಹೋದರ, ಮಾಜಿ ಶಾಸಕ ಡಿ.ಆರ್‌.ಪಾಟೀಲ್‌, ಬಾಗಲಕೋಟೆಯಲ್ಲಿ ಹಾಲಿ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್‌ ಅವರ ಪತ್ನಿ, ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ್‌ ಈ ಬಾರಿಯೂ ಆಕಾಂಕ್ಷಿಗಳು.
  • ಮಂಡ್ಯಕ್ಕೆ ಗೌರಿಬಿದನೂರಿನ ಪಕ್ಷೇತರ ಶಾಸಕ ಪುಟ್ಟಸ್ವಾಮಿಗೌಡ ಸಹೋದರ ಸ್ಟಾರ್‌ ಚಂದ್ರು ಅವರ ಹೆಸರು ಮುಂಚೂಣಿಯಲ್ಲಿದೆ.

ಬಿಜೆಪಿಯಲ್ಲೂ ಕಡಿಮೆಯಿಲ್ಲ

  • ಬಿಜೆಪಿ ಹಿರಿಯ ನಾಯಕ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪುತ್ರರಲ್ಲಿ ಬಿ.ವೈ.ವಿಜಯೇಂದ್ರ ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ, ಮತ್ತೊಬ್ಬ ಪುತ್ರ ಬಿ.ವೈ.ರಾಘವೇಂದ್ರ ಶಿವಮೊಗ್ಗ ಸಂಸದ. ಈ ಬಾರಿಯೂ ರಾಘವೇಂದ್ರ ಸ್ಪರ್ಧೆ ಖಚಿತ.
  • ಬೆಂಗಳೂರಿನಲ್ಲಿ ಬಸವನಗುಡಿ ಶಾಸಕ ರವಿಸುಬ್ರಹ್ಮಣ್ಯ. ಅವರ ಅಣ್ಣನ ಮಗ ತೇಜಸ್ವಿ ಸೂರ್ಯ ಬೆಂಗಳೂರು ದಕ್ಷಿಣ ಸಂಸದ. ಮತ್ತೊಮ್ಮೆ ತೇಜಸ್ವಿಗೆ ಅವಕಾಶ ಸಿಗಬಹುದು.
  • ಚಾಮರಾಜನಗರದಲ್ಲಿ ಹಿರಿಯ ನಾಯಕ ವಿ.ಶ್ರೀನಿವಾಸಪ್ರಸಾದ್‌ ಹಾಲಿ ಸಂಸದ. ಅವರ ಅಳಿಯ ಡಾ.ಮೋಹನ್‌ ಅವರಿಗೆ ಈ ಬಾರಿ ಟಿಕೆಟ್‌ ಸಿಗಬಹುದು
  • ಕಲಬುರಗಿಯಲ್ಲಿ ಸಂಸದ ಉಮೇಶ್‌ ಜಾಧವ್‌. ಅವರ ಪುತ್ರ ಅವಿನಾಶ್‌ ಜಾಧವ್‌ ಚಿಂಚೋಳಿ ಶಾಸಕ. ಈ ಬಾರಿ ಉಮೇಶ್‌ ಜಾಧವ್‌ ಅವರಿಗೆ ಮತ್ತೆ ಟಿಕೆಟ್‌ ದಕ್ಕಬಹುದು
  • ಚಿಕ್ಕೋಡಿಯಲ್ಲಿ ಸಂಸದ ಅಣ್ಣಾ ಸಾಹೇಬ್‌ ಜೊಲ್ಲೆ. ಅವರ ಪತ್ನಿ ಶಶಿಕಲಾ ಜೊಲ್ಲೆ ನಿಪ್ಪಾಣಿ ಶಾಸಕಿ. ಮತ್ತೊಮ್ಮೆ ಅಣ್ಣಾ ಸಾಹೇಬ್‌ ಟಿಕೆಟ್‌ ಪಡೆಯುವ ಉಮೇದಿನಲ್ಲಿದ್ದಾರೆ.
  • ತುಮಕೂರಿನಲ್ಲಿ ಜಿ.ಎಸ್.ಬಸವರಾಜ್‌ ಸಂಸದ. ಅವರ ಪುತ್ರ ಜ್ಯೋತಿ ಗಣೇಶ್‌ ತುಮಕೂರು ಶಾಸಕ. ಈ ಬಾರಿಯೂ ಬಸವರಾಜ್‌ ಅವರಿಗೆ ಅವಕಾಶ ಇಲ್ಲವೇ ಹೊಸಬರಿಗೆ ಟಿಕೆಟ್‌ ಸಿಗಬಹುದು.

ಇದನ್ನೂ ಓದಿರಿ: ಬಿಗ್ ಬಾಸ್ ಬಳಿಕ ಸಂಗೀತಾ ಶೃಂಗೇರಿಗೆ ಬಂಪರ್; ರಿಲೀಸ್ ಆಯ್ತು ದಿಗಂತ್‌ ನಟನೆಯ ಮಾರಿಗೋಲ್ಡ್ ಟೀಸರ್

  • ದಾವಣಗರೆಯಲ್ಲಿ ಜಿ.ಎಂ.ಸಿದ್ದೇಶ್ವರ್‌, ಕೊಪ್ಪಳದಲ್ಲಿ ಕರಡಿ ಸಂಗಣ್ಣ, ವಿಜಯಪುರದಲ್ಲಿ ರಮೇಶ ಜಿಗಜಿಣಗಿ ತಮಗೆ ಅವಕಾಶ ಕೊಡಿ ಇಲ್ಲವೇ ನಮ್ಮ ಮಕ್ಕಳು. ಸಂಬಂಧಿಕರಿಗೆ ಟಿಕೆಟ್‌ ಕೊಡುವಂತೆ ಪಟ್ಟು ಹಿಡಿದಿದ್ದಾರೆ.
  • ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿ ಅಷ್ಟೇ ವೇಗವಾಗಿ ಪಕ್ಷಕ್ಕೆ ಮರಳಿಸಿರುವ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಅವರ ಸಹೋದರ ಎಂಎಲ್ಸಿ. ಬೀಗರು ಮಂಗಳ ಅಂಗಡಿ ಬೆಳಗಾವಿ ಸಂಸದೆ. ಆದರೆ ಶೆಟ್ಟರ್‌ ಕುಟುಂಬದಲ್ಲಿ ಒಬ್ಬರಿಗೆ ( ಶೆಟ್ಟರ್‌ ಇಲ್ಲವೇ ಬೀಗರು, ಮಗ ಇಲ್ಲವೇ ಸೊಸೆ) ಟಿಕೆಟ್‌ ಸಿಗಬಹುದು.
  • ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ತಮಗೆ ಈ ಬಾರಿ ವಿಧಾನಸಭೆ ಟಿಕೆಟ್‌ ನೀಡಲಿಲ್ಲ. ಮಗನಿಗಾದರೂ ಹಾವೇರಿಯಲ್ಲಿ ಲೋಕಸಭೆ ಟಿಕೆಟ್‌ ಕೊಡಿ ಎನ್ನುವ ಪಟ್ಟು ಹಾಕಿದ್ದಾರೆ.

ಜೆಡಿಎಸ್‌ ಕುಟುಂಬ ರಾಜಕಾರಣ

ಜೆಡಿಎಸ್‌ ಅನ್ನು ದೇವೇಗೌಡರ ಕುಟುಂಬದ ಪಕ್ಷ ಎಂದು ಟೀಕೆ ಮಾಡುವುದು ಹೊಸದೇನೂ ಅಲ್ಲ. ದೇವೇಗೌಡರೂ ಪ್ರತಿ ಚುನಾವಣೆ ಬಂದಾಗ ಅದನ್ನು ಸಾಬೀತು ಮಾಡುತ್ತಲೇ ಬಂದಿದ್ದಾರೆ. ಲೋಕಸಭೆ ಚುನಾವಣೆಗೂ ಇದೇನು ಹೊಸತಲ್ಲ. ಹಿಂದೆ ಜನತಾದಳ ಇದ್ದಾಗ ದೇವೇಗೌಡ ಹಾಗೂ ಅವರ ಪುತ್ರ ಎಚ್‌.ಡಿ.ಕುಮಾರಸ್ವಾಮಿ ಅವರು ಒಟ್ಟಿಗೆ ಲೋಕಸಭೆ ಪ್ರತಿನಿಧಿಸಿ ಉದಾಹರಣೆಯಿದೆ. ಆನಂತರ ಕುಮಾರಸ್ವಾಮಿ ಲೋಕಸಭೆಗೆ ಹೋಗುವ ಅವಕಾಶ ಬಂದಿಲ್ಲ. ಇನ್ನು ಈ ಅವಧಿಯಲ್ಲಿ ಹಾಸನದಿಂದ ಮೊಮ್ಮಗ ಪ್ರಜ್ವಲ್‌ರೇವಣ್ಣ ಲೋಕಸಭೆಗೆ ಬಂದರೆ ತುಮಕೂರಿನಲ್ಲಿ ಸೋತ ದೇವೇಗೌಡರು ರಾಜ್ಯಸಭೆ ಸದಸ್ಯರಾಗಿದ್ಧಾರೆ.

ಹೋದ ಚುನಾವಣೆಯಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಮೈತ್ರಿ ಏರ್ಪಟ್ಟು ಆರು ಕ್ಷೇತ್ರದಲ್ಲಿ ಮೂರು ಕಡೆ ದೇವೇಗೌಡರ ಕುಟುಂಬದವರೇ ಕಣಕ್ಕಿಳಿದಿದ್ದರು. ಅದರಲ್ಲಿ ತುಮಕೂರಿನಿಂದ ದೇವೇಗೌಡ, ಹಾಸನದಿಂದ ಪ್ರಜ್ವಲ್‌ ರೇವಣ್ಣ, ಮಂಡ್ಯದಿಂದ ನಿಖಿಲ್‌ ಕುಮಾರಸ್ವಾಮಿ ಕಣಕ್ಕಿಳಿದಿದಿದ್ದರು. ಕೊನೆಗೆ ದೇವೇಗೌಡ, ನಿಖಿಲ್‌ ಕುಮಾರಸ್ವಾಮಿ ಸೋಲು ಕಂಡರು. ಪ್ರಜ್ವಲ್‌ಗೆ ಮಾತ್ರ ಲೋಕಸಭೆ ಪ್ರವೇಶಿಸುವ ಅವಕಾಶ ದೊರೆಯಿತು. ಈ ಮೂಲಕ ದೇವೇಗೌಡರ ಕುಟುಂಬದ ಮೂರನೇ ಕುಡಿ ಲೋಕಸಭೆ ಪ್ರವೇಶಿಸಿದ್ದು ಇತಿಹಾಸವೇ ಆಗಿತ್ತು.

ಈ ಬಾರಿ ಜೆಡಿಎಸ್‌ ಮೈತ್ರಿ ತನ್ನ ಹಿಂದಿನ ಸ್ನೇಹಿತ ಬಿಜೆಪಿ ಜತೆಗೆ. ಲೋಕಸಭೆ ಚುನಾವಣೆಗೆ ನಾಲ್ಕು ಕ್ಷೇತ್ರ ದಲ್ಲಿ ಜೆಡಿಎಸ್‌ ಸ್ಪರ್ಧಿಸಬಹುದು. ಈ ಬಾರಿ ಎಚ್‌.ಡಿ.ಕುಮಾರಸ್ವಾಮಿ( ಮಂಡ್ಯ), ಪ್ರಜ್ವಲ್‌ ರೇವಣ್ಣ( ಹಾಸನ) ಸ್ಪರ್ಧೆ ಖಚಿತ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ದೇವೇಗೌಡರ ಅಳಿಯ, ಜಯದೇವ ಆಸ್ಪತ್ರೆ ವಿಶ್ರಾಂತ ನಿರ್ದೇಶಕ ಡಾ.ಸಿ.ಎನ್‌,ಮಂಜುನಾಥ್‌ ಕಣಕ್ಕೆ ಇಳಿಯುವ ಸಾಧ್ಯತೆ ದಟ್ಟವಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ