ಎಸ್‌ಬಿಐ ಮ್ಯಾನೇಜರ್ ಸೇರಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಕೊನೆಯ ದಿನಾಂಕ, ಶುಲ್ಕದ ಮಾಹಿತಿ ತಿಳಿಯಿರಿ -SBI Recruitment 2024
SBI Recruitment 2024: ಎಸ್‌ಬಿಐ ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ, ಶುಲ್ಕ ಸೇರಿ ಅಗತ್ಯ ಮಾಹಿತಿ ಇಲ್ಲಿದೆ.
SBI Recruitment 2024: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸ್ಪೆಷಲಿಸ್ಟ್ ಕೇಡರ್ ಆಫೀಸರ್ (ಎಸ್‌ಸಿಒ) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮಾರ್ಚ್ 4 ರಂದು ಕೊನೆಗೊಳ್ಳಲಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಎಸ್‌ಬಿಐನ ಅಧಿಕೃತ ವೆಬ್‌ಸೈಟ್ sbi.co.in ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಎಸ್‌ಬಿಐ ಎಸ್‌ಸಿಒ ನೇಮಕಾತಿ 2024 ಹುದ್ದೆಗಳ ವಿವರಗಳು: 131 ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
- ಮ್ಯಾನೇಜರ್ (ಕ್ರೆಡಿಟ್ ಅನಾಲಿಸ್ಟ್): 50
- ಅಸಿಸ್ಟೆಂಟ್ ಮ್ಯಾನೇಜರ್ (ಸೆಕ್ಯುರಿಟಿ ಅನಾಲಿಸ್ಟ್): 23
- ಡೆಪ್ಯೂಟಿ ಮ್ಯಾನೇಜರ್ (ಸೆಕ್ಯುರಿಟಿ ಅನಾಲಿಸ್ಟ್): 51
- ಮ್ಯಾನೇಜರ್ (ಸೆಕ್ಯುರಿಟಿ ಅನಾಲಿಸ್ಟ್): 3
- ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (ಅಪ್ಲಿಕೇಶನ್ ಸೆಕ್ಯುರಿಟಿ): 3
- ಸರ್ಕಲ್ ಡಿಫೆನ್ಸ್ ಬ್ಯಾಂಕಿಂಗ್ ಅಡ್ವೈಸರ್ (ಸಿಡಿಬಿಎ): 1
ಇದನ್ನೂ ಓದಿ: ಇಸ್ರೋದಲ್ಲಿ ವಿಜ್ಞಾನಿ, ತಾಂತ್ರಿಕ ಸಹಾಯಕ ಸಹಿತ 224 ಉದ್ಯೋಗ, ಮಾರ್ಚ್ 1 ಅರ್ಜಿ ಸಲ್ಲಿಕೆಗೆ ಕಡೆಯ ದಿನ
ಎಸ್‌ಬಿಐ ಎಸ್‌ಸಿಒ ನೇಮಕಾತಿ 2024 ಅರ್ಜಿ ಶುಲ್ಕ: ಸಾಮಾನ್ಯ / ಇಡಬ್ಲ್ಯೂಎಸ್ / ಒಬಿಸಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 750 ರೂ. ಎಸ್ಸಿ/ಎಸ್ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಎಸ್‌ಬಿಐ ಎಸ್‌ಸಿಒ ನೇಮಕಾತಿ 2024: sbi.co.in ಅರ್ಜಿ ಸಲ್ಲಿಸುವುದು ಹೇಗೆ?
- ಎಸ್‌ಬಿಐನ ಅಧಿಕೃತ ವೆಬ್‌ಸೈಟ್ sbi.co.in ಗೆ ಭೇಟಿ ನೀಡಿ
- ಮುಖಪುಟದಲ್ಲಿ, ಪ್ರಸ್ತುತ ಒಪನಿಂಗ್ಸ್ ಮೇಲೆ ಕ್ಲಿಕ್ ಮಾಡಿ
- ಅರ್ಜಿ ನಮೂನೆಯನ್ನು ಭರ್ತಿ ಮಾಡಿ
- ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ
- ಅರ್ಜಿ ಶುಲ್ಕವನ್ನು ಪಾವತಿಸಿ
ಇದನ್ನೂ ಓದಿ: 500 ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಐಡಿಬಿಐ ನಿರ್ಧಾರ; ಫೆ 12 ರಿಂದ ಅರ್ಜಿ ಸಲ್ಲಿಸಿ
ಫಾರ್ಮ್ ಅನ್ನು ಸಲ್ಲಿಸಿದ ಬಳಿಕ ಭವಿಷ್ಯದ ದಾಖಲೆಗಾಗಿ ಮುದ್ರಣವೊಂದನ್ನು ತೆಗೆದುಕೊಳ್ಳಿ. ಜಾಹೀರಾತು ಸಂಖ್ಯೆ: CRPD/SCO/2023-24/33). (This copy first appeared in Hindustan Times Kannada website. To read more like this please logon to kannada.hindustantime.com).