logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Kia Launches 2023 Seltos Suv: 2023ನೇ ಆವೃತ್ತಿಯ ಕಿಯಾ ಸೆಲ್ಟೊಸ್‌ ಎಸ್‌ಯುವಿ ಬಿಡುಗಡೆ, ದರ 10.89 ಲಕ್ಷ ರೂ.ನಿಂದ ಆರಂಭ

Kia launches 2023 Seltos SUV: 2023ನೇ ಆವೃತ್ತಿಯ ಕಿಯಾ ಸೆಲ್ಟೊಸ್‌ ಎಸ್‌ಯುವಿ ಬಿಡುಗಡೆ, ದರ 10.89 ಲಕ್ಷ ರೂ.ನಿಂದ ಆರಂಭ

HT Kannada Desk HT Kannada

Mar 18, 2023 06:46 PM IST

Kia launches 2023 Seltos SUV: 2023ನೇ ಆವೃತ್ತಿಯ ಕಿಯಾ ಸೆಲ್ಟೊಸ್‌ ಎಸ್‌ಯುವಿ ಬಿಡುಗಡೆ

    • ನೂತನ ಕಿಯಾ ಸೆಲ್ಟೊಸ್‌ನ ಆರಂಭಿಕ ಪೆಟ್ರೋಲ್‌ ಮ್ಯಾನುಯಲ್‌ ಗಿಯರ್‌ ಆವೃತ್ತಿಗೆ 10.89 ಲಕ್ಷ ರೂ. ಇದೆ. ಎಕ್ಸ್‌ ಲೈನ್‌ ಡೀಸೆಲ್‌ ಆಟೋಮ್ಯಾಟಿಕ್‌ನ ಎಕ್ಸ್‌ಶೋರೂಂ ದರ 19.65 ಲಕ್ಷ ರೂಪಾಯಿ ಇದೆ.
Kia launches 2023 Seltos SUV: 2023ನೇ ಆವೃತ್ತಿಯ ಕಿಯಾ ಸೆಲ್ಟೊಸ್‌ ಎಸ್‌ಯುವಿ ಬಿಡುಗಡೆ
Kia launches 2023 Seltos SUV: 2023ನೇ ಆವೃತ್ತಿಯ ಕಿಯಾ ಸೆಲ್ಟೊಸ್‌ ಎಸ್‌ಯುವಿ ಬಿಡುಗಡೆ

ನವದೆಹಲಿ: ಕಿಯಾ ಮೋಟಾರ್ಸ್‌ ಇದೀಗ ಭಾರತದಲ್ಲಿ 2023ನೇ ಆವೃತ್ತಿಯ ಸೆಲ್ಟೊಸ್‌ ಎಸ್‌ಯುವಿಯನ್ನು ಭಾರತಕ್ಕೆ ಪರಿಚಯಿಸಿದೆ. ಹಳೆಯ ಸೆಲ್ಟೊಸ್‌ ಆವೃತ್ತಿಗೆ ಹೋಲಿಸಿದರೆ ಪ್ರಮುಖ ಅಪ್‌ಡೇಟ್‌ಗಳೊಂದಿಗೆ ನೂತನ ಸೆಲ್ಟೊಸ್‌ ಆಗಮಿಸಿದೆ.

ಟ್ರೆಂಡಿಂಗ್​ ಸುದ್ದಿ

Viral Video: ತೂಕ ಇಳಿಸುವ ಹುಚ್ಚು, ಜಿಮ್‌ನಲ್ಲಿ ಚಿತ್ರಹಿಂಸೆ ಕೊಟ್ಟು ಪುತ್ರನನ್ನು ಕೊಂದ ಪಾಪಿ ಪತಿ, ಕಣ್ಣೀರು ಹಾಕಿದ ತಾಯಿ

ಐಸಿಎಸ್‌ಇ ಐಎಸ್‌ಸಿ ಫಲಿತಾಂಶ ಪ್ರಕಟ, 10ನೇ ತರಗತಿ ಪ್ರಮಾಣ ಶೇ 99.47, ಐಎಸ್‌ಸಿ ಫಲಿತಾಂಶ ಶೇ 98.19

ಇಂದು ಬೆಳಗ್ಗೆ 11 ಗಂಟೆಗೆ ಸಿಐಎಸ್‌ಇ 10, 12ನೇ ತರಗತಿ ಫಲಿತಾಂಶ ಪ್ರಕಟ; ಲಿಂಕ್, ವೆಬ್‌ಸೈಟ್ ವಿವರ ಇಲ್ಲಿದೆ -ICSE Result

Gold Rate Today: ಭಾನುವಾರ ಚಿನ್ನ, ಬೆಳ್ಳಿ ಎರಡರ ದರವೂ ಹೆಚ್ಚಳ; ಆಭರಣ ಖರೀದಿಸುವ ಯೋಚನೆ ಇದ್ದರೆ ಇಂದಿನ ಬೆಲೆ ಗಮನಿಸಿ

ಹಳೆಯ ಆವೃತ್ತಿಗೆ ಹೋಲಿಸಿದರೆ ನೂತನ ಕಿಯಾ ಸೆಲ್ಟೊಸ್‌ ದರವು ಸುಮಾರು 50 ಸಾವಿರ ರೂ.ನಷ್ಟು ದುಬಾರಿಯಾಗಿದೆ. ನೂತನ ಕಿಯಾ ಸೆಲ್ಟೊಸ್‌ನ ಆರಂಭಿಕ ಪೆಟ್ರೋಲ್‌ ಮ್ಯಾನುಯಲ್‌ ಗಿಯರ್‌ ಆವೃತ್ತಿಗೆ 10.89 ಲಕ್ಷ ರೂ. ಇದೆ. ಎಕ್ಸ್‌ ಲೈನ್‌ ಡೀಸೆಲ್‌ ಆಟೋಮ್ಯಾಟಿಕ್‌ನ ಎಕ್ಸ್‌ಶೋರೂಂ ದರ 19.65 ಲಕ್ಷ ರೂಪಾಯಿ ಇದೆ.

2023 Kia Seltosನ ಪ್ರಮುಖ ಫೀಚರ್‌ಗಳು

  1. ಈ ಆವೃತ್ತಿಯು ಸಣ್ಣ ಎಸ್‌ಯುವಿ ವಿಭಾಗದ್ದಾಗಿದ್ದು, ಬಿಎಸ್‌ 6 ಫೇಸ್‌ 2 ಮತ್ತು ಆರ್‌ಡಿಇ ಎಮಿಷನ್‌ ನಿಯಮಗಳಿಗೆ ತಕ್ಕಂತೆ ಆಗಮಿಸಿದೆ. ಈ ಎರಡು ನಿಯಮಗಳು ಏಪ್ರಿಲ್‌ 1ರಿಂದ ಜಾರಿಗೆ ಬರಲಿವೆ.
  2. ಈ ಅಪ್‌ಡೇಟೆಡ್‌ ಆವೃತ್ತಿಗೆ ಐಡಲ್‌ ಸ್ಟಾರ್ಟ್‌-ಸ್ಟಾಪ್‌ ಫೀಚರ್‌ ಅನ್ನು ಸ್ಟಾಂಡರ್ಡ್‌ ಫೀಚರ್‌ ಆಗಿ ಅಳವಡಿಸಲಾಗಿದೆ. ಈ ಫೀಚರ್‌ನಿಂದಾಗಿ ಇಂಧನ ದಕ್ಷತೆ ಹೆಚ್ಚಲಿದೆ. ಟ್ರಾಫಿಕ್‌ ಹೆಚ್ಚಿರುವಾಗ ಸ್ಟಾರ್ಟ್‌ ಆಗಿದ್ದುಕೊಂಡು ಹೆಚ್ಚು ಇಂಧನ ವ್ಯರ್ಥವಾಗುವುದನ್ನು ತಪ್ಪಿಸುತ್ತದೆ.
  3. 1.5 ಲೀಟರ್‌ನ ಪೆಟ್ರೋಲ್‌ ಮತ್ತು 1.5 ಲೀಟರ್‌ನ ಟರ್ಬೊ ಡೀಸೆಲ್‌ ಎಂಜಿನ್‌ ಆಯ್ಕೆಗಳಲ್ಲಿ ನೂತನ ಕಾರು ಲಭ್ಯವಿದೆ.
  4. ಪೆಟ್ರೋಲ್‌ ಆವೃತ್ತಿಯು 6 ಸ್ಪೀಡ್‌ನ ಮ್ಯಾನುಯಲ್‌ ಮತ್ತು ಸಿವಿಟಿ ಗಿಯರ್‌ ಬಾಕ್ಸ್‌ ಆಯ್ಕೆಗಳಲ್ಲಿ ದೊರಕುತ್ತದೆ. ಡೀಸೆಲ್‌ ಆವೃತ್ತಿಗೆ ಹೊಸ ಆರು ಸ್ಪೀಡ್‌ನ ಐಎಂಟಿ ಗಿಯರ್‌ ಬಾಕ್ಸ್‌ ಅಳವಡಿಸಲಾಗಿದೆ.
  5. ಡೀಸೆಲ್‌ ಎಂಜಿನ್‌ ಎಸ್‌ಯುವಿಯಲ್ಲಿ ಆರು ಸ್ಪೀಡ್‌ನ ಟಾರ್ಕ್‌ ಕನ್ವರ್ಟರ್‌ ಇದೆ. ಆದರೆ, ಆರು ಸ್ಪೀಡ್‌ನ ಮ್ಯಾನುಯಲ್‌ ಗಿಯರ್‌ಬಾಕ್ಸ್‌ ಆಯ್ಕೆಯು ಡೀಸೆಲ್‌ ಎಂಜಿನ್‌ ಸೆಲ್ಟೊಸ್‌ನಲ್ಲಿ ಲಭ್ಯವಿಲ್ಲ.

ಸದ್ಯಕ್ಕೆ ನೂತನ ಸೆಲ್ಟೊಸ್‌ ಕುರಿತು ಇಷ್ಟು ಮಾಹಿತಿ ಮಾತ್ರ ಲಭ್ಯವಿದೆ. ಈ ಕಾರಿನ ಕುರಿತು ಇನ್ನಷ್ಟು ಮಾಹಿತಿಯನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು.

ಕೆಲವು ದಿನಗಳ ಹಿಂದೆ ಕಿಯಾ ಕಂಪನಿಯು ಸೆಲ್ಟೊಸ್‌ ಸಣ್ಣ ಎಸ್‌ಯುವಿಯ ಫೇಸ್‌ಲಿಫ್ಟ್‌ ಆವೃತ್ತಿಯನ್ನು ದಕ್ಷಿಣ ಕೊರಿಯಾದಲ್ಲಿ ಲಾಂಚ್‌ ಮಾಡಿತ್ತು. ನೂತನ ತಲೆಮಾರಿನ ಈ ಎಸ್‌ಯುವಿಯ ವಿನ್ಯಾಸದಲ್ಲಿ ಸಾಕಷ್ಟು ಅಪ್‌ಗ್ರೇಡ್‌ ಆಗಿದ್ದು, ಕಾರಿನೊಳಗೂ ಸಾಕಷ್ಟು ತಾಂತ್ರಿಕ ಬದಲಾವಣೆಗಳನ್ನು ನೋಡಬಹುದು. ಭಾರತದಲ್ಲಿರುವ ಸೆಲ್ಟೋಸ್‌ಗೆ ಹೋಲಿಸಿದರೆ ನೂತನ ಸೆಲ್ಟೋಸ್‌ನಲ್ಲಿ ಸಾಕಷ್ಟು ಹೊಸ ಫೀಚರ್‌ಗಳು ಇದ್ದವು. ದಕ್ಷಿಣ ಕೊರಿಯಾದ ಆವೃತ್ತಿಯಷ್ಟು ಭಾರತದ ಈಗಿನ ಆವೃತ್ತಿಯಲ್ಲಿ ಹೊಸ ಫೀಚರ್‌ಗಳಿಲ್ಲ. ಇದು ಭಾರತದ ರಸ್ತೆಯನ್ನು ಗಮನದಲ್ಲಿಟ್ಟುಕೊಂಡು ಲಾಂಚ್‌ ಮಾಡಲಾದ ಎಸ್‌ಯುವಿ.

ದಕ್ಷಿಣ ಕೊರಿಯಾದಲ್ಲಿ ಲಾಂಚ್‌ ಆಗಿದ್ದ ನೂತನ ಕಿಯಾ ಸೆಲ್ಟೊಸ್‌ ನಲ್ಲಿ ಗುರುತಿಸಬಹುದಾದ ಒಂದು ಪ್ರಮುಖ ಬದಲಾವಣೆಯೆಂದರೆ ಅದರ ವಿನ್ಯಾಸ ಮತ್ತು ಗಾತ್ರ. ಭಾರತದಲ್ಲಿ ಮಾರಾಟವಾಗುವ ಸೆಲ್ಟೊಸ್‌ಗೆ ಹೋಲಿಸಿದರೆ ನೂತನ ಕಿಯಾ ಸೆಲ್ಟೊಸ್‌ ಉದ್ದ ಹೆಚ್ಚಾಗಿದೆ. ಆದರೆ, ಭಾರತದಲ್ಲಿರುವ ಸೆಲ್ಟೊಸ್‌ಗಿಂತ ನೂತನ ಕಿಯಾದ ಸೀಟುಗಳು 20ಎಂಎಂನಷ್ಟು ಕಡಿಮೆಯಾಗಿದೆ. ನೂತನ ಸೆಲ್ಟೋಸ್‌ ಗ್ರಿಲ್‌ಗಳು ಮತ್ತು ಬಂಪರ್‌ಗಳಲ್ಲಿಯೂ ಸಾಕಷ್ಟು ಬದಲಾವಣೆಗಳಾಗಿದೆ.

    ಹಂಚಿಕೊಳ್ಳಲು ಲೇಖನಗಳು