logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಲೋಕಸಭೆ ಚುನಾವಣೆ 2019 ರ ದಿನಾಂಕ, ವೇಳಾಪಟ್ಟಿ ಪ್ರಕಟವಾದ್ದು ಯಾವಾಗ; ಕರ್ನಾಟಕದಲ್ಲಿ ಎರಡು ಹಂತದ ಚುನಾವಣೆ, ಇಲ್ಲಿದೆ ವಿವರ

ಲೋಕಸಭೆ ಚುನಾವಣೆ 2019 ರ ದಿನಾಂಕ, ವೇಳಾಪಟ್ಟಿ ಪ್ರಕಟವಾದ್ದು ಯಾವಾಗ; ಕರ್ನಾಟಕದಲ್ಲಿ ಎರಡು ಹಂತದ ಚುನಾವಣೆ, ಇಲ್ಲಿದೆ ವಿವರ

Umesh Kumar S HT Kannada

Mar 15, 2024 07:28 PM IST

ಲೋಕಸಭೆ ಚುನಾವಣೆ 2019ರ ದಿನಾಂಕ, ವೇಳಾಪಟ್ಟಿ (ಸಾಂಕೇತಿಕ ಚಿತ್ರ)

  • ಲೋಕಸಭೆ ಚುನಾವಣೆ 2024ರ ಸನಿಹದಲ್ಲಿ 2019ರ ಲೋಕಸಭೆ ಚುನಾವಣೆ ಯಾವಾಗ ನಡೆಯಿತು, ಚುನಾವಣಾ ದಿನಾಂಕ ಘೋ‍ಷಣೆಯಾದ್ದು ಯಾವಾಗ, ವೇಳಾಪಟ್ಟಿ ಹೇಗಿತ್ತು. ಕರ್ನಾಟಕದಲ್ಲಿ ಯಾವಾಗ ಚುನಾವಣೆ ನಡೆಯಿತು ಎಂಬಿತ್ಯಾದಿ ವಿವರ ಹುಡುಕುವುದು ಸಹಜ. ಆ ಹುಡುಕಾಟಕ್ಕೆ ಇಲ್ಲಿದೆ ಉತ್ತರ.

ಲೋಕಸಭೆ ಚುನಾವಣೆ 2019ರ ದಿನಾಂಕ, ವೇಳಾಪಟ್ಟಿ (ಸಾಂಕೇತಿಕ ಚಿತ್ರ)
ಲೋಕಸಭೆ ಚುನಾವಣೆ 2019ರ ದಿನಾಂಕ, ವೇಳಾಪಟ್ಟಿ (ಸಾಂಕೇತಿಕ ಚಿತ್ರ)

ನವದೆಹಲಿ/ ಬೆಂಗಳೂರು: ಲೋಕಸಭೆ ಚುನಾವಣೆ 2024ರ ಚುನಾವಣಾ ದಿನಾಂಕ, ವೇಳಾಪಟ್ಟಿ ಮತ್ತು ಕ್ಷೇತ್ರವಾರು ವಿವರವನ್ನು ಭಾರತ ಚುನಾವಣಾ ಆಯೋಗ ಮಾರ್ಚ್ 16ರಂದು ಮಧ್ಯಾಹ್ನ ನಂತರ 3 ಗಂಟೆಗೆ ಪ್ರಕಟಿಸಲಿದೆ. ಇದೇ ನಿಮಿತ್ತವಾಗಿ ಕಳೆದ ಬಾರಿ ಅಂದರೆ 2019ರ ಲೋಕಸಭೆ ಚುನಾವಣಾ ದಿನಾಂಕ, ವೇಳಾಪಟ್ಟಿ ಮತ್ತು ಕ್ಷೇತ್ರವಾರು ವಿವರಗಳನ್ನು ಭಾರತ ಚುನಾವಣಾ ಆಯೋಗ ಯಾವಾಗ ಪ್ರಕಟಿಸಿತ್ತು? ಅಂದು ಎಷ್ಟು ಹಂತಗಳಲ್ಲಿ ಚುನಾವಣೆ ನಡೆಯಿತು ಎಂಬುದರ ಹಿನ್ನೋಟ ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಅಂದು 2019ರ ಲೋಕಸಭಾ ಚುನಾವಣೆಯ ದಿನಾಂಕ ಮತ್ತು ವೇಳಾಪಟ್ಟಿ ವಿವರಗಳನ್ನು ಭಾರತೀಯ ಚುನಾವಣಾ ಆಯೋಗವು 2019ರ ಮಾರ್ಚ್‌ 10ರಂದು ಘೋ‍ಷಿಸಿತ್ತು. ಏಳು ಹಂತಗಳಲ್ಲಿ ದೇಶದ 543 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಿತು. ಈ ಸಲ ಮಾರ್ಚ್‌ 16 ರಂದು ಲೋಕಸಭೆ ಚುನಾವಣೆ 2024ರ ವೇಳಾಪಟ್ಟಿಯನ್ನು ಪ್ರಕಟಿಸುತ್ತಿದೆ.

ಕಳೆದ ಬಾರಿ 2019ರ ಲೋಕಸಭೆ ಚುನಾವಣೆಯ ಜೊತೆಯಲ್ಲಿಯೇ ಅರುಣಾಚಲ ಪ್ರದೇಶ, ಆಂಧ್ರಪ್ರದೇಶ, ಸಿಕ್ಕಿಂ ಮತ್ತು ಒಡಿಶಾ ವಿಧಾನಸಭೆಗಳಿಗೂ ಚುನಾವಣೆ ನಡೆಯಿತು. ಲೋಕಸಭೆ ಚುನಾವಣೆ ಫಲಿತಾಂಶದೊಂದಿಗೆ ಅರುಣಾಚಲ ಪ್ರದೇಶ, ಆಂಧ್ರಪ್ರದೇಶ, ಸಿಕ್ಕಿಂ ಮತ್ತು ಒಡಿಶಾ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳು ಮೇ 23 ರಂದು ಪ್ರಕಟವಾಗಿದ್ದವು.

2019ರ ಲೋಕಸಭಾ ಚುನಾವಣೆಯ ದಿನಾಂಕ ಮತ್ತು ವೇಳಾಪಟ್ಟಿ ವಿವರ

ಕಳೆದ ಬಾರಿ 2019ರ ಏಪ್ರಿಲ್ 11ಕ್ಕೆ ಮೊದಲ ಹಂತದ ಮತದಾನ ನಡೆದಿದ್ದು, ಕೊನೆಯ ಹಂತದ ಮತದಾನ ಮೇ 19ರಂದು ನಡೆಯಿತು. ಮೇ 23ರಂದು ಫಲಿತಾಂಶ ಪ್ರಕಟವಾಗಿದೆ. 2019ರ ಲೋಕಸಭೆ ಚುನಾವಣೆ ಏಳು ಹಂತಗಳಲ್ಲಿ ನಡೆಯಿತು. ಚುನಾವಣೆಯ ಪ್ರಮುಖ ದಿನಾಂಕಗಳು ಹೀಗಿದ್ದವು

ಹಂತ * ಮತದಾನ ದಿನಾಂಕ

1ನೇ ಹಂತ * 11.04.2019

2ನೇ ಹಂತ* 18.04.2019

3ನೇ ಹಂತ* 23.04.2019

4ನೇ ಹಂತ* 29.04.2019

5ನೇ ಹಂತ * 06.05.2019

6ನೇ ಹಂತ *12.05.2019

7ನೇ ಹಂತ* 19.05.2019

ಲೋಕಸಭೆ ಚುನಾವಣೆ 2019ರ 1ನೇ ಹಂತದ ಚುನಾವಣೆ ಪ್ರಕ್ರಿಯೆ

ಅಧಿಸೂಚನೆ - 18.03.2019 (ಸೋಮವಾರ)

ನಾಮಪತ್ರ ಸಲ್ಲಿಕೆಗೆ ಕೊನೇ ದಿನ - 25.03.2019 (ಸೋಮವಾರ)

ನಾಮಪತ್ರ ಪರಿಶೀಲನೆ - 26.03.2019 (ಮಂಗಳವಾರ)

ನಾಮಪತ್ರ ಹಿಂಪಡೆಯಲು ಕೊನೆದಿನ - 28.03.2019 (ಗುರುವಾರ)

ಮತದಾನ ದಿನಾಂಕ - 11.04.2019

ಮತ ಎಣಿಕೆ ದಿನ/ ಫಲಿತಾಂಶ - 23.05.2019

ಚುನಾವಣೆ ಪ್ರಕ್ರಿಯೆ ಮುಗಿಯಬೇಕಾದ ದಿನಾಂಕ - 27.05.2019

ಮತದಾನ ನಡೆಯುವ ಕ್ಷೇತ್ರಗಳ ಸಂಖ್ಯೆ 91

ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ 20

ಲೋಕಸಭೆ ಚುನಾವಣೆ 2019ರ 2ನೇ ಹಂತದ ಚುನಾವಣೆ ಪ್ರಕ್ರಿಯೆ

ಅಧಿಸೂಚನೆ - 19.03.2019 (ಮಂಗಳವಾರ)

ನಾಮಪತ್ರ ಸಲ್ಲಿಕೆಗೆ ಕೊನೇ ದಿನ - 26.03.2019 (ಮಂಗಳವಾರ)

ನಾಮಪತ್ರ ಪರಿಶೀಲನೆ - 27.03.2019 (ಬುಧವಾರ)

ನಾಮಪತ್ರ ಹಿಂಪಡೆಯಲು ಕೊನೆದಿನ - 29.03.2019 (ಶುಕ್ರವಾರ)

ಮತದಾನ ದಿನಾಂಕ - 18.04.2019

ಮತ ಎಣಿಕೆ ದಿನ/ ಫಲಿತಾಂಶ - 23.05.2019

ಚುನಾವಣೆ ಪ್ರಕ್ರಿಯೆ ಮುಗಿಯಬೇಕಾದ ದಿನಾಂಕ - 27.05.2019

ಮತದಾನ ನಡೆಯುವ ಕ್ಷೇತ್ರಗಳ ಸಂಖ್ಯೆ 97

ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ 13

ಲೋಕಸಭೆ ಚುನಾವಣೆ 2019ರ 3ನೇ ಹಂತದ ಚುನಾವಣೆ ಪ್ರಕ್ರಿಯೆ

ಅಧಿಸೂಚನೆ - 28.03.2019 (ಗುರುವಾರ)

ನಾಮಪತ್ರ ಸಲ್ಲಿಕೆಗೆ ಕೊನೇ ದಿನ - 04.04.2019 (ಗುರುವಾರ)

ನಾಮಪತ್ರ ಪರಿಶೀಲನೆ - 05.04.2019 (ಶುಕ್ರವಾರ)

ನಾಮಪತ್ರ ಹಿಂಪಡೆಯಲು ಕೊನೆದಿನ - 08.04.2019 (ಸೋಮವಾರ)

ಮತದಾನ ದಿನಾಂಕ - 23.04.2019 (ಮಂಗಳವಾರ)

ಮತ ಎಣಿಕೆ ದಿನ/ ಫಲಿತಾಂಶ - 23.05.2019

ಚುನಾವಣೆ ಪ್ರಕ್ರಿಯೆ ಮುಗಿಯಬೇಕಾದ ದಿನಾಂಕ - 27.05.2019

ಮತದಾನ ನಡೆಯುವ ಕ್ಷೇತ್ರಗಳ ಸಂಖ್ಯೆ 115

ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ 14

ಲೋಕಸಭೆ ಚುನಾವಣೆ 2019ರ 4ನೇ ಹಂತದ ಚುನಾವಣೆ ಪ್ರಕ್ರಿಯೆ

ಅಧಿಸೂಚನೆ - 02.04.2019 (ಮಂಗಳವಾರ)

ನಾಮಪತ್ರ ಸಲ್ಲಿಕೆಗೆ ಕೊನೇ ದಿನ - 09.04.2019 (ಮಂಗಳವಾರ)

ನಾಮಪತ್ರ ಪರಿಶೀಲನೆ - 10.04.2019 (ಬುಧವಾರ)

ನಾಮಪತ್ರ ಹಿಂಪಡೆಯಲು ಕೊನೆದಿನ - 12.04.2019 (ಶುಕ್ರವಾರ)

ಮತದಾನ ದಿನಾಂಕ - 29.04.2019 (ಸೋಮವಾರ)

ಮತ ಎಣಿಕೆ ದಿನ/ ಫಲಿತಾಂಶ - 23.05.2019 (ಗುರುವಾರ)

ಚುನಾವಣೆ ಪ್ರಕ್ರಿಯೆ ಮುಗಿಯಬೇಕಾದ ದಿನಾಂಕ - 27.05.2019 (ಸೋಮವಾರ)

ಮತದಾನ ನಡೆಯುವ ಕ್ಷೇತ್ರಗಳ ಸಂಖ್ಯೆ 71

ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ 09

ಲೋಕಸಭೆ ಚುನಾವಣೆ 2019ರ 5ನೇ ಹಂತದ ಚುನಾವಣೆ ಪ್ರಕ್ರಿಯೆ

ಅಧಿಸೂಚನೆ - 10.04.2019 (ಬುಧವಾರ)

ನಾಮಪತ್ರ ಸಲ್ಲಿಕೆಗೆ ಕೊನೇ ದಿನ - 18.04.2019 (ಗುರುವಾರ)

ನಾಮಪತ್ರ ಪರಿಶೀಲನೆ - 20.04.2019 (ಶನಿವಾರ)

ನಾಮಪತ್ರ ಹಿಂಪಡೆಯಲು ಕೊನೆದಿನ - 22.04.2019 (ಸೋಮವಾರ)

ಮತದಾನ ದಿನಾಂಕ - 06.05.2019 (ಸೋಮವಾರ)

ಮತ ಎಣಿಕೆ ದಿನ/ ಫಲಿತಾಂಶ - 23.05.2019 (ಗುರುವಾರ)

ಚುನಾವಣೆ ಪ್ರಕ್ರಿಯೆ ಮುಗಿಯಬೇಕಾದ ದಿನಾಂಕ - 27.05.2019 (ಸೋಮವಾರ)

ಮತದಾನ ನಡೆಯುವ ಕ್ಷೇತ್ರಗಳ ಸಂಖ್ಯೆ 51

ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ 07

ಲೋಕಸಭೆ ಚುನಾವಣೆ 2019ರ 6ನೇ ಹಂತದ ಚುನಾವಣೆ ಪ್ರಕ್ರಿಯೆ

ಅಧಿಸೂಚನೆ - 16.04.2019 (ಮಂಗಳವಾರ)

ನಾಮಪತ್ರ ಸಲ್ಲಿಕೆಗೆ ಕೊನೇ ದಿನ - 23.04.2019 (ಮಂಗಳವಾರ)

ನಾಮಪತ್ರ ಪರಿಶೀಲನೆ - 24.04.2019 (ಬುಧವಾರ)

ನಾಮಪತ್ರ ಹಿಂಪಡೆಯಲು ಕೊನೆದಿನ - 26.04.2019 (ಶುಕ್ರವಾರ)

ಮತದಾನ ದಿನಾಂಕ - 12.05.2019 (ಭಾನುವಾರ)

ಮತ ಎಣಿಕೆ ದಿನ/ ಫಲಿತಾಂಶ - 23.05.2019 (ಗುರುವಾರ)

ಚುನಾವಣೆ ಪ್ರಕ್ರಿಯೆ ಮುಗಿಯಬೇಕಾದ ದಿನಾಂಕ - 27.05.2019 (ಸೋಮವಾರ)

ಮತದಾನ ನಡೆಯುವ ಕ್ಷೇತ್ರಗಳ ಸಂಖ್ಯೆ 59

ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ 07

ಲೋಕಸಭೆ ಚುನಾವಣೆ 2019ರ 7ನೇ ಹಂತದ ಚುನಾವಣೆ ಪ್ರಕ್ರಿಯೆ

ಅಧಿಸೂಚನೆ - 22.04.2019 (ಸೋಮವಾರ)

ನಾಮಪತ್ರ ಸಲ್ಲಿಕೆಗೆ ಕೊನೇ ದಿನ - 29.04.2019 (ಸೋಮವಾರ)

ನಾಮಪತ್ರ ಪರಿಶೀಲನೆ - 30.04.2019 (ಮಂಗಳವಾರ)

ನಾಮಪತ್ರ ಹಿಂಪಡೆಯಲು ಕೊನೆದಿನ - 02.05.2019 (ಗುರುವಾರ)

ಮತದಾನ ದಿನಾಂಕ -19.05.2019 (ಭಾನುವಾರ)

ಮತ ಎಣಿಕೆ ದಿನ/ ಫಲಿತಾಂಶ - 23.05.2019 (ಗುರುವಾರ)

ಚುನಾವಣೆ ಪ್ರಕ್ರಿಯೆ ಮುಗಿಯಬೇಕಾದ ದಿನಾಂಕ - 27.05.2019 (ಸೋಮವಾರ)

ಮತದಾನ ನಡೆಯುವ ಕ್ಷೇತ್ರಗಳ ಸಂಖ್ಯೆ 59

ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ 08

ಲೋಕಸಭೆ ಚುನಾವಣೆ 2019; ಕರ್ನಾಟಕದಲ್ಲಿ ಏಪ್ರಿಲ್ 18, 23ಕ್ಕೆ 2 ಹಂತಗಳಲ್ಲಿ ಚುನಾವಣೆ

ಏಪ್ರಿಲ್ 18ಕ್ಕೆ ಚುನಾವಣೆ ನಡೆದ ಲೋಕಸಭಾ ಕ್ಷೇತ್ರಗಳು

1) ಉಡುಪಿ-ಚಿಕ್ಕಮಗಳೂರು

2) ಹಾಸನ

3) ದಕ್ಷಿಣ ಕನ್ನಡ

4) ಚಿತ್ರದುರ್ಗ

5) ತುಮಕೂರು

6) ಮಂಡ್ಯ

7) ಮೈಸೂರು

8) ಚಾಮರಾಜನಗರ

9) ಬೆಂಗಳೂರು ಗ್ರಾಮಾಂತರ

10) ಬೆಂಗಳೂರು ಉತ್ತರ

11) ಬೆಂಗಳೂರು ಸೆಂಟ್ರಲ್‌

12) ಬೆಂಗಳೂರು ದಕ್ಷಿಣ

13) ಚಿಕ್ಕಬಳ್ಳಾಪುರ

14) ಕೋಲಾರ

ಏಪ್ರಿಲ್ 23ಕ್ಕೆ ಚುನಾವಣೆ ನಡೆದ ಲೋಕಸಭಾ ಕ್ಷೇತ್ರಗಳು

1) ಚಿಕ್ಕೋಡಿ

2) ಬೆಳಗಾವಿ

3) ಬಾಗಲಕೋಟ

4) ವಿಜಯಪುರ

5) ಕಲಬುರಗಿ

6) ರಾಯಚೂರು

7) ಬೀದರ್‌

8) ಕೊಪ್ಪಳ

9) ಬಳ್ಳಾರಿ

10) ಹಾವೇರಿ

11) ಧಾರವಾಡ

12) ಉತ್ತರ ಕನ್ನಡ

13) ದಾವಣಗೆರೆ

14) ಶಿವಮೊಗ್ಗ

ಕರ್ನಾಟಕದಲ್ಲಿ ಹೀಗೆ ಎರಡು ಹಂತಗಳಲ್ಲಿ ಚುನಾವಣೆ ನಡೆದು ಮೇ 23ರಂದು ಫಲಿತಾಂಶ ಪ್ರಕಟವಾಗಿತ್ತು.

(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ