logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Covid News: ಕೊರೊನಾ ಎರಡನೇ ಅಲೆಯಲ್ಲಿ ಮೃತಪಟ್ಟಿದ್ದಾನೆ ಎಂದುಕೊಂಡಿದ್ದ ವ್ಯಕ್ತಿ 2 ವರ್ಷದ ಬಳಿಕ ಜೀವಂತವಾಗಿ ಪ್ರತ್ಯಕ್ಷ

Covid News: ಕೊರೊನಾ ಎರಡನೇ ಅಲೆಯಲ್ಲಿ ಮೃತಪಟ್ಟಿದ್ದಾನೆ ಎಂದುಕೊಂಡಿದ್ದ ವ್ಯಕ್ತಿ 2 ವರ್ಷದ ಬಳಿಕ ಜೀವಂತವಾಗಿ ಪ್ರತ್ಯಕ್ಷ

Praveen Chandra B HT Kannada

Apr 16, 2023 05:18 PM IST

Covid News: ಕೊರೊನಾ ಎರಡನೇ ಅಲೆಯಲ್ಲಿ ಮೃತಪಟ್ಟಿದ್ದಾನೆ ಎಂದುಕೊಂಡಿದ್ದ ವ್ಯಕ್ತಿ 2 ವರ್ಷದ ಬಳಿಕ ಜೀವಂತವಾಗಿ ಪ್ರತ್ಯಕ್ಷ (ಸಾಂದರ್ಭಿಕ ಚಿತ್ರ)

    • Madhya Pradesh News: ಕೊರೊನಾ ಎರಡನೇ ಅಲೆಗೆ ಸಿಲುಕಿ ಮೃತಪಟ್ಟಿದ್ದಾನೆ ಎಂದುಕೊಂಡಿದ್ದ ವ್ಯಕ್ತಿಯೊಬ್ಬರು ಇದೀಗ ಮನೆಗೆ ಹಿಂತುರುಗಿದ್ದಾರೆ. 
Covid News: ಕೊರೊನಾ ಎರಡನೇ ಅಲೆಯಲ್ಲಿ ಮೃತಪಟ್ಟಿದ್ದಾನೆ ಎಂದುಕೊಂಡಿದ್ದ ವ್ಯಕ್ತಿ 2 ವರ್ಷದ ಬಳಿಕ ಜೀವಂತವಾಗಿ ಪ್ರತ್ಯಕ್ಷ (ಸಾಂದರ್ಭಿಕ ಚಿತ್ರ)
Covid News: ಕೊರೊನಾ ಎರಡನೇ ಅಲೆಯಲ್ಲಿ ಮೃತಪಟ್ಟಿದ್ದಾನೆ ಎಂದುಕೊಂಡಿದ್ದ ವ್ಯಕ್ತಿ 2 ವರ್ಷದ ಬಳಿಕ ಜೀವಂತವಾಗಿ ಪ್ರತ್ಯಕ್ಷ (ಸಾಂದರ್ಭಿಕ ಚಿತ್ರ) (HT_PRINT)

ಧಾರ್‌: ಕೊರೊನಾ ಎರಡನೇ ಅಲೆಗೆ ಸಿಲುಕಿ ಮೃತಪಟ್ಟಿದ್ದಾನೆ ಎಂದುಕೊಂಡಿದ್ದ ವ್ಯಕ್ತಿಯೊಬ್ಬರು ಇದೀಗ ಮನೆಗೆ ಹಿಂತುರುಗಿದ್ದು, ಎಲ್ಲರನ್ನೂ ಚಕಿತಗೊಳಿಸಿದೆ. ಮಧ್ಯ ಪ್ರದೇಶದ ಧಾರ್‌ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಅಚ್ಚರಿಯ ವಿಷಯವೆಂದರೆ, ಕೋವಿಡ್‌ ಸಮಯದಲ್ಲಿ ಈ ವ್ಯಕ್ತಿ ಎಂದುಕೊಂಡು ಕುಟುಂಬದವರು ಅಂತ್ಯಕ್ರಿಯೆಯನ್ನೂ ನೆರವೇರಿಸಿದ್ದರು.

ಟ್ರೆಂಡಿಂಗ್​ ಸುದ್ದಿ

Gold Rate Today: ಭಾನುವಾರ ಚಿನ್ನ, ಬೆಳ್ಳಿ ಎರಡರ ದರವೂ ಹೆಚ್ಚಳ; ಆಭರಣ ಖರೀದಿಸುವ ಯೋಚನೆ ಇದ್ದರೆ ಇಂದಿನ ಬೆಲೆ ಗಮನಿಸಿ

ಭಾರತದ ಅತಿದೊಡ್ಡ ಬಜಾಜ್ ಪಲ್ಸರ್‌ ಮಾರುಕಟ್ಟೆಗೆ; ಪಲ್ಸರ್ NS400Z ಬೈಕ್‌ ದರ 1.85 ಲಕ್ಷ ರೂ, ವಿನ್ಯಾಸ ವಿಶೇಷ ವಿವರ ಹೀಗಿದೆ

ತಿರುಮಲ ತಿರುಪತಿಯಲ್ಲಿ ನವದಂಪತಿಗೆ ವಿಶೇಷ ಶ್ರೀವಾರಿ ದರ್ಶನ ಟಿಕೆಟ್ ಪ್ರಕಟಿಸಿದ ಟಿಟಿಡಿ; ಎಷ್ಟಿವೆ ಕೋಟಾ, ದರ ಇತ್ಯಾದಿ ವಿವರ

Gold Rate Today: ಮತ್ತೆ ಆರಂಭವಾಯ್ತು ಚಿನ್ನ, ಬೆಳ್ಳಿ ದರದಲ್ಲಿನ ಏರಿಳಿತ; ಶನಿವಾರ ಚಿನ್ನದ ದರ ಇಳಿಕೆ, ಬೆಳ್ಳಿ ಏರಿಕೆ

ಸುಮಾರು 35 ವರ್ಷ ವಯಸ್ಸಿನ ಕಮಲೇಶ್‌ ಪಾಟಿದಾರನು ಕೋವಿಡ್‌ 19 ಎರಡನೇ ಅಲೆಯ ಸಂದರ್ಭದಲ್ಲಿ ಗುಜರಾತ್‌ನ ವಡೋದರ ಆಸ್ಪತ್ರೆಗೆ ದಾಖಲಾಗಿದ್ದನು.

2021 ರಲ್ಲಿ ವೈರಸ್ ಸೋಂಕಿಗೆ ಒಳಗಾಗಿದ್ದ ಇವರನ್ನು ಎರಡನೇ ಅಲೆಯ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಕನ್ವಾನ್ ಪೊಲೀಸ್ ಠಾಣೆಯ ಉಸ್ತುವಾರಿ ರಾಮ್ ಸಿಂಗ್ ರಾಥೋಡ್ ಹೇಳಿದ್ದಾರೆ.

ವೈದ್ಯಕೀಯ ಚಿಕಿತ್ಸೆ ನೀಡಿದರೂ ಕಮಲೇಶ್ ಕೊನೆಯುಸಿರೆಳೆದರು ಮತ್ತು ಹಾಜರಾದ ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಅವರ ಕುಟುಂಬ ಸದಸ್ಯರು ಆಸ್ಪತ್ರೆಯಿಂದ ಪಾರ್ಥಿವ ಶರೀರವನ್ನು ಸ್ವೀಕರಿಸಿ ಅಂತಿಮ ವಿಧಿವಿಧಾನ ನೆರವೇರಿಸಿದರು.

ನಿನ್ನೆ ಅಂದರೆ, ಶನಿವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಕಮಲೇಶ್ ಬಾಗಿಲು ಬಡಿದಾಗ ಕುಟುಂಬ ಸದಸ್ಯರು ಆಘಾತಕ್ಕೊಳಗಾದರು. "ಈಗ, ಅವರು ಮನೆಗೆ ಮರಳಿದ್ದಾರೆ ಆದರೆ ಈ ಅವಧಿಯಲ್ಲಿ ಅವರು ಎಲ್ಲಿ ಉಳಿದುಕೊಂಡಿದ್ದರು ಎನ್ನುವ ಮಾಹಿತಿ ತಿಳಿದಿಲ್ಲ. ಈ ಕುರಿತು ಅವರು ಏನನ್ನೂ ಬಹಿರಂಗಪಡಿಸಿಲ್ಲ" ಎಂದು ಕಮಲೇಶ್ ಅವರ ಸೋದರಸಂಬಂಧಿ ಮುಖೇಶ್ ಪಾಟಿದಾರ್ ಹೇಳಿದ್ದಾರೆ.

ಧಾರ್ ಜಿಲ್ಲೆಯ ಅಧಿಕಾರಿಗಳು ಈ ಬಗ್ಗೆ ತನಿಖೆ ಆರಂಭಿಸಿದ್ದು, ಕಮಲೇಶ್ ಪಾಟಿದಾರ್ ಹೇಳಿಕೆ ದಾಖಲಿಸಿದ ನಂತರ ಸ್ಪಷ್ಟವಾಗಲಿದೆ ಎಂದು ಹೇಳಿದ್ದಾರೆ.

2020 ರಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಪಶ್ಚಿಮ ಬಂಗಾಳದ ವ್ಯಕ್ತಿಯೊಬ್ಬರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿತ್ತು. ಅವರ ಕುಟುಂಬ ಸದಸ್ಯರು ಅವರ ಅಂತಿಮ ವಿಧಿಗಳನ್ನು ನೆರವೇರಿಸಿದರು. ಆದರೆ, ಆಸ್ಪತ್ರೆಯ ಸಿಬ್ಬಂದಿ ತಪ್ಪು ಮಾಡಿರುವುದು ಬಳಿಕ ತಿಳಿದುಬಂದಿತ್ತು. ರೋಗಿಯ ವೈದ್ಯಕೀಯ ವರದಿ ಅದಲುಬದಲಾಗಿದ್ದರಿಂದ ಈ ಯಡವಟ್ಟು ನಡೆದಿತ್ತು.

ಆದರೆ, ಇದೀಗ ವರದಿಯಾದ ಘಟನೆಯಲ್ಲಿ ಏನು ನಡೆಯಿತು ಎಂಬ ಅಂಶ ಇನ್ನಷ್ಟೇ ಬೆಳಕಿಗೆ ಬರಬೇಕಿದೆ. ಆಸ್ಪತ್ರೆಗೆ ದಾಖಲಾದ ವ್ಯಕ್ತಿ ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದಾನೆಯೇ? ಅಥವಾ ವೈದ್ಯಕೀಯ ವರದಿ ಅದಲುಬದಲಾಗಿ ಆತ ಮೃತಪಟ್ಟಿದ್ದಾನೆ ಎಂದು ಘೋಷಿಸಲಾಗಿತ್ತೇ? ತಾನು ಮೃತಪಟ್ಟಿದ್ದೇನೆ ಎಂದು ಕುಟುಂಬದವರು ತಿಳಿದುಕೊಂಡಿದ್ದಾರೆ ಎಂದುಕೊಂಡು ಆ ವ್ಯಕ್ತಿ ಬೇರೆ ಎಲ್ಲಾದರೂ ಹೋಗಿ ಇಷ್ಟು ವರ್ಷ ಜೀವನ ನಡೆಸುತ್ತಿದ್ದಾನೆಯೇ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಸದ್ಯದಲ್ಲಿಯೇ ದೊರಕುವ ನಿರೀಕ್ಷೆಯಿದೆ.

ಕೋವಿಡ್‌-19, ಎಚ್‌3ಎನ್‌2 ನಡುವಿನ ವ್ಯತ್ಯಾಸ ತಿಳಿಯುವುದು ಹೇಗೆ?

ಕಳೆದ ಕೆಲವು ದಿನಗಳಿಂದ ಜ್ವರ, ಆಯಾಸ ಹಾಗೂ ನಿರಂತರ ಕೆಮ್ಮು ಇಂತಹ ರೋಗಲಕ್ಷಣಗಳು ದೇಶದಾದ್ಯಂತ ಹಲವು ಜನರನ್ನು ಬಾಧಿಸುತ್ತಿದೆ. ಆದರೆ ಇದು ಕೋವಿಡ್‌-19 ಲಕ್ಷಣವೇ ಅಥವಾ ಎಚ್‌3ಎನ್‌2 ಆಗಿರಬಹುದೇ? ಎಂಬುದನ್ನು ಕಂಡುಕೊಳ್ಳುವುದು ಪ್ರಶ್ನೆಯಾಗಿಯೇ ಇದೆ.

ಈ ಎರಡರ ನಡುವಿನ ವ್ಯತ್ಯಾಸ ತಿಳಿಯಲು ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವುದು ಸುರಕ್ಷಿತ ವಿಧಾನ. ರೋಗಲಕ್ಷಣಗಳನ್ನು ಅವಲಂಬಿಸಿ ವೈದ್ಯರು ಇನ್ಫ್ಲುಯೆಂಜಾ ಅಥವಾ ಕೋವಿಡ್‌-19 ಎಂಬುದು ಕಂಡು ಹಿಡಿಯಲು ಸಹಾಯ ಮಾಡುತ್ತಾರೆ, ಮಾತ್ರವಲ್ಲ ಅದಕ್ಕೆ ಅನುಗುಣವಾಗಿ ಪರೀಕ್ಷೆಗಳನ್ನು ಸೂಚಿಸಬಹುದು. ಈ ಕುರಿತ ವಿಶೇಷ ವರದಿ ಇಲ್ಲಿದೆ ಓದಿ.

    ಹಂಚಿಕೊಳ್ಳಲು ಲೇಖನಗಳು