logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  National Biscuit Day 2023: ರಾಷ್ಟ್ರೀಯ ಬಿಸ್ಕತ್ತು ದಿನದ ಖುಷಿಗೆ ಬಾಯಲ್ಲಿ ನೀರೂರಿಸುವ ಬಿಸ್ಕತ್ತಿನ ಕೇಕ್‌, ಪುಡ್ಡಿಂಗ್‌ ರೆಸಿಪಿ ಇಲ್ಲಿದೆ

National Biscuit Day 2023: ರಾಷ್ಟ್ರೀಯ ಬಿಸ್ಕತ್ತು ದಿನದ ಖುಷಿಗೆ ಬಾಯಲ್ಲಿ ನೀರೂರಿಸುವ ಬಿಸ್ಕತ್ತಿನ ಕೇಕ್‌, ಪುಡ್ಡಿಂಗ್‌ ರೆಸಿಪಿ ಇಲ್ಲಿದೆ

Reshma HT Kannada

May 29, 2023 06:15 AM IST

ಬಿಸ್ಕತ್ತು ದಿನದಂದು ಬಿಸ್ಕತ್ತಿನಿಂದ ತಯಾರಿಸುವ ರೆಸಿಪಿಗಳ ಕುರಿತು ಇಲ್ಲಿ ವಿವರಿಸಲಾಗಿದೆ

    • ಪ್ರತಿ ವರ್ಷ ಮೇ 29 ರಂದು ರಾಷ್ಟ್ರೀಯ ಬಿಸ್ಕತ್ತು ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಆಚರಣೆಯಂದು ನಿಮ್ಮ ಬಾಯಿ ಸಿಹಿ ಮಾಡುವ ಸುಲಭ, ಸರಳವಾಗಿ ಮನೆಯಲ್ಲೇ ತಯಾರಿಸಬಹುದಾದ ಬಿಸ್ಕತ್ತು ರೆಸಿಪಿಗಳನ್ನು ಇಲ್ಲಿ ವಿವರಿಸಲಾಗಿದೆ. ಇದನ್ನು ನೀವು ಮನೆಯಲ್ಲಿ ಟ್ರೈ ಮಾಡಿ, ನಾಲಿಗೆ ಚಪಲ ತೀರಿಸಿಕೊಳ್ಳಿ.
ಬಿಸ್ಕತ್ತು ದಿನದಂದು ಬಿಸ್ಕತ್ತಿನಿಂದ ತಯಾರಿಸುವ ರೆಸಿಪಿಗಳ ಕುರಿತು ಇಲ್ಲಿ ವಿವರಿಸಲಾಗಿದೆ
ಬಿಸ್ಕತ್ತು ದಿನದಂದು ಬಿಸ್ಕತ್ತಿನಿಂದ ತಯಾರಿಸುವ ರೆಸಿಪಿಗಳ ಕುರಿತು ಇಲ್ಲಿ ವಿವರಿಸಲಾಗಿದೆ

ಬಿಸ್ಕತ್ಕು ಎಳೆಯರಿಗೆ ಮಾತ್ರವಲ್ಲ, ದೊಡ್ಡವರಿಗೂ ಇಷ್ಟವಾಗುವ ಸ್ನ್ಯಾಕ್ಸ್‌. ಪ್ರಪಂಚದಾದ್ಯಂತ ಹೆಚ್ಚು ಜನಪ್ರಿಯ ಸ್ನ್ಯಾಕ್‌ಗಳ ಪಟ್ಟಿಯಲ್ಲಿ ಬಿಸ್ಕತ್ತು ಸ್ನಾನ ಪಡೆದಿದೆ. ಬಿಸ್ಕತ್ತಿನ ಹುಟ್ಟನ್ನು ಸಂಭ್ರಮಿಸುವ ಉದ್ದೇಶದಿಂದ ಪ್ರತಿವರ್ಷ ಮೇ 29 ರಂದು ಬಿಸ್ಕತ್ತು ದಿನವನ್ನು ಆಚರಿಸಲಾಗುತ್ತದೆ.

ಟ್ರೆಂಡಿಂಗ್​ ಸುದ್ದಿ

Gold Rate Today: ಭಾನುವಾರ ಚಿನ್ನ, ಬೆಳ್ಳಿ ಎರಡರ ದರವೂ ಹೆಚ್ಚಳ; ಆಭರಣ ಖರೀದಿಸುವ ಯೋಚನೆ ಇದ್ದರೆ ಇಂದಿನ ಬೆಲೆ ಗಮನಿಸಿ

ಭಾರತದ ಅತಿದೊಡ್ಡ ಬಜಾಜ್ ಪಲ್ಸರ್‌ ಮಾರುಕಟ್ಟೆಗೆ; ಪಲ್ಸರ್ NS400Z ಬೈಕ್‌ ದರ 1.85 ಲಕ್ಷ ರೂ, ವಿನ್ಯಾಸ ವಿಶೇಷ ವಿವರ ಹೀಗಿದೆ

ತಿರುಮಲ ತಿರುಪತಿಯಲ್ಲಿ ನವದಂಪತಿಗೆ ವಿಶೇಷ ಶ್ರೀವಾರಿ ದರ್ಶನ ಟಿಕೆಟ್ ಪ್ರಕಟಿಸಿದ ಟಿಟಿಡಿ; ಎಷ್ಟಿವೆ ಕೋಟಾ, ದರ ಇತ್ಯಾದಿ ವಿವರ

Gold Rate Today: ಮತ್ತೆ ಆರಂಭವಾಯ್ತು ಚಿನ್ನ, ಬೆಳ್ಳಿ ದರದಲ್ಲಿನ ಏರಿಳಿತ; ಶನಿವಾರ ಚಿನ್ನದ ದರ ಇಳಿಕೆ, ಬೆಳ್ಳಿ ಏರಿಕೆ

ಭಿನ್ನ ಫ್ಲೇವರ್‌ಗಳು, ಆಕಾರ, ವಿನ್ಯಾಸದ ಮೂಲಕ ಬಿಸ್ಕತ್ತು ಗಮನ ಸೆಳೆಯುವುದು ಮಾತ್ರವಲ್ಲ, ಇದರ ರುಚಿಗೂ ಜನರು ಮಾರು ಹೋಗಿದ್ದಾರೆ. ಮೃದು, ಗರಿಗರಿ, ಸಿಹಿ ಹಾಗೂ ಉಪ್ಪಿನ ರುಚಿ, ಪ್ಲೇನ್‌ ಹಾಗೂ ಕ್ರೀಮ್‌ ಹೀಗೆ ವಿವಿಧ ವಯೋಮಾನದವರಿಗೆ ಇಷ್ಟವಾಗುವ ಬಿಸ್ಕತ್ತು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇಷ್ಟೇ ಅಲ್ಲದೆ ಮಧುಮೇಹಿಗಳಿಗೂ ಸಹ್ಯವಾಗುವ ಬಿಸ್ಕತ್ತುಗಳು ಈಗ ಲಭ್ಯ. ಟೀ ಅಥವಾ ಕಾಫಿ ಜೊತೆಗೆ ಬಿಸ್ಕತ್ತು ನೆಚ್ಚಿನ ಜೋಡಿ.

ಇದೆಲ್ಲದರ ಜೊತೆಗೆ ಬಿಸ್ಕತ್ತು ಅಥವಾ ಬಿಸ್ಕತ್ತು ಹುಡಿಯಿಂದ ಹಲವು ರೆಸಿಪಿಗಳನ್ನು ತಯಾರಿಸಲಾಗುತ್ತದೆ. ಕೇಕ್‌ಗಳು, ಟ್ರೈಪಲ್ಸ್‌ಗಳು, ಪೈಗಳು ಅವುಗಳಲ್ಲಿ ಕೆಲವು. ಇದರೊಂದಿಗೆ ಕೆಲವು ಸಮುದಾಯದ ಸಂಪ್ರದಾಯಗಳಲ್ಲಿ ಬಿಸ್ಕತ್ತುಗಳು ಸಾಂಸ್ಕೃತಿಕ ಮಹತ್ವವನ್ನೂ ಹೊಂದಿವೆ.

ಬಿಸ್ಕತ್ತು ದಿನದ ಖುಷಿಯಂದು ಈ ಕೆಲವು ಖಾದ್ಯಗಳನ್ನು ನೀವು ಮನೆಯಲ್ಲಿ ತಯಾರಿಸಿ ತಿನ್ನಿ.

ಬಿಸ್ಕತ್ತು ಪುಡ್ಡಿಂಗ್‌

ಬೇಕಾಗುವ ಸಾಮಗ್ರಿಗಳು: ಬಿಸ್ಕತ್ತು - 4 (ಪುಡಿ ಮಾಡಿ), ಬೆಣ್ಣೆ - 2 ಚಮಚ (ಕರಗಿಸಿದ್ದು), ಹಾಲು - 2 ಕಪ್‌, ಸಕ್ಕರೆ - 1 ಕಪ್‌, ಮೊಟ್ಟೆ - 4 ದೊಡ್ಡದು, ವೆನಿಲ್ಲಾ ಎಕ್ಸ್‌ಟ್ರಾಕ್ಟ್‌ - 1 ಚಮಚ

ತಯಾರಿಸುವ ವಿಧಾನ: ಮೊದಲು ಓವೆನ್‌ ಅನ್ನು 350 ಡಿಗ್ರಿ ಪ್ಯಾರನ್‌ಹೀಟ್‌ನಲ್ಲಿ ಬಿಸಿ ಮಾಡಿಕೊಳ್ಳಿ. ಅಗಲ ಪಾತ್ರೆಯೊಂದರಲ್ಲಿ ಬಿಸ್ಕತ್ತು ಹಾಕಿ, ಅದಕ್ಕೆ 1 ಕಪ್‌ ಹಾಲು ಸೇರಿಸಿ. 5 ರಿಂದ 10 ನಿಮಿಷ ಅಥವಾ ಬಿಸ್ಕತ್ತು ಕರಗುವವರೆಗೂ ಬಿಡಿ. ನಂತರ ಇದಕ್ಕೆ ಸಕ್ಕರೆ ಹಾಗೂ ಒಂದು ಮೊಟ್ಟೆ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ನಂತರ ಉಳಿದ ಮೊಟ್ಟೆಯನ್ನು ಒಂದೇ ಸಲ ಹಾಕಿ ಎಲ್ಲವನ್ನೂ ಚೆನ್ನಾಗಿ ಕಲೆಸಿ. ಅದಕ್ಕೆ ಕರಗಿಸಿದ ಬೆಣ್ಣೆ, ವೆನಿಲ್ಲಾ ಹಾಗೂ ಉಳಿದ ಹಾಲು ಸೇರಿಸಿ ಎಲ್ಲವನ್ನೂ ಮಿಶ್ರಣ ಮಾಡಿ. ನಂತರ ಈ ಮಿಶ್ರಣವನ್ನು ಪುಡ್ಡಿಂಗ್‌ ಪಾತ್ರೆಗೆ ಸುರಿಯಿರಿ. ಇದನ್ನು 40 ರಿಂದ 50 ನಿಮಿಷ ಬೇಯಿಸಿ, ನಂತರ ತಣ್ಣಗಾಗಲು ಬಿಡಿ. ಇದರ ಮೇಲೆ ಸಿರಪ್‌ ಸುರಿದು ತಿನ್ನಲು ಕೊಡಿ.

ಬಿಸ್ಕತ್ತು ಕೇಕ್‌

ಬೇಕಾಗುವ ಸಾಮಗ್ರಿಗಳು: ಗ್ಲೂಕೋಸ್‌ ಬಿಸ್ಕತ್ತು - 250 ಗ್ರಾಂ, ಚಾಕೋಲೇಟ್‌ - 80 ಗ್ರಾಂ, ಹಾಲು - ಅರ್ಧ ಕಪ್‌, ಕಾಫಿ ಪುಡಿ - 1/2 ಟೇಬಲ್‌ ಚಮಚ, ಕೋಕಾ ಪುಡಿ - 1 ಟೇಬಲ್‌ ಚಮಚ.

ತಯಾರಿಸುವ ವಿಧಾನ: ಒಂದು ಸಾಸ್‌ ಪಾನ್‌ಗೆ ಮುಕ್ಕಾಲು ಕಪ್‌ ನೀರು ಹಾಕಿ, ಇದನ್ನು ಸಣ್ಣ ಉರಿಯಲ್ಲಿ ಬಿಸಿ ಮಾಡಿ. ನೀರು ಸ್ವಲ್ಪ ಬಿಸಿಯಾದರೆ ಸಾಕು, ಆದರೆ ಅತಿಯಾಗಿ ಕುದಿಯುವುದು ಬೇಡ. ಈ ನೀರನ್ನು ಮಧ್ಯಮ ಗಾತ್ರದ ಬೌಲ್‌ಗೆ ಹಾಕಿ. ಅದಕ್ಕೆ ಇನ್‌ಸ್ಟಾಂಟ್‌ ಕಾಫಿ ಸೇರಿಸಿ. ಕಾಫಿ ಇಷ್ಟವಿಲ್ಲದೇ ಇರುವವರು ಚಾಕೊಲೇಟ್‌ ಸಿರಪ್‌, ಕೋಕಾ ಪುಡಿ ಕೂಡ ಸೇರಿಸಬಹುದು. ಇದನ್ನು ಚೆನ್ನಾಗಿ ಮಿಶ್ರಣ ಮಾಡಿ ಒಂದೆಡೆ ಇಡಿ.

ಈಗ ನೀರು ಕಾಯಿಸಿದ ಪಾನ್‌ಗೆ ಅರ್ಧ ಕಪ್‌ ಹಾಲು ಹಾಕಿ, ಅದಕ್ಕೆ ಒಂದು ಚಮಚ ಕೋಕಾ ಪುಡಿ ಸೇರಿಸಿ. ಇದನ್ನು ಗಂಟಿಲ್ಲದಂತೆ ಚೆನ್ನಾಗಿ ಕಲೆಸಿ. ಇದಕ್ಕೆ ಒಂದು ಚಮಚ ಸಕ್ಕರೆ ಸೇರಿಸಿ. ಸ್ಟೌ ಉರಿ ಸಣ್ಣ ಮಾಡಿ ಸಕ್ಕರೆ ಕರಗುವವರೆಗೂ ಚೆನ್ನಾಗಿ ಕಲೆಸಿ. ಕೋಕಾ ಮಿಶ್ರಣ ಚೆನ್ನಾಗಿ ಬೇಯುವವರೆಗೂ ತಿರುಗಿಸುತ್ತಲೇ ಇರಿ. ಇದು ಚೆನ್ನಾಗಿ ಬೆಂದಿದೆ ಅಥವಾ ಕಾದಿದೆ ಎಂದಾದ ಮೇಲೆ ಸಣ್ಣ ಮಧ್ಯಮ ಗಾತ್ರದಲ್ಲಿ 2 ರಿಂದ 3 ನಿಮಿಷ ಬಿಸಿ ಮಾಡಿ, ಅಲ್ಲಿಯವರೆಗೂ ತಿರುಗಿಸುತ್ತಲೇ ಇರಿ.

ಸ್ಟೌ ಆರಿಸಿ ಮೂರು ನಿಮಿಷಗಳ ನಂತರ ಕತ್ತರಿಸಿದ ಚಾಕೊಲೇಟ್‌ ಸೇರಿಸಿ. ಚಾಕೊಲೇಟ್‌ ಮೇಲಿನ ಮಿಶ್ರಣದ ಜೊತೆ ಕರಗುವವರೆಗೂ ತಿರುಗಿಸಿ. ಇದಕ್ಕೆ ಅವಶ್ಯ ಎನ್ನಿಸಿದರೆ ಒಣಹಣ್ಣುಗಳನ್ನು ಸೇರಿಸಬಹುದು. ಸಕ್ಕರೆ ನೋಡಿಕೊಂಡು ಬೇಕು ಎನ್ನಿಸಿದರೆ ಇನ್ನಷ್ಟು ಸಕ್ಕರೆ ಸೇರಿಸಬಹುದು. ಇದನ್ನು ತಣಿಯಲು ಬಿಡಿ.

ನಂತರ ಪ್ರತಿ ಬಿಸ್ಕತ್ತನ್ನು ಕಾಫಿಯಲ್ಲಿ ಅದ್ದಿ, ಹೆಚ್ಚು ಹೊತ್ತು ನೆನೆಯಲು ಬಿಡಬೇಡಿ. ನಂತರ ಪರ್ಚ್‌ಮೆಂಟ್‌ ಪೇಪರ್‌ನಲ್ಲಿ ಮುಚ್ಚಿದ ಪ್ಯಾನ್‌ನಲ್ಲಿ ಬಿಸ್ಕತ್ತು ಇರಿಸಿ. ಹೀಗೆ ಕೆಲವು ಬಿಸ್ಕತ್ತು ಅದ್ದಿ ಪಾನ್‌ನಲ್ಲಿ ಲೈನ್‌ ಆಗಿ ಇರಿಸಿ. ಹೀಗೆ ಎರಡು ಮೂರು ಪದರ ಮಾಡಿ. ನಂತರ ಅರ್ಧದಷ್ಟು ಚಾಕೊಲೇಟ್‌ ಸಾಸ್‌ ಅನ್ನು ಬಿಸ್ಕತ್ತು ಪದರಗಳ ಮೇಲೆ ಸುರಿಯಿರಿ ಅದನ್ನು ಚಾಕು ಸಹಾಯದಿಂದ ಸಮವಾಗಿ ಹರಡಿ. ಹೀಗೆ ನಿಮಗೆ ಬೇಕು ಅನ್ನಿಸಿದ್ದಷ್ಟು ಲೇಯರ್‌ ಮಾಡಿ. ಉಳಿದ ಚಾಕೊಲೇಟ್‌ ಸಾಸ್‌ ಸುರಿಯಿರಿ. ಇದನ್ನು ಫಾಯಿಲ್‌ ಪೇಪರ್‌ನಿಂದ ಮುಚ್ಚಿ. ನಂತರ ಇದನ್ನು ಫ್ರಿಜ್‌ನಲ್ಲಿ ಕನಿಷ್ಠ 4 ರಿಂದ 5 ಗಂಟೆಗಳ ಕಾಲ ಫ್ರಿಜ್‌ನಲ್ಲಿ ಇರಿಸಿ.

ಬಿಸ್ಕತ್ತು ಕಿಟ್‌ಕ್ಯಾಟ್‌

ಬೇಕಾಗುವ ಸಾಮಗ್ರಿಗಳು: ಮೊಟ್ಟೆ - 6, ಸಕ್ಕರೆ - ಅರ್ಧ ಕಪ್‌, ಮೈದಾಹಿಟ್ಟು - ಅರ್ಧ ಕಪ್‌, ನಿಂಬೆಹಣ್ಣು - ಅರ್ಧ, ಕಾಗ್ನ್ಯಾಕ್‌ ಸಿರಪ್‌ - 1 ಚಮಚ

ತಯಾರಿಸುವ ವಿಧಾನ: ಮೊಟ್ಟೆಯ ಹಳದಿ ಭಾಗಕ್ಕೆ ಸಕ್ಕರೆ ಸೇರಿಸಿ ಚೆನ್ನಾಗಿ ತಿರುಗಿಸಿ. ಅದಕ್ಕೆ ಹಿಟ್ಟು(ಮೈದಾಹಿಟ್ಟು ಅಥವಾ ನಿಮ್ಮ ಇಷ್ಟದ ಹಿಟ್ಟು), ತುರಿದ ನಿಂಬೆಸಿಪ್ಪೆ ಹಾಗೂ ಸ್ವಲ್ಪ ಕಾಗ್ನ್ಯಾಕ್‌ ಸೇರಿಸಿ ಮಿಶ್ರಣ ಮಾಡಿ. ಮೊಟ್ಟೆಯ ಬಿಳಿ ಭಾಗಕ್ಕೆ ಚಿಟಿಕೆ ಉಪ್ಪು ಸೇರಿಸಿ ಮಿಶ್ರಣ ಮಾಡಿ. ಉಳಿದ ಮಿಶ್ರಣದೊಂದಿಗೆ ಸೇರಿಸಿ ಕಲೆಸಿ. ಎಣ್ಣೆ ಸವರಿದ ಬೇಕಿಂಗ್‌ ಪೇಪರ್‌ ಹಾಕಿದ ಆಯತಾಕಾರದ ಟ್ರೇಗೆ ಈ ಮಿಶ್ರಣವನ್ನು ಸುರಿಯಿರಿ. ಇದನ್ನು ಮೊದಲೇ ಬಿಸಿ ಮಾಡಿಟ್ಟುಕೊಂಡ ಓವೆನ್‌ನಲ್ಲಿ ಚೆನ್ನಾಗಿ ಬೇಯಿಸಿ. ಇದು ಚೆನ್ನಾಗಿ ತಣಿದ ಮೇಲೆ ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿ ತಿನ್ನಿ.

    ಹಂಚಿಕೊಳ್ಳಲು ಲೇಖನಗಳು