logo
ಕನ್ನಡ ಸುದ್ದಿ  /  Nation And-world  /  Neiphiu Rio Takes Oath As Nagaland Chief Minister For 5th Term

Neiphiu Rio Nagaland CM: ನಾಗಲ್ಯಾಂಡ್‌ ಮುಖ್ಯಮಂತ್ರಿಯಾಗಿ ಸತತ 5ನೇ ಬಾರಿ ನೈಫಿಯು ರಿಯೊ ಪ್ರಮಾಣವಚನ ಸ್ವೀಕಾರ

Praveen Chandra B HT Kannada

Mar 07, 2023 03:20 PM IST

Neiphiu Rio Nagaland CM: ನಾಗಲ್ಯಾಂಡ್‌ ಮುಖ್ಯಮಂತ್ರಿಯಾಗಿ ಸತತ 5ನೇ ಬಾರಿ ನೈಫಿಯು ರಿಯೊ ಪ್ರಮಾಣವಚನ ಸ್ವೀಕಾರ(PTI Photo)(PTI03_07_2023_000098B)

    • ನೂತನ ಮುಖ್ಯಮಂತ್ರಿಯಾಗಿ ನೈಫಿಯು ರಿಯೊ ಪ್ರಮಾಣ ವಚನ ಸ್ವೀಕರಿಸಿದ್ದು, ಪ್ರಮಾಣ ವಚನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದಾರೆ.
Neiphiu Rio Nagaland CM: ನಾಗಲ್ಯಾಂಡ್‌ ಮುಖ್ಯಮಂತ್ರಿಯಾಗಿ ಸತತ 5ನೇ ಬಾರಿ ನೈಫಿಯು ರಿಯೊ ಪ್ರಮಾಣವಚನ ಸ್ವೀಕಾರ(PTI Photo)(PTI03_07_2023_000098B)
Neiphiu Rio Nagaland CM: ನಾಗಲ್ಯಾಂಡ್‌ ಮುಖ್ಯಮಂತ್ರಿಯಾಗಿ ಸತತ 5ನೇ ಬಾರಿ ನೈಫಿಯು ರಿಯೊ ಪ್ರಮಾಣವಚನ ಸ್ವೀಕಾರ(PTI Photo)(PTI03_07_2023_000098B) (PTI)

ನವದೆಹಲಿ: ನಾಗಾಲ್ಯಾಂಡ್‌ನ ನೂತನ ಮುಖ್ಯಮಂತ್ರಿಯಾಗಿ ನೈಫಿಯು ರಿಯೊ ಪ್ರಮಾಣ ವಚನ ಸ್ವೀಕರಿಸಿದ್ದು, ಪ್ರಮಾಣ ವಚನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದಾರೆ. ಇಂದು ಮೇಘಾಲಯದ ಮುಖ್ಯಮಂತ್ರಿಯಾಗಿ ಕೊರ್ನಾಡ್‌ ಸಂಗ್ಮಾ ಕೂಡ ಪ್ರಮಾಣ ಸ್ವೀಕರಿಸಿದ್ದು, ಈ ವರದಿ ಇಲ್ಲಿದೆ ಓದಿ.

ಟ್ರೆಂಡಿಂಗ್​ ಸುದ್ದಿ

10 ಗ್ರಾಂ ಚಿನ್ನಕ್ಕೆ 2 ಲಕ್ಷ ಆಗುವ ಕಾಲ ದೂರವಿಲ್ಲ, ಏಕೆ ಏರುತ್ತಿದೆ ಬಂಗಾರದ ಬೆಲೆ? ಇಲ್ಲಿದೆ ನೀವು ತಿಳಿಯಬೇಕಾದ 9 ಅಂಶಗಳು

Gold Rate Today: ಸೋಮವಾರ ತಟಸ್ಥವಾಗುವ ಮೂಲಕ ಕೊಂಚ ನೆಮ್ಮದಿ ಮೂಡಿಸಿದ ಹಳದಿ ಲೋಹ, ಇಂದು ಬೆಳ್ಳಿ ದರವೂ ಇಳಿಕೆ

Tik Tok Star Murder: ಖ್ಯಾತ ಟಿಕ್‌ ಟಾಕ್‌ ಸ್ಟಾರ್‌ ಓಂ ಫಹಾದ್‌ ಭೀಕರ ಹತ್ಯೆ, ಕಾರಣವೇನು

Gold Rate: ಬಡವರಿಗೆ ಗಗನ ಕುಸುಮವಾಯ್ತು ಚಿನ್ನ; ಮತ್ತಷ್ಟು ಹೆಚ್ಚಾಯ್ತು ಬೆಳ್ಳಿ , ಬಂಗಾರದ ಬೆಲೆ

72 ವರ್ಷ ವಯಸ್ಸಿನ ಹಿರಿಯ ರಾಜಕಾರಣಿ ನೈಫಿಯು ರಿಯೊಗೆ ರಾಜ್ಯಪಾಲ ಲಾ ಗಣೇಶನ್‌ ಅವರು ಗೌಪ್ಯತಾ ಪ್ರಮಾಣವಚನ ಬೋಧಿಸಿದ್ದಾರೆ. ಇದೇ ಸಮಯದಲ್ಲಿ ಟಿಆರ್‌ ಝೆಲಿಯಾಂಗ್‌ ಮತ್ತು ವೈ ಪಟೊನ್‌ ಅವರು ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಇಂದು ಒಟ್ಟು 9 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇವರಲ್ಲಿ ಇಬ್ಬರು ಉಪಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಇದೇ ಮೊದಲ ಬಾರಿಗೆ ನಾಗಲ್ಯಾಂಡ್‌ ಅಸೆಂಬ್ಲಿಗೆ ಎರಡು ಮಹಿಳೆಯರು ಆಯ್ಕೆಯಾಗಿದ್ದಾರೆ. ಇಲ್ಲಿಯವರೆಗೆ ಮಹಿಳಾ ಶಾಸಕಿಯರು ಆಯ್ಕೆಯಾಗಿರಲಿಲ್ಲ.

ನವದೆಹಲಿ: ನಾಗಾಲ್ಯಾಂಡ್‌ನ ನೂತನ ಮುಖ್ಯಮಂತ್ರಿಯಾಗಿ ನೈಫಿಯು ರಿಯೊ ಪ್ರಮಾಣ ವಚನ ಸ್ವೀಕರಿಸಿದ್ದು, ಪ್ರಮಾಣ ವಚನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದಾರೆ. ಇಂದು ಮೇಘಾಲಯದ ಮುಖ್ಯಮಂತ್ರಿಯಾಗಿ ಕೊರ್ನಾಡ್‌ ಸಂಗ್ಮಾ ಕೂಡ ಪ್ರಮಾಣ ಸ್ವೀಕರಿಸಿದ್ದು, ಈ ವರದಿ ಇಲ್ಲಿದೆ ಓದಿ.

72 ವರ್ಷ ವಯಸ್ಸಿನ ಹಿರಿಯ ರಾಜಕಾರಣಿ ನೈಫಿಯು ರಿಯೊಗೆ ರಾಜ್ಯಪಾಲ ಲಾ ಗಣೇಶನ್‌ ಅವರು ಗೌಪ್ಯತಾ ಪ್ರಮಾಣವಚನ ಬೋಧಿಸಿದ್ದಾರೆ. ಇದೇ ಸಮಯದಲ್ಲಿ ಟಿಆರ್‌ ಝೆಲಿಯಾಂಗ್‌ ಮತ್ತು ವೈ ಪಟೊನ್‌ ಅವರು ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಇದೇ ಮೊದಲ ಬಾರಿಗೆ ನಾಗಲ್ಯಾಂಡ್‌ ಅಸೆಂಬ್ಲಿಗೆ ಎರಡು ಮಹಿಳೆಯರು ಆಯ್ಕೆಯಾಗಿದ್ದಾರೆ. ಇಲ್ಲಿಯವರೆಗೆ ಮಹಿಳಾ ಶಾಸಕಿಯರು ಆಯ್ಕೆಯಾಗಿರಲಿಲ್ಲ.

ಸುಮಾರು 60 ಸದಸ್ಯರ ನಾಗಾಲ್ಯಾಂಡ್‌ ಅಸೆಂಬ್ಲಿಯಲ್ಲಿ ಎನ್‌ಡಿಪಿಪಿ ಮತ್ತು ಬಿಜೆಪಿ ಮೈತ್ರಿಕೂಟವು ಒಟ್ಟು 37 ಸೀಟುಗಳನ್ನು ಗೆದ್ದುಕೊಂಡಿದೆ. ಇದರಲ್ಲಿ ಎನ್‌ಡಿಪಿಇಪಿಯು ಗರಿಷ್ಠ ಅಂದರೆ 25‌ ಸ್ಥಾನಗಳನ್ನು ಗೆದ್ದುಕೊಂಡಿದೆ. ಬಿಜೆಪಿ ಹನ್ನೆರಡು ಸ್ಥಾನಗಳನ್ನು ಗೆದ್ದಿದೆ. ಪ್ರಮಾಣವಚನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಿದ್ದಾರೆ.

ವಿಧಾನಸಭೆ ಚುನಾವಣೆಗೂ ಮೊದಲು ಸೀಟು ಹಂಚಿಕೆ ಒಪ್ಪಂದದ ಪ್ರಕಾರ, ಎನ್‌ಡಿಪಿಪಿ 40 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೆ, ಮಿತ್ರಪಕ್ಷ ಬಿಜೆಪಿ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಮುಖ್ಯಮಂತ್ರಿ ನೆಫಿಯು ರಿಯೊ ನೇತೃತ್ವದ ಎನ್‌ಡಿಪಿಪಿ, 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಹಿಂದಿನ ಚುನಾವಣೆಯಲ್ಲಿ ಈ ಮೈತ್ರಿಕೂಡ 30 ಸ್ಥಾನಗಳನ್ನು ಗೆದ್ದಿದ್ದರೆ, ಎನ್‌ಪಿಎಫ್ 26 ಸ್ಥಾನಗಳನ್ನು ಗೆದ್ದುಕೊಂಡಿತ್ತು.

2003 ರವರೆಗೆ ರಾಜ್ಯವನ್ನು ಆಳಿದ ಆದರೆ ಪ್ರಸ್ತುತ ಸದನದಲ್ಲಿ ಯಾವುದೇ ಸದಸ್ಯರನ್ನು ಹೊಂದಿಲ್ಲದ ಕಾಂಗ್ರೆಸ್ ಮತ್ತು ಎನ್‌ಪಿಎಫ್ ಕ್ರಮವಾಗಿ 23 ಮತ್ತು 22 ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು.

1963 ರಲ್ಲಿ ನಾಗಾಲ್ಯಾಂಡ್‌ ರಾಜ್ಯ ರಚನೆಯಾದ ನಂತರ, ರಾಜ್ಯವು ಇದುವರೆಗೂ 14 ವಿಧಾನಸಭಾ ಚುನಾವಣೆಗಳಿಗೆ ಸಾಕ್ಷಿಯಾಗಿದೆ. ಗಮನಾರ್ಹ ಸಂಗತಿ ಎಂದರೆ ರಾಜ್ಯದಲ್ಲಿ ಇದುವರೆಗೂ ಯಾವುದೇ ಮಹಿಳಾ ಶಾಸಕಿ ಆಯ್ಕೆಯಾಗಿರಲಿಲ್ಲ. ಇದೇ ಮೊದಲ ಬಾರಿಗೆ ಇಬ್ಬರು ಶಾಸಕಿಯರು ಆಯ್ಕೆಯಾಗಿದ್ದಾರೆ. ಈ ವರ್ಷದ ಚುನಾವಣೆಯಲ್ಲಿ ಸ್ಪರ್ಧಿಸಿದ 183 ಅಭ್ಯರ್ಥಿಗಳಲ್ಲಿ ನಾಲ್ವರು ಮಹಿಳೆಯರು ಇದ್ದರು.

ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್​​ಪಿಪಿ) ಮುಖ್ಯಸ್ಥ ಕಾನ್ರಾಡ್ ಸಂಗ್ಮಾ ಅವರು ಇಂದು ಮೇಘಾಲಯದ ಮುಖ್ಯಮಂತ್ರಿಯಾಗಿ ಸತತ 2ನೇ ಅವಧಿಗೆ ಇತರ 11 ಸಚಿವರೊಂದಿಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರೆಸ್ಟೋನ್ ಟೈನ್ಸಾಂಗ್ ಹಾಗೂ ಸನ್ಯಾಬ್ಲಾಂಗ್ ಧಾರ್- ಈ ಇಬ್ಬರು ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಮೇಘಾಲಯ ವಿಧಾನಸಭೆಯ 60 ಸ್ಥಾನಗಳಿಗೆ ಫೆಬ್ರವರಿ 27 ರಂದು ನಡೆದ ಚುನಾವಣೆಯಲ್ಲಿ ಕಾನ್ರಾಡ್ ಸಂಗ್ಮಾ ನೇತೃತ್ವದ ಎನ್‌ಪಿಪಿ 26 ಸ್ಥಾನಗಳನ್ನು ಗೆದ್ದು, ಮೈತ್ರಿಕೂಟದ 45 ಶಾಸಕರ ಬೆಂಬಲದೊಂದಿದೆ ಅಧಿಕಾರ ಮರಳಿ ಪಡೆದಿದೆ.

    ಹಂಚಿಕೊಳ್ಳಲು ಲೇಖನಗಳು