logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Nirjala Ekadashi 2023: ಮನೆಯಲ್ಲಿ ಸುಖ, ಸಂಪತ್ತು ನೆಲೆಸಲು ಏಕಾದಶಿಯಂದು ಈ ವಸ್ತುಗಳನ್ನು ಮನೆಗೆ ತನ್ನಿ; ವಿಷ್ಣು ಕೃಪೆಗೆ ಪಾತ್ರರಾಗಿ

Nirjala Ekadashi 2023: ಮನೆಯಲ್ಲಿ ಸುಖ, ಸಂಪತ್ತು ನೆಲೆಸಲು ಏಕಾದಶಿಯಂದು ಈ ವಸ್ತುಗಳನ್ನು ಮನೆಗೆ ತನ್ನಿ; ವಿಷ್ಣು ಕೃಪೆಗೆ ಪಾತ್ರರಾಗಿ

Reshma HT Kannada

May 30, 2023 09:45 AM IST

ನಿರ್ಜಲ ಏಕಾದಶಿ 2023

    • Nirjala Ekadashi: ನಿರ್ಜಲ ಏಕಾದಶಿಯಂದು ವಿಷ್ಣುವಿನ ಆರಾಧನೆ ಮಾಡಲಾಗುತ್ತದೆ, ಜೊತೆಗೆ ಕಠಿಣ ಉಪವಾಸ ವೃತ ಕೈಗೊಳ್ಳುವ ಮೂಲಕ ದೇವರನ್ನು ಒಲಿಸಿಕೊಳ್ಳಲಾಗುತ್ತದೆ. ಇದರೊಂದಿಗೆ ಈ ಕೆಲವು ವಸ್ತುಗಳನ್ನು ಮನೆಗೆ ತರುವುದಿಂದ ಸದಾ ಸುಖ, ಶಾಂತಿ ನೆಲೆಸಿರುತ್ತದೆ ಎಂದು ಹೇಳಲಾಗುತ್ತದೆ. ಅಂತಹ ವಸ್ತುಗಳು ಯಾವುವು ನೋಡಿ.
ನಿರ್ಜಲ ಏಕಾದಶಿ 2023
ನಿರ್ಜಲ ಏಕಾದಶಿ 2023

ಜೇಷ್ಠ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ಪ್ರತಿವರ್ಷ ನಿರ್ಜಲ ಏಕಾದಶಿ ಉಪವಾಸವನ್ನು ಆಚರಿಸಲಾಗುತ್ತದೆ. ಈ ವರ್ಷ ನಾಳೆ ಅಂದರೆ ಮೇ 31 ರಂದು ನಿರ್ಜಲ ಏಕಾದಶಿ ಇದೆ. ನಿರ್ಜಲ ಏಕಾದಶಿಯಂದು ಉಪವಾಸ ಮಾಡುವುದರಿಂದ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬುದು ನಂಬಿಕೆ.

ಟ್ರೆಂಡಿಂಗ್​ ಸುದ್ದಿ

Viral Video: ತೂಕ ಇಳಿಸುವ ಹುಚ್ಚು, ಜಿಮ್‌ನಲ್ಲಿ ಚಿತ್ರಹಿಂಸೆ ಕೊಟ್ಟು ಪುತ್ರನನ್ನು ಕೊಂದ ಪಾಪಿ ಪತಿ, ಕಣ್ಣೀರು ಹಾಕಿದ ತಾಯಿ

ಐಸಿಎಸ್‌ಇ ಐಎಸ್‌ಸಿ ಫಲಿತಾಂಶ ಪ್ರಕಟ, 10ನೇ ತರಗತಿ ಪ್ರಮಾಣ ಶೇ 99.47, ಐಎಸ್‌ಸಿ ಫಲಿತಾಂಶ ಶೇ 98.19

ಇಂದು ಬೆಳಗ್ಗೆ 11 ಗಂಟೆಗೆ ಸಿಐಎಸ್‌ಇ 10, 12ನೇ ತರಗತಿ ಫಲಿತಾಂಶ ಪ್ರಕಟ; ಲಿಂಕ್, ವೆಬ್‌ಸೈಟ್ ವಿವರ ಇಲ್ಲಿದೆ -ICSE Result

Gold Rate Today: ಭಾನುವಾರ ಚಿನ್ನ, ಬೆಳ್ಳಿ ಎರಡರ ದರವೂ ಹೆಚ್ಚಳ; ಆಭರಣ ಖರೀದಿಸುವ ಯೋಚನೆ ಇದ್ದರೆ ಇಂದಿನ ಬೆಲೆ ಗಮನಿಸಿ

ಭಗವಾನ್‌ ವಿಷ್ಣುವನ್ನು ಪೂಜಿಸುವ ಈ ದಿನದಂದು ಉಪಪಾನ ವೃತ್ರ ಕೈಗೊಳ್ಳುವುದರಿಂದ ವರ್ಷದಲ್ಲಿ ಬರುವ ಎಲ್ಲಾ ಏಕಾದಶಿಗಳ ಫಲವು ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯೂ ಇದೆ.

ನಿರ್ಜಲ ಏಕಾದಶಿಯಂದು ವಿಷ್ಣು ಹಾಗೂ ಲಕ್ಷ್ಮೀಯನ್ನು ಒಲಿಸಿಕೊಳ್ಳಲು ಹಾಗೂ ಇವರಿಬ್ಬರ ಆಶೀರ್ವಾದ ಪಡೆಯಲು ಕೆಲವು ವಸ್ತುಗಳನ್ನು ಮನೆಗೆ ತರಬೇಕು. ಆ ಮೂಲಕ ದೇವರ ಕೃಪೆಯಿಂದ ಮನೆಯಲ್ಲಿ ಸದಾ ಸುಖ, ಶಾಂತಿ, ನೆಮ್ಮದಿ ಸಂಪತ್ತು ನೆಲೆಸಿರುತ್ತದೆ ಎನ್ನಲಾಗುತ್ತದೆ.

ಹಾಗಾದರೆ ನಿರ್ಜಲ ಏಕಾದಶಿಯಂದು ಯಾವೆಲ್ಲಾ ವಸ್ತುಗಳನ್ನು ತಂದರೆ ಉತ್ತಮ ನೋಡಿ.

ತೆಂಗಿನಕಾಯಿ

ನಿರ್ಜಲ ಏಕಾದಶಿಯಂದು ತೆಂಗಿನಕಾಯಿ ಖರೀದಿಸಿ ತಂದು ಲಕ್ಷ್ಮೀ ಹಾಗೂ ವಿಷ್ಣುವಿನ ಮುಂದೆ ಇರಿಸಿ ಪೂಜೆ ಮಾಡಬೇಕು. ನಂತರ ಆ ತೆಂಗಿನಕಾಯಿಯನ್ನು ಹಣದ ಪೆಟ್ಟಿಗೆಯ ಬಳಿ ಇರಿಸಬೇಕು ಅಥವಾ ಕಪಾಟಿನಲ್ಲಿ ಇರಿಸಬಹುದು. ಸಾಲದಲ್ಲಿದ್ದವರು ಅಥವಾ ಹಣದ ಸಮಸ್ಯೆಯಿಂದ ಬಳಲುತ್ತಿರುವವರು ಈ ರೀತಿ ಮಾಡುವುದರಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದು ಎನ್ನಲಾಗುತ್ತದೆ.

ನವಿಲುಗರಿ

ಭಗವಾನ್‌ ವಿಷ್ಣುವಿಗೆ ನವಿಲುಗರಿಯ ಮೇಲೆ ಪಂಚಪ್ರಾಣ. ಅಂದರೆ ಶ್ರೀ ಕೃಷ್ಣ ಪರಮಾತ್ಮನು ವಿಷ್ಣುವಿನ ಇನ್ನೊಂದು ಅವತಾರವಾದ ಕಾರಣ ನಿರ್ಜಲ ಏಕಾದಶಿಯಂದು ನವಿಲುಗರಿಗಳನ್ನು ತಂದು ಮನೆಯಲ್ಲಿ ಇರಿಸುವುದು ಉತ್ತಮ. ಇದರಿಂದ ಮನೆ ಹಾಗೂ ಮನೆಯ ಸದಸ್ಯ ಜೀವನದಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.

ತುಳಸಿ ಗಿಡ

ತುಳಸಿ ಪ್ರಿಯ ವಿಷ್ಣುವಿನ ಆಚರಣೆಯಾದ ನಿರ್ಜಲ ಏಕಾದಶಿಯಂದು ತುಳಸಿಗಿಡವನ್ನು ನೆಡುವುದು ಅತ್ಯಂತ ಮಂಗಳಕರ ಎನ್ನಲಾಗುತ್ತದೆ. ಶೃದ್ಧ ಭಕ್ತಿ ಭಾವದಿಂದ ತುಳಸಿ ಗಿಡವನ್ನು ನೆಟ್ಟು ಪೂಜಿಸುವುದರಿಂದ ವಿಷ್ಣು ಒಲಿಯುತ್ತಾನೆ ಎನ್ನುವ ನಂಬಿಕೆ ಇದೆ. ತುಳಸಿ ಗಿಡ ಧಾರ್ಮಿಕ ಸಂಕೇತದೊಂದಿಗೆ ಧನಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ ಎನ್ನುವ ಮಾತು ಇದೆ.

ಶಂಖ

ಪ್ರತಿದಿನ ಶಂಖ ಊದುವ ಮೂಲಕ ಭಗವಾನ್‌ ವಿಷ್ಣುವಿನ ಕೃಪೆಗೆ ಪಾತ್ರರಾಗಬಹುದು ಎಂಬುದು ಎಲ್ಲರಿಗೂ ಗೊತ್ತು. ಸಾಮಾನ್ಯವಾಗಿ ವಿಷ್ಣುವಿನ ಆರಾಧನೆಯಲ್ಲಿ ಶಂಖ ಊದದೇ ಇರುವುದಿಲ್ಲ. ನಿರ್ಜಲ ಏಕಾದಶಿಯಂದು ಮನೆಗೆ ಶಂಖ ತರುವುದರಿಂದ ವಿಷ್ಣುವಿನ ಆಶೀರ್ವಾದ ಸದಾ ನಮ್ಮ ಮೇಲೆ ನೆಲೆಸಲಿದೆ ಎನ್ನಲಾಗುತ್ತದೆ.

ಮಾಹಿತಿ: ಅಂತರ್ಜಾಲ

ಇದನ್ನೂ ಓದಿ

Nirjala ekadashi 2023: ನಿರ್ಜಲ ಏಕಾದಶಿಯಂದು ತಾಯಿ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ; ಆರ್ಥಿಕ ಸಂಕಷ್ಟ ನಿವಾರಣೆ ಎನ್ನುತ್ತಾರೆ ಆಸ್ತಿಕರು

ವರ್ಷದಲ್ಲಿ 24 ಏಕಾದಶಿ ಬರುತ್ತವೆ. ಈ ಪೈಕಿ ನಿರ್ಜಲ ಏಕಾದಶಿಗೆ ಹೆಚ್ಚು ಪ್ರಾಮುಖ್ಯತೆ ಇದೆ. ಈ ದಿನ ಉಪವಾಸ ಮಾಡುವುದರಿಂದ ವಿಷ್ಣುವಿನ ಜತೆಗೆ ತಾಯಿ ಲಕ್ಷ್ಮಿ ಕೂಡ ಪ್ರಸನ್ನಳಾಗುತ್ತಾಳೆ. ಲಕ್ಷ್ಮಿದೇವಿಯ ಅನುಗ್ರಹದಿಂದ ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಹಣಕಾಸಿನ ಬಿಕ್ಕಟ್ಟು ನಿವಾರಣೆಯಾಗುತ್ತದೆ ಮತ್ತು ಉದ್ಯೋಗ ವ್ಯವಹಾರವು ಪ್ರಗತಿಯಾಗಲಿದೆ ಎಂಬುದು ಆಸ್ತಿಕರ ನಂಬಿಕೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು