logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Odisha Tragedy: ವಿಧ್ವಂಸಕ ಕೃತ್ಯ ಶಂಕೆ,ಬಹು ಆಯಾಮದಲ್ಲಿ ಮಾಹಿತಿ ಕಲೆ ಹಾಕುತ್ತಿರುವ ಸಿಬಿಐ ತಂಡ

Odisha Tragedy: ವಿಧ್ವಂಸಕ ಕೃತ್ಯ ಶಂಕೆ,ಬಹು ಆಯಾಮದಲ್ಲಿ ಮಾಹಿತಿ ಕಲೆ ಹಾಕುತ್ತಿರುವ ಸಿಬಿಐ ತಂಡ

HT Kannada Desk HT Kannada

Jun 06, 2023 02:17 PM IST

ಒಡಿಶಾದಲ್ಲಿ ನಡೆದ ರೈಲು ದುರಂತದ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಂಡಿದೆ.

    • ಇಡೀ ಘಟನೆ ಹಿಂದೆ ವಿಧ್ವಂಸಕ ಕೃತ್ಯ ಇರುವ ಅನುಮಾನದ ಕಾರಣದಿಂದ ರೈಲ್ವೆ ಮಾರ್ಗದ ಇಂಟರ್‌ ಲಾಕಿಂಗ್‌ ವ್ಯವಸ್ಥೆ, ಎಲೆಕ್ಟ್ರಾನಿಕ್ ಬಳಕೆ ಮಾರ್ಗಗಳ ಕುರಿತಾಗಿಯು ತಂಡ ವಿವರ ಕಲೆ ಹಾಕಲಿದೆ. ಇದು ಮಾನವ ಕೃತ್ಯವೋ ಅಥವಾ ಯಾಂತ್ರಿಕವಾಗಿ ಆಗಿರುವ ಲೋಪವೋ ಎನ್ನುವುದನ್ನು ಮುಖ್ಯ ಗುರಿಯಾಗಿಟ್ಟುಕೊಂಡು ತಂಡ ತನಿಖೆ ಕೈಗೊಂಡಿದೆ.
ಒಡಿಶಾದಲ್ಲಿ ನಡೆದ ರೈಲು ದುರಂತದ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಂಡಿದೆ.
ಒಡಿಶಾದಲ್ಲಿ ನಡೆದ ರೈಲು ದುರಂತದ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಂಡಿದೆ.

ಭುವನೇಶ್ವರ:ನಾಲ್ಕು ದಿನದ ಹಿಂದೆ ಒಡಿಶಾದಲ್ಲಿ ಸಂಭವಿಸಿದ ರೈಲು ದುರಂತದ ಹಿಂದೆ ದುಷ್ಕೃತ್ಯಗಳ ಶಂಕೆ ಇರುವುದರಿಂದ ಸಿಬಿಐ ತನಿಖೆ ಆರಂಭಿಸಿದೆ.

ಟ್ರೆಂಡಿಂಗ್​ ಸುದ್ದಿ

ಭಾರತದ ಅತಿದೊಡ್ಡ ಬಜಾಜ್ ಪಲ್ಸರ್‌ ಮಾರುಕಟ್ಟೆಗೆ; ಪಲ್ಸರ್ NS400Z ಬೈಕ್‌ ದರ 1.85 ಲಕ್ಷ ರೂ, ವಿನ್ಯಾಸ ವಿಶೇಷ ವಿವರ ಹೀಗಿದೆ

ತಿರುಮಲ ತಿರುಪತಿಯಲ್ಲಿ ನವದಂಪತಿಗೆ ವಿಶೇಷ ಶ್ರೀವಾರಿ ದರ್ಶನ ಟಿಕೆಟ್ ಪ್ರಕಟಿಸಿದ ಟಿಟಿಡಿ; ಎಷ್ಟಿವೆ ಕೋಟಾ, ದರ ಇತ್ಯಾದಿ ವಿವರ

Gold Rate Today: ಮತ್ತೆ ಆರಂಭವಾಯ್ತು ಚಿನ್ನ, ಬೆಳ್ಳಿ ದರದಲ್ಲಿನ ಏರಿಳಿತ; ಶನಿವಾರ ಚಿನ್ನದ ದರ ಇಳಿಕೆ, ಬೆಳ್ಳಿ ಏರಿಕೆ

Explainer: ಪ್ರಜ್ವಲ್ ರೇವಣ್ಣ ಪಲಾಯನಕ್ಕೆ ಪವರ್‌ ತುಂಬಿದ ರಾಜತಾಂತ್ರಿಕ ಪಾಸ್‌ಪೋರ್ಟ್; ಏನಿದರ ವಿಶೇಷ?

ಘಟನೆ ನಡೆದ ಬಾಲಸೋರ್ ಸಮೀಪದ ಬಹನಾಗಾಕ್ಕೆ ಮಂಗಳವಾರ ಆಗಮಿಸಿದ ಸಿಬಿಐ ಅಧಿಕಾರಿಗಳ ತಂಡ ಮೂರು ರೈಲುಗಳು ಡಿಕ್ಕಿಯಾದ ಸ್ಥಳ, ರೈಲು ಮಾರ್ಗಗಳು, ನಿಲ್ದಾಣದಲ್ಲಿನ ಮಾಹಿತಿಗಳನ್ನು ಸಂಗ್ರಹಿಸಿತು.

ಇಡೀ ಘಟನೆ ಹಿಂದೆ ವಿಧ್ವಂಸಕ ಕೃತ್ಯ ಇರುವ ಅನುಮಾನದ ಕಾರಣದಿಂದ ರೈಲ್ವೆ ಮಾರ್ಗದ ಇಂಟರ್‌ ಲಾಕಿಂಗ್‌ ವ್ಯವಸ್ಥೆ, ಎಲೆಕ್ಟ್ರಾನಿಕ್ ಬಳಕೆ ಮಾರ್ಗಗಳ ಕುರಿತಾಗಿಯು ತಂಡ ವಿವರ ಕಲೆ ಹಾಕಲಿದೆ. ಇದು ಮಾನವ ಕೃತ್ಯವೋ ಅಥವಾ ಯಾಂತ್ರಿಕವಾಗಿ ಆಗಿರುವ ಲೋಪವೋ ಎನ್ನುವುದನ್ನು ಮುಖ್ಯ ಗುರಿಯಾಗಿಟ್ಟುಕೊಂಡು ತಂಡ ತನಿಖೆ ಕೈಗೊಂಡಿದೆ.

ಘಟನೆ ಕುರಿತು ಮಾಹಿತಿ ಹಾಕಲಾಗುತ್ತಿದ್ದು. ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಯಲಿದೆ. ಎರಡು ದಶಕಗಳ ನಂತರ ಇಷ್ಟು ದೊಡ್ಡ ದುರಂತ ನಡೆದು ಹೆಚ್ಚಿನ ಸಾವು ನೋವು ಸಂಭವಿಸಿರುವುದರಿಂದ ಸಿಬಿಐ ತನಿಖೆ ಮಹತ್ವ ಪಡೆದಿದೆ. ಸಿಬಿಐ ತಂಡಕ್ಕೆ ಎಲ್ಲಾ ಮಾಹಿತಿಗಳನ್ನು ಒದಗಿಸಲಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ಸ್ಥಳಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ದುರ್ಘಟನೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಸ್ವೀಕರಿಸಿದ್ದು ಉನ್ನತ ಮಟ್ಟದ ತನಿಖೆ ನಡೆಸಲಿದೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದರು. ಬಳಿಕ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು