logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Odisha Tragedy: ಒಡಿಶಾ ರೈಲು ದುರಂತ: 101 ಮೃತದೇಹಗಳ ಮಾಹಿತಿಯಿಲ್ಲ,ಆನ್‌ಲೈನ್‌ನಲ್ಲಿ ಪತ್ತೆಗೆ ಕ್ರಮ

Odisha Tragedy: ಒಡಿಶಾ ರೈಲು ದುರಂತ: 101 ಮೃತದೇಹಗಳ ಮಾಹಿತಿಯಿಲ್ಲ,ಆನ್‌ಲೈನ್‌ನಲ್ಲಿ ಪತ್ತೆಗೆ ಕ್ರಮ

HT Kannada Desk HT Kannada

Jun 06, 2023 06:45 AM IST

ಒಡಿಶಾದಲ್ಲಿ ಸಂಭವಿಸಿದ ದುರಂತದಲ್ಲಿ ನುಜ್ಜುಗುಜ್ಜಾಗಿರುವ ಕೋರಮಂಡಲ್‌ ರೈಲು

    • ರೈಲು ದುರಂತದಲ್ಲಿ ಗಾಯಗೊಂಡಿದ್ದವರಲ್ಲಿ 900 ಮಂದಿಗೆ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ. ಇನ್ನೂ 200ಕ್ಕೂ ಹೆಚ್ಚು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಹುತೇಕರು ಅಪಾಯದಿಂದ ಪಾರಾಗಿದ್ದಾರೆ.
ಒಡಿಶಾದಲ್ಲಿ ಸಂಭವಿಸಿದ ದುರಂತದಲ್ಲಿ ನುಜ್ಜುಗುಜ್ಜಾಗಿರುವ ಕೋರಮಂಡಲ್‌ ರೈಲು
ಒಡಿಶಾದಲ್ಲಿ ಸಂಭವಿಸಿದ ದುರಂತದಲ್ಲಿ ನುಜ್ಜುಗುಜ್ಜಾಗಿರುವ ಕೋರಮಂಡಲ್‌ ರೈಲು

ಭುವನೇಶ್ವರ: ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ದುರಂತದಲ್ಲಿ ಈವರೆಗೂ 174 ಹೆಚ್ಚು ಶವಗಳ ಗುರುತು ಪತ್ತೆಯಾಗಿದ್ದು, ಇನ್ನೂ 101 ದೇಹಗಳ ಮಾಹಿತಿಯೇ ದೊರೆತಿಲ್ಲ.

ಟ್ರೆಂಡಿಂಗ್​ ಸುದ್ದಿ

Gold Rate Today: ಭಾನುವಾರ ಚಿನ್ನ, ಬೆಳ್ಳಿ ಎರಡರ ದರವೂ ಹೆಚ್ಚಳ; ಆಭರಣ ಖರೀದಿಸುವ ಯೋಚನೆ ಇದ್ದರೆ ಇಂದಿನ ಬೆಲೆ ಗಮನಿಸಿ

ತಿರುಮಲ ತಿರುಪತಿಯಲ್ಲಿ ನವದಂಪತಿಗೆ ವಿಶೇಷ ಶ್ರೀವಾರಿ ದರ್ಶನ ಟಿಕೆಟ್ ಪ್ರಕಟಿಸಿದ ಟಿಟಿಡಿ; ಎಷ್ಟಿವೆ ಕೋಟಾ, ದರ ಇತ್ಯಾದಿ ವಿವರ

Gold Rate Today: ಮತ್ತೆ ಆರಂಭವಾಯ್ತು ಚಿನ್ನ, ಬೆಳ್ಳಿ ದರದಲ್ಲಿನ ಏರಿಳಿತ; ಶನಿವಾರ ಚಿನ್ನದ ದರ ಇಳಿಕೆ, ಬೆಳ್ಳಿ ಏರಿಕೆ

Explainer: ಪ್ರಜ್ವಲ್ ರೇವಣ್ಣ ಪಲಾಯನಕ್ಕೆ ಪವರ್‌ ತುಂಬಿದ ರಾಜತಾಂತ್ರಿಕ ಪಾಸ್‌ಪೋರ್ಟ್; ಏನಿದರ ವಿಶೇಷ?

ಶುಕ್ರವಾರ ಒಡಿಶಾದ ಬಹನಾಗಾ ಎನ್ನುವ ನಿಲ್ದಾಣದಲ್ಲಿ ಸಂಭವಿಸಿದ ಹೌರಾ ಚೆನ್ನೈ ಕೋರಮಂಡಲ್‌, ಯಶವಂತಪುರ ಹೌರಾ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ ಹಾಗೂ ಗೂಡ್ಸ್‌ ರೈಲುಗಳ ಡಿಕ್ಕಿ ಘಟನೆಯಲ್ಲೀ ಈವರೆಗೂ 275 ಮಂದಿ ಪ್ರಯಾಣಿಕರು ಜೀವ ಕಳೆದುಕೊಂಡಿದ್ದಾರೆ. 1100ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿವೆ.

ಘಟನೆಯಲ್ಲಿ ಮೃತಪಟ್ಟವರ ದೇಹಗಳನ್ನು ಸ್ಥಳೀಯ ಆಸ್ಪತ್ರೆ, ಭುವನೇಶ್ವರ ಸೇರಿದಂತೆ ಸಮೀಪದ ಪಟ್ಟಣಗಳ ಶವಾಗಾರಗಳಲ್ಲಿಇರಿಸಲಾಗಿದೆ. ತಮಿಳುನಾಡು, ಒಡಿಶಾ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಿಂದ ಪ್ರಯಾಣಿಕರ ಸಂಬಂಧಿಕರು ತಮ್ಮವರ ಗುರುತು ಪತ್ತೆಗೆ ಆಗಮಿಸುತ್ತಿದ್ದಾರೆ. ಇದಕ್ಕಾಗಿ ಸಹಾಯವಾಣಿ ಹಾಗೂ ಕಂಟ್ರೋಲ್‌ ರೂಂಗಳನ್ನು ತೆರೆದು ಮಾಹಿತಿ ನೀಡಲಾಗುತ್ತಿದೆ ಎಂದು ಭುವನೇಶ್ವರ ವಿಭಾಗದ ರೈಲ್ವೆ ವ್ಯವಸ್ಥಾಪಕ ರಿಂಕೇಶ್‌ ರಾಯ್‌ ತಿಳಿಸಿದ್ದಾರೆ.

ಇದರೊಟ್ಟಿಗೆ ರೈಲ್ವೆ ಇಲಾಖೆ ಹಾಗೂ ಒಡಿಶಾ ರಾಜ್ಯ ಸರ್ಕಾರವೂ ಮೂರು ಆನ್‌ಲೈನ್‌ ಲಿಂಕ್‌ಗಳಲ್ಲಿ ಮೃತರ ಫೋಟೋಗಳನ್ನು ಹಾಕಿ ಅವರ ಪತ್ತೆಗೂ ಕ್ರಮ ತೆಗೆದುಕೊಂಡಿದೆ.

ರೈಲು ದುರಂತದಲ್ಲಿ ಗಾಯಗೊಂಡಿದ್ದವರಲ್ಲಿ 900 ಮಂದಿಗೆ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ. ಇನ್ನೂ 200ಕ್ಕೂ ಹೆಚ್ಚು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಹುತೇಕರು ಅಪಾಯದಿಂದ ಪಾರಾಗಿದ್ದಾರೆ.

ಈ ನಡುವೆ ರೈಲ್ವೆ ನಿಲ್ದಾಣದಲ್ಲಿ ಡಿಕ್ಕಿಯಿಂದ ಆಗಿದ್ದ ಗೊಂದಲಗಳನ್ನು ಸರಿಪಡಿಸಲಾಗಿದೆ. ಮಾರ್ಗ ದುರಸ್ತಿ ಕಾರ್ಯವೂ ಮುಕ್ತಾಯದ ಹಂತಕ್ಕೆ ಬಂದಿದ್ದು, ಮಂಗಳವಾರದಿಂದಲೇ ಕೆಲ ರೈಲುಗಳ ಸಂಚಾರ ಪುನಾರಂಭವಾಗಬಹುದು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿರಿ..

ವಿಭಾಗ

    ಹಂಚಿಕೊಳ್ಳಲು ಲೇಖನಗಳು