logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Order Food By Whatsapp: ಟ್ರೇನಲ್ಲಿ ಟ್ರಾವೆಲ್‌ ಮಾಡ್ತಿದ್ದೀರಾ? ಇನ್ಮೇಲೆ ವಾಟ್ಸ್‌ಆಪ್‌ನಲ್ಲೆ ಫುಡ್‌ ಆರ್ಡರ್‌ ಮಾಡಬಹುದು ನೋಡಿ!

Order food by WhatsApp: ಟ್ರೇನಲ್ಲಿ ಟ್ರಾವೆಲ್‌ ಮಾಡ್ತಿದ್ದೀರಾ? ಇನ್ಮೇಲೆ ವಾಟ್ಸ್‌ಆಪ್‌ನಲ್ಲೆ ಫುಡ್‌ ಆರ್ಡರ್‌ ಮಾಡಬಹುದು ನೋಡಿ!

HT Kannada Desk HT Kannada

Feb 06, 2023 03:40 PM IST

ವಾಟ್ಸ್‌ಆಪ್‌ (ಸಾಂಕೇತಿಕ ಚಿತ್ರ)

  • Order food by WhatsApp: ಭಾರತೀಯ ರೈಲ್ವೆಯ ಇಂಡಿಯನ್‌ ರೈಲ್ವೆ ಕೆಟರಿಂಗ್‌ ಆಂಡ್‌ ಟೂರಿಸಂ ಕಾರ್ಪೊರೇಶನ್‌ ಲಿಮಿಟೆಡ್‌ (ಐಆರ್‌ಸಿಟಿಸಿ) ಸೋಮವಾರ ಈ ಹೊಸ ವಾಟ್ಸ್‌ಆಪ್‌ ಮೂಲಕ ಫುಡ್‌ ಆರ್ಡರ್‌ ಮಾಡುವ ಇ-ಕೇಟರಿಂಗ್‌ ಸರ್ವೀಸ್‌ಗೆ ಚಾಲನೆ ನೀಡಿದೆ. ಆ ಮೂಲಕ ಐಆರ್‌ಸಿಟಿಸಿ ತನ್ನ ಇ-ಕೇಟರಿಂಗ್‌ ಸೇವೆಯನ್ನು ಹೆಚ್ಚು ಗ್ರಾಹಕ ಕೇಂದ್ರಿತವಾಗಿಸಿದೆ.

ವಾಟ್ಸ್‌ಆಪ್‌ (ಸಾಂಕೇತಿಕ ಚಿತ್ರ)
ವಾಟ್ಸ್‌ಆಪ್‌ (ಸಾಂಕೇತಿಕ ಚಿತ್ರ) (AP)

ಟ್ರೇನಲ್ಲಿ ಟ್ರಾವೆಲ್‌ ಮಾಡ್ತಿದ್ದೀರಾ? ಹಾಗಾದ್ರೆ ಇನ್ಮೇಲೆ ಪ್ರಯಾಣದಲ್ಲಿ ವಾಟ್ಸ್‌ಆಪ್‌ ಮೂಲಕವೇ ಫುಡ್‌ ಆರ್ಡರ್‌ ಮಾಡಿ!

ಟ್ರೆಂಡಿಂಗ್​ ಸುದ್ದಿ

ತಿರುಮಲ ತಿರುಪತಿಯಲ್ಲಿ ನವದಂಪತಿಗೆ ವಿಶೇಷ ಶ್ರೀವಾರಿ ದರ್ಶನ ಟಿಕೆಟ್ ಪ್ರಕಟಿಸಿದ ಟಿಟಿಡಿ; ಎಷ್ಟಿವೆ ಕೋಟಾ, ದರ ಇತ್ಯಾದಿ ವಿವರ

Gold Rate Today: ಮತ್ತೆ ಆರಂಭವಾಯ್ತು ಚಿನ್ನ, ಬೆಳ್ಳಿ ದರದಲ್ಲಿನ ಏರಿಳಿತ; ಶನಿವಾರ ಚಿನ್ನದ ದರ ಇಳಿಕೆ, ಬೆಳ್ಳಿ ಏರಿಕೆ

Explainer: ಪ್ರಜ್ವಲ್ ರೇವಣ್ಣ ಪಲಾಯನಕ್ಕೆ ಪವರ್‌ ತುಂಬಿದ ರಾಜತಾಂತ್ರಿಕ ಪಾಸ್‌ಪೋರ್ಟ್; ಏನಿದರ ವಿಶೇಷ?

Closing Bell: ಮುಂಬೈ ಷೇರುಪೇಟೆಯ ವಾರಾಂತ್ಯದಲ್ಲಿ ಸೆನ್ಸೆಕ್ಸ್ 732 ಅಂಕಗಳ ಕುಸಿತ; ಈ ಪರಿ ಮಾರುಕಟ್ಟೆ ತಲ್ಲಣಕ್ಕೆ ಕಾರಣವೇನು

ಹೌದು ಈಗ ರೈಲ್ವೆ ಪ್ರಯಾಣಿಕರು ವಾಟ್ಸ್‌ಆಪ್‌ ಮೂಲಕ ಫುಡ್‌ ಆರ್ಡರ್‌ ಮಾಡಬಹುದು. ಭಾರತೀಯ ರೈಲ್ವೆಯ ಇಂಡಿಯನ್‌ ರೈಲ್ವೆ ಕೆಟರಿಂಗ್‌ ಆಂಡ್‌ ಟೂರಿಸಂ ಕಾರ್ಪೊರೇಶನ್‌ ಲಿಮಿಟೆಡ್‌ (ಐಆರ್‌ಸಿಟಿಸಿ) ಸೋಮವಾರ ಈ ಹೊಸ ವಾಟ್ಸ್‌ಆಪ್‌ ಮೂಲಕ ಫುಡ್‌ ಆರ್ಡರ್‌ ಮಾಡುವ ಇ-ಕೇಟರಿಂಗ್‌ ಸರ್ವೀಸ್‌ಗೆ ಚಾಲನೆ ನೀಡಿದೆ. ಆ ಮೂಲಕ ಐಆರ್‌ಸಿಟಿಸಿ ತನ್ನ ಇ-ಕೇಟರಿಂಗ್‌ ಸೇವೆಯನ್ನು ಹೆಚ್ಚು ಗ್ರಾಹಕ ಕೇಂದ್ರಿತವಾಗಿಸಿದೆ.

ಐಆರ್‌ಸಿಟಿಸಿ ಈಗಾಗಲೇ ತನ್ನ ವೆಬ್‌ಸೈಟ್ www.catering.irctc.co.in ಮತ್ತು ಇ-ಕ್ಯಾಟರಿಂಗ್ ಅಪ್ಲಿಕೇಶನ್ ಫುಡ್ ಆನ್ ಟ್ರ್ಯಾಕ್ ಮೂಲಕ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ.

ಈ ಉದ್ದೇಶಕ್ಕಾಗಿ ರೈಲ್ವೆಯು ಬಿಜಿನೆಸ್‌ ವಾಟ್ಸ್‌ಆಪ್ ಸಂಖ್ಯೆ +91-8750001323 ಅನ್ನು ಪ್ರಾರಂಭಿಸಿದೆ. ಆಯ್ದ ರೈಲುಗಳು ಮತ್ತು ಪ್ರಯಾಣಿಕರಿಗೆ ಇ-ಕ್ಯಾಟರಿಂಗ್ ಸೇವೆಗಳನ್ನು ಪೂರೈಸುವುದಕ್ಕೆ ವಾಟ್ಸ್‌ಆಪ್‌ ಸಂವಹನವನ್ನು ಶುರುಮಾಡಿದೆ. ಗ್ರಾಹಕರ ಪ್ರತಿಕ್ರಿಯೆ ಮತ್ತು ಸಲಹೆಗಳ ಆಧಾರದ ಮೇಲೆ, ರೈಲ್ವೆಯು ಇತರ ರೈಲುಗಳಲ್ಲಿಯೂ ಸಹ ಅದನ್ನು ಸಕ್ರಿಯಗೊಳಿಸುವುದಾಗಿ ಅದು ಹೇಳಿದೆ.

ಪ್ರಯಾಣಿಕರು ಪ್ರಯಾಣ ಮಾಡುವಾಗ ವಾಟ್ಸಾಪ್ ಮೂಲಕ ಆಹಾರವನ್ನು ಹೇಗೆ ಆರ್ಡರ್ ಮಾಡಬಹುದು ಎಂಬ ಪ್ರಕ್ರಿಯೆಯನ್ನು ರೈಲ್ವೇ ತನ್ನ ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿದೆ. ಅದರಂತೆ,

1. ಟಿಕೆಟ್ ಕಾಯ್ದಿರಿಸುವಾಗ, www.ecatering.irctc.co.in ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಇ-ಕ್ಯಾಟರಿಂಗ್ ಸೇವೆಗಳನ್ನು ಆಯ್ಕೆ ಮಾಡಲು ಬಿಜಿನೆಸ್‌ ವಾಟ್ಸ್‌ಆಪ್‌ ಸಂಖ್ಯೆಯಿಂದ ಗ್ರಾಹಕರಿಗೆ ಸಂದೇಶವನ್ನು ಕಳುಹಿಸಲಾಗುತ್ತದೆ.

2. ವೆಬ್‌ಸೈಟ್‌ ಓಪನ್‌ ಮಾಡಿ ಲಾಗ್‌ ಇನ್‌ ಆದ ನಂತರ, ಗ್ರಾಹಕರು ನೇರವಾಗಿ ವೆಬ್‌ಸೈಟ್‌ ಮೂಲಕ ನಿಲ್ದಾಣಗಳಲ್ಲಿ ಲಭ್ಯವಿರುವ ತಮ್ಮ ಆಯ್ಕೆಯ ರೆಸ್ಟೋರೆಂಟ್‌ಗಳಿಂದ ಊಟವನ್ನು ಬುಕ್ ಮಾಡಬಹುದು.

3. ಇದರ ನಂತರ, ವಾಟ್ಸ್‌ಆಪ್‌ ಸಂಖ್ಯೆಯನ್ನು ದ್ವಿಮುಖ ಸಂವಹನ ವೇದಿಕೆಯಾಗಿ ಸಕ್ರಿಯಗೊಳಿಸಲಾಗುತ್ತದೆ. AI ಪವರ್ ಚಾಟ್‌ಬಾಟ್ ಪ್ರಯಾಣಿಕರಿಗೆ ಇ-ಕೇಟರಿಂಗ್ ಸೇವೆಗಳ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವ ಕೆಲಸ ನಿರ್ವಹಿಸುತ್ತದೆ.

ಐಆರ್‌ಸಿಟಿಸಿಯ ಇ-ಕೇಟರಿಂಗ್ ಸೇವೆಗಳ ಮೂಲಕ ಗ್ರಾಹಕರಿಗೆ ದಿನಕ್ಕೆ ಸುಮಾರು 50,000 ಊಟಗಳನ್ನು ನೀಡಲಾಗುತ್ತಿದೆ ಎಂದು ರೈಲ್ವೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಕಳೆದ ವರ್ಷ, ಆನ್‌ಲೈನ್ ಪ್ಲಾಟ್‌ಫಾರ್ಮ್ ಜೂಪ್ ಇಂಡಿಯಾ ರೈಲಿನಲ್ಲಿ ಪ್ರಯಾಣಿಕರಿಗೆ ಆಹಾರವನ್ನು ತಲುಪಿಸಲು ವಾಟ್ಸ್‌ಆಪ್‌ ಚಾಟ್‌ಬಾಟ್ ಪರಿಹಾರ ಪೂರೈಕೆದಾರ ಜಿಯೋ ಹ್ಯಾಪ್ಟಿಕ್ ಟೆಕ್ನಾಲಜೀಸ್ ಲಿಮಿಟೆಡ್‌ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ.

ಪ್ರಯಾಣಿಕರು ತಮ್ಮ ಪಿಎನ್‌ಆರ್ ಸಂಖ್ಯೆಗಳ ಮೂಲಕ ವಾಟ್ಸಾಪ್-ಆಧಾರಿತ ಸ್ವಸೇವಾ ಆಹಾರ ವಿತರಣಾ ವೇದಿಕೆಯನ್ನು ಆಹಾರ ಆರ್ಡರ್‌ಗಳನ್ನು ಮಾಡಲು ಮತ್ತು ನೈಜ-ಸಮಯದ ಆರ್ಡರ್ ಟ್ರ್ಯಾಕಿಂಗ್, ಪ್ರತಿಕ್ರಿಯೆ ಮತ್ತು ಬೆಂಬಲದೊಂದಿಗೆ ನೇರವಾಗಿ ತಮ್ಮ ನಿಗದಿತ ಆಸನ ಸ್ಥಳಕ್ಕೆ ತರಿಸಿಕೊಳ್ಳಬಹುದು ಎಂದು ಕಂಪನಿಯು ತಿಳಿಸಿದೆ.

    ಹಂಚಿಕೊಳ್ಳಲು ಲೇಖನಗಳು