ಕನ್ನಡ ಸುದ್ದಿ  /  ಕರ್ನಾಟಕ  /  Cooker Politics: ಮಹದೇವಪುರದಲ್ಲಿ ಕುಕ್ಕರ್‌ ಪಾಲಿಟಿಕ್ಸ್;‌ ಮತದಾರರ ಮನೆ ಮನೆಗೆ ಕುಕ್ಕರ್‌ ತಲುಪಿಸುವಲ್ಲಿ ಪೈಪೋಟಿ!

Cooker politics: ಮಹದೇವಪುರದಲ್ಲಿ ಕುಕ್ಕರ್‌ ಪಾಲಿಟಿಕ್ಸ್;‌ ಮತದಾರರ ಮನೆ ಮನೆಗೆ ಕುಕ್ಕರ್‌ ತಲುಪಿಸುವಲ್ಲಿ ಪೈಪೋಟಿ!

Cooker politics: ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪದಲ್ಲೇ ಇದೆ. ಈಗಾಗಲೇ ಅನೇಕ ಕ್ಷೇತ್ರಗಳಲ್ಲಿ ಮತದಾರರನ್ನು ಓಲೈಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಭಾನುವಾರ ಸುದ್ದಿಯಲ್ಲಿದ್ದುದು ಮಹದೇವಪುರ ಕ್ಷೇತ್ರ.

ರಾಮಲಿಂಗಾ ರೆಡ್ಡಿ vs ಅರವಿಂದ ಲಿಂಬಾವಳಿ
ರಾಮಲಿಂಗಾ ರೆಡ್ಡಿ vs ಅರವಿಂದ ಲಿಂಬಾವಳಿ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಜನರ ಮೇಲೆ ಮೋಡಿ ಮಾಡುವ ಕೆಲಸಕ್ಕೆ ಕೈ ಹಾಕಿವೆ. ಅದರಲ್ಲೂ ಕೆಲವು ಕ್ಷೇತ್ರಗಳಲ್ಲಿ ʻಪ್ರೆಶರ್ ಕುಕ್ಕರ್‌ ಪಾಲಿಟಿಕ್ಸ್‌ʼ (cooker politics) ಶುರುವಾಗಿದ್ದು, ಮತದಾರರ ಓಲೈಕೆಗೆ ಪೈಪೋಟಿ ಶುರುವಾಗಿದೆ.

ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಮತ್ತು ಅವರ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ರಾಮಲಿಂಗಾ ರೆಡ್ಡಿ ಮತದಾರರನ್ನು ಓಲೈಸುವ ಪೈಪೋಟಿಗೆ ಇಳಿದಿದ್ದಾರೆ. ಕ್ಷೇತ್ರದಲ್ಲಿ ಮತದಾರರಿಗೆ ಉಚಿತವಾಗಿ ಪ್ರೆಶರ್‌ ಕುಕ್ಕರ್‌ ವಿತರಣೆಯನ್ನು ಇಬ್ಬರೂ ಪೈಪೋಟಿ ಮೇಲೆ ಬಿದ್ದವರಂತೆ ಮಾಡುತ್ತಿದ್ದಾರೆ. ಭಾನುವಾರ ಈ ವಿದ್ಯಮಾನ ಕ್ಷೇತ್ರದಲ್ಲಿ ಭಾರಿ ಮನೆಮಾತಾಗಿತ್ತು.

ಮಹದೇವಪುರ ಕ್ಷೇತ್ರದಲ್ಲಿ ಮತದಾರರ ಮನೆಗೆ ತಲುಪಿಸಲು ಸಿದ್ಧಪಡಿಸಿ ಇಟ್ಟಿರುವ ಕುಕ್ಕರ್‌ ಬಾಕ್ಸ್‌ಗಳು
ಮಹದೇವಪುರ ಕ್ಷೇತ್ರದಲ್ಲಿ ಮತದಾರರ ಮನೆಗೆ ತಲುಪಿಸಲು ಸಿದ್ಧಪಡಿಸಿ ಇಟ್ಟಿರುವ ಕುಕ್ಕರ್‌ ಬಾಕ್ಸ್‌ಗಳು (ANI)

ಕುಕ್ಕರ್‌ಗಳಲ್ಲಿ ಆಯಾ ಪಕ್ಷದ ಚಿಹ್ನೆಗಳು ಮತ್ತು ಇಬ್ಬರು ನಾಯಕರ ಚಿತ್ರಗಳನ್ನು ಛಾಪಿಸಲಾಗಿದೆ. ಆಡಳಿತಾರೂಢ ಬಿಜೆಪಿ ಸೇರಿ ಹಲವು ರಾಜಕೀಯ ಪಕ್ಷಗಳು ನಿರ್ಣಾಯಕ ಅಸೆಂಬ್ಲಿ ಚುನಾವಣೆಗೆ ಮುನ್ನ ಮತದಾರರ ಒಲವನ್ನು ಸೆಳೆಯಲು ಹಲವಾರು ಇತರ ಪ್ರಯತ್ನಗಳಲ್ಲಿ ತೊಡಗಿವೆ.

ಮೂಲಗಳ ಪ್ರಕಾರ, ರಾಜ್ಯದಲ್ಲಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯುವ ನಿಟ್ಟಿನಲ್ಲಿ ಬಿಜೆಪಿ ತನ್ನ ಬೂತ್ ಸಮಿತಿಗಳನ್ನು ಬಲಪಡಿಸುವ ಮತ್ತು ಪುನರ್ರಚಿಸುವತ್ತ ಗಮನಹರಿಸಿದೆ. ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ ಹೇಳಿದಂತೆ, ಬಿಜೆಪಿಯು ಕರ್ನಾಟಕವನ್ನು 'ದಕ್ಷಿಣಕ್ಕೆ ಪಕ್ಷದ ಹೆಬ್ಬಾಗಿಲು' ಎಂದು ಪರಿಗಣಿಸುತ್ತದೆ.

ಇದಲ್ಲದೆ ಚುನಾವಣೆಗೆ ಮುಂಚಿತವಾಗಿ ಪಕ್ಷವು ದಕ್ಷಿಣದ ರಾಜ್ಯಕ್ಕೆ ಅನುಗುಣವಾಗಿದೆ ಎಂಬ ಮಹತ್ವವನ್ನು ಒತ್ತಿಹೇಳುವ ಪ್ರಯತ್ನ ಮಾಡಿದೆ. ಬಿಜೆಪಿಯು ಚುನಾವಣಾ ಪ್ರಚಾರದ ತಂತ್ರವನ್ನು ರೂಪಿಸುವ ಕೆಲಸವನ್ನು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ವಹಿಸಿದೆ.

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಪಕ್ಷದ ಪ್ರಚಾರ ಉಸ್ತುವಾರಿಯೂ ಆಗಿದ್ದ ಪ್ರಧಾನ್, ರಾಜ್ಯದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರವನ್ನು ಸತತ ಎರಡನೇ ಅವಧಿಗೆ ಮರಳಿ ತರಲು ಕಾರ್ಯತಂತ್ರ ರೂಪಿಸಿದ ಕೀರ್ತಿಗೆ ಪಾತ್ರರಾಗಿದ್ದರು.

ಪ್ರಧಾನ್ ಅವರಲ್ಲದೆ, ಬಿಜೆಪಿಯು ಪಕ್ಷದ ತಮಿಳುನಾಡು ಮುಖ್ಯಸ್ಥ ಕೆ ಅಣ್ಣಾಮಲೈ ಅವರನ್ನು ತನ್ನ ಕನಾ೯ಟಕ ಪ್ರಚಾರದ ಸಹ-ಪ್ರಭಾರಿಯಾಗಿ ಮಾಡಿದೆ. ಈ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ಕರ್ನಾಟಕದ ವಿಧಾನಸಭೆ ಚುನಾವಣೆ ನಡೆಯಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ತಿಂಗಳು ಕರ್ನಾಟಕದ ಹುಬ್ಬಳ್ಳಿಯಲ್ಲಿ ರೋಡ್‌ಶೋ ನಡೆಸಿದರು, ದಕ್ಷಿಣದ ನಿರ್ಣಾಯಕ ರಾಜ್ಯದಲ್ಲಿ ಪಕ್ಷದ ಪ್ರಚಾರದ ಚಕ್ರಗಳನ್ನು ಚಾಲನೆ ಮಾಡಿದರು.

ಬಿಜೆಪಿ ಬಗ್ಗೆ ಕುಮಾರಸ್ವಾಮಿ ಚಿಂತಿಸಬೇಕಿಲ್ಲ- 'ಬ್ರಾಹ್ಮಣ ಸಿಎಂ' ಹೇಳಿಕೆಗೆ ಸಿಎಂ ಬೊಮ್ಮಾಯಿ ತಿರುಗೇಟು

ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಮ್ಮ ಪಕ್ಷ ಹಾಗೂ ಅದರ ಕಾರ್ಯಕ್ರಮಗಳು ಏನು ಮಾಡಲು ಸಾಧ್ಯ ಎಂಬ ಬಗ್ಗೆ ಮಾತನಾಡಿದರೆ ಜನ ಚಿಂತನೆ ಮಾಡುತ್ತಾರೆಯೇ ಹೊರತಾಗಿ ವೈಯಕ್ತಿಕ ಮಾತುಗಳು ಪ್ರಸ್ತುತವಲ್ಲ. ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಅವರು ನಮ್ಮ ಪಕ್ಷದ ಬಗ್ಗೆ ಅವರು ಚಿಂತಿಸಬೇಕಿಲ್ಲ. ಜೆಡಿಎಸ್ ಮೊದಲು ಅವರ ಪಕ್ಷ ಸರಿಮಾಡಿಕೊಳ್ಳಲಿ. ಬ್ರಾಹ್ಮಣರು ಎಂದೆಲ್ಲಾ ಜನ ನೋಡುವುದಿಲ್ಲ ಎಂದು ಹೇಳಿದ್ದಾರೆ.

IPL_Entry_Point