logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Pak Muslim Journalist Arrested: ಹಿಂದುಗಳ ಆರಾಧ್ಯ ದೇವ ಆಂಜನೇಯನಿಗೆ ಅವಮಾನ; ಸೆರೆಮನೆ ಸೇರಿದ ಮುಸ್ಲಿಂ ಪತ್ರಕರ್ತ- ಇದು ಪಾಕ್‌ ವಿದ್ಯಮಾನ

Pak Muslim journalist arrested: ಹಿಂದುಗಳ ಆರಾಧ್ಯ ದೇವ ಆಂಜನೇಯನಿಗೆ ಅವಮಾನ; ಸೆರೆಮನೆ ಸೇರಿದ ಮುಸ್ಲಿಂ ಪತ್ರಕರ್ತ- ಇದು ಪಾಕ್‌ ವಿದ್ಯಮಾನ

HT Kannada Desk HT Kannada

Mar 23, 2023 09:50 AM IST

ಹಿಂದುಗಳ ಆರಾಧ್ಯ ದೇವರಾದ ಆಂಜನೇಯನನ್ನು ಅವಹೇಳನ ಮಾಡಿದ ಮುಸ್ಲಿಂ ಪತ್ರಕರ್ತನೊಬ್ಬ ಪಾಕಿಸ್ತಾನದಲ್ಲಿ ಸೆರೆಮನೆ ಸೇರಿದ್ದಾನೆ.

  • Pak Muslim journalist arrested:́ ಹಿಂದುಗಳ ಆರಾಧ್ಯ ದೇವರಾದ ಆಂಜನೇಯನನ್ನು ಅವಹೇಳನ ಮಾಡಿದ ಮುಸ್ಲಿಂ ಪತ್ರಕರ್ತನೊಬ್ಬ ಸೆರೆಮನೆ ಸೇರಿದ್ದಾನೆ. ಇದು ನಡೆದಿರುವುದು ಭಾರತದಲ್ಲಿ ಅಲ್ಲ. ಪಾಕಿಸ್ತಾನದಲ್ಲಿ! ಇದರ ಹಿಂದೆ ಒಂದು ಹೋರಾಟವೂ ಇದೆ. 

ಹಿಂದುಗಳ ಆರಾಧ್ಯ ದೇವರಾದ ಆಂಜನೇಯನನ್ನು ಅವಹೇಳನ ಮಾಡಿದ ಮುಸ್ಲಿಂ ಪತ್ರಕರ್ತನೊಬ್ಬ ಪಾಕಿಸ್ತಾನದಲ್ಲಿ ಸೆರೆಮನೆ ಸೇರಿದ್ದಾನೆ.
ಹಿಂದುಗಳ ಆರಾಧ್ಯ ದೇವರಾದ ಆಂಜನೇಯನನ್ನು ಅವಹೇಳನ ಮಾಡಿದ ಮುಸ್ಲಿಂ ಪತ್ರಕರ್ತನೊಬ್ಬ ಪಾಕಿಸ್ತಾನದಲ್ಲಿ ಸೆರೆಮನೆ ಸೇರಿದ್ದಾನೆ. (LH)

ಹಿಂದುಗಳ ಆರಾಧ್ಯ ದೇವರಾದ ಆಂಜನೇಯನನ್ನು ಅವಹೇಳನ ಮಾಡಿದ ಮುಸ್ಲಿಂ ಪತ್ರಕರ್ತನೊಬ್ಬ ಈಗ ಸೆರೆಮನೆ ಸೇರಿದ್ದಾನೆ. ಇದು ನಡೆದಿರುವುದು ಭಾರತದಲ್ಲಿ ಅಲ್ಲ. ನೆರೆಯ ಮುಸ್ಲಿಂ ರಾಷ್ಟ್ರ ಪಾಕಿಸ್ತಾನದ ವಿದ್ಯಮಾನವಿದು.

ಟ್ರೆಂಡಿಂಗ್​ ಸುದ್ದಿ

Gold Rate Today: ಭಾನುವಾರ ಚಿನ್ನ, ಬೆಳ್ಳಿ ಎರಡರ ದರವೂ ಹೆಚ್ಚಳ; ಆಭರಣ ಖರೀದಿಸುವ ಯೋಚನೆ ಇದ್ದರೆ ಇಂದಿನ ಬೆಲೆ ಗಮನಿಸಿ

ಭಾರತದ ಅತಿದೊಡ್ಡ ಬಜಾಜ್ ಪಲ್ಸರ್‌ ಮಾರುಕಟ್ಟೆಗೆ; ಪಲ್ಸರ್ NS400Z ಬೈಕ್‌ ದರ 1.85 ಲಕ್ಷ ರೂ, ವಿನ್ಯಾಸ ವಿಶೇಷ ವಿವರ ಹೀಗಿದೆ

ತಿರುಮಲ ತಿರುಪತಿಯಲ್ಲಿ ನವದಂಪತಿಗೆ ವಿಶೇಷ ಶ್ರೀವಾರಿ ದರ್ಶನ ಟಿಕೆಟ್ ಪ್ರಕಟಿಸಿದ ಟಿಟಿಡಿ; ಎಷ್ಟಿವೆ ಕೋಟಾ, ದರ ಇತ್ಯಾದಿ ವಿವರ

Gold Rate Today: ಮತ್ತೆ ಆರಂಭವಾಯ್ತು ಚಿನ್ನ, ಬೆಳ್ಳಿ ದರದಲ್ಲಿನ ಏರಿಳಿತ; ಶನಿವಾರ ಚಿನ್ನದ ದರ ಇಳಿಕೆ, ಬೆಳ್ಳಿ ಏರಿಕೆ

ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಹನುಮಂತ ದೇವರ ಕುರಿತು ವಿವಾದಾತ್ಮಕ ಪೋಸ್ಟ್ ಅಪ್ಡೇಟ್ ಮಾಡಿದ ಪತ್ರಕರ್ತನನ್ನು ಧರ್ಮನಿಂದೆಯ ಕಾನೂನಿನಡಿಯಲ್ಲಿ ಬಂಧಿಸಲಾಗಿದೆ. ‌ಪತ್ರಕರ್ತನ ವಿರುದ್ಧ ಪ್ರಕರಣವನ್ನೂ ದಾಖಲಿಸಲಾಗಿದೆ ಎಂದು HT ಕನ್ನಡದ ಸೋದರ ತಾಣ ಲೈವ್‌ ಹಿಂದುಸ್ತಾನ್‌ ವರದಿ ಮಾಡಿದೆ.

ಗಮನಿಸಬೇಕಾದ ಅಂಶ ಎಂದರೆ, ಪಾಕಿಸ್ತಾನದಲ್ಲಿ ಇಲ್ಲಿಯವರೆಗೆ ದಾಖಲಾದ ಧರ್ಮನಿಂದೆಯ ಪ್ರಕರಣಗಳು ಹೆಚ್ಚಾಗಿ ಅಲ್ಪಸಂಖ್ಯಾತರ ವಿರುದ್ಧವೇ ದಾಖಲಾಗಿವೆ ಎಂಬುದು. ಹಿಂದು ಧರ್ಮೀಯರ ವಿಚಾರದಲ್ಲಿ ಈ ಧರ್ಮನಿಂದೆ ಪ್ರಕರಣ ತುಸು ಹೆಚ್ಚೇ ಇದೆ.

ಮುಸ್ಲಿಂ ಪತ್ರಕರ್ತನ ವಿರುದ್ಧ ಕೇಸ್‌ ದಾಖಲಾಗಿ, ಆತನ ಬಂಧನವಾದ ವಿಚಾರದ ಹಿನ್ನೆಲೆಯಲ್ಲಿ ಒಂದು ಹೋರಾಟವಿದೆ. ಪಾಕಿಸ್ತಾನದಲ್ಲಿ ಅಷ್ಟು ಸುಲಭವಾಗಿ ಮುಸ್ಲಿಮರ ವಿರುದ್ಧ ಧರ್ಮನಿಂದೆ ಪ್ರಕರಣ ದಾಖಲಾಗದು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ.

ಮುಸ್ಲಿಂ ಪತ್ರಕರ್ತನ ಕೃತ್ಯದ ವಿರುದ್ಧ ಕೇಸ್‌ ದಾಖಲಿಸುವ ಸಾಹಸ ಮಾಡಿದ್ದು ರಮೇಶ್‌ ಕುಮಾರ್‌. ಅವರು ಮಿರ್ಪುರ್ಖಾಸ್‌ ಪಟ್ಟಣದ ಸ್ಯಾಟಲೈಟ್‌ ಪೊಲೀಸ್‌ ಠಾಣೆಯಲ್ಲಿ ಮುಸ್ಲಿಂ ಪತ್ರಕರ್ತ ಅಸ್ಲಾಂ ಬಲೋಚ್‌ ವಿರುದ್ಧ ದೂರು ದಾಖಲಿಸಿದರು. ಈ ದೂರು ದಾಖಲಾದ ಬಳಿಕವೂ ಪತ್ರಕರ್ತನ ವಿರುದ್ಧ ಪೊಲೀಸರು ಕ್ರಮ ಜರುಗಿಸಿರಲಿಲ್ಲ.

ಈ ವಿಚಾರವನ್ನು ಅವರು ಹೋರಾಟವನ್ನಾಗಿ ತೆಗೆದುಕೊಂಡು ಸಿಂಧ್‌ ಪ್ರಾಂತ್ಯದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರ ಗಮನಸೆಳೆದರು. ಫೇಸ್‌ಬುಕ್‌ನಲ್ಲಿ ಪತ್ರಕರ್ತನ ಕೃತ್ಯವನ್ನು ಜಗಜ್ಜಾಹೀರು ಮಾಡಿದರು. ಅಲ್ಲದೆ, ಅಸ್ಲಾಂ ಬಲೋಚ್‌ ಎಂಬ ಪತ್ರಕರ್ತ ಹನುಮಂತ ದೇವರ ಫೋಟೋ ಶೇರ್‌ ಮಾಡಿ ಅವಹೇಳನಕಾರಿಯಾಗಿ ಬರೆದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಪೋಸ್ಟ್‌ ಮಾಡಿದ್ದರು. ಧರ್ಮಗಳ ನಡುವೆ ಅಸಂಗತತೆಯನ್ನು ಸೃಷ್ಟಿಸಲು ಪತ್ರಕರ್ತ ಪ್ರಯತ್ನಿಸಿದ್ದಾರೆ. ಇದು ಕಾನೂನು ಸುವ್ಯವಸ್ಥೆ ಹದಗೆಡಲು ಕಾರಣವಾಗಬಹುದು ಎಂದು ಎಚ್ಚರಿಸಿದ್ದರು.

ಇದನ್ನು ಗಮನಿಸಿದ ಸಿಂಧ್‌ ಪ್ರಾಂತ್ಯದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಜ್ಞಾನಚಂದ್ ಇಸ್ರಾನಿ ಅವರು ಸಿಂಧ್‌ನ ಐಜಿ ಅವರ ಜತೆಗೆ ಈ ವಿಚಾರವಾಗಿ ಮಾತನಾಡಿದರು. ಇದಾದ ಬಳಿಕ ಪತ್ರಕರ್ತನನ್ನು ಬಂಧಿಸುವಂತೆ ಆದೇಶ ಹೊರಡಿಸಲಾಗಿತ್ತು.

ಇದಾದ ಬಳಿಕ ವಿಡಿಯೋ ಸಂದೇಶ ಅಪ್ಲೋಡ್‌ ಮಾಡಿದ ಅಸ್ಲಾಂ ಬಲೋಚ್‌, ಹಿಂದು ಸಮುದಾಯದ ಕ್ಷಮೆ ಕೇಳಿದ. ಆದರೆ ತಡವಾಗಿತ್ತು. ಆತನ ವಿರುದ್ಧ ಪಾಕಿಸ್ತಾನ ದಂಡ ಸಂಹಿತೆಯ ಸೆಕ್ಷನ್ 153ಎ ಮತ್ತು 295ಎ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಸೆಕ್ಷನ್‌ 295ಎ ಪ್ರಕಾರ ಧರ್ಮಗಳ ನಡುವಿನ ಸಾಮರಸ್ಯ ಕದಡುವುದು ಅಪರಾಧ ಎಂಬುದನ್ನು ಸೂಚಿಸುತ್ತದೆ.

ಅಸ್ಲಾಂ ಬಲೋಚ್‌ ಬರೆದದ್ದೇನು?

ಮುಸ್ಲಿಂ ಪತ್ರಕರ್ತ ಅಸ್ಲಾಂ ಬಲೋಚ್‌ ಹಿಂದುಗಳ ಆರಾಧ್ಯ ದೇವರಾದ ಆಂಜನೇಯನ ಬಗ್ಗೆ ಏನು ಬರೆದುಕೊಂಡಿದ್ದ?. ಆತ ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್‌ನಲ್ಲಿ ಶೇರ್‌ ಮಾಡಿದ್ದ ಆಂಜನೇಯ ಸ್ವಾಮಿ ಚಿತ್ರದ ಮೇಲೆ “ಕ್ಯಾಪ್ಟನ್‌ ಶ್ರೀ ರಾಮ್ ಪಾರ್ಕ್ ವಾಲೆ” ಎಂಬ ಸಂದೇಶವಿತ್ತು.

ಸಿಂಧ್‌ ಪ್ರಾಂತ್ಯದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಜ್ಞಾನಚಂದ್ ಇಸ್ರಾನಿ ಅವರು ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದು, ಇಂತಹ ಕೃತ್ಯಗಳನ್ನು ಸಹಿಸುವುದಿಲ್ಲ. ಅಲ್ಲಿ ಶಾಂತಿ ಕದಡಲು ಸಂಚು ರೂಪಿಸಲಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪಾಕಿಸ್ತಾನದ ಇತರ ಪ್ರಾಂತ್ಯಗಳಿಗೆ ಹೋಲಿಸಿದರೆ, ಸಿಂಧ್‌ನಲ್ಲಿ ಹಿಂದುಗಳ ಸಂಖ್ಯೆ ತುಸು ಹೆಚ್ಚಿದೆ.

    ಹಂಚಿಕೊಳ್ಳಲು ಲೇಖನಗಳು