logo
ಕನ್ನಡ ಸುದ್ದಿ  /  Nation And-world  /  Parakh: Ncert Gets Ets On Board For Establishing India S First National Assessment Regulator Parakh

PARAKH: ದೇಶದ ಮೊದಲ ಮೌಲ್ಯಮಾಪನ ನಿಯಂತ್ರಕ ಪಾರಖ್‌; ಎನ್‌ಸಿಇಆರ್‌ಟಿ ಮೂಲಕ ಅನುಷ್ಠಾನಕ್ಕೆ

HT Kannada Desk HT Kannada

Feb 07, 2023 04:59 PM IST

ಸಾಂದರ್ಭಿಕ ಚಿತ್ರ

    • PARAKH: ಪರಖ್‌ (Performance Assessment, Review and Analysis of Knowledge) ಎಂದರೆ ಕಾರ್ಯಕ್ಷಮತೆಯ ಮೌಲ್ಯಮಾಪನ, ಸಮಗ್ರ ಅಭಿವೃದ್ಧಿಗಾಗಿ ಜ್ಞಾನದ ವಿಮರ್ಶೆ ಮತ್ತು ವಿಶ್ಲೇಷಣೆ. ಇದು ದೇಶದೆಲ್ಲ ಮಾನ್ಯತೆ ಪಡೆದ ಶಾಲಾ ಶಿಕ್ಷಣ ಮಂಡಳಿಗಳಿಗೆ ವಿದ್ಯಾರ್ಥಿಗಳ ಮೌಲ್ಯಮಾಪನ ಮತ್ತು ಮೌಲ್ಯಮಾಪನದ ಮಾನದಂಡ, ಮಾರ್ಗಸೂಚಿ ಹೊಂದಿಸುವ ಉನ್ನತ ಸಂಸ್ಥೆಯಾಗಿರಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (HT)

ದೇಶದ ಮೊದಲ ರಾಷ್ಟ್ರೀಯ ಮೌಲ್ಯಮಾಪನ ನಿಯಂತ್ರಕ PARAKH ಅನ್ನು ಸ್ಥಾಪಿಸುವ ವಿಚಾರವನ್ನು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಮಂಗಳವಾರ ಪ್ರಕಟಿಸಿದೆ.

ಟ್ರೆಂಡಿಂಗ್​ ಸುದ್ದಿ

ಇವಿಎಂ ವಿವಿಪ್ಯಾಟ್ ಪ್ರಕರಣ; ಅಡ್ಡ ಪರಿಶೀಲನೆ ಮಾಡಿ ಎಂದವರ ವಿರುದ್ಧ ಸುಪ್ರೀಂ ಕೋರ್ಟ್ ಗರಂ, ಎಲ್ಲಾ ಅರ್ಜಿಗಳು ವಜಾ

ರಸ್ತೆ ಮೇಲೆ ಕಾಣಸಿಕ್ತು ತಲೆಕೆಳಗಾದ ಕಾರು, ಅಪಘಾತವಾಗಿಲ್ಲ, ಪಲ್ಟಿಯಾಗಿಲ್ಲ, ಕುತೂಹಲ ಕೆರಳಿಸಿದೆ ಈ ವೈರಲ್ ವಿಡಿಯೋ

Chicken or Egg: ಕೋಳಿ ಮೊದಲಾ ಅಥವಾ ಮೊಟ್ಟೆ ಮೊದಲಾ; ದಶಕಗಳ ಪ್ರಶ್ನೆಗೆ ಕೊನೆಗೂ ಸಿಕ್ಕಿದೆ ಉತ್ತರ

Gold Rate Today: ವಾರಾಂತ್ಯದಲ್ಲಿ ಏರಿಕೆಯಾಯ್ತು ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಗೋಲ್ಡ್‌ ರೇಟ್‌ ಎಷ್ಟಿದೆ ಗಮನಿಸಿ

ಇದಕ್ಕಾಗಿ ಎಜುಕೇಶನಲ್‌ ಟೆಸ್ಟಿಂಗ್‌ ಸರ್ವೀಸ್‌ (ಇಟಿಎಸ್‌) ಅನ್ನು ಆಯ್ಕೆ ಮಾಡಲಾಗಿದೆ. ಪರಖ್‌ (Performance Assessment, Review and Analysis of Knowledge) ಎಂದರೆ ಕಾರ್ಯಕ್ಷಮತೆಯ ಮೌಲ್ಯಮಾಪನ, ಸಮಗ್ರ ಅಭಿವೃದ್ಧಿಗಾಗಿ ಜ್ಞಾನದ ವಿಮರ್ಶೆ ಮತ್ತು ವಿಶ್ಲೇಷಣೆ. ಇದು ದೇಶದ ಎಲ್ಲ ಮಾನ್ಯತೆ ಪಡೆದ ಶಾಲಾ ಶಿಕ್ಷಣ ಮಂಡಳಿಗಳಿಗೆ ವಿದ್ಯಾರ್ಥಿಗಳ ಮೌಲ್ಯಮಾಪನ ಮತ್ತು ಮೌಲ್ಯಮಾಪನದ ಮಾನದಂಡಗಳು, ಮಾರ್ಗಸೂಚಿಗಳನ್ನು ಹೊಂದಿಸುವ ಉನ್ನತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.

ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ರ ಮೂಲಕ ಕಡ್ಡಾಯಗೊಳಿಸಿದಂತೆ PARAKH ಅನ್ನು ಸ್ಥಾಪಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ಪ್ರಯತ್ನದಲ್ಲಿ ಎಜುಕೇಶನಲ್‌ ಟೆಸ್ಟಿಂಗ್‌ ಸರ್ವೀಸ್‌ (ಇಟಿಎಟ್‌) ಅನ್ನು ಪರಾಖ್‌ಗೆ ಟೆಕ್ನಿಕಲ್‌ ಪಾರ್ಟ್ನರ್‌ ಆಗಿ ಘೋಷಿಸಲಾಗಿದೆ ಎಂದು ಎನ್‌ಸಿಇಆರ್‌ಡಿಯ ಎಜುಕೇಶನಲ್‌ ಸರ್ವೇ ಡಿವಿಷನ್‌ನ ಮು‍ಖ್ಯಸ್ಥರಾದ ಪ್ರೊಫೆಸರ್ ಇಂದ್ರಾಣಿ ಭದುರಿ ಹೇಳಿದರು.

ಪಠ್ಯಕ್ರಮ ಮತ್ತು ಮೌಲ್ಯಮಾಪನದಲ್ಲಿನ ಜಾಗತಿಕ ಉತ್ತಮ ಅಭ್ಯಾಸಗಳ ಬಗ್ಗೆ ಈ ವ್ಯವಸ್ಥೆಯ ತಿಳಿವಳಿಕೆಯು ದೇಶದ ವಿವಿಧ ಶಾಲಾ ಮಂಡಳಿಗಳಲ್ಲಿ ಈ ಅಂಶಗಳನ್ನು ಪ್ರಮಾಣೀಕರಿಸುವಲ್ಲಿ ಉತ್ತಮ ಆಸ್ತಿಯಾಗಲಿದೆ ಎಂದು ಭದುರಿ ವಿವರಿಸಿದರು.

ಇಟಿಎಸ್‌ನ ಸಿಇಒ ಅಮಿತ್ ಸೇವಕ್, ಭಾರತವು ಜಾಗತಿಕ ಶಿಕ್ಷಣದಲ್ಲಿ ಶಕ್ತಿಶಾಲಿಯಾಗಿರುವುದರಿಂದ ಹೆಚ್ಚು ಮುಖ್ಯವಾದುದನ್ನು ಅಳೆಯಲು ನಾವೀನ್ಯತೆ ಮತ್ತು ಗುಣಮಟ್ಟದ ಮೌಲ್ಯಮಾಪನ ಪರಿಣತಿಯ ಮೂಲಕ ಕಲಿಕೆಯ ಭವಿಷ್ಯವನ್ನು ನಿರ್ಮಿಸುವಲ್ಲಿ ಎನ್‌ಸಿಇಆರ್‌ಟಿ ಜತೆಗೆ ಕೆಲಸ ಮಾಡಲು ಇಟಿಎಸ್‌ಗೆ ಹೆಮ್ಮೆ ಇದೆ ಎಂದು ಹೇಳಿದರು.

ಎನ್‌ಸಿಇಆರ್‌ಟಿ ವಿವಿಧ ರಾಜ್ಯ ಮಂಡಳಿಗಳಲ್ಲಿ ದಾಖಲಾದ ವಿದ್ಯಾರ್ಥಿಗಳ ಅಂಕಗಳಲ್ಲಿನ ಅಸಮಾನತೆಗಳನ್ನು ತೆಗೆದುಹಾಕುವ ಉದ್ದೇಶದಿಂದ ಪಾರಖ್‌ ಅನ್ನು ಪ್ರಾರಂಭಿಸಿದೆ.

ಇದು ಎನ್‌ಇಪಿ 2020 ಕ್ಕೆ ಅನುಗುಣವಾಗಿದೆ. ಇದು ಹೊಸ ಮೌಲ್ಯಮಾಪನ ಮಾದರಿಗಳು ಮತ್ತು ಇತ್ತೀಚಿನ ಸಂಶೋಧನೆಗಳ ಬಗ್ಗೆ ಶಾಲಾ ಮಂಡಳಿಗಳಿಗೆ ಸಲಹೆ ನೀಡಲು, ಅವುಗಳ ನಡುವೆ ಸಹಯೋಗವನ್ನು ಉತ್ತೇಜಿಸಲು ಪ್ರಮಾಣಿತ-ಹೊಂದಿಸುವ ಸಂಸ್ಥೆಯನ್ನು ರೂಪಿಸಿದೆ.

ಗಮನಿಸಬಹುದಾದ ಇತರೆ ಸುದ್ದಿ

JEE Main Session 1 Result : ಜೆಇಇ ಮೇನ್ ಸೆಷನ್ 1 ರ ಫಲಿತಾಂಶ ಪ್ರಕಟ; ರಿಸಲ್ಟ್ ವೀಕ್ಷಣೆ, ಸೆಷನ್ 2ರ ನೋಂದಣಿ ಪ್ರಕ್ರಿಯೆ ಹೀಗಿದೆ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ-ಎನ್ ಟಿಎ ಇಂದು (ಮಂಗಳವಾರ, ಫೆ.7) ಜೆಇಇ ಮೇನ್ 2023ರ ಸೆಷನ್ 1ರ ಫಲಿತಾಂಶವನ್ನು ಪ್ರಕಟಿಸಿದೆ. ಜೊತೆಗೆ ಸೆಷನ್ 2 ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ಅರ್ಹತೆ ಒದಗಿಸುವ ಜೆಇಇ ಮುಖ್ಯ ಪರೀಕ್ಷೆಯ ಸೆಷನ್​ 1 ರ ಫಲಿತಾಂಶ ಪ್ರಕಟಿಸಲಾಗಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್​ಟಿಎ) ಜೆಇಇ ಮುಖ್ಯ ಪರೀಕ್ಷೆಯು ಜನವರಿ 24ರಿಂದ ಫೆಬ್ರವರಿ 1ರವರೆಗೆ ನಡೆದಿತ್ತು. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು