logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Pm Modi High-level Meeting: ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳು, ಪ್ರಧಾನಿ ಮೋದಿಯಿಂದ ಇಂದು ಉನ್ನತ ಮಟ್ಟದ ಸಭೆ, ಮತ್ತೆ ಮಾಸ್ಕ್‌?

PM Modi high-level meeting: ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳು, ಪ್ರಧಾನಿ ಮೋದಿಯಿಂದ ಇಂದು ಉನ್ನತ ಮಟ್ಟದ ಸಭೆ, ಮತ್ತೆ ಮಾಸ್ಕ್‌?

Praveen Chandra B HT Kannada

Mar 22, 2023 03:22 PM IST

PM Modi high-level meeting: ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣ, ಪ್ರಧಾನಿ ನರೇಂದ್ರ ಮೋದಿಯಿಂದ ಇಂದು ಉನ್ನತ ಮಟ್ಟದ ಸಭೆ, ಮತ್ತೆ ಮಾಸ್ಕ್‌? (PTI Photo/Atul Yadav)(PTI03_22_2023_000101B)

  • ಕೋವಿಡ್ ಸಂಬಂಧಿತ ಪರಿಸ್ಥಿತಿ ಮತ್ತು ಸಾರ್ವಜನಿಕ ಆರೋಗ್ಯ ಸನ್ನದ್ಧತೆಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ 4:30 ಕ್ಕೆ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ.

PM Modi high-level meeting: ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣ, ಪ್ರಧಾನಿ ನರೇಂದ್ರ ಮೋದಿಯಿಂದ ಇಂದು ಉನ್ನತ ಮಟ್ಟದ ಸಭೆ, ಮತ್ತೆ ಮಾಸ್ಕ್‌?  (PTI Photo/Atul Yadav)(PTI03_22_2023_000101B)
PM Modi high-level meeting: ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣ, ಪ್ರಧಾನಿ ನರೇಂದ್ರ ಮೋದಿಯಿಂದ ಇಂದು ಉನ್ನತ ಮಟ್ಟದ ಸಭೆ, ಮತ್ತೆ ಮಾಸ್ಕ್‌? (PTI Photo/Atul Yadav)(PTI03_22_2023_000101B) (PTI)

ನವದೆಹಲಿ: ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಪ್ರಮುಖ ಸಭೆಯೊಂದು ನಡೆಯಲಿದೆ. ಕೋವಿಡ್ ಸಂಬಂಧಿತ ಪರಿಸ್ಥಿತಿ ಮತ್ತು ಸಾರ್ವಜನಿಕ ಆರೋಗ್ಯ ಸನ್ನದ್ಧತೆಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ 4:30 ಕ್ಕೆ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಆರ್ಡರ್‌ ಮಾಡಿದ್ದು ಪನೀರ್‌ ಟಿಕ್ಕಾ, ಬಂದಿದ್ದು ಚಿಕನ್‌ ಸ್ಯಾಂಡ್‌ವಿಚ್‌; 50 ಲಕ್ಷ ರೂ.ಗೆ ಕೇಸ್‌ ಹಾಕಿದ ಮಹಿಳೆ !

Sam Pitroda: ಜನಾಂಗೀಯ ಹೇಳಿಕೆ ವಿವಾದ ನಂತರ ಕಾಂಗ್ರೆಸ್‌ ಹುದ್ದೆ ತೊರೆದ ಪಿಟ್ರೋಡಾ

ಸ್ಯಾಮ್ ಪಿತ್ರೋಡಾ ಜನಾಂಗೀಯ ಹೇಳಿಕೆ; ದುರದೃಷ್ಟಕರ ಎನ್ನುತ್ತ ವಿವಾದದಿಂದ ಅಂತರ ಕಾಯ್ದುಕೊಂಡ ಕಾಂಗ್ರೆಸ್ ಪಕ್ಷ, ಪ್ರಧಾನಿ ಮೋದಿ ಏನಂದ್ರು

ಪೂರ್ವದವರು ಚೀನೀಯರಂತೆ: ಸ್ಯಾಮ್ ಪಿತ್ರೋಡಾ ಜನಾಂಗೀಯ ಹೇಳಿಕೆ ವಿವಾದ, ಕಾಂಗ್ರೆಸ್ ನಾಯಕನ 5 ಹಳೆಯ ವಿವಾದಗಳಿವು

ದೇಶದ ಸದ್ಯದ ಕೊರೊನಾ ಪರಿಸ್ಥಿತಿ, ಅದಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳು ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚಿಸುವ ನಿರೀಕ್ಷೆಯಿದೆ.

ಭಾರತದಲ್ಲಿ ಬುಧವಾರ 1,134 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳಿಂದ ತಿಳಿದುಬಂದಿದೆ. ನಿನ್ನೆಯ 699 ಪ್ರಕರಣಗಳಿಗೆ ಹೋಲಿಸಿದರೆ ಇದು ಗಮನಾರ್ಹ ಏರಿಕೆಯಾಗಿದೆ.

ಇದೇ ಸಮಯದಲ್ಲಿ, ಛತ್ತೀಸ್‌ಗಢ, ದೆಹಲಿ, ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ತಲಾ ಐದು ಕೋವಿಡ್ ಸಾವುಗಳು ವರದಿಯಾಗಿವೆ. ದೇಶದಲ್ಲಿ ಇದುವರೆಗೆ ಒಟ್ಟು 5,30,813 ಕೋವಿಡ್ ಸಾವುಗಳು ಸಂಭವಿಸಿವೆ. ಅಂಕಿಅಂಶಗಳ ಪ್ರಕಾರ, ಒಂದೇ ದಿನದಲ್ಲಿ 662 ರೋಗಿಗಳು ಚೇತರಿಸಿಕೊಂಡಿದ್ದು, ಒಟ್ಟು 4,41,60,279 ಕ್ಕೆ ತಲುಪಿದೆ. ಪರಿಣಾಮವಾಗಿ, ಚೇತರಿಕೆಯ ಪ್ರಮಾಣವು 98.79 ಪ್ರತಿಶತದಷ್ಟಿದೆ. ದೈನಂದಿನ ಪಾಸಿಟೀವ್‌ ದರವು ಶೇಕಡಾ 1.09 ಎಂದು ವರದಿಯಾಗಿದೆ.

ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ತೆಲಂಗಾಣ, ತಮಿಳುನಾಡು ಮತ್ತು ಕೇರಳದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ಇರುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.

ಕೇಂದ್ರ ಆರೋಗ್ಯ ಸಚಿವಾಲಯ ನಿರಂತರ ಮೇಲ್ವಿಚಾರಣೆ ಮತ್ತು ಸೋಂಕು ತಡೆಗಟ್ಟುವ ಕ್ರಮಗಳ ಬಗ್ಗೆ ಸೂಚನೆಗಳನ್ನು ನೀಡಿದೆ.

ಆರ್‌ಟಿಪಿಸಿಆರ್‌ ಮತ್ತು ರಾಪಿಡ್‌ ಟೆಸ್ಟ್‌ ಹೆಚ್ಚಳ

ಕೊರೊನಾ ಸೋಂಕಿನ ಪ್ರಮಾಣದಲ್ಲಿ ಮತ್ತೆ ಏರಿಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ನಾವು ಆರ್‍ಟಿಪಿಸಿಆರ್ ಮತ್ತು ರಾಪಿಡ್ ಟೆಸ್ಟ್ ಹೆಚ್ಚಳ ಮಾಡಲು ತೀರ್ಮಾನಿಸಿದ್ದೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‍ಗಿರಿನಾಥ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಕೊರೊನಾ ಸೋಂಕಿನ ಪ್ರಮಾಣದಲ್ಲಿ ಹೆಚ್ಚಳ ಕಂಡು ಬಂದಿದೆ ಎಂಬುದನ್ನು ಖಚಿತಪಡಿಸಿದರು. ಸೋಂಕು ಹೆಚ್ಚಳವಾಗುತ್ತಿರುವುದರಿಂದ ಪ್ರತಿನಿತ್ಯ ಆರು ಸಾವಿರ ಕೊರೊನಾ ಟೆಸ್ಟ್ ನಡೆಸುವ ಟಾರ್ಗೆಟ್ ನೀಡಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ.

ಕೊರೊನಾ ಟೆಸ್ಟ್‌ಗಳು ಹೆಚ್ಚುವುದರಿಂದ ಸೋಂಕಿತರ ಲೆಕ್ಕವೂ ಇನ್ಮುಂದೆ ಪ್ರತಿದಿನ ಹೆಚ್ಚುವ ಸಾಧ್ಯತೆಯಿದೆ.

ಎರಡು ರೀತಿಯ ವೈರಸ್‌ಗಳು

ಪ್ರಸ್ತುತ, ಎರಡು ರೀತಿಯ ವೈರಸ್‌ಗಳು ವಾತಾವರಣದಲ್ಲಿವೆ. ಆತಂಕಕಾರಿ ಅಂಶವೆಂದರೆ ಅವುಗಳು ಅಪಾಯಕಾರಿ ರೋಗಲಕ್ಷಣಗಳನ್ನು ಹರಡುತ್ತಿವೆ. ಮೊದಲನೆಯ ವೈರಸ್‌ ಇನ್ಫ್ಲುಯೆನ್ಸ H3N2 ಮತ್ತು ಎರಡನೆಯದು ಹೊಸ COVID ರೂಪಾಂತರ XBB 1.16.

ವರದಿಗಳ ಪ್ರಕಾರ, ಹೊಸ ರೂಪಾಂತರವು ಮುಂದಿನ ಕರೋನವೈರಸ್ ತರಂಗವನ್ನು ಉಂಟುಮಾಡುವ ಸಾಧ್ಯತೆಯಿದೆ. ಈಗ, ನಮಗೆ ಯಾವ ಸೋಂಕು ಇದೆ ಎಂದು ಖಚಿತಪಡಿಸಿಕೊಳ್ಳದೆ ನಾವು ತಪ್ಪಾದ ಔಷಧವನ್ನು ಸೇವಿಸಿದರೆ ಅದು ಮಾರಣಾಂತಿಕವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತ ವರದಿ ಓದಿ

    ಹಂಚಿಕೊಳ್ಳಲು ಲೇಖನಗಳು