logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Rahul Gandhi Tore Ordinance: ಯುಪಿಎ ಸರ್ಕಾರದ ಸುಗ್ರೀವಾಜ್ಞೆ ಹರಿದುಹಾಕಿದ್ದ ರಾಹುಲ್‌ ಗಾಂಧಿಗೆ ಅದಾಗ ಹತ್ತು ವರ್ಷದ ಬಳಿಕ ಅನರ್ಹತೆಯ ಭೀತಿ

Rahul Gandhi tore ordinance: ಯುಪಿಎ ಸರ್ಕಾರದ ಸುಗ್ರೀವಾಜ್ಞೆ ಹರಿದುಹಾಕಿದ್ದ ರಾಹುಲ್‌ ಗಾಂಧಿಗೆ ಅದಾಗ ಹತ್ತು ವರ್ಷದ ಬಳಿಕ ಅನರ್ಹತೆಯ ಭೀತಿ

HT Kannada Desk HT Kannada

Mar 24, 2023 01:18 PM IST

google News

ರಾಹುಲ್‌ ಗಾಂಧಿ

  • Rahul Gandhi tore ordinance: ಅನರ್ಹತೆ ತಪ್ಪಿಸಲು ಯುಪಿಎ ಹೊರಡಿಸಿದ್ದ ಸುಗ್ರೀವಾಜ್ಞೆ ಪ್ರತಿಹರಿದು ಹಾಕಿದ್ದ ರಾಹುಲ್‌ ಗಾಂಧಿಗೆ ಈಗ ಅದೇ ಸುಪ್ರೀಂ ಕೋರ್ಟ್‌ ತೀರ್ಪಿನ ಅಂಶ ಮುಳುವಾಗಿದೆ. ಸಂಸದ ಸ್ಥಾನದಿಂದ ಅನರ್ಹರಾಗುವ ಆತಂಕ ಉಂಟಾಗಿದೆ.

ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ

ಲಿಲಿಥಾಮಸ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನಲ್ಲಿ ರದ್ದುಗೊಂಡ ಅಂಶವನ್ನು ತಡೆಯುವುದಕ್ಕೆ ಅಂದಿನ ಯುಪಿಎ ಸರ್ಕಾರ ಒಂದು ಸುಗ್ರೀವಾಜ್ಞೆ ಪ್ರಕಟಿಸಿತ್ತು. ಈ ಸುಗ್ರೀವಾಜ್ಞೆಯನ್ನು ಸಾರಾಸಗಟಾಗಿ ತಿರಸ್ಕರಿಸಿದ್ದ ರಾಹುಲ್‌ ಗಾಂಧಿ, ಅದರ ಪ್ರತಿಯನ್ನು ಹರಿದು ಹಾಕಿ ದೇಶದ ಗಮನಸೆಳೆದಿದ್ದರು.

ಸೂರತ್‌ ಕೋರ್ಟ್‌ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಹತ್ತು ವರ್ಷಗಳ ಬಳಿಕ ಈಗ ಅದೇ ಸುಪ್ರೀಂ ಕೋರ್ಟ್‌ ತೀರ್ಪಿನ ಆಧಾರದಲ್ಲಿ ರಾಹುಲ್‌ ಗಾಂಧಿ ಅನರ್ಹತೆಯ ಭೀತಿ ಎದುರಿಸುತ್ತಿದ್ದಾರೆ.

ಸುಪ್ರೀಂ ಕೋರ್ಟ್‌ ತೀರ್ಪು ಏನಿತ್ತು?

ಯಾವುದೇ ಚುನಾಯಿತ ಪ್ರತಿನಿಧಿಯು ಯಾವುದೇ ಅಪರಾಧಕ್ಕಾಗಿ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಶಿಕ್ಷೆಗೆ ಒಳಗಾದರೆ ಅಂತಹ ವ್ಯಕ್ತಿಗೆ ಜನಪ್ರತಿನಿಧಿ ಕಾಯಿದೆ 1951 ರ ಪ್ರಕಾರ ತತ್‌ಕ್ಷಣದ ಅನರ್ಹತೆ ಎದುರಾಗುತ್ತದೆ. ಅನರ್ಹತೆಯಿಂದ ಮೂರು ತಿಂಗಳ ರಕ್ಷಣೆಯನ್ನು ನೀಡುವ ಕಾಯಿದೆಯ ಒಂದು ನಿಬಂಧನೆಯನ್ನು "ಅಲ್ಟ್ರಾವೈರ್ಸ್" ಎಂದು 2013 ರ ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ರದ್ದುಗೊಳಿಸಲಾಗಿದೆ.

ಅಂದಿನ ಯುಪಿಎ ಸರ್ಕಾರ ಏನು ಮಾಡಿತು?

ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನ ಪರಿಣಾಮವನ್ನು ತಗ್ಗಿಸುವ ಸಲುವಾಗಿ ಅಂದಿನ ಯುಪಿಎ ಸರ್ಕಾರ, ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್‌ 8 (4) ಅನ್ನು ಉಳಿಸಲು ಸುಗ್ರೀವಾಜ್ಞೆ ಹೊರಡಿಸಿತು. ಸಂಸತ್‌ ಸದಸ್ಯರೂ ಸೇರಿ ಚುನಾಯಿತ ಜನಪ್ರತಿನಿಧಿಗಳು ಅಪರಾಧಿ ಎಂದು ಘೋಷಿತರಾದರೂ ಮೂರು ತಿಂಗಳ ತನಕ ಅನರ್ಹರಾಗದಂತೆ ತಡೆಯುವ ಅಂಶವನ್ನು ಈ ಸೆಕ್ಷನ್‌ ಹೊಂದಿದೆ.

ಆದರೆ, ರಾಹುಲ್‌ ಗಾಂಧಿ 2013ರ ಸೆಪ್ಟೆಂಬರ್‌ 28ರಂದು ಯುಪಿಎ ಸರ್ಕಾರದ ಈ ಸುಗ್ರೀವಾಜ್ಞೆಯನ್ನು ʻಕಂಪ್ಲೀಟ್‌ ನಾನ್ಸೆನ್ಸ್‌ʼ ಎಂದು ಟೀಕಿಸಿದ್ದಲ್ಲದೆ ಅದನ್ನು ರದ್ದುಗೊಳಿಸಬೇಕು ಎಂದು ಸಾರ್ವಜನಿಕವಾಗಿ ಆಗ್ರಹಿಸಿ ಅದರ ಪ್ರತಿಯನ್ನು ಹರಿದು ಹಾಕಿದ್ದರು.

ಸೂರತ್‌ ಕೋರ್ಟ್‌ ತೀರ್ಪು ಮತ್ತು ನಂತರದ ಬೆಳವಣಿಗೆ

ಸುಪ್ರೀಂ ಕೋರ್ಟ್ ವಕೀಲರಾದ ಉಪಮನ್ಯು ಹಜಾರಿಕಾ ಮತ್ತು ಮುಹಮ್ಮದ್ ಖಾನ್ ಅವರು, ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು 15,000 ರೂ.ಗಳ ದಂಡವನ್ನು 30 ದಿನಗಳವರೆಗೆ ಅಮಾನತುಗೊಳಿಸಿರುವುದು ಕಾಂಗ್ರೆಸ್ ನಾಯಕನನ್ನು ಅಪರಾಧಿ ಮತ್ತು ಶಿಕ್ಷೆ ವಿಧಿಸಿದ ಸೂರತ್ ನ್ಯಾಯಾಲಯದ ತೀರ್ಪಿನ ಪ್ರಮುಖ ಅಂಶಗಳು ಎಂದು ಹೇಳಿದ್ದಾರೆ.

ಗಾಂಧಿ ಮತ್ತು ಕಾಂಗ್ರೆಸ್‌ನ ಕಾನೂನು ತಂಡವು ಈಗ ಯಾವುದೇ ಸಮಯವನ್ನು ವ್ಯರ್ಥ ಮಾಡಲು ಹೋಗುವುದಿಲ್ಲ. ಸೂರತ್ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ಪಡೆಯಲು ಹೈಕೋರ್ಟ್ (ಬಹುಶಃ ಗುಜರಾತ್ ಹೈಕೋರ್ಟ್) ಮೊರೆ ಹೋಗಲಿದೆ. ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಮತ್ತು ಅಂತಹ ಪ್ರಕರಣಗಳಲ್ಲಿ ಮೇಲ್ಮನವಿ ನ್ಯಾಯಾಲಯವು ಯಾವಾಗಲೂ ಸೆಷನ್ಸ್ ಆಗಿರುತ್ತದೆ. ಅಂದರೆ ಗಾಂಧಿ ಸ್ವತಃ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ಸಾಧ್ಯವಿಲ್ಲ. ಖಚಿತವಾಗಿ ಹೇಳುವುದಾದರೆ, ಇದು ಪ್ರಗತಿಯಲ್ಲಿರುವಾಗಲೂ, ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ಲೋಕಸಭೆಯ ಸ್ಪೀಕರ್ ಅವರನ್ನು ಅನರ್ಹಗೊಳಿಸಬಹುದು. ಸರ್ವೋಚ್ಚ ನ್ಯಾಯಾಲಯದ ಆದೇಶ ಬಂದರೆ ಆಗ ಈ ವಿಚಾರದಲ್ಲಿ ಲೋಕಸಭೆಯ ಸ್ಪೀಕರ್‌ ವಿವೇಚನೆ ಬಳಸಬೇಕಾಗುತ್ತದೆ ಎಂದು ಖಾನ್‌ ಹೇಳಿದರು.

ಏನಿದು ಮೋದಿ ಸರ್‌ನೇಮ್‌ ಅವಹೇಳನ ಪ್ರಕರಣ?

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ 2019ರ ಲೋಕಸಭೆ ಚುನಾವಣೆಗೆ ಮೊದಲು ಕೋಲಾರದಲ್ಲಿ ಪ್ರಚಾರ ಸಭೆಯಲ್ಲಿ ಎಲ್ಲ ಕಳ್ಳರೂ ಮೋದಿ ಎನ್ನುವ ಸರ್‌ನೇಮ್‌ ಹೊಂದಿರುವುದು ಹೇಗೆ ಎಂದು ಲೇವಡಿ ಮಾಡಿದ್ದರು. ಇದರ ವಿರುದ್ದ ಗುಜರಾತ್‌ನ ಮಾಜಿ ಸಚಿವ, ಬಿಜೆಪಿ ಶಾಸಕ ಪೂರ್ಣೇಶ್‌ ಮೋದಿ ಪೊಲೀಸ್‌ ದೂರು ದಾಖಲಿಸಿದ್ದರು. ಐಪಿಸಿ ಸೆಕ್ಷನ್‌ 500ರ ಪ್ರಕಾರ ರಾಹುಲ್‌ ಗಾಂಧಿ ವಿರುದ್ಧ ಪ್ರಕರಣ ದಾಖಲಾಗಿತ್ತು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ