logo
ಕನ್ನಡ ಸುದ್ದಿ  /  Nation And-world  /  Rats Ate 581 Kg Confiscated Marijuana, Says Mathura Police, Court Demands Proof Of It

Mathura Police: ವಶಪಡಿಸಿಕೊಂಡ 581 ಕೆಜಿ ಗಾಂಜಾವನ್ನ ಇಲಿಗಳು ತಿಂದಿವೆ ಎಂದ ಪೊಲೀಸರು.. ಪುರಾವೆ ಕೇಳಿದ ಕೋರ್ಟ್​

HT Kannada Desk HT Kannada

Nov 24, 2022 05:48 PM IST

ಸಾಂದರ್ಭಿಕ ಚಿತ್ರ

    • ವಿಶೇಷ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ ಆಕ್ಟ್ (1985) ನ್ಯಾಯಾಲಯಕ್ಕೆ ಮಥುರಾ ಪೊಲೀಸರು ಸಲ್ಲಿಸಿದ ವರದಿಯಲ್ಲಿ ಇಲಿಗಳು ಗೋದಾಮುಗಳಲ್ಲಿ ಇಡಲಾಗಿದ್ದ ಜಪ್ತಿ ಮಾಡಿದ 581 ಕೆಜಿ ಗಾಂಜಾವನ್ನು ತಿಂದಿವೆ ಎಂದು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಥುರಾ (ಉತ್ತರ ಪ್ರದೇಶ): ವಿಶೇಷ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ ಆಕ್ಟ್ (1985) ನ್ಯಾಯಾಲಯಕ್ಕೆ ಮಥುರಾ ಪೊಲೀಸರು ಸಲ್ಲಿಸಿದ ವರದಿಯಲ್ಲಿ ಇಲಿಗಳು ಗೋದಾಮುಗಳಲ್ಲಿ ಇಡಲಾಗಿದ್ದ ಜಪ್ತಿ ಮಾಡಿದ 581 ಕೆಜಿ ಗಾಂಜಾವನ್ನು ತಿಂದಿವೆ ಎಂದು ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

20 ವರ್ಷಗಳಲ್ಲಿ 115 ಐಐಟಿ ವಿದ್ಯಾರ್ಥಿಗಳ ಆತ್ಮಹತ್ಯೆ; ಅಗ್ರ ಸ್ಥಾನದಲ್ಲಿರುವ ಮದ್ರಾಸ್‌ನಲ್ಲಿ 26 ಸಾವು, ಆರ್‌ಟಿಐನಿಂದ ಮಾಹಿತಿ ಬಹಿರಂಗ

ತಿರುಮಲ ತಿರುಪತಿ ದೇವಸ್ಥಾನದಲ್ಲಿ ವಿಶೇಷ ಉತ್ಸವಗಳು, ಮೇ ತಿಂಗಳ ಉತ್ಸವ ವೇಳಾಪಟ್ಟಿ ಪ್ರಕಟಿಸಿದ ಟಿಟಿಡಿ

Gold Rate Today: ಚಿನ್ನಾಭರಣ ಪ್ರಿಯರಿಗೆ ಇಲ್ಲಿದೆ ಗುಡ್‌ನ್ಯೂಸ್‌; 10ಗ್ರಾಂ ಚಿನ್ನಕ್ಕೆ 1000 ರೂ ಇಳಿಕೆ, ಬೆಳ್ಳಿ ದರವೂ ಕುಸಿತ

RED NOTICE: ಇಂಟರ್‌ಪೋಲ್ ರೆಡ್ ನೋಟಿಸ್‌ ಎಂದರೇನು, ಇದನ್ನು ಯಾರು ಯಾವಾಗ ಪ್ರಕಟಿಸುತ್ತಾರೆ, ಇದರ ಮಹತ್ವವೇನು

ಮಥುರಾದ ಶೇರ್ಗಢ್ ಮತ್ತು ಹೈವೇ ಠಾಣೆ ಪೊಲೀಸರು ಎರಡು ವಿಭಿನ್ನ ಪ್ರಕರಣಗಳಲ್ಲಿ 386 ಮತ್ತು 195 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದರು. ಎನ್‌ಡಿಪಿಎಸ್ ಕಾಯ್ದೆಯಡಿ ದಾಖಲಾದ ಪ್ರಕರಣದಲ್ಲಿ ವಶಪಡಿಸಿಕೊಂಡ ಸುಮರಾಉ 60 ಲಕ್ಷ ಮೌಲ್ಯದ 581 ಕೆಜಿ ಗಾಂಜಾವನ್ನ ಹಾಜರುಪಡಿಸುವಂತೆ ನ್ಯಾಯಾಲಯ ಪೊಲೀಸರಿಗೆ ಸೂಚಿಸಿತ್ತು.

ಇದಕ್ಕೆ ಉತ್ತರಿಸಿದ ಪೊಲೀಸ್ ಪ್ರಾಸಿಕ್ಯೂಟರ್, ವಶಪಡಿಸಿಕೊಂಡ ಗಾಂಜಾವನ್ನು ಶೇರ್ಗಢ್ ಮತ್ತು ಹೈವೇ ಪೊಲೀಸ್ ಠಾಣೆಯ ಗೋದಾಮುಗಳಲ್ಲಿ ಸಂಗ್ರಹಿಸಿಡಲಾಗಿತ್ತು. ಆದರೆ ಅಲ್ಲಿ ಇಲಿಗಳ ಕಾಟ ಹೆಚ್ಚಿದ್ದು, ಗಾಂಜಾವನ್ನು ಇಲಿಗಳು ತಿಂದಿವೆ ಎಂದು ಕೋರ್ಟ್​ಗೆ ತಿಳಿಸಿದ್ದಾರೆ. ಆದರೆ ಇದನ್ನು ನಂಬದ ಕೋರ್ಟ್​ ನವೆಂಬರ್​ 26ರ ಒಳಗೆ ಇಲಿಗಳೇ ಗಾಂಜಾವನ್ನು ತಿಂದಿದೆ ಎಂಬುದಕ್ಕೆ ಪುರಾವೆ ಸಹಿತ ವರದಿ ನೀಡುವಂತೆ ಕೇಳಿದೆ.

ಅಲ್ಲದೇ ಗಾಂಜಾವು ಸುಮಾರು 60 ಲಕ್ಷ ರೂಪಾಯಿ ಮೌಲ್ಯದ್ದಾಗಿದ್ದು, ಪೊಲೀಸರ ಬೇಜವಾಬ್ದಾರಿತನ ಮತ್ತು ನಿರ್ಲಕ್ಷ್ಯವನ್ನು ಈ ಪ್ರಕರಣವು ಎತ್ತಿ ತೋರಿಸುತ್ತಿದೆ ಎಂದು ಕೋರ್ಟ್​ ಸಿಡಿಮಿಡಿಗೊಂಡಿದೆ. ಪೊಲೀಸ್ ಗೋದಾಮುಗಳಲ್ಲಿ ಸಂಗ್ರಹವಾಗಿರುವ ಗಾಂಜಾವನ್ನು ಹರಾಜು ಅಥವಾ ವಿಲೇವಾರಿ ಮಾಡಲು ನ್ಯಾಯಾಲಯವು ಐದು ಅಂಶಗಳ ನಿರ್ದೇಶನಗಳನ್ನು ಸಹ ಕೋರ್ಟ್​ ನೀಡಿದೆ.

ಗಮನಿಸಬಹುದಾದ ಇತರೆ ವಿಚಾರಗಳು

ಡ್ರಗ್‌ ಮಾಫಿಯಾ ಗ್ಯಾಂಗ್‌ನಿಂದ ಇತ್ತೀಚೆಗೆ ಇಬ್ಬರ ಹತ್ಯೆಯಾಗಿರುವ ಕುರಿತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಆಘಾತ ವ್ಯಕ್ತಪಡಿಸಿದ್ದಾರೆ. ಡ್ರಗ್‌ ಮಾಫಿಯಾ ವಿರುದ್ಧ ಹೋರಾಡಲು ಸರಕಾರದ ಜತೆ ಕೈಜೋಡಿಸಿರುವ ಕಾರಣದಿಂದ ಇವರಿಬ್ಬರ ಹತ್ಯೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದ್ದಾರೆ. ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ

ಮುಸ್ಲಿಂ ಸಮುದಾಯದಲ್ಲಿ ಆಚರಣೆಯಲ್ಲಿರುವ ಬಹುಪತ್ನಿತ್ವ ಮತ್ತು ನಿಕಾಹ್‌-ಹಲಾಲಾಗೆ ಸಂಬಂಧಪಟ್ಟ ಅರ್ಜಿಗಳ ವಿಚಾರಣೆ ನಡೆಸಲು ಹೊಸ ಸಂವಿಧಾನ ಪೀಠ ರಚಿಸಲು ಸುಪ್ರೀಂ ಕೋರ್ಟ್‌ ಇಂದು ಸಮ್ಮತಿ ನೀಡಿದೆ. ಈ ವಿಷಯಗಳಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಬಗೆಹರಿಸಲು ಹೊಸ ಪೀಠ ರಚಿಸುವುದಾಗಿ ದೇಶದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್‌ ನೇತೃತ್ವದ ನ್ಯಾಯಪೀಠವು ತಿಳಿಸಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ

ವಿಭಾಗ

    ಹಂಚಿಕೊಳ್ಳಲು ಲೇಖನಗಳು