logo
ಕನ್ನಡ ಸುದ್ದಿ  /  Nation And-world  /  Reliance Jio To Launch 5g Services By Diwali

Jio to launch 5G services by Diwali: ವಿಶ್ವದ ಅತಿದೊಡ್ಡ 5G ಸೇವೆ ಆರಂಭಿಸಲಿರುವ ರಿಲಯನ್ಸ್ ಜಿಯೋ, ದೀಪಾವಳಿ ವೇಳೆಗೆ ವೇಗದ ಇಂಟರ್ನೆಟ್‌

Jayaraj HT Kannada

Aug 29, 2022 03:42 PM IST

ಭಾರತದಲ್ಲಿ ವಿಶ್ವದ ಅತಿದೊಡ್ಡ 5G ಸೇವೆ

  • “ಜಿಯೋ 5Gಯು ವಿಶ್ವದ ಅತಿದೊಡ್ಡ ಮತ್ತು ಅತ್ಯಾಧುನಿಕ 5G ನೆಟ್‌ವರ್ಕ್ ಆಗಲಿದೆ. ಸ್ಟ್ಯಾಂಡ್‌ಲೋನ್ 5G ಎಂದು ಕರೆಯಲ್ಪಡುವ ಈ ವೇಗದ ಇಂಟರ್ನೆಟ್‌ ಸೇವೆಯು, ನಮ್ಮ ಈ ಹಿಂದಿನ 4G ನೆಟ್‌ವರ್ಕ್‌ ಮೇಲೆ ಸ್ವಲ್ಪವೂ ಅವಲಂಬಿತವಾಗಿಲ್ಲ” ಎಂದು ಸಂಸ್ಥೆ ಹೇಳಿದೆ.

ಭಾರತದಲ್ಲಿ ವಿಶ್ವದ ಅತಿದೊಡ್ಡ 5G ಸೇವೆ
ಭಾರತದಲ್ಲಿ ವಿಶ್ವದ ಅತಿದೊಡ್ಡ 5G ಸೇವೆ (Reuters)

ನವದೆಹಲಿ: ದೇಶದಲ್ಲಿ ಅಕ್ಟೋಬರ್‌ ವೇಳೆಗೆ 5G ಇಂಟರ್ನೆಟ್‌ ಸೇವೆಗಳು ಲಭ್ಯವಾಗಲಿದೆ ಎಂದು ಕೇಂದ್ರ ಸರ್ಕಾರ ಈ ಹಿಂದೆಯೇ ಹೇಳಿತ್ತು. ಆದರೆ ಯಾವ ಟೆಲಿಕಾಂ ಸಂಸ್ಥೆ ಈ ಸೇವೆಯನ್ನು ನೀಡಲಿದೆ ಎಂಬುದು ಅಂತಿಮವಾಗಿರಲಿಲ್ಲ. ಈಗ ಎಲ್ಲಾ ಗೊಂದಲಗಳಿಗೂ ಭಾರತದ ಟೆಲಿಕಾಂ ದೈತ್ಯ ರಿಲಾಯನ್ಸ್‌ ಜಿಯೋ ಮಾಲೀಕ ಮುಖೇಶ್‌ ಅಂಬಾನಿ ತೆರೆ ಎಳೆದಿದ್ದಾರೆ. ತಮ್ಮ ಸಂಸ್ಥೆಯೇ ದೇಶದಲ್ಲಿ ಎರಡು ತಿಂಗಳೊಳಗೆ 5ಜಿ ಸೇವೆಗಳನ್ನು ನೀಡುವುದಾಗಿ ಅಂಬಾನಿ ಘೋಷಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Gold Rate Today: ಏರಿಕೆಯ ಪರ್ವದ ನಡುವೆ ತುಸು ಇಳಿಕೆಯಾಗಿ ಖುಷಿ ಹೆಚ್ಚಿಸಿದ ಚಿನ್ನದ ದರ; ಇಂದು ಬೆಳ್ಳಿ ಬೆಲೆ ಸ್ಥಿರ

10 ಗ್ರಾಂ ಚಿನ್ನಕ್ಕೆ 2 ಲಕ್ಷ ಆಗುವ ಕಾಲ ದೂರವಿಲ್ಲ, ಏಕೆ ಏರುತ್ತಿದೆ ಬಂಗಾರದ ಬೆಲೆ? ಇಲ್ಲಿದೆ ನೀವು ತಿಳಿಯಬೇಕಾದ 9 ಅಂಶಗಳು

Gold Rate Today: ಸೋಮವಾರ ತಟಸ್ಥವಾಗುವ ಮೂಲಕ ಕೊಂಚ ನೆಮ್ಮದಿ ಮೂಡಿಸಿದ ಹಳದಿ ಲೋಹ, ಇಂದು ಬೆಳ್ಳಿ ದರವೂ ಇಳಿಕೆ

Tik Tok Star Murder: ಖ್ಯಾತ ಟಿಕ್‌ ಟಾಕ್‌ ಸ್ಟಾರ್‌ ಓಂ ಫಹಾದ್‌ ಭೀಕರ ಹತ್ಯೆ, ಕಾರಣವೇನು

ಹೌದು, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಜಿಯೋ, ಮುಂದಿನ ಎರಡು ತಿಂಗಳಲ್ಲಿ ದೇಶದ ಮೆಟ್ರೋ ನಗರಗಳಲ್ಲಿ 'ಸ್ವತಂತ್ರ' 5G ಸೇವೆಗಳನ್ನು ಹೊರತರಲಿದೆ ಎಂದು ಕಂಪನಿಯ ಅಧ್ಯಕ್ಷ ಮುಖೇಶ್ ಅಂಬಾನಿ ಘೋಷಿಸಿದ್ದಾರೆ. ಇಂದು ನಡೆದ ರಿಲಯನ್ಸ್‌ನ 45ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ಘೋಷಣೆ ಮಾಡಲಾಗಿದ್ದು, ಜಿಯೋ ಬಳಕೆದಾರರಿಗೆ ವೇಗದ ಇಂಟರ್ನೆಟ್‌ ಸೇವೆಗಳು ಲಭ್ಯವಾಗಲಿದೆ. ಇದು 'ವಿಶ್ವದ ಅತಿದೊಡ್ಡ' 5ಜಿ ಸೇವೆ ಎಂದು ಅಂಬಾನಿ ಘೋಷಣೆ ಮಾಡಿದ್ದಾರೆ.

“ಜಿಯೋ 5Gಯು ವಿಶ್ವದ ಅತಿದೊಡ್ಡ ಮತ್ತು ಅತ್ಯಾಧುನಿಕ 5G ನೆಟ್‌ವರ್ಕ್ ಆಗಲಿದೆ. ಸ್ಟ್ಯಾಂಡ್‌ಲೋನ್ 5G(standalone 5G) ಎಂದು ಕರೆಯಲ್ಪಡುವ ಈ ವೇಗದ ಇಂಟರ್ನೆಟ್‌ ಸೇವೆಯು, ನಮ್ಮ ಈ ಹಿಂದಿನ 4G ನೆಟ್‌ವರ್ಕ್‌ ಮೇಲೆ ಸ್ವಲ್ಪವೂ ಅವಲಂಬಿತವಾಗಿಲ್ಲ” ಎಂದು ಸಂಸ್ಥೆ ಹೇಳಿದೆ.

ಜಿಯೋ 5G ಸೇವೆಗಳು ಪ್ರತಿಯೊಬ್ಬರಿಗೂ ಕೈಗೆಟುಕುವ ದರದಲ್ಲಿ ಸಿಗಲಿದೆ. ಇದು ಪ್ರತಿಯೊಬ್ಬರನ್ನು ಪ್ರತಿ ಸ್ಥಳದೊಂದಿಗೆ ಅತ್ಯುನ್ನತ ಗುಣಮಟ್ಟದೊಂದಿಗೆ ಸಂಪರ್ಕಿಸುತ್ತದೆ ಎಂದು ಅಂಬಾನಿ ಹೇಳಿದರು. ವಿಶೇಷವಾಗಿ “ಚೀನಾ ಮತ್ತು ಅಮೆರಿಕಗಿಂತಲೂ ಭಾರತವನ್ನು ಡೇಟಾ-ಚಾಲಿತ ಆರ್ಥಿಕತೆಯಾಗಿ ಮಾಡಲು ನಾವು ಬದ್ಧರಾಗಿದ್ದೇವೆ” ಎಂದು ಅಂಬಾನಿ ಹೇಳಿದ್ದಾರೆ.

ಭಾರತದ ಉನ್ನತ ಟೆಲಿಕಾಂ ಕಂಪನಿಯು 5G ಸೇವೆಗಳನ್ನು ಹೊರತರಲು, 2 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಲು ಬದ್ಧವಾಗಿದೆ ಎಂದು ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಂಬಾನಿ ಹೇಳಿದ್ದಾರೆ. ಡಿಸೆಂಬರ್ 2023ರ ವೇಳೆಗೆ ಕಂಪನಿಯು ದೇಶದ ಪ್ರಮುಖ ನಗರಗಳಲ್ಲಿ 5G ಅನ್ನು ಹೊರತರುತ್ತದೆ ಎಂದು ಅವರು ಹೇಳಿದ್ದಾರೆ.

ಈ ತಿಂಗಳ ಆರಂಭದಲ್ಲಿ ನಡೆದ ತರಾಂಗಾತರ ಹರಾಜು ಪ್ರಕ್ರಿಯೆಯಲ್ಲಿ, ಜಿಯೋ ಸಂಸ್ಥೆಯು ಭಾರತದ 5G ಸ್ಪೆಕ್ಟ್ರಮ್ ಹರಾಜನ್ನು ಗೆದ್ದುಕೊಂಡಿತ್ತು. ಬರೋಬ್ಬರಿ 11 ಶತಕೋಟಿ ಡಾಲರ್‌ ಮೌಲ್ಯದ ತರಂಗಾತರ ಹರಾಜನ್ನು ತನ್ನದಾಗಿಸಿಕೊಂಡಿತು.

ಅಕ್ಟೋಬರ್ ವೇಳೆಗೆ ಈಗಿರುವ 4Gಗಿಂತ ಸುಮಾರು 10 ಪಟ್ಟು ವೇಗದ 5G ಸೇವೆಗಳನ್ನು ಆರಂಭಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಪ್ರಪಂಚದಾದ್ಯಂತ ಈಗಾಗಲೇ ಇರುವ ಕೆಲವು ತಂತ್ರಜ್ಞಾನಗಳಾದ ಸ್ವಯಂ-ಚಾಲಿತ ಕಾರು ಮತ್ತು ಕೃತಕ ಬುದ್ಧಿಮತ್ತೆಯಂತಹ ಉದಯೋನ್ಮುಖ ತಂತ್ರಜ್ಞಾನಗಳಿಗೆ ಈ ವೇಗದ ಇಂಟರ್ನೆಟ್‌ ತುಂಬಾ ಮುಖ್ಯ. ಹೀಗಾಗಿ ಮುಂದಿನ ಪೀಳಿಗೆಗೆ ಈ ನೆಟ್‌ವರ್ಕ್ ತುಂಬಾ ಪ್ರಮುಖವಾಗಿದೆ.

ಸಂಪೂರ್ಣ ಭಾರತದಲ್ಲಿ ಯಾವಾಗ?

ಈ ವರ್ಷದ ದೀಪಾವಳಿಯ ವೇಳೆಗೆ ದೆಹಲಿ, ಮುಂಬೈ, ಬೆಂಗಳೂರು, ಕೋಲ್ಕತ್ತಾ ಮತ್ತು ಚೆನ್ನೈನಂತಹ ಪ್ರಮುಖ ನಗರಗಳಲ್ಲಿ 5G ಸೇವೆಗಳನ್ನು ಪ್ರಾರಂಭಿಸಲು ಸಿದ್ಧವಾಗಿದೆ. ತರುವಾಯ, 2023ರ ಡಿಸೆಂಬರ್‌ನೊಳಗೆ ದೇಶದಾದ್ಯಂತ ಪ್ರತಿಯೊಂದು ಪಟ್ಟಣ ಮತ್ತು ತಾಲೂಕು ವ್ಯಾಪ್ತಿಯಲ್ಲೂ 5G ನೆಟ್‌ವರ್ಕ್ ಅನ್ನು ವಿಸ್ತರಿಸಲು ರಿಲಯನ್ಸ್‌ ಜಿಯೋ ಉದ್ದೇಶಿಸಿದೆ. ಅಂದರೆ ಈಗಿನಿಂದ ಸುಮಾರು 18 ತಿಂಗಳೊಳಗೆ ದೇಶಾದ್ಯಂತ 5ಜಿ ಇಂಟರ್ನೆಟ್‌ ಸೇವೆ ಲಭ್ಯವಾಗಲಿದೆ.

ರಿಲಯನ್ಸ್ ಜಿಯೋ ಇನ್ಫೋಕಾಮ್ ಈಗಾಗಲೇ 700MHz, 800MHz, 1800MHz, 3300MHz ಮತ್ತು 26GHz ಆವರ್ತನದ ಸ್ಪೆಕ್ಟ್ರಮ್ ಅಥವಾ ತರಂಗಾಂತರಗಳನ್ನು ಸ್ವಾಧೀನಪಡಿಸಿಕೊಂಡಿದೆ. ಆರು ವರ್ಷಗಳ ಹಿಂದೆ ಪ್ರಾರಂಭವಾದ ಜಿಯೋ, ಅತಿ ಕಡಿಮೆ ಅವಧಿಯಲ್ಲಿ ಅತಿ ದೊಡ್ಡ 4G ನೆಟ್‌ವರ್ಕ್‌ ಆರಂಭಿಸಿ ಅನೇಕ ವಿಶ್ವ ದಾಖಲೆಗಳನ್ನು ಸೃಷ್ಟಿಸಿದೆ. ಜಿಯೋದ 4G ನೆಟ್‌ವರ್ಕ್‌ಗಳನ್ನು ಸುಮಾರು 400 ಮಿಲಿಯನ್‌ಗಿಂತಲೂ ಹೆಚ್ಚು ಗ್ರಾಹಕರು ಬಳಸುತ್ತಿದ್ದಾರೆ. ಈಗ 5G ಸೇವೆಗಳೊಂದಿಗೆ ಜಿಯೋ ಈಗ ತನ್ನ ಬಳಕೆದಾರರನ್ನು ಇನ್ನಷ್ಟು ಹೆಚ್ಚಿಸುವ ನಿರೀಕ್ಷೆಯಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು