logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Reliance Jio: ಕೈಗೆಟಕುವ ಬೆಲೆಯಲ್ಲಿ ಸಿಗಲಿದೆ ಜಿಯೋ ಲ್ಯಾಪ್‌ಟಾಪ್‌, ಬೆಲೆ ಎಷ್ಟು? ಯಾವಾಗ ಲಾಂಚ್‌?

Reliance Jio: ಕೈಗೆಟಕುವ ಬೆಲೆಯಲ್ಲಿ ಸಿಗಲಿದೆ ಜಿಯೋ ಲ್ಯಾಪ್‌ಟಾಪ್‌, ಬೆಲೆ ಎಷ್ಟು? ಯಾವಾಗ ಲಾಂಚ್‌?

HT Kannada Desk HT Kannada

Oct 03, 2022 02:26 PM IST

ಕಡಿಮೆ ಬೆಲೆಗೆ ಸಿಗಲಿದೆ ಜಿಯೋ ಲ್ಯಾಪ್‌ಟಾಪ್

  • ವರದಿಯ ಪ್ರಕಾರ, ಕೈಗೆಟಕುವ ಬೆಲೆಯ ಈ ಲ್ಯಾಪ್‌ಟಾಪ್ ಅನ್ನು JioBook ಎಂದು ಕರೆಯಲಾಗುತ್ತದೆ. ಇದು ಈ ತಿಂಗಳಿನಿಂದ ಶಾಲೆಗಳು ಮತ್ತು ಸರ್ಕಾರಿ ಸಂಸ್ಥೆಗಳಂತಹ ಗ್ರಾಹಕರಿಗೆ ಲಭ್ಯವಿರುತ್ತದೆ. ಮುಂದಿನ ಮೂರು ತಿಂಗಳೊಳಗೆ ಎಲ್ಲಾ ವರ್ಗದ ಗ್ರಾಹಕರಿಗಾಗಿ ಬಿಡುಗಡೆ ಮಾಡಲಾಗುತ್ತದೆ.

ಕಡಿಮೆ ಬೆಲೆಗೆ ಸಿಗಲಿದೆ ಜಿಯೋ ಲ್ಯಾಪ್‌ಟಾಪ್
ಕಡಿಮೆ ಬೆಲೆಗೆ ಸಿಗಲಿದೆ ಜಿಯೋ ಲ್ಯಾಪ್‌ಟಾಪ್

ರಿಲಯನ್ಸ್ ಜಿಯೋ ಶೀಘ್ರದಲ್ಲೇ ಕೈಗೆಟಕುವ ಬೆಲೆಗೆ ಲ್ಯಾಪ್‌ಟಾಪ್ ಅನ್ನು ಬಿಡುಗಡೆ ಮಾಡಲಿದೆ. ಭಾರತದಲ್ಲಿ ಕಡಿಮೆ ಬೆಲೆಯ ಜಿಯೋ ಫೋನ್ ಯಶಸ್ಸು ಪಡೆದಿದ್ದು, ಇದರ ಮುಂದುವರಿದ ಭಾಗವಾಗಿ ಅತಿ ಕಡಿಮೆ ಬೆಲೆಯ ಲ್ಯಾಪ್‌ಟಾಪ್ ಮಾರುಕಟ್ಟೆಗೆ ಬರಲಿದೆ. ಇದಕ್ಕಾಗಿ ಟೆಲಿಕಾಂ ದೈತ್ಯ ಎಲ್ಲಾ ತಯಾರಿ ನಡೆಸಿದೆ ಎಂದು ಮೂಲಗಳನ್ನಾಧರಿಸಿ ಸುದ್ದಿ ಸಂಸ್ಥೆ ರಾಯಿಟರ್ಸ್‌ ವರದಿ ಮಾಡಿದೆ.

ಟ್ರೆಂಡಿಂಗ್​ ಸುದ್ದಿ

ತಿರುಮಲ ತಿರುಪತಿಯಲ್ಲಿ ನವದಂಪತಿಗೆ ವಿಶೇಷ ಶ್ರೀವಾರಿ ದರ್ಶನ ಟಿಕೆಟ್ ಪ್ರಕಟಿಸಿದ ಟಿಟಿಡಿ; ಎಷ್ಟಿವೆ ಕೋಟಾ, ದರ ಇತ್ಯಾದಿ ವಿವರ

Gold Rate Today: ಮತ್ತೆ ಆರಂಭವಾಯ್ತು ಚಿನ್ನ, ಬೆಳ್ಳಿ ದರದಲ್ಲಿನ ಏರಿಳಿತ; ಶನಿವಾರ ಚಿನ್ನದ ದರ ಇಳಿಕೆ, ಬೆಳ್ಳಿ ಏರಿಕೆ

Explainer: ಪ್ರಜ್ವಲ್ ರೇವಣ್ಣ ಪಲಾಯನಕ್ಕೆ ಪವರ್‌ ತುಂಬಿದ ರಾಜತಾಂತ್ರಿಕ ಪಾಸ್‌ಪೋರ್ಟ್; ಏನಿದರ ವಿಶೇಷ?

Closing Bell: ಮುಂಬೈ ಷೇರುಪೇಟೆಯ ವಾರಾಂತ್ಯದಲ್ಲಿ ಸೆನ್ಸೆಕ್ಸ್ 732 ಅಂಕಗಳ ಕುಸಿತ; ಈ ಪರಿ ಮಾರುಕಟ್ಟೆ ತಲ್ಲಣಕ್ಕೆ ಕಾರಣವೇನು

2016ರಲ್ಲಿ, ರಿಲಯನ್ಸ್ ಜಿಯೋ 4G ಡೇಟಾ ಯೋಜನೆಗಳು ಮತ್ತು ಧ್ವನಿ ಸೇವೆ ಸೇರಿದಂತೆ ಭಾರಿ ಕೊಡುಗೆಯೊಂದಿಗೆ ಟೆಲಿಕಾಂ ವಲಯವನ್ನು ಅಲ್ಲಾಡಿಸಿತು. ಅಂದಿನಿಂದ ಇಂಟರ್ನೆಟ್‌ ಸ್ವಲ್ಪ ಅಗ್ಗವಾಯಿತು. ಕಳೆದ ವರ್ಷ, ರಿಲಯನ್ಸ್ ಜಿಯೋ ಕೇವಲ 6,623 ರೂಪಾಯಿ ಬೆಲೆಯ JioPhone ಅನ್ನು ಅನಾವರಣಗೊಳಿಸಿತು. ಇದು ಸ್ಮಾರ್ಟ್‌ಫೋನ್‌ ವಲಯದಲ್ಲಿ ಭಾರಿ ಯಶಸ್ಸು ಪಡೆಯಿತು.

ಬೆಲೆ ಎಷ್ಟು?

ರಾಯಿಟರ್ಸ್‌ ವರದಿಯ ಪ್ರಕಾರ ಈ ಲ್ಯಾಪ್‌ಟಾಪ್‌ ಬೆಲೆ ಕೇವಲ 15,000 ರೂಪಾಯಿ. ಇಷ್ಟು ಅಗ್ಗದ ಬೆಲೆಗೆ ಈ ಲ್ಯಾಪ್‌ಟಾಪ್‌ ನಿಮ್ಮ ಕೈಸೇರಲಿದೆ.

ಹೆಸರೇನು? ಯಾವಾಗದಿಂದ ಲಭ್ಯ?

ವರದಿಯ ಪ್ರಕಾರ, ಕೈಗೆಟಕುವ ಬೆಲೆಯ ಈ ಲ್ಯಾಪ್‌ಟಾಪ್ ಅನ್ನು JioBook ಎಂದು ಕರೆಯಲಾಗುತ್ತದೆ. ಇದನ್ನು 4G SIM ಕಾರ್ಡ್‌ನೊಂದಿಗೆ ಎಂಬೆಡ್ ಮಾಡಲಾಗುತ್ತದೆ. ಇದು ಈ ತಿಂಗಳಿನಿಂದ ಶಾಲೆಗಳು ಮತ್ತು ಸರ್ಕಾರಿ ಸಂಸ್ಥೆಗಳಂತಹ ಗ್ರಾಹಕರಿಗೆ ಲಭ್ಯವಿರುತ್ತದೆ. ಮುಂದಿನ ಮೂರು ತಿಂಗಳೊಳಗೆ ಎಲ್ಲಾ ವರ್ಗದ ಗ್ರಾಹಕರಿಗಾಗಿ ಬಿಡುಗಡೆ ಮಾಡಲಾಗುತ್ತದೆ.

JioBook ಅನ್ನು ಗುತ್ತಿಗೆ ಆಧಾರಿತ ತಯಾರಕ ಫ್ಲೆಕ್(Flex) ಮೂಲಕ ಸ್ಥಳೀಯವಾಗಿ ಉತ್ಪಾದಿಸಲಾಗುತ್ತದೆ. ರಿಲಯನ್ಸ್ ಜಿಯೋ 2020 ರಲ್ಲಿ ಜಾಗತಿಕ ಹೂಡಿಕೆದಾರರಾದ KKR & Co Inc ಮತ್ತು ಸಿಲ್ವರ್ ಲೇಕ್‌ನಿಂದ ಸುಮಾರು 22 ಬಿಲಿಯನ್ ಡಾಲರ್‌ ಹೂಡಿಕೆ ಸಂಗ್ರಹಿಸಿದೆ ಎಂದು ರಾಯಿಟರ್ಸ್ ವರದಿ ತಿಳಿಸಿದೆ.

JioBook ಲ್ಯಾಪ್‌ಟಾಪ್‌ JioPhone ನಷ್ಟು ದೊಡ್ಡದಾಗಿರುತ್ತದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ರಿಲಯನ್ಸ್ ಜಿಯೋಗೆ 42 ಕೋಟಿಗೂ ಹೆಚ್ಚು ಗ್ರಾಹಕರಿದ್ದಾರೆ. ಈ ಲ್ಯಾಪ್‌ಟಾಪ್ JioOS ಆಪರೇಟಿಂಗ್ ಸಿಸ್ಟಮ್‌ ಮೂಲಕ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಕೆಲವು ಮೈಕ್ರೋಸಾಫ್ಟ್ ಅಪ್ಲಿಕೇಶನ್‌ಗಳು ಸಹ ಇದರಲ್ಲಿ ಲಭ್ಯವಿರುತ್ತವೆ. ಇದು ಆರ್ಮ್ ಲಿಮಿಟೆಡ್‌ನ ತಂತ್ರಜ್ಞಾನದ ಆಧಾರದ ಮೇಲೆ ಕ್ವಾಲ್ಕಾಮ್ ಚಿಪ್‌ಗಳಿಂದ ಚಾಲಿತವಾಗಲಿದೆ.

ಏನೇ ಇದ್ದರೂ, ಲ್ಯಾಪ್‌ಟಾಪ್‌ ದೈತ್ಯರಾದ Acer, Lenovo, HP ಮತ್ತು Dellನಂತಹ ಕಂಪನಿಗಳ ವಿರುದ್ಧ ಸ್ಪರ್ಧಿಸುವುದು JioBookಗೆ ದೊಡ್ಡ ಸವಾಲಾಗಲಿದೆ. ಭಾರತದಲ್ಲಿನ ಲ್ಯಾಪ್‌ಟಾಪ್‌ಗಳು ಪ್ರಧಾನವಾಗಿ ಮೈಕ್ರೋಸಾಫ್ಟ್ ವಿಂಡೋಸ್‌ನಲ್ಲಿ ಕಾರ್ಯನಿರ್ವಹಿಸುತ್ತವೆ. ಈ ನಡುವೆ ಜಿಯೋಬುಕ್‌ ಎಷ್ಟರ ಮಟ್ಟಿಕೆ ಜನಪ್ರಿಯವಾಗಲಿದೆ ಎಂಬುದನ್ನು ನೋಡಬೇಕಾಗಿದೆ.

ರಿಲಯನ್ಸ್ ಜಿಯೋ ಈಗಾಗಲೇ ದೀಪಾವಳಿಯ ವೇಳೆಗೆ ಆಯ್ದ ಮೆಟ್ರೋ ನಗರಗಳಲ್ಲಿ ಸ್ವತಂತ್ರ 5G ಸೇವೆಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಮುಖೇಶ್ ಅಂಬಾನಿ ಅವರ ಹಿರಿಯ ಮಗ ಆಕಾಶ್ ಅಂಬಾನಿ ನೇತೃತ್ವದ ಕಂಪನಿಯು ಡಿಸೆಂಬರ್ 2023ರ ವೇಳೆಗೆ ಭಾರತದಾದ್ಯಂತ 5G ಸೇವೆಗಳನ್ನು ವಿಸ್ತರಿಸುವುದಾಗಿ ಹೇಳಿದ್ದಾರೆ.

ಕಂಪನಿಯು 5G Jiophone ಅನ್ನು 'ಗಂಗಾ' ಎಂಬ ಹೆಸರಿನೊಂದಿಗೆ ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ಫೋನ್‌ ಬೆಲೆಯು 8,000ದಿಂದ 12,000 ರೂಪಾಯಿ ನಡುವೆ ಇರುತ್ತದೆ ಎಂದು ಸಂಸ್ಥೆ ತಿಳಿಸಿದೆ.

    ಹಂಚಿಕೊಳ್ಳಲು ಲೇಖನಗಳು