logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Sbi Clerk Recruitment 2022: Sbiನ 5008 ಜೂನಿಯರ್‌ ಕ್ಲರ್ಕ್‌ ಅರ್ಜಿ ಸಲ್ಲಿಕೆ ಶುರು

SBI Clerk Recruitment 2022: SBIನ 5008 ಜೂನಿಯರ್‌ ಕ್ಲರ್ಕ್‌ ಅರ್ಜಿ ಸಲ್ಲಿಕೆ ಶುರು

HT Kannada Desk HT Kannada

Sep 07, 2022 03:49 PM IST

google News

SBI Clerk Recruitment 2022: SBIನ 5008 ಜೂನಿಯರ್‌ ಕ್ಲರ್ಕ್‌ ಅರ್ಜಿ ಸಲ್ಲಿಕೆ ಶುರು

    • SBI Clerk Recruitment 2022: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಜೂನಿಯರ್ ಅಸೋಸಿಯೇಟ್/ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಶುರುವಾಗಿದೆ. ಕನ್ನಡಿಗರಿಗೂ ಬೆಂಗಳೂರು ವೃತ್ತದಲ್ಲಿ 400ರಷ್ಟು ಉದ್ಯೋಗಾವಕಾಶವಿದೆ. ಅರ್ಜಿ ಸಲ್ಲಿಕೆಗೆ sbi.co.in ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಸಲು ಸೆ.27 ಕೊನೇ ದಿನ. ಉಳಿದ ವಿವರಗಳಿಗೆ ವರದಿ ಗಮನಿಸಿ. 
SBI Clerk Recruitment 2022: SBIನ 5008 ಜೂನಿಯರ್‌ ಕ್ಲರ್ಕ್‌ ಅರ್ಜಿ ಸಲ್ಲಿಕೆ ಶುರು
SBI Clerk Recruitment 2022: SBIನ 5008 ಜೂನಿಯರ್‌ ಕ್ಲರ್ಕ್‌ ಅರ್ಜಿ ಸಲ್ಲಿಕೆ ಶುರು

SBI Clerk Recruitment 2022: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಕ್ಲೆರಿಕಲ್ ಕೇಡರ್‌ನಲ್ಲಿ ಜೂನಿಯರ್ ಅಸೋಸಿಯೇಟ್ ( ಕಸ್ಟಮರ್‌ ಸಪೋರ್ಟ್‌ ಮತ್ತು ಸೇಲ್ಸ್) ಹುದ್ದೆಗಳಿಗೆ ಅರ್ಜಿ‌ ಸ್ವೀಕರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಎಸ್‌ಬಿಐ ವೆಬ್‌ಸೈಟ್‌ನ ಕರಿಯರ್ಸ್‌ ಪೋರ್ಟಲ್, sbi.co.in ಅಥವಾ ibpsonline.ibps.in ನಲ್ಲಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 27. ದೇಶಾದ್ಯಂತ 5008 ಹುದ್ದೆಗಳಿಗೆ ಅಧಿಸೂಚನೆಯನ್ನು ಎಸ್‌ಬಿಐ ಪ್ರಕಟಿಸಿದೆ.

SBI Clerk recruitment 2022: ಅರ್ಹತೆ, ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಶುಲ್ಕ ಇತ್ಯಾದಿ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 20 ವರ್ಷದಿಂದ 28 ವರ್ಷದೊಳಗಿನ ವಯೋಮಾನದವರಾಗಿರಬೇಕು. ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರುವ ಅಥವಾ ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಇಂಟಿಗ್ರೇಟೆಡ್ ಡ್ಯುಯಲ್ ಡಿಗ್ರಿ (IDD) ಪ್ರಮಾಣಪತ್ರವನ್ನು ಹೊಂದಿರುವ ಅಭ್ಯರ್ಥಿಗಳು, ತಾವು ಉತ್ತೀರ್ಣರಾದ ದಿನಾಂಕವು ಈ ವರ್ಷದ ನವೆಂಬರ್ 30 ರಂದು ಅಥವಾ ಅದಕ್ಕಿಂತ ಮೊದಲಿನದ್ದು ಇದೆ ಎಂದು ಖಚಿತಪಡಿಸಿಕೊಳ್ಳಬೇಕು.

ಆಯ್ಕೆ ಪ್ರಕ್ರಿಯೆಯು ಆನ್‌ಲೈನ್ ಪರೀಕ್ಷೆ (ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆ) ಮತ್ತು ನಿರ್ದಿಷ್ಟಪಡಿಸಿದ ಸ್ಥಳೀಯ ಭಾಷೆಯ ಪರೀಕ್ಷೆಯನ್ನು ಒಳಗೊಂಡಿರುತ್ತದೆ. 100 ಅಂಕಗಳ ವಸ್ತುನಿಷ್ಠ ಪರೀಕ್ಷೆಯನ್ನು ಒಳಗೊಂಡಿರುವ ಪೂರ್ವಭಾವಿ ಪರೀಕ್ಷೆಯು ಆನ್‌ಲೈನ್‌ನಲ್ಲಿ ನಡೆಯಲಿದೆ. ಪೂರ್ವಭಾವಿ ಪರೀಕ್ಷೆಯಲ್ಲಿ ಋಣಾತ್ಮಕ ಅಂಕ - ಪ್ರಶ್ನೆಗೆ 1/4 ಅಂಕಗಳನ್ನು ನಿಗದಿಪಡಿಸಲಾಗಿದೆ.

ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 750 ರೂ. SC/ ST/ PwBD/ DESM ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಪಾವತಿಸುವುದರಿಂದ ವಿನಾಯಿತಿ ನೀಡಲಾಗಿದೆ.

ಅರ್ಜಿಯ ಆನ್‌ಲೈನ್ ನೋಂದಣಿ ಪ್ರಾರಂಭ - 07/09/2022

ಅರ್ಜಿಯ ನೋಂದಣಿ ಮುಕ್ತಾಯ- 27/09/2022

ಅಪ್ಲಿಕೇಶನ್ ವಿವರ ಎಡಿಟ್‌ ಮಾಡಲು ಕೊನೇ ದಿನ 27/09/2022

ನಿಮ್ಮ ಅರ್ಜಿಯನ್ನು ಪ್ರಿಂಟ್‌ ಮಾಡಿಕೊಳ್ಳಲು ಕೊನೆಯ ದಿನಾಂಕ 12/10/2022

ಆನ್‌ಲೈನ್ ಶುಲ್ಕ ಪಾವತಿ ಅವಧಿ 07/09/2022 ರಿಂದ 27/09/2022

ಸಂಪೂರ್ಣ ನೋಟಿಫಿಕೇಶನ್‌ಗೆ ಈ ಲಿಂಕ್‌ ಗಮನಿಸಿ - SBI Clerk recruitment 2022: Notification

ಅರ್ಜಿ ಸಲ್ಲಿಕೆಗೆ ಈ ಲಿಂಕ್‌ ಕ್ಲಿಕ್‌ ಮಾಡಿ - SBI Clerk recruitment 2022: Notification & registration link

ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್‌ ಮತ್ತು ಟ್ವಿಟರ್‌ ನಲ್ಲಿ ಫಾಲೋಮಾಡಿ.

ಗಮನಿಸಬಹುದಾದ ಸುದ್ದಿಗಳು

1) How to save yourself from snakes: ವಾಸ್ತವದಲ್ಲಿ, ಮಳೆಗಾಲದಲ್ಲಿ ಹಾವುಗಳು ಮತ್ತು ವಿಷಕಾರಿ ಕೀಟಗಳ ಅಪಾಯ ಹೆಚ್ಚು. ವಿಶೇಷವಾಗಿ ಈ ಅವಧಿಯಲ್ಲಿ, ವಿಷಕಾರಿ ಹಾವುಗಳು ಹೆಚ್ಚು ಸಂಚಾರದಲ್ಲಿರುತ್ತವೆ. ಕೆಲವೊಮ್ಮೆ ಅವು ಮನೆಯೊಳಗೂ ಕಾಣಿಸುತ್ತವೆ. ಮನೆಯೊಳಗೆ ಹಾವು ಬರದಂತೆ ತಡೆಯಲು ಏನು ಮಾಡಬೇಕು? ಅವುಗಳನ್ನು ಹೊರಹಾಕುವುದು ಹೇಗೆ? ಇಲ್ಲಿವೆ ಕೆಲವು ಟಿಪ್ಸ್. Snake Repellent: ನಿಮ್ಮ ಮನೆಗೆ ಹಾವು ಬರದಂತೆ ತಡೆಯೋದಕ್ಕೆ ಇಲ್ಲಿವೆ ಸಿಂಪಲ್‌ ಟ್ರಿಕ್ಸ್‌

2) ಟಿಕೆಟ್‌ ಖರೀದಿಸಿ ಟ್ರೇನ್‌ ಏರಿ ಆಗಿದೆ. ಜೇಬಲ್ಲಿ ಟಿಕೆಟ್‌ ಇಲ್ಲ. ಹುಡುಕಾಡಿದ್ರೂ ಸಿಗ್ತಿಲ್ಲ! ಏನ್‌ ಮಾಡುವುದು? ಟಿಕೆಟ್‌ ಖರೀದಿ ಮಾಡಿದ್ದರೂ ದಂಡ ಪಾವತಿಸಬೇಕಾ? ಇದಕ್ಕೇನೂ ಪರಿಹಾರ ಇಲ್ಲವೇ? ಎಂದು ಚಿಂತೆ ಮಾಡಬೇಡಿ. ಇಲ್ಲಿವೆ ಕೆಲವು ಟ್ರಿಕ್ಸ್‌! - What to Do if Train Ticket Lost: ಟ್ರೇನ್‌ ಟಿಕಟ್ ಕಳೆದು ಹೋದ್ರೆ ಏನ್‌ ಮಾಡಬೇಕು?

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ