logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Sai Recruitment 2022: ಕ್ರೀಡಾ ಪ್ರಾಧಿಕಾರದಲ್ಲಿ ಉದ್ಯೋಗಾವಕಾಶ, ವೇತನ 1 ಲಕ್ಷ ರೂ.ಗೂ ಅಧಿಕ

SAI recruitment 2022: ಕ್ರೀಡಾ ಪ್ರಾಧಿಕಾರದಲ್ಲಿ ಉದ್ಯೋಗಾವಕಾಶ, ವೇತನ 1 ಲಕ್ಷ ರೂ.ಗೂ ಅಧಿಕ

Praveen Chandra B HT Kannada

Aug 09, 2022 10:51 AM IST

ಭಾರತೀಯ ಕ್ರೀಡಾ ಪ್ರಾಧಿಕಾರ

    • ಭಾರತದ ಕ್ರೀಡಾ ಪ್ರಾಧಿಕಾರವು (SAI) ಹೈ ಪರ್ಮಾಮೆನ್ಸ್‌ ಅನಾಲಿಸ್ಟ್‌ ( High Performance Analyst ) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 138 ಹುದ್ದೆಗಳಿದ್ದು, ಈ ಹುದ್ದೆಗಳ ಸಂಪೂರ್ಣ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಹೆಚ್ಚಿನ ವಿವರವನ್ನು ಇಲ್ಲಿ ನೀಡಲಾಗಿದೆ.
ಭಾರತೀಯ ಕ್ರೀಡಾ ಪ್ರಾಧಿಕಾರ
ಭಾರತೀಯ ಕ್ರೀಡಾ ಪ್ರಾಧಿಕಾರ

ಭಾರತದ ಕ್ರೀಡಾ ಪ್ರಾಧಿಕಾರವು (SAI) ಹೈ ಪರ್ಮಾಮೆನ್ಸ್‌ ಅನಾಲಿಸ್ಟ್‌ ( High Performance Analyst ) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 138 ಹುದ್ದೆಗಳಿದ್ದು, ಈ ಹುದ್ದೆಗಳ ಸಂಪೂರ್ಣ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಹೆಚ್ಚಿನ ವಿವರವನ್ನು ಇಲ್ಲಿ ನೀಡಲಾಗಿದೆ.

ಟ್ರೆಂಡಿಂಗ್​ ಸುದ್ದಿ

Gold Rate Today: ಭಾನುವಾರ ಚಿನ್ನ, ಬೆಳ್ಳಿ ಎರಡರ ದರವೂ ಹೆಚ್ಚಳ; ಆಭರಣ ಖರೀದಿಸುವ ಯೋಚನೆ ಇದ್ದರೆ ಇಂದಿನ ಬೆಲೆ ಗಮನಿಸಿ

ಭಾರತದ ಅತಿದೊಡ್ಡ ಬಜಾಜ್ ಪಲ್ಸರ್‌ ಮಾರುಕಟ್ಟೆಗೆ; ಪಲ್ಸರ್ NS400Z ಬೈಕ್‌ ದರ 1.85 ಲಕ್ಷ ರೂ, ವಿನ್ಯಾಸ ವಿಶೇಷ ವಿವರ ಹೀಗಿದೆ

ತಿರುಮಲ ತಿರುಪತಿಯಲ್ಲಿ ನವದಂಪತಿಗೆ ವಿಶೇಷ ಶ್ರೀವಾರಿ ದರ್ಶನ ಟಿಕೆಟ್ ಪ್ರಕಟಿಸಿದ ಟಿಟಿಡಿ; ಎಷ್ಟಿವೆ ಕೋಟಾ, ದರ ಇತ್ಯಾದಿ ವಿವರ

Gold Rate Today: ಮತ್ತೆ ಆರಂಭವಾಯ್ತು ಚಿನ್ನ, ಬೆಳ್ಳಿ ದರದಲ್ಲಿನ ಏರಿಳಿತ; ಶನಿವಾರ ಚಿನ್ನದ ದರ ಇಳಿಕೆ, ಬೆಳ್ಳಿ ಏರಿಕೆ

ಹುದ್ದೆಗಳ ವಿವರ

ಒಟ್ಟು 138 High Performance Analyst ಹುದ್ದೆಗಳಿವೆ. ಅಂದರೆ, ಫಿಸಿಯೊಥೆರಪಿಸ್ಟ್‌-42, ಸ್ಟ್ರೆಂಥ್‌ ಆಂಡ್‌ ಕಂಡಿಷನಿಂಗ್‌ ಎಕ್ಸ್‌ಪರ್ಟ್‌-42, ಫಿಸಿಯೊಲಜಿಸ್ಟ್‌-13, ಬಯೋಮೆಕಾನಿಕ್ಸ್‌-13, ನ್ಯೂಟ್ರಿಷಿಯನಿಸ್ಟ್‌-13 ಮತ್ತು ಬಯೊಕೆಮಿಸ್ಟ್‌-12 ಹುದ್ದೆಗಳಿವೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ 1,05,000 ರೂ. ಇರುತ್ತದೆ.

ಕೆಲಸ ಏನು?

ನಿರ್ದಿಷ್ಟ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕ್ರೀಡಾಪಟುಗಳಿಗೆ ಮತ್ತು ಕ್ರೀಡಾತಂಡಕ್ಕೆ ಬೆಂಬಲವಾಗಿ ನಿಂತು ಕಾರ್ಯನಿರ್ವಹಿಸಬೇಕಾಗುತ್ತದೆ. ಖೇಲೊ ಇಂಡಿಯಾಕ್ಕೆ ಪ್ರೊಟೊಕಾಲ್‌ ಮೌಲ್ಯಮಾಪನ, ಡೇಟಾವನ್ನು ಎನ್‌ಎಸ್‌ಆರ್‌ಎಸ್‌ ಪೋರ್ಟಲ್‌ಗೆ ಅಪ್ಲೋಡ್‌ ಮಾಡುವುದು, ತಂಡದ ಪರೀಕ್ಷೆ, ಕೋಚ್‌ ಮತ್ತು ಅಥ್ಲೆಟ್‌ಗಳಿಗೆ ಟೆಸ್ಟಿಂಗ್‌ ಪ್ರೊಟೊಕಾಲ್‌ ಕುರಿತು ಮಾಹಿತಿ ನೀಡುವುದು ಸೇರಿದಂತೆ ವಿವಿಧ ಬಗೆಯ ಕೆಲಸಗಳನ್ನು ಮಾಡಬೇಕಾಗುತ್ತದೆ.

ವಿದ್ಯಾರ್ಹತೆ ಏನು?

ಫಿಸಿಯೊಥೆರಪಿಸ್ಟ್‌ ಹುದ್ದೆಗೆ ಫಿಸಿಯೊಥೆರಪಿ ಅಥವಾ ತತ್ಸಮಾನ ವಿಷಯದಲ್ಲಿ ಪದವಿ ಪಡೆದಿರಬೇಕು. ಸ್ನಾತಕೋತ್ತರ ಪದವಿ ಪಡೆದರೂ ಉತ್ತಮ. ಸಂಬಂಧಪಟ್ಟ ವಿಭಾಗದಲ್ಲಿ ಒಂದು ವರ್ಷ ಫೀಲ್ಡ್‌ ಅನುಭವ ಇರಬೇಕು.

ಸ್ಟ್ರೆಂಥ್‌ ಎಕ್ಸ್‌ಪರ್ಟ್‌ ಹುದ್ದೆಗೆ ಸ್ಪೋರ್ಟ್ಸ್‌ ಆಂಡ್‌ ಎಕ್ಸರ್‌ಸೈಸ್‌ ಸೈನ್ಸ್‌, ಸ್ಪೋರ್ಟ್ಸ್‌ ಸೈನ್ಸ್‌, ಸ್ಪೋರ್ಟ್ಸ್‌ ಕೋಚಿಂಗ್‌ ಇತ್ಯಾದಿ ವಿಷಯಗಳಲ್ಲಿ ಪದವಿ ಪಡೆದಿರಬೇಕು.

ಫಿಸಿಯೊಲಾಜಿಸ್ಟ್‌ ಹುದ್ದೆಗೆ ಮೆಡಿಕಲ್‌/ಹ್ಯೂಮನ್‌/ಸ್ಪೋರ್ಟ್ಸ್‌ ಆಂಡ್‌ ಎಕ್ಸರ್‌ಸೈಸ್‌ ಸೈಕಾಲಜಿ/ ಲೈಫ್‌ ಸೈನ್ಸ್‌ ಇತ್ಯಾದಿ ವಿಷಯಗಳಲ್ಲಿ ಪದವಿ ಪಡೆದಿರಬೇಕು. ಉಳಿದ ಹುದ್ದೆಗಳಿಗೂ ಇದೇ ರೀತಿ ಆಯಾ ವಿಷಯಗಳಲ್ಲಿ ಪದವಿ ವಿದ್ಯಾರ್ಹತೆ ಬಯಸಲಾಗಿದೆ.

ಎಲ್ಲಾ ಹುದ್ದೆಗಳಿಗೆ ಪದವಿ ವಿದ್ಯಾರ್ಥತೆಯಾಗಿದ್ದರೆ ಐದು ವರ್ಷ ಕೆಲಸದ ಅನುಭವ ಅಥವಾ ಸ್ನಾತಕೋತ್ತರ ಪದವಿಯೊಂದಿಗೆ 3 ವರ್ಷದ ಕೆಲಸದ ಅನುಭವ ಅಥವಾ ಪಿಎಚ್‌.ಡಿ ಪದವಿ ಬಯಸಲಾಗಿದೆ.

ಆಯ್ಕೆ ಪ್ರಕ್ರಿಯೆ

ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಲ್ಲಿ ಸೂಕ್ತ ಅಭ್ಯರ್ಥಿಗಳನ್ನು ಶಾರ್ಟ್‌ ಲಿಸ್ಟ್‌ ಮಾಡಿ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ.

ಅರ್ಜಿ ಸಲ್ಲಿಸಲು ಸೆಪ್ಟೆಂಬರ್‌ 5, 2022 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿ ಪಡೆಯಲು ಭೇಟಿ ನೀಡಬೇಕಾದ ವೆಬ್‌ ವಿಳಾಸ: https://sportsauthorityofindia.gov.in/sai/

ವಿಭಾಗ

    ಹಂಚಿಕೊಳ್ಳಲು ಲೇಖನಗಳು