logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ssc Cgl Notification: ಎಸ್‌ಎಸ್‌ಸಿ ಸಿಜಿಎಲ್‌ ಪರೀಕ್ಷೆ ಅಧಿಸೂಚನೆ ಪ್ರಕಟ, ಸೆಂಟ್ರಲ್‌ ಗವರ್ನ್‌ಮೆಂಟ್‌ ಉದ್ಯೋಗ ಪಡೆಯಲು ಇಲ್ಲಿದೆ ಅವಕಾಶ

SSC CGL Notification: ಎಸ್‌ಎಸ್‌ಸಿ ಸಿಜಿಎಲ್‌ ಪರೀಕ್ಷೆ ಅಧಿಸೂಚನೆ ಪ್ರಕಟ, ಸೆಂಟ್ರಲ್‌ ಗವರ್ನ್‌ಮೆಂಟ್‌ ಉದ್ಯೋಗ ಪಡೆಯಲು ಇಲ್ಲಿದೆ ಅವಕಾಶ

Praveen Chandra B HT Kannada

Sep 18, 2022 02:39 PM IST

SSC CGL Notification Out: ಎಸ್‌ಎಸ್‌ಸಿ ಸಿಜಿಎಲ್‌ ಪರೀಕ್ಷೆ ಅಧಿಸೂಚನೆ ಪ್ರಕಟ

    • ಸಿಬ್ಬಂದಿ ನೇಮಕಾತಿ ಆಯೋಗವು (SSC) ಕಂಬೈನ್ಡ್‌ ಗ್ರಾಜುಯೇಟ್‌ ಲೆವೆಲ್‌ ಟೈರ್‌ 1 ಮತ್ತು ಟೈರ್‌ 2 ಪರೀಕ್ಷೆಗಳ ಅಧಿಸೂಚನೆಯನ್ನು (Combined Graduate Level Examination, 2022) ಪ್ರಕಟಿಸಿದ್ದು, ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್‌ 8ರ ಮೊದಲು ಅರ್ಜಿ ಸಲ್ಲಿಸಬಹುದು. ಎಸ್‌ಎಸ್ಸಿ ಸಿಜಿಎಲ್‌ ಪರೀಕ್ಷೆ, ಈ ಬಾರಿ ಯಾವೆಲ್ಲ ಹುದ್ದೆಗಳ ನೇಮಕಕ್ಕೆ ಈ ಪರೀಕ್ಷೆ ನಡೆಸಲಿದೆ ಎಂಬ ಮಾಹಿತಿ, ಅರ್ಜಿ ಸಲ್ಲಿಸಲು ವಿದ್ಯಾರ್ಹತೆ, ವಯೋಮಿತಿ ಸೇರಿದಂತೆ ಎಸ್‌ಎಸ್‌ಸಿ ಸಿಜಿಎಲ್‌ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
SSC CGL Notification Out: ಎಸ್‌ಎಸ್‌ಸಿ ಸಿಜಿಎಲ್‌ ಪರೀಕ್ಷೆ ಅಧಿಸೂಚನೆ ಪ್ರಕಟ
SSC CGL Notification Out: ಎಸ್‌ಎಸ್‌ಸಿ ಸಿಜಿಎಲ್‌ ಪರೀಕ್ಷೆ ಅಧಿಸೂಚನೆ ಪ್ರಕಟ

ಸಿಬ್ಬಂದಿ ನೇಮಕಾತಿ ಆಯೋಗವು (SSC) ಕಂಬೈನ್ಡ್‌ ಗ್ರಾಜುಯೇಟ್‌ ಲೆವೆಲ್‌ ಟೈರ್‌ 1 ಮತ್ತು ಟೈರ್‌ 2 ಪರೀಕ್ಷೆಗಳ ಅಧಿಸೂಚನೆಯನ್ನು (Combined Graduate Level Examination, 2022) ಪ್ರಕಟಿಸಿದ್ದು, ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್‌ 8ರ ಮೊದಲು ಅರ್ಜಿ ಸಲ್ಲಿಸಬಹುದು. ಎಸ್‌ಎಸ್ಸಿ ಸಿಜಿಎಲ್‌ ಪರೀಕ್ಷೆ, ಈ ಬಾರಿ ಯಾವೆಲ್ಲ ಹುದ್ದೆಗಳ ನೇಮಕಕ್ಕೆ ಈ ಪರೀಕ್ಷೆ ನಡೆಸಲಿದೆ ಎಂಬ ಮಾಹಿತಿ, ಅರ್ಜಿ ಸಲ್ಲಿಸಲು ವಿದ್ಯಾರ್ಹತೆ, ವಯೋಮಿತಿ ಸೇರಿದಂತೆ ಎಸ್‌ಎಸ್‌ಸಿ ಸಿಜಿಎಲ್‌ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಟ್ರೆಂಡಿಂಗ್​ ಸುದ್ದಿ

Gold Rate Today: ಭಾನುವಾರ ಚಿನ್ನ, ಬೆಳ್ಳಿ ಎರಡರ ದರವೂ ಹೆಚ್ಚಳ; ಆಭರಣ ಖರೀದಿಸುವ ಯೋಚನೆ ಇದ್ದರೆ ಇಂದಿನ ಬೆಲೆ ಗಮನಿಸಿ

ಭಾರತದ ಅತಿದೊಡ್ಡ ಬಜಾಜ್ ಪಲ್ಸರ್‌ ಮಾರುಕಟ್ಟೆಗೆ; ಪಲ್ಸರ್ NS400Z ಬೈಕ್‌ ದರ 1.85 ಲಕ್ಷ ರೂ, ವಿನ್ಯಾಸ ವಿಶೇಷ ವಿವರ ಹೀಗಿದೆ

ತಿರುಮಲ ತಿರುಪತಿಯಲ್ಲಿ ನವದಂಪತಿಗೆ ವಿಶೇಷ ಶ್ರೀವಾರಿ ದರ್ಶನ ಟಿಕೆಟ್ ಪ್ರಕಟಿಸಿದ ಟಿಟಿಡಿ; ಎಷ್ಟಿವೆ ಕೋಟಾ, ದರ ಇತ್ಯಾದಿ ವಿವರ

Gold Rate Today: ಮತ್ತೆ ಆರಂಭವಾಯ್ತು ಚಿನ್ನ, ಬೆಳ್ಳಿ ದರದಲ್ಲಿನ ಏರಿಳಿತ; ಶನಿವಾರ ಚಿನ್ನದ ದರ ಇಳಿಕೆ, ಬೆಳ್ಳಿ ಏರಿಕೆ

ಪ್ರಮುಖ ದಿನಾಂಕಗಳು

ಆನ್‌ಲೈನ್‌ ಅರ್ಜಿ ಸಲ್ಲಿಸಲು ಆರಂಭ: 17-09-2022

ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08-10-2022 (23:00)

ಆಫ್‌ಲೈನ್‌ ಚಲನ್‌ ಸೃಜಿಸಲು ಕೊನೆಯ ದಿನ: 08-10-2022 (23:00)

ಆನ್‌ಲೈನ್‌ ಅರ್ಜಿ ಶುಲ್ಕ ಪಾವತಿಗೆ ಕೊನೆಯ ದಿನ: 09-10-2022 (23:00)

ಚಲನ್‌ ಮೂಲಕ ಶುಲ್ಕ ಪಾವತಿಗೆ ಕೊನೆ ದಿನ: 10-10-2022

ಟೈರ್‌ ೧ ಪರೀಕ್ಷೆ ನಿರೀಕ್ಷಿತ ದಿನಾಂಕ: ಡಿಸೆಂಬರ್‌ 2022

ಟೈರ್‌ ೨ ಪರೀಕ್ಷೆ ದಿನಾಂಕ: ಮುಂದಿನ ವರ್ಷ

ಈ ಬಾರಿ ಎಸ್‌ಎಸ್‌ಸಿ ಸಿಜಿಎಲ್‌ ಪರೀಕ್ಷೆ ಮೂಲಕ ಅಂದಾಜು 20 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಯಾವೆಲ್ಲ ಹುದ್ದೆಗಳಿವೆ?

ಎಸ್‌ಎಸ್‌ಸಿ ಸಿಜಿಎಲ್‌ 2022 ಪರೀಕ್ಷೆಯನ್ನು ಅಸಿಸ್ಟೆಂಟ್‌ ಅಡಿಟ್‌ ಆಫೀಸರ್‌, ಅಸಿಸ್ಟೆಂಟ್‌ ಅಕೌಂಟ್ಸ್‌ ಆಫೀಸರ್‌, ಅಸಿಸ್ಟೆಂಟ್‌ ಸೆಕ್ಷನ್‌ ಆಫೀಸರ್‌, ಇನ್‌ಸ್ಪೆಕ್ಟರ್‌ ಆಫ್‌ ಇನ್‌ಕಾಂ ಟ್ಯಾಕ್ಸ್‌, ಉಳಿದ ವಿಭಾಗಗಳ ಇನ್‌ಸ್ಪೆಕ್ಟರ್‌, ಅಸಿಸದ್ಟೆಂಟ್‌ ಎನ್‌ಫೋರ್ಸ್‌ಮೆಂಟ್‌ ಆಫೀಸರ್‌, ಸಬ್‌ ಇನ್‌ಸ್ಪೆಕ್ಟರ್‌, ಅಸಿಸ್ಟೆಂಟ್‌, ಡಿವಿಷನಲ್‌ ಅಕೌಂಟೆಂಟ್‌, ಜೂನಿಯರ್‌ ಸ್ಟ್ಯಟಿಕಲ್‌ ಆಫೀಸರ್‌, ಅಡಿಟರ್‌, ಅಕೌಂಟೆಂಟ್‌, ಪೋಸ್ಟಲ್‌ ಅಸಿಸ್ಟೆಂಟ್‌ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಉದ್ದೇಶಿಸಲಾಗಿದೆ.

ವಯೋಮಿತಿ ಏನು?

ವಿವಿಧ ಹುದ್ದೆಗಳಿಗೆ ತಕ್ಕಂತೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 27 ವರ್ಷ/30 ವರ್ಷ/ 32 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ವಯೋಮಿತಿಯಲ್ಲಿ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ನೀಡಲಾಗುತ್ತದೆ.

ವಿದ್ಯಾರ್ಹತೆ ಏನು?

- ಅಸಿಸ್ಟೆಂಟ್‌ ಅಡಿಟ್‌ ಆಫೀಸರ್‌/ ಅಸಿಸ್ಟೆಂಟ್‌ ಅಕೌಂಟ್ಸ್‌ ಆಫೀಸರ್‌ ಹುದ್ದೆಗೆ ಯಾವುದೇ ವಿಷಯದಲ್ಲಿ ಪದವಿ ವಿದ್ಯಾರ್ಹತೆ ಬಯಸಲಾಗಿದೆ. ಇದರೊಂದಿಗೆ ಚಾರ್ಟೆಡ್‌ ಅಕೌಂಟೆಂಟ್‌/ ಕಾಸಟ್‌ ಆಂಡ್‌ ಮ್ಯಾನೇಜ್‌ಮೆಂಟ್‌ ಅಕೌಂಟೆಂಟ್‌/ ಕಂಪೆನಿ ಸೆಕ್ರೆಟರಿ/ ವಾಣಿಜ್ಯದಲ್ಲಿ ಸ್ನಾತಕೋತ್ತರ/ ಬಿಸ್ನೆಸ್‌ ಸ್ಟಡೀಸ್‌ನಲ್ಲಿ ಸ್ನಾತಕ/ ಎಂಬಿಎ ಫೈನಾನ್ಸ್‌/ ಎಂಬಿಇ ವಿದ್ಯಾರ್ಹತೆ ಬಯಸಲಾಗಿದೆ.

ಜೂನಿಯರ್‌ ಸ್ಟ್ಯಟಿಸ್ಟಿಕಲ್‌ ಆಫೀಸರ್‌ ಹುದ್ದೆಗೆ ಪಿಯುಸಿಯಲ್ಲಿ ಗಣಿತ ಮತ್ತು ಪದವಿ ಪಡೆದಿರಬೇಕು. ಪದಪವಿಯಲ್ಲಿ ಯಾವುದಾದರೂ ವಿಷಯದೊಂದಿಗೆ ಒಂದು ವಿಷಯ ಸ್ಟ್ಯಟಿಸ್ಟಿಕ್‌ ಓದಿರಬೇಕು.

- ಇತರೆ ಎಲ್ಲಾ ಹುದ್ದೆಗಳಿಗೆ ಯಾವುದೇ ವಿಷಯದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವುದು ಹೇಗೆ?

ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಬೇರೆ ಯಾವುದೇ ವಿಧಾನದ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.

ಅರ್ಜಿ ಶುಲ್ಕ ಎಷ್ಟು?

100 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಮಹಿಳಾ ಅಭ್ಯರ್ಥಿಗಳು ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಿಲ್ಲ. ಯುಪಿಐ/ನೆಟ್‌ಬ್ಯಾಂಕಿಂಗ್‌/ಡೆಬಿಟ್‌ ಕಾರ್ಡ್‌ ಇತ್ಯಾದಿ ಆನ್‌ಲೈನ್‌ ಪಾವತಿ ವಿಧಾನಗಳ ಮೂಲಕ ಅರ್ಜಿ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ.

ಕರ್ನಾಟಕದಲ್ಲಿ ಪರೀಕ್ಷಾ ಕೇಂದ್ರಗಳು ಎಲ್ಲೆಲ್ಲಿವೆ?

ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿಗಳಲ್ಲಿ ಪರೀಕ್ಷಾ ಕೇಂದ್ರಗಳು ಇರಲಿವೆ.

ಎಸ್‌ಎಸ್‌ಸಿ ಸಿಜಿಎಲ್‌ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಲಿಂಕ್‌ ಇಲ್ಲಿದೆ

ಎಸ್‌ಎಸ್‌ಸಿ ಸಿಜಿಎಲ್‌ ಅಧಿಸೂಚನೆ ಈ ಕೆಳಗೆ ನೀಡಲಾಗಿದ್ದು, ಡೌನ್‌ಲೋಡ್‌ ಮಾಡಿಕೊಳ್ಳಿ. ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಲು ಮರೆಯದಿರಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು