logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Vision Pro Headset: ಆಪಲ್‌ನ ವಿಷನ್‌ ಪ್ರೊ ಹೆಡ್‌ಸೆಟ್‌ ನೋಡಿ ಕಾಮಿಡಿ ಮಾಡಿದ ನೆಟ್ಟಿಗರು, ಟ್ರೋಲ್‌ ಚಿತ್ರಗಳನ್ನು ನೋಡಿದ್ರೆ ನೀವೂ ನಗ್ತೀರಾ

Vision Pro headset: ಆಪಲ್‌ನ ವಿಷನ್‌ ಪ್ರೊ ಹೆಡ್‌ಸೆಟ್‌ ನೋಡಿ ಕಾಮಿಡಿ ಮಾಡಿದ ನೆಟ್ಟಿಗರು, ಟ್ರೋಲ್‌ ಚಿತ್ರಗಳನ್ನು ನೋಡಿದ್ರೆ ನೀವೂ ನಗ್ತೀರಾ

Praveen Chandra B HT Kannada

Jun 06, 2023 12:41 PM IST

google News

Vision Pro headset: ಆಪಲ್‌ನ ವಿಷನ್‌ ಪ್ರೊ ಹೆಡ್‌ಸೆಟ್‌ ನೋಡಿ ಕಾಮಿಡಿ ಮಾಡಿದ ನೆಟ್ಟಿಗರು, ಟ್ರೋಲ್‌ ಚಿತ್ರಗಳನ್ನು ನೋಡಿದ್ರೆ ನೀವೂ ನಗ್ತೀರಾ

  • Vision Pro headset Apple: ವಿಶ್ವ ಡೆವಲರ್‌ಗಳ ಸಮ್ಮೇಳನದಲ್ಲಿ (WWDC 2023) ಆಪಲ್‌ ಕಂಪನಿಯು ಅನಾವರಣ ಮಾಡಿದ ವಿಷನ್‌ ಪ್ರೊ ಕುರಿತು ಜನರಿಂದ ನಾನಾ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Vision Pro headset: ಆಪಲ್‌ನ ವಿಷನ್‌ ಪ್ರೊ ಹೆಡ್‌ಸೆಟ್‌ ನೋಡಿ ಕಾಮಿಡಿ ಮಾಡಿದ ನೆಟ್ಟಿಗರು, ಟ್ರೋಲ್‌ ಚಿತ್ರಗಳನ್ನು ನೋಡಿದ್ರೆ ನೀವೂ ನಗ್ತೀರಾ
Vision Pro headset: ಆಪಲ್‌ನ ವಿಷನ್‌ ಪ್ರೊ ಹೆಡ್‌ಸೆಟ್‌ ನೋಡಿ ಕಾಮಿಡಿ ಮಾಡಿದ ನೆಟ್ಟಿಗರು, ಟ್ರೋಲ್‌ ಚಿತ್ರಗಳನ್ನು ನೋಡಿದ್ರೆ ನೀವೂ ನಗ್ತೀರಾ (Twitter)

ವಿಶ್ವ ಡೆವಲರ್‌ಗಳ ಸಮ್ಮೇಳನದಲ್ಲಿ (WWDC 2023) ಆಪಲ್‌ ಕಂಪನಿಯು ಅನಾವರಣ ಮಾಡಿದ ವಿಷನ್‌ ಪ್ರೊ ಕುರಿತು ಜನರಿಂದ ನಾನಾ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಿಜಜಗತ್ತು ಮತ್ತು ವರ್ಚ್ಯುಯಲ್‌ ಜಗತ್ತಿನಲ್ಲಿ ಒಂದೇ ಬಾರಿ ಕಾರ್ಯನಿರ್ವಹಿಸಲು ಅವಕಾಶ ನೀಡುವ ಈ ಹೆಡ್‌ಸೆಟ್‌ ಕುರಿತು ಈಗಾಗಾಗಲೇ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ವಿವರವಾದ ಮಾಹಿತಿ ನೀಡಿದೆ. ತಂತ್ರಜ್ಞಾನ ಜಗತ್ತಿನ ಹೊಸ ಅದ್ಭುತವೆನಿಸುವ ಈ ಗ್ಯಾಡ್ಜೆಟ್‌ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಟ್ರೋಲ್‌ ಕೂಡ ಆಗಿದೆ.

ಆಪಲ್‌ನ ನೂತನ ವಿಷನ್‌ ಪ್ರೊ ಹೆಡ್‌ಸೆಟ್‌ ದರ 3,499 ಡಾಲರ್‌ ಇದೆ. ಇದೇ ಕಾರಣಕ್ಕೆ ಇದು ಟ್ರೋಲ್‌ ಆಗಿದೆ. ಇಷ್ಟೊಂದು ದುಬಾರಿ ಹೆಡ್‌ಸೆಟ್‌ ನಮಗೆ ಬೇಡ, ನಾವು ಸಾಮಾನ್ಯ ಹೆಡ್‌ಸೆಟ್‌ ಹಾಕ್ತಿವಿ ಅಂತ ಬಗೆಬಗೆಯ ಟ್ರೋಲ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಆಪಲ್‌ WWDC 2023 ಕಾರ್ಯಕ್ರಮದಲ್ಲಿ ಮೊದಲ ದಿನ ಹಲವು ಪ್ರಮುಖ ಘೋಷಣೆಗಳನ್ನು ಮಾಡಿದೆ. 15 ಇಂಚಿನ ಮೆಕ್‌ಬುಕ್‌ ಏರ್‌ (15-inch MacBook Air), ಮೆಕ್‌ ಸ್ಟುಡಿಯೋ ಮತ್ತು ಮೆಕ್‌ ಪ್ರೊ (Mac Studio and Mac Pro), ಐಒಎಸ್‌ 17 ಮತ್ತು ಐಪಾಡ್‌ಒಎಸ್‌ 17 (iOS 17 and iPadOS 17), ವಾಚ್‌ಒಎಸ್‌ 10 (watchOS 10), ಮಾಕ್‌ಒಎಸ್‌ ಸೊನೊಮಾ (macOS Sonoma) ಇತ್ಯಾದಿಗಳನ್ನು ಬಿಡುಗಡೆ ಮಾಡಿದೆ. ಈ ಕುರಿತ ವಿವರವಾದ ವರದಿ ಇಲ್ಲಿದೆ.

ತನ್ನ ಬ್ಲಾಗ್‌ ಪೋಸ್ಟ್‌ನಲ್ಲಿ ನೂತನ ಅಗ್ಯುಮೆಂಟೆಡ್‌ ರಿಯಾಲ್ಟಿ/ ವರ್ಚ್ಯುವಲ್‌ ರಿಯಾಲ್ಟಿ ಹೆಡ್‌ಸೆಟ್‌ ಕುರಿತು ಆಪಲ್‌ ಹೀಗೆ ಬರೆದುಕೊಂಡಿದೆ. "ಆಪಲ್‌ ವಿಷನ್‌ ಪ್ರೊ ಬಳಕೆದಾರರಿಗೆ ಅನನ್ಯ ಅನುಭವ ನೀಡಲಿದೆ. ಇದು ನೈಜ ಜಗತ್ತಿನೊಂದಿಗೆ ಸಂಪರ್ಕದಲ್ಲಿರಿಸಿಕೊಂಡು ಹೊಸ ಅನುಭವ ನೀಡುತ್ತದೆ" ಎಂದು ಆಪಲ್‌ ಹೇಳಿದೆ.

ಆ್ಯಪಲ್ ವಿಷನ್‌ ಪ್ರೊ ಎನ್ನುವುದು ಆಪಲ್‌ ಕಂಪನಿಯ ಭವಿಷ್ಯದ ಪ್ರಾಡಕ್ಟ್‌. ಈಗ ಟೆಸ್ಟ್‌ ಹಂತದಲ್ಲಿ ಬಿಡುಗಡೆ ಮಾಡಲಾಗಿದೆ. ವರ್ಚ್ಯುಯಲ್‌ ರಿಯಾಲಿಟಿ ಬಯಸುವವರಿಗೆ ಈ ಕನ್ನಡಕದಂತಹ ವಿಷನ್‌ ಪ್ರೊ ಹೊಸ ಅನುಭವ ನೀಡಲಿದೆ. ಈ ಹೆಡ್‌ಸೆಟ್‌ ಧರಿಸಿದಾಗ ನಿಜಜಗತ್ತಿನ ಮನುಷ್ಯರು ಕಾಣಿಸುತ್ತಾರೆ. ಡಿಫಾಲ್ಟ್‌ ಮೋಡ್‌ನಲ್ಲಿ ಹೊರಜಗತ್ತು ಕಲರ್‌ಫುಲ್‌ ಆಗಿ ಕಾಣಿಸುತ್ತದೆ. ಈ ಸಮಯದಲಲ್ಲಿ ವರ್ಚ್ಯುಯಲ್‌ ಜಗತ್ತಿಗೆ ಪ್ರವೇಶಿಸಿದಾಗ ಹೆಡ್‌ಸೆಟ್‌ನ ಹೊರಭಾಗದ ಕ್ಯಾಮೆರಾಗಳು ಹೊರಭಾಗದಲ್ಲಿರುವ ಮನುಷ್ಯರು, ವಸ್ತುಗಳ ಕಡೆಗೆ ಗಮನ ನೀಡುತ್ತದೆ. ಒಟ್ಟಾರೆ ಒಂದೇ ಸಮಯದಲ್ಲಿ ಹೊರಜಗತ್ತು ಮತ್ತು ಒಳಜಗತ್ತನ್ನು ನೋಡಬಹುದು. ಈ ಕುರಿತು ವಿವರ ಇಲ್ಲಿದೆ.

ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಜನರು ಮಾಡುತ್ತಿರುವ ಕಾಮಿಡಿ ನೋಡೋಣ ಬನ್ನಿ

ಸೋಷಿಯಲ್‌ ಮೀಡಿಯಾ ಬಳಕೆದಾರರು ಈ ವಿಷನ್‌ ಪ್ರೊದ ದುಬಾರಿ ದರ ಕೇಳಿ ದಂಗಾಗಿದ್ದಾರೆ. ಈ ಹೆಡ್‌ಸೆಟ್‌ ದರ ಹೆಚ್ಚಾಯಿತು ಎನ್ನುವುದು ಬಹುತೇಕರ ಅಭಿಪ್ರಾಯ. ಈ ದರಕ್ಕೆ ಕಾರು ಖರೀದಿಸಬಹುದು, ಟೀವಿ ಷೋಗಳನ್ನು ನೇರವಾಗಿ ನೋಡಬಹುದು ಎಂದೆಲ್ಲ ಕಾಮೆಂಟ್‌ ಮಾಡಿದ್ದಾರೆ.

ಈ ಅಗ್ಯುಮೆಂಟೆಡ್‌ ಮತ್ತು ವರ್ಚ್ಯುವಲ್‌ ರಿಯಾಲಿಟಿ ಹೆಡ್‌ಸೆಟ್‌, ಮಾರುಕಟ್ಟೆಯಲ್ಲಿರುವ ಇತರೆ ಇಂತಹ ಹೆಡ್‌ಸೆಟ್‌ಗಳಿಗೆ ಹೋಲಿಸಿದರೆ ಹಲವು ಪಟ್ಟು ದುಬಾರಿಯಾಗಿದೆ. ಮೆಟಾದ ಕ್ವಿಸ್ಟ್‌ 3 ಹೆಡ್‌ಸೆಟ್‌ ದರ ಸುಮಾರು 499 ಡಾಲರ್‌ ಇದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ