logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Turkey Syria Earthquakes: ಟರ್ಕಿ, ಸಿರಿಯಾದಲ್ಲಿ ಸಾವಿನ ಸಂಖ್ಯೆ 46,000ಕ್ಕೆ ಏರಿಕೆ

Turkey Syria earthquakes: ಟರ್ಕಿ, ಸಿರಿಯಾದಲ್ಲಿ ಸಾವಿನ ಸಂಖ್ಯೆ 46,000ಕ್ಕೆ ಏರಿಕೆ

HT Kannada Desk HT Kannada

Feb 18, 2023 10:25 PM IST

ಟರ್ಕಿಯಲ್ಲಿ ಭೂಕಂಪನದಿಂದ ಧರೆಗುರುಳಿರುವ ಕಟ್ಟಡಗಳು

  • ಪ್ರಬಲ ಭೂಕಂಪನಕ್ಕೆ ತತ್ತರಿಸಿರುವ ಟರ್ಕಿ ಮತ್ತು ಸಿರಿಯಾದಲ್ಲಿ ಮೃತಪಟ್ಟವರ ಸಂಖ್ಯೆ 46,000ಕ್ಕೆ ಏರಿಕೆಯಾಗಿದೆ. 

ಟರ್ಕಿಯಲ್ಲಿ ಭೂಕಂಪನದಿಂದ ಧರೆಗುರುಳಿರುವ ಕಟ್ಟಡಗಳು
ಟರ್ಕಿಯಲ್ಲಿ ಭೂಕಂಪನದಿಂದ ಧರೆಗುರುಳಿರುವ ಕಟ್ಟಡಗಳು

ಅಂಕಾರ: ತನ್ನ ದೇಶದಲ್ಲಿ ಹಿಂದೆಂದು ಕಂಡು ಕೇಳರಿಯದ ಪ್ರಕೃತಿಯ ವಿಕೋಪಕ್ಕೆ ಗುರಿಯಾಗಿರುವ ಟರ್ಕಿಯಲ್ಲಿ ಮೃತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ.

ಟ್ರೆಂಡಿಂಗ್​ ಸುದ್ದಿ

ಭಾರತದ ಅತಿದೊಡ್ಡ ಬಜಾಜ್ ಪಲ್ಸರ್‌ ಮಾರುಕಟ್ಟೆಗೆ; ಪಲ್ಸರ್ NS400Z ಬೈಕ್‌ ದರ 1.85 ಲಕ್ಷ ರೂ, ವಿನ್ಯಾಸ ವಿಶೇಷ ವಿವರ ಹೀಗಿದೆ

ತಿರುಮಲ ತಿರುಪತಿಯಲ್ಲಿ ನವದಂಪತಿಗೆ ವಿಶೇಷ ಶ್ರೀವಾರಿ ದರ್ಶನ ಟಿಕೆಟ್ ಪ್ರಕಟಿಸಿದ ಟಿಟಿಡಿ; ಎಷ್ಟಿವೆ ಕೋಟಾ, ದರ ಇತ್ಯಾದಿ ವಿವರ

Gold Rate Today: ಮತ್ತೆ ಆರಂಭವಾಯ್ತು ಚಿನ್ನ, ಬೆಳ್ಳಿ ದರದಲ್ಲಿನ ಏರಿಳಿತ; ಶನಿವಾರ ಚಿನ್ನದ ದರ ಇಳಿಕೆ, ಬೆಳ್ಳಿ ಏರಿಕೆ

Explainer: ಪ್ರಜ್ವಲ್ ರೇವಣ್ಣ ಪಲಾಯನಕ್ಕೆ ಪವರ್‌ ತುಂಬಿದ ರಾಜತಾಂತ್ರಿಕ ಪಾಸ್‌ಪೋರ್ಟ್; ಏನಿದರ ವಿಶೇಷ?

ಟರ್ಕಿ ಮತ್ತು ಸಿರಿಯಾದಲ್ಲಿ ಪ್ರಬಲ ಭೂಕಂಪನಕ್ಕೆ ಬಲಿಯಾದವರ ಸಂಖ್ಯೆ 46,000 ಗಡಿ ದಾಟಿದೆ ಎಂದು ವರದಿಯಾಗಿದೆ. ಈ ಘೋರದಲ್ಲಿ ದುರಂತದಲ್ಲಿ 2,46,000 ಅಪಾರ್ಟ್ಮೆಂಟ್ ಗಳು ನೆಲೆಸಮವಾಗಿದ್ದು, ಇನ್ನೂ ಹಲವಾರು ಮಂದಿ ಕಣ್ಮರೆಯಾಗಿದ್ದಾರೆ. ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ಇನ್ನ ನೆರೆಯ ಸಿರಿಯಾದಲ್ಲೂ ಇದೇ ರೀತಿಯ ಪರಿಸ್ಥಿತಿ ಇದೆ. ಭೂಕಂಪಗಳಿಂದ ಮನೆ-ಮಠ ಕಳೆದುಕೊಂಡಿರುವ ನೂರಾರು ಸಾವಿರ ಜನರಿಗೆ ಸಹಾಯ ಮಾಡಲು ವಿಶ್ವ ಆಹಾರ ಕಾರ್ಯಕ್ರಮ ವಿಭಾಗ WFP ಮುಂದಾಗಿದೆ. ವಾಯುವ್ಯದಲ್ಲಿರುವ ಅಧಿಕಾರಿಗಳು ನೆರವಿಗೆ ಪ್ರಯತ್ನಿಸುತ್ತಿರುವುದರಿಂದ ಆ ಪ್ರದೇಶಕ್ಕೆ ಪ್ರವೇಶ ನಿರ್ಬಂಧಿಸುವುದನ್ನು ನಿಲ್ಲಿಸುವಂತೆ ಒತ್ತಾಯಿಸಲಾಗಿದೆ.

ಭೂಕಂಪ ಸಂಭವಿಸಿದ ಹನ್ನೆರಡು ದಿನಗಳ ನಂತರ, ಕಿರ್ಗಿಸ್ತಾನ್‌ನ ಕಾರ್ಮಿಕರು ದಕ್ಷಿಣ ಟರ್ಕಿಯ ಅಂಟಾಕ್ಯಾ ನಗರದಲ್ಲಿ ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ಐವರು ಸಿರಿಯಾದವರನ್ನು ರಕ್ಷಿಸಿದ್ದಾರೆ.

ಮಗು ಸೇರಿದಂತೆ ಮೂವರನ್ನು ಜೀವಂತವಾಗಿ ರಕ್ಷಿಸಲಾಗಿದೆ. ತಾಯಿ ಮತ್ತು ತಂದೆ ಬದುಕುಳಿದಿದ್ದಾರೆ. ಆದರೆ ನಿರ್ಜಲೀಕರಣದಿಂದ ಮಗು ಸಾವನ್ನಪ್ಪಿತು ಎಂದು ಅಲ್ಲಿನ ರಕ್ಷಣಾ ತಂಡ ತಿಳಿಸಿದೆ.

ಇಂದು ಒಂದು ಗಂಟೆಯ ಹಿಂದೆ ಅವಶೇಷಗಳನ್ನು ಅಗೆಯುತ್ತಿದ್ದಾಗ ನಮಗೆ ಕೂಗು ಕೇಳಿಸಿತು. ಜೀವಂತವಾಗಿರುವ ಜನರನ್ನು ಕಂಡು ರಕ್ಷಣಾ ಕಾರ್ಯಾಚರಣೆಗೆ ಇಳಿದು ದಂಪತಿಯನ್ನು ರಕ್ಷಿಸಿರುವುದು ಸಂತಸ ತಂದಿದೆ ಎಂದು ರಕ್ಷಣಾ ತಂಡದ ಸದಸ್ಯ ಅಟಾಯ್ ಒಸ್ಮಾನೋವ್ ರಾಯಿಟರ್ಸ್‌ಗೆ ತಿಳಿಸಿದ್ದಾರೆ.

ಹತ್ತು ಆಂಬ್ಯುಲೆನ್ಸ್‌ಗಳು ಹತ್ತಿರದ ರಸ್ತೆಯಲ್ಲಿ ಕಾಯುತ್ತಿದ್ದವ. ರಕ್ಷಣೆ ಮಾಡಿದ ಕುಟುಂಬವನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸುವ ಕೆಲಸ ಮಾಡಲಾಗಿದೆ ಎಂದು ವಿವರಿಸಿದ್ದಾರೆ. ಮತ್ತಷ್ಟು ರಕ್ಷಣಾ ಕಾರ್ಯಗಳು ಮುಂದುವರೆಯುತ್ತಿವೆ.

ಭೀಕರ ಭೂಕಂಪದಿಂದ ತೀವ್ರ ಸಂಕಷ್ಟದಲ್ಲಿರುವ ಸಿರಿಯಾ ಮತ್ತು ಟರ್ಕಿ ದೇಶಗಳಿಗೆ ಭಾರತ ನೆರವಿನ ಹಸ್ತ ಚಾಚುತ್ತಲೇ ಇದೆ. ಪರಿಹಾರ ಕಾರ್ಯಗಳಿಗಾಗಿ ಅಗತ್ಯ ವಸ್ತುಗಳು, ತುರ್ತು ಮತ್ತು ನಿರ್ಣಾಯಕ ಆರೈಕೆ ಔಷಧಿಗಳನ್ನು ಹೊತ್ತ 7ನೇ ವಿಮಾನ ಭಾರತದಿಂದ ಸಂಕಷ್ಟಪೀಡಿತ ಟರ್ಕಿಗೆ ತೆರಳಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ತಿಳಿಸಿದೆ.

ಕಳೆದ ಶನಿವಾರ ಸಂಜೆ ಮತ್ತೊಂದು IAF C-17 ವಿಮಾನ ಸಿರಿಯಾ ಮತ್ತು ಟರ್ಕಿಗೆ ಪರಿಹಾರ ಸಾಮಗ್ರಿ ಮತ್ತು ತುರ್ತು ಸಲಕರಣೆಗಳನ್ನು ಹೊತ್ತೊಯ್ದಿದೆ. ಡಮಾಸ್ಕಸ್‌ನಲ್ಲಿ ಪರಿಹಾರ ಸಾಮಗ್ರಿಗಳನ್ನು ವಿತರಿಸಿದೆ.

ಆಗ್ನೇಯ ಟರ್ಕಿಯಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿತ್ತು. ಆ ನಂತರ ಮತ್ತೊಂದು ಬಲವಾದ 7.9 ತೀವ್ರತೆಯ ಕಂಪನ ಉಂಟಾಗಿತ್ತು. ದೇಶದ ಹಲವಾರು ರಾಜ್ಯಗಳಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದ್ದು, ಲಕ್ಷಾಂತರ ಕಟ್ಟಡಗಳು ಧರೆಗುರುಳಿವೆ. ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಮೆರಿಕದ ಭೂವಿಜ್ಞಾನ ಕೇಂದ್ರದ ಸಮೀಕ್ಷೆ (USGS) ಪ್ರಕಾರ, ಟರ್ಕಿಯಲ್ಲಿ ಕೇಂದ್ರೀಕೃತವಾಗಿರುವ ಭೂಕಂಪವು 01:17:35 (UTC) 17.9 ಕಿಮೀ ಆಳದಲ್ಲಿ ಸಂಭವಿಸಿತ್ತು. ಭೂಕಂಪದ ಅಕ್ಷಾಂಶ ಮತ್ತು ರೇಖಾಂಶವು ಕ್ರಮವಾಗಿ 37.174N ಮತ್ತು 37.032E ಎಂದು ಕಂಡುಬಂದಿತ್ತು. ಭೂಕಂಪನ ವರದಿಯಾದ ನೂರ್ಡಗಿ ಟರ್ಕಿಯ ಗಾಜಿಯಾಂಟೆಪ್ ಪ್ರಾಂತ್ಯದ ಜಿಲ್ಲೆ ಮತ್ತು ನಗರವಾಗಿದೆ ಎಂದು ಈ ಹಿಂದೆ ವಿವರಿಸಿದ್ದರು.

ಪ್ರಬಲ ಭೂಕಂಪನದಿಂದ ನಲುಗಿರುವ ಟರ್ಕಿ ಮತ್ತು ಸಿರಿಯಾದ ಸುಧಾರಿಸಿಕೊಳ್ಳಲು ಹಲವು ವರ್ಷಗಳೇ ಬೇಕಾಗಿದೆ. ಸದ್ಯದ ಮಟ್ಟಿಗೆ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇರುವುದು ನೋವಿನ ವಿಚಾರವಾಗಿದೆ ಎಂದು ಇಡೀ ಜಗತ್ತು ಕಂಬಮಿ ಮಿಡಿಯುತ್ತಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು