logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Union Budget 2023: ಜೀವ ವಿಮೆ ಪಾಲಿಸಿದಾರರಿಗೆ ಕಹಿ ಸುದ್ದಿ, 5 ಲಕ್ಷ ರೂ.ಗಿಂತ ಅಧಿಕ ಪ್ರೀಮಿಯಂ ಪಾವತಿದಾರರು ತೆರಿಗೆ ಪಾವತಿಸಬೇಕು!

Union budget 2023: ಜೀವ ವಿಮೆ ಪಾಲಿಸಿದಾರರಿಗೆ ಕಹಿ ಸುದ್ದಿ, 5 ಲಕ್ಷ ರೂ.ಗಿಂತ ಅಧಿಕ ಪ್ರೀಮಿಯಂ ಪಾವತಿದಾರರು ತೆರಿಗೆ ಪಾವತಿಸಬೇಕು!

Praveen Chandra B HT Kannada

Feb 01, 2023 06:48 PM IST

Union budget 2023: ಜೀವ ವಿಮೆ ಪಾಲಿಸಿದಾರರಿಗೆ ಕಹಿ ಸುದ್ದಿ, 5 ಲಕ್ಷ ರೂ.ಗಿಂತ ಅಧಿಕ ಪ್ರೀಮಿಯಂ ಪಾವತಿದಾರರು ತೆರಿಗೆ ಪಾವತಿಸಬೇಕು!

    • ಜೀವ ವಿಮೆ ಹೊಂದಿರುವವರಿಗೆ ಈ ಬಜೆಟ್‌ನಲ್ಲೊಂದು ಕಹಿ ಸುದ್ದಿಯಿದೆ. ನಿಮ್ಮ ಜೀವ ವಿಮೆ ಪಾಲಿಸಿಯ ವಾರ್ಷಿಕ ಪ್ರೀಮಿಯಂ ಮೊತ್ತವು 5 ಲಕ್ಷ ರೂ.ಗಿಂತ ಅಧಿಕವಿದ್ದರೆ ವಿಮೆಯ ಮೆಚ್ಯೂರಿಟಿ ಮೊತ್ತಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ.
Union budget 2023: ಜೀವ ವಿಮೆ ಪಾಲಿಸಿದಾರರಿಗೆ ಕಹಿ ಸುದ್ದಿ,  5 ಲಕ್ಷ ರೂ.ಗಿಂತ ಅಧಿಕ ಪ್ರೀಮಿಯಂ ಪಾವತಿದಾರರು ತೆರಿಗೆ ಪಾವತಿಸಬೇಕು!
Union budget 2023: ಜೀವ ವಿಮೆ ಪಾಲಿಸಿದಾರರಿಗೆ ಕಹಿ ಸುದ್ದಿ, 5 ಲಕ್ಷ ರೂ.ಗಿಂತ ಅಧಿಕ ಪ್ರೀಮಿಯಂ ಪಾವತಿದಾರರು ತೆರಿಗೆ ಪಾವತಿಸಬೇಕು!

ನವದೆಹಲಿ: ಜೀವ ವಿಮೆ ಹೊಂದಿರುವವರಿಗೆ ಈ ಬಜೆಟ್‌ನಲ್ಲೊಂದು ಕಹಿ ಸುದ್ದಿಯಿದೆ. ನಿಮ್ಮ ಜೀವ ವಿಮೆ ಪಾಲಿಸಿಯ ವಾರ್ಷಿಕ ಪ್ರೀಮಿಯಂ ಮೊತ್ತವು 5 ಲಕ್ಷ ರೂ.ಗಿಂತ ಅಧಿಕವಿದ್ದರೆ ವಿಮೆಯ ಮೆಚ್ಯೂರಿಟಿ ಮೊತ್ತಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇಂದು ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಈ ಕುರಿತು ತಿಳಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

Gold Rate Today: ತುಸು ಇಳಿಕೆಯಾದ್ರೂ ಗ್ರಾಹಕರಿಗೆ ಸಂತಸ ನೀಡದ ಚಿನ್ನದ ಬೆಲೆ; ಇಂದು ಕೂಡ ಬೆಳ್ಳಿ ದರ ಹೆಚ್ಚಳ

ಆರ್ಡರ್‌ ಮಾಡಿದ್ದು ಪನೀರ್‌ ಟಿಕ್ಕಾ, ಬಂದಿದ್ದು ಚಿಕನ್‌ ಸ್ಯಾಂಡ್‌ವಿಚ್‌; 50 ಲಕ್ಷ ರೂ.ಗೆ ಕೇಸ್‌ ಹಾಕಿದ ಮಹಿಳೆ !

Sam Pitroda: ಜನಾಂಗೀಯ ಹೇಳಿಕೆ ವಿವಾದ ನಂತರ ಕಾಂಗ್ರೆಸ್‌ ಹುದ್ದೆ ತೊರೆದ ಪಿಟ್ರೋಡಾ

ಸ್ಯಾಮ್ ಪಿತ್ರೋಡಾ ಜನಾಂಗೀಯ ಹೇಳಿಕೆ; ದುರದೃಷ್ಟಕರ ಎನ್ನುತ್ತ ವಿವಾದದಿಂದ ಅಂತರ ಕಾಯ್ದುಕೊಂಡ ಕಾಂಗ್ರೆಸ್ ಪಕ್ಷ, ಪ್ರಧಾನಿ ಮೋದಿ ಏನಂದ್ರು

ವಾರ್ಷಿಕ ಪ್ರೀಮಿಯಂ 5 ಲಕ್ಷ ರೂ.ಗಿಂತ ಅಧಿಕವಿರುವ ಜೀವ ವಿಮಾ ಪಾಲಿಸಿಗಳ ಮೆಚುರಿಟಿ ಮೊತ್ತದ ಮೇಲೆ ಪಾಲಿಸಿದಾರರು ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಕೇಂದ್ರ ಬಜೆಟ್‌ನಲ್ಲಿ ಪ್ರಸ್ತಾಪ ಮಾಡಲಾಗಿದೆ.

"ಜೀವ ವಿಮೆ ಪಾಲಿಸಿಗಳ (ಯುಎಲ್‌ಐಪಿ ಹೊರತುಪಡಿಸಿ) ಪ್ರೀಮಿಯಂ ಅಧಿಕವಿದ್ದರೆ ಏಪ್ರಿಲ್‌ 1, 2023ರ ಬಳಿಕ ತೆರಿಗೆ ಪಾವತಿಸಬೇಕು. ವಾರ್ಷಿಕ ಐದು ಲಕ್ಷ ರೂ.ವರೆಗಿನ ಪ್ರೀಮಿಯಂಗಳಿಗೆ ಮಾತ್ರ ತೆರಿಗೆ ವಿನಾಯಿತಿ ನೀಡಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಆದರೆ, ಈ ನಿಯಮವು ಜೀವ ವಿಮೆ ಮಾಡಿಸಿಕೊಂಡ ವ್ಯಕ್ತಿ ನಿಧನರಾದ ಬಳಿಕ ಪಡೆಯುವ ಮೊತ್ತಕ್ಕೆ ಅನ್ವಯವಾಗುವುದಿಲ್ಲ. ಅದಕ್ಕೆ ತೆರಿಗೆ ವಿನಾಯಿತಿ ಈಗ ಇರುವಂತೆಯೇ ಇರಲಿದೆ. ಇದೇ ರೀತಿ 2023ರ ಮಾರ್ಚ್‌ 31ರವರೆಗಿನ ವಿಮಾ ಪಾಲಿಸಿಗಳಿಗೂ ಅನ್ವಯವಾಗದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

"ಇದನ್ನು ಇಂದು ಮಂಡಿಸಿದ ಹಣಕಾಸು ಬಿಲ್‌ನಲ್ಲಿ ಇರುವ ಒಂದು ಕಹಿ ಸುದ್ದಿ ಎನ್ನಬಹುದು. ಜೀವ ವಿಮಾ ಪಾಲಿಸಿಯ ಮೆಚ್ಯೂರಿಟಿ ಪ್ರಕ್ರಿಯೆಯಲ್ಲಿ ಈ ತೆರಿಗೆ ಪಾವತಿಸಬೇಕಿರುತ್ತದೆ" ಎಂದು ಫಿನ್‌ಟೂನ ರಿಸರ್ಚ್‌ ಆಂಡ್‌ ವಿಭಾಗದಲ್ಲಿ ತರಬೇತಿ ವಿಭಾಗದಲ್ಲಿ ಮುಖ್ಯಸ್ಥರು ಮತ್ತು ಸರ್ಟಿಫೈಡ್‌ ಫೈನಾನ್ಶಿಯಲ್‌ ಪ್ಲ್ಯಾನರ್‌ ನಿಧಿ ಮಂಚಂಡ ಹೇಳಿದ್ದಾರೆ.

ಯೂನಿಟ್‌ ಲಿಂಕ್ಡ್‌ ಇನ್ಸೂರೆನ್ಸ್‌ ಹೊರತುಪಡಿಸಿ ಎಲ್ಲಾ ಜೀವ ವಿಮಾ ಪಾಲಿಸಿಗಳಿಗೂ ನೂತನ ಬಜೆಟ್‌ ಪ್ರಸ್ತಾಪ ಅನ್ವಯವಾಗಲಿದೆ. ಇಂತಹ ಪಾಲಿಸಿಗಳ ವಾರ್ಷಿಕ ಪ್ರೀಮಿಯಂ ಐದು ಲಕ್ಷ ರೂ.ಗಿಂತ ಅಧಿಕವಾಗಿದ್ದರೆ ಮೆಚ್ಯೂರಿಟಿ ಅವಧಿಯಲ್ಲಿ ಪಡೆಯುವ ಮೊತ್ತಕ್ಕೆ ತೆರಿಗೆ ಪಾವತಿಸಬೇಕು.

"ಎಲ್ಲಾದರೂ ಯಾರಲ್ಲಿಯಾದರೂ ಒಂದಕ್ಕಿಂತ ಹೆಚ್ಚು ಜೀವ ವಿಮೆ ಪಾಲಿಸಿಗಳಿದ್ದರೆ, ಆ ಪಾಲಿಸಿಗಳನ್ನು ಏಪ್ರಿಲ್‌ 1, 2023ರ ಬಳಿಕ ಪಡೆದಿದ್ದರೆ ಆಗಲೂ ಎಲ್ಲಾ ಪಾಲಿಸಿಗಳ ಒಟ್ಟು ಪ್ರೀಮಿಯಂ ಮೊತ್ತ ಐದು ಲಕ್ಷ ರೂ.ಗಿಂತ ಅಧಿಕವಾಗಿದ್ದರೆ ಮೆಚ್ಯೂರಿಟಿ ಅವಧಿಯಲ್ಲಿ ಪಡೆಯುವ ಮೊತ್ತಕ್ಕೆ ತೆರಿಗೆ ಪಾವತಿಸಬೇಕಿರುತ್ತದೆʼʼ ಎಂದು ನಿಧಿ ಮಂಚಂಡ ವಿವರಿಸಿದ್ದಾರೆ.

ಬಜೆಟ್‌ ಮಂಡನೆ ಬಳಿಕ ಎಚ್‌ಡಿಎಫ್‌ಸಿ ಲೈಫ್‌ ಇನ್ಸೂರೆನ್ಸ್‌ನ ಷೇರು ದರಗಳು ಶೇಕಡ 11ರಷ್ಟು ಮತ್ತು ಎಸ್‌ಬಿಐ ಲೈಫ್‌ ಇನ್ಸೂರೆನ್ಸ್‌ನ ಷೇರು ದರಗಳು ಶೇಕಡ 10ರಷ್ಟು ಇಳಿಕೆ ಕಂಡಿವೆ.

ಇಂದಿನ ಬಜೆಟ್‌ನಲ್ಲಿ ತರುಣ ತರುಣಿಯರಿಗೆ ನಿರ್ಮಲಾ ಸೀತಾರಾಮನ್‌ ಏನ್‌ ಗಿಫ್ಟ್‌ ಕೊಟ್ರು?

ನಮ್ಮ ದೇಶದ ಭವಿಷ್ಯದ ಬೆಳಕಾಗಿರುವ ಜನರೇಷನ್‌ ಝಡ್‌ ಅಥವಾ ಜೆನ್‌ ಝಡ್‌ನವರೂ ಕೂಡ ನಮಗೆ ಏನಾದರೂ ಈ ಬಜೆಟ್‌ನಲ್ಲಿ ನಿರ್ಮಲಾ ಮೇಡಂ ಕೊಟ್ರಾ ಎಂದು ಪರಿಶೀಲಿಸುತ್ತಿರಬಹುದು. ದೇಶದ ಜನರೇಷನ್‌ ಝಡ್‌ ತಲೆಮಾರಿನ ತರುಣ ತರುಣಿಯರಿಗೂ ಈ ಬಜೆಟ್‌ನಲ್ಲಿ ಬೊಂಬಾಟ್‌ ಘೋಷಣೆಗಳಾಗಿವೆ. ಅವುಗಳಲ್ಲಿ ಒಂದಿಷ್ಟು ಕೊಡುಗೆಗಳ ಮಾಹಿತಿ ಇಲ್ಲಿ ನೀಡಲಾಗಿದೆ.

    ಹಂಚಿಕೊಳ್ಳಲು ಲೇಖನಗಳು