ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Budget 2023: ಇಂದಿನ ಬಜೆಟ್‌ನಲ್ಲಿ ತರುಣ ತರುಣಿಯರಿಗೆ ನಿರ್ಮಲಾ ಸೀತಾರಾಮನ್‌ ಏನ್‌ ಗಿಫ್ಟ್‌ ಕೊಟ್ರು?

Budget 2023: ಇಂದಿನ ಬಜೆಟ್‌ನಲ್ಲಿ ತರುಣ ತರುಣಿಯರಿಗೆ ನಿರ್ಮಲಾ ಸೀತಾರಾಮನ್‌ ಏನ್‌ ಗಿಫ್ಟ್‌ ಕೊಟ್ರು?

ಕಾಲೇಜು ಹೋಗುವ ತರುಣ ತರುಣಿಯರು, ಹೊಸ ಉದ್ಯೋಗ ಹುಡುಕಾಟದಲ್ಲಿರುವ ಯುವಕ ಯುವತಿಯರು, ಭವಿಷ್ಯದ ಕುರಿತು ಹೊಸ ಕನಸು ತುಂಬಿರುವ ಜನರೇಷನ್‌ ಝಡ್‌ನವರಿಗೂ ಈ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್‌ ಬೊಂಬಾಟ್‌ ಗಿಫ್ಟ್‌ಗಳನ್ನು ನೀಡಿದ್ದಾರೆ.

ಇಂದಿನ ಬಜೆಟ್‌ನಲ್ಲಿ ತರುಣ ತರುಣಿಯರಿಗೆ ನಿರ್ಮಲಾ ಸೀತಾರಾಮನ್‌ ಏನ್‌ ಗಿಫ್ಟ್‌ ಕೊಟ್ರು?
ಇಂದಿನ ಬಜೆಟ್‌ನಲ್ಲಿ ತರುಣ ತರುಣಿಯರಿಗೆ ನಿರ್ಮಲಾ ಸೀತಾರಾಮನ್‌ ಏನ್‌ ಗಿಫ್ಟ್‌ ಕೊಟ್ರು?

ಇಂದಿನ ಬಜೆಟ್‌ನಲ್ಲಿ ಉದ್ಯೋಗಿಗಳು ತಮಗೆ ಏನು ಲಾಭವಾಗಲಿದೆ? ಏನು ನಷ್ಟವಾಗಲಿದೆ ಎಂದು ಯೋಚಿಸುತ್ತಿರಬಹುದು. ಹೊಸ ತೆರಿಗೆ ಸ್ಲ್ಯಾಬ್‌ನಿಂದ ನಷ್ಟನಾ ಲಾಭನಾ ಎಂದು ಲೆಕ್ಕಾಚಾರ ಮಾಡುತ್ತಿರಬಹುದು. ರಿಯಲ್‌ ಎಸ್ಟೇಟ್‌ ಕುಳಗಳು ನಮಗೆ ಬಜೆಟ್‌ನಲ್ಲಿ ಏನಾದ್ರೂ ಸಿಕ್ಕಿದೆಯಾ ಎಂದು ಸ್ಟಡಿ ಮಾಡುತ್ತ ಇರಬಹುದು. ಗೃಹಿಣೆಯರು ನಮಗೆ ಬಜೆಟ್‌ನಿಂದ ಏನು ನಷ್ಟ ಲಾಭ ಎಂದು ಯೋಚಿಸುತ್ತಿರಬಹುದು. ನಮ್ಮ ದೇಶದ ಭವಿಷ್ಯದ ಬೆಳಕಾಗಿರುವ ಜನರೇಷನ್‌ ಝಡ್‌ ಅಥವಾ ಜೆನ್‌ ಝಡ್‌ನವರೂ ಕೂಡ ನಮಗೆ ಏನಾದರೂ ಈ ಬಜೆಟ್‌ನಲ್ಲಿ ನಿರ್ಮಲಾ ಮೇಡಂ ಕೊಟ್ರಾ ಎಂದು ಪರಿಶೀಲಿಸುತ್ತಿರಬಹುದು. ದೇಶದ ಜನರೇಷನ್‌ ಝಡ್‌ ತಲೆಮಾರಿನ ತರುಣ ತರುಣಿಯರಿಗೂ ಈ ಬಜೆಟ್‌ನಲ್ಲಿ ಬೊಂಬಾಟ್‌ ಘೋಷಣೆಗಳಾಗಿವೆ. ಅವುಗಳಲ್ಲಿ ಒಂದಿಷ್ಟು ಕೊಡುಗೆಗಳ ಮಾಹಿತಿ ಇಲ್ಲಿ ನೀಡಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಸ್ಕಿಲ್‌ ಡಿಜಿಟಲ್‌ ಇಂಡಿಯಾ ವೇದಿಕೆ

ತರುಣ ತರುಣಿಯರು ಅಥವಾ ಯುವಕ ಯುವತಿಯರು ಎಂದಾಗ ಕೌಶಲ್ಯ ನೆನಪಿಗೆ ಬರಬಹುದು. ವಿಶೇಷವಾಗಿ ಈ ಡಿಜಿಟಲ್‌ ಜಮಾನದಲ್ಲಿ ಡಿಜಿಟಲ್‌ ಕೌಶಲಗಳಿಗೆ ಅತ್ಯಧಿಕ ಬೇಡಿಕೆಯಿದೆ. ತರುಣ ತರುಣಿಯರ ಒಳ್ಳೆಯ ನಾಳೆಗಳಿಗಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಸ್ಕಿಲ್‌ ಇಂಡಿಯಾ ಇಂಟರ್‌ನ್ಯಾಷನಲ್‌ ಸೆಂಟರ್‌ಗಳನ್ನು ತೆರೆಯುವ ಪ್ರಸ್ತಾಪವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಾಡಿದ್ದಾರೆ.

ಕೃತಕ ಬುದ್ಧಿಮತ್ತೆ ಕಲಿಕೆಗೆ ಕೇಂದ್ರಗಳು

ಈ ಬಜೆಟ್‌ ಭಾಷಣದಲ್ಲಿ ಸಬರ್‌ ಮತ್ತು ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಕ್ಷೇತ್ರದ ಕುರಿತು ನಿರ್ಮಲಾ ಸೀತಾರಾಮನ್‌ ಮಾತನಾಡಿದ್ದಾರೆ. ಈ ಕ್ಷೇತ್ರದಲ್ಲಿನ ಸಾಮರ್ಥ್ಯ ವೃದ್ಧಿಗಾಗಿ ಮೂರು ಎಕ್ಸಲೆನ್ಸ್‌ ಫಾರ್‌ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ವಿಭಾಗಗಳನ್ನು ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಆರಂಭಿಸುವ ಪ್ರಸ್ತಾಪ ಮಾಡಿದ್ದಾರೆ.

ನ್ಯಾಷನಲ್‌ ಅಪ್ರೆಂಟಿಸ್‌ಶಿಪ್‌ ಪ್ರಮೋಷನ್‌ ಸ್ಕೀಮ್‌

ಮುಂದಿನ ಮೂರು ವರ್ಷಗಳಲ್ಲಿ ದೇಶದ 47 ಲಕ್ಷ ಯುವಕ ಯುವತಿಯರಿಗೆ ಸ್ಟೈಪೆಂಡ್‌ ಬೆಂಬಲ ನೀಡುವ ಸಲುವಾಗಿ ನ್ಯಾಷನಲ್‌ ಅಪ್ರೆಂಟಿಸ್‌ಶಿಪ್‌ ಪ್ರಮೋಷನ್‌ ಸ್ಕೀಮ್‌ ಆರಂಭಿಸುವುದಾಗಿ ಘೋಷಿಸಲಾಗಿದೆ. ಇದಕ್ಕಾಗಿ ದೇಶಾದ್ಯಂತ ನ್ಯಾಷನಲ್‌ ಅಪ್ರೆಂಟಿಸ್‌ಶಿಪ್‌ ಪ್ರಮೋಷನ್‌ ಸ್ಕೀಮ್‌ ಆರಂಭಿಸಲು ಉದ್ದೇಶಿಸಲಾಗಿದೆ.

ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆ 4.0

ಉದ್ಯಮಗಳ ಅವಕಶ್ಯಕತೆಗೆ ತಕ್ಕಂತೆ ಉದ್ಯೋಗ ತರಬೇತಿಗಾಗಿ, ಉದ್ಯಮ ಪಾಲುದಾರಿಕೆಗಾಗಿ ವಿವಿಧ ಕೋರ್ಸ್‌ಗಳನ್ನು ಪರಿಚಯಿಸಲು "ಪ್ರಧಾನಮಂತ್ರಿ ಕೌಶಲ್‌ ವಿಕಾಸ ಯೋಜನೆ 4.0ʼ ಉದ್ದೇಶಿಸಿದೆ. ಕೋಡಿಂಗ್‌, ಎಐ, ರೊಬೊಟಿಕ್ಸ್‌, ಮೆಕ್ರಾಟಾನಿಕ್ಸ್‌, ಇಂಟರ್‌ನೆಟ್‌ ಆಫ್‌ ಥಿಂಗ್ಸ್‌, 3ಡಿ ಪ್ರಿಂಟಿಂಗ್‌, ಡ್ರೋನ್ಸ್‌, ಸಾಫ್ಟ್‌ ಸ್ಕಿಲ್ಸ್‌ ಸೇರಿದಂತೆ ಹೊಸ ತಲೆಮಾರಿನ ಕೋರ್ಸ್‌ಗಳನ್ನು ಈ ಸ್ಕೀಮ್‌ ಒಳಗೊಂಡಿದೆ. ವಿವಿಧ ರಾಜ್ಯಗಳಲ್ಲಿ 30 ಸ್ಕಿಲ್‌ ಇಂಡಿಯಾ ಇಂಟರ್‌ನ್ಯಾಷನಲ್‌ ಸೆಂಟರ್‌ಗಳನ್ನು ತೆರೆಯಲು ಉದ್ದೇಶಿಸಲಾಗಿದೆ.

ಇವು ಕೆಲವು ಉದಾಹರಣೆಗಳಷ್ಟೇ, ಇಂತಹ ಹಲವು ಕೊಡುಗೆಗಳನ್ನು ನಮ್ಮ ದೇಶದ ಜನರೇಷನ್‌ ಝಡ್‌ಗೆ ಅಂದರೆ ತರುಣ ತರುಣಿಯರಿಗೆ ನಿರ್ಮಲಾ ಸೀತಾರಾಮನ್‌ ನೀಡಿದ್ದಾರೆ. ವಿಶೇಷವಾಗಿ ಯುವ ಜನಾಂಗವು ಬಯಸುವಂತಹ ಡಿಜಿಟಲ್‌ ಕೌಶಲಗಳು, ಭವಿಷ್ಯದಲ್ಲಿ ಮತ್ತು ಪ್ರಸ್ತುತ ಬೇಡಿಕೆಯಲ್ಲಿರುವ ಕೌಶಲಗಳನ್ನು ಯುವ ಜನಾಂಗಕ್ಕೆ ಕಲಿಸಲು ಉದ್ದೇಶಿಸಲಾಗಿದೆ.

IPL_Entry_Point