logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Google Bard Ai Chatbot: ಚಾಟ್‌ಜಿಪಿಟಿಗೆ ಹೊಸ ಪೈಪೋಟಿ, ಗೂಗಲ್‌ ಬಾರ್ಡ್‌ ಎಂದರೇನು? ಗೂಗಲ್‌ ಸಿಇಒ ಸುಂದರ್‌ ಪಿಚ್ಚೈ ಹೀಗಂದ್ರು ನೋಡಿ!

Google BARD AI Chatbot: ಚಾಟ್‌ಜಿಪಿಟಿಗೆ ಹೊಸ ಪೈಪೋಟಿ, ಗೂಗಲ್‌ ಬಾರ್ಡ್‌ ಎಂದರೇನು? ಗೂಗಲ್‌ ಸಿಇಒ ಸುಂದರ್‌ ಪಿಚ್ಚೈ ಹೀಗಂದ್ರು ನೋಡಿ!

Praveen Chandra B HT Kannada

Feb 07, 2023 05:22 PM IST

Google BARD AI Chatbot: ಚಾಟ್‌ಜಿಪಿಟಿಗೆ ಹೊಸ ಪೈಪೋಟಿ, ಗೂಗಲ್‌ ಬಾರ್ಡ್‌ ಎಂದರೇನು?

    • What is Google Bard? ನಮ್ಮ ಭಾಷಾ ಮಾದರಿಗಳ ಶಕ್ತಿ, ಬುದ್ಧಿವಂತಿಕೆ ಮತ್ತು ಸೃಜನಶೀಲತೆಯೊಂದಿಗೆ ಬಾರ್ಡ್‌ ಜಗತ್ತಿನ ಜ್ಞಾನದ ವಿಸ್ತಾರವನ್ನು ಸಂಯೋಜಿಸಲಿದೆ ಎಂದು ಗೂಗಲ್‌ ಸಿಇಒ ಸುಂದರ್‌ ಪಿಚ್ಚೈ ಹೇಳಿದ್ದಾರೆ. 
Google BARD AI Chatbot: ಚಾಟ್‌ಜಿಪಿಟಿಗೆ ಹೊಸ ಪೈಪೋಟಿ, ಗೂಗಲ್‌ ಬಾರ್ಡ್‌ ಎಂದರೇನು?
Google BARD AI Chatbot: ಚಾಟ್‌ಜಿಪಿಟಿಗೆ ಹೊಸ ಪೈಪೋಟಿ, ಗೂಗಲ್‌ ಬಾರ್ಡ್‌ ಎಂದರೇನು? (AP)

Google BARD AI Chatbot:ಈ ಜಗತ್ತೇ ಪ್ರತಿನಿತ್ಯ ಸ್ಪರ್ಧೆಯಲ್ಲಿ, ಜಿದ್ದಿಗೆ ಬಿದ್ದಂತೆ ಬೆಳೆಯುತ್ತಿದೆ. ಎಲ್ಲೆಲ್ಲೂ ಸ್ಪರ್ಧೆ... ಒಬ್ಬ ಟೀ ಅಂಗಡಿ ಹಾಕಿ ಇನ್ನೇನೋ ಹಣ ಎಣಿಸೋಕೆ ಆರಂಭಿಸಬೇಕು ಎನ್ನುವಷ್ಟರಲ್ಲಿ ಅವನ ಎದುರು ಇನ್ನೊಬ್ಬ ಬಂದು ಟೀ ಅಂಗಡಿ ಹಾಕ್ತಾನೆ. ಒಬ್ಬ ಬೇಕರಿ ಹಾಕಿದ್ರೆ ಅದರ ಪಕ್ಕ ಇನ್ನೊಬ್ಬ ಬೇಕರಿ ಹಾಕ್ತಾನೆ. ಒಬ್ಬ ಏನಾದ್ರೂ ಸಂಶೋಧನೆ ಮಾಡಿದ್ರೆ ಮತ್ತೊಬ್ಬ ಅದನ್ನ ಕಾಪಿ ಮಾಡ್ತಾನೆ. ಇದನ್ನು ಕಾಪಿಕ್ಯಾಟ್‌ ಮಾರ್ಕೆಟಿಂಗ್‌ ಅನ್ನುತ್ತಾರೆ. ಈ ಆಧುನಿಕ ಜಗತ್ತಿನಲ್ಲಿ ಯಶಸ್ಸು ಪಡೆಯಲು ಬಹುತೇಕರು ಕಾಪಿಕ್ಯಾಟ್‌ ಮಾರ್ಕೆಟಿಂಗ್‌ ಹಾದಿ ಹಿಡಿಯುತ್ತಾರೆ. ಯಾವುದೋ ಹೊಸ ಪ್ರಯೋಗ ಮಾಡಿ ವೈಫಲ್ಯ ಅನುಭವಿಸುದಕ್ಕಿಂತ ಈಗಾಗಲೇ ಮಾರುಕಟ್ಟೆಯಲ್ಲಿ ಯಶಸ್ಸು ಪಡೆದಿರುವ ವ್ಯವಹಾರವನ್ನೇ ಆರಂಭಿಸುವುದು ಬಹುತೇಕರ ಅಭ್ಯಾಸವಾಗಿಬಿಟ್ಟಿದೆ.

ಟ್ರೆಂಡಿಂಗ್​ ಸುದ್ದಿ

ಭಾರತದ ಅತಿದೊಡ್ಡ ಬಜಾಜ್ ಪಲ್ಸರ್‌ ಮಾರುಕಟ್ಟೆಗೆ; ಪಲ್ಸರ್ NS400Z ಬೈಕ್‌ ದರ 1.85 ಲಕ್ಷ ರೂ, ವಿನ್ಯಾಸ ವಿಶೇಷ ವಿವರ ಹೀಗಿದೆ

ತಿರುಮಲ ತಿರುಪತಿಯಲ್ಲಿ ನವದಂಪತಿಗೆ ವಿಶೇಷ ಶ್ರೀವಾರಿ ದರ್ಶನ ಟಿಕೆಟ್ ಪ್ರಕಟಿಸಿದ ಟಿಟಿಡಿ; ಎಷ್ಟಿವೆ ಕೋಟಾ, ದರ ಇತ್ಯಾದಿ ವಿವರ

Gold Rate Today: ಮತ್ತೆ ಆರಂಭವಾಯ್ತು ಚಿನ್ನ, ಬೆಳ್ಳಿ ದರದಲ್ಲಿನ ಏರಿಳಿತ; ಶನಿವಾರ ಚಿನ್ನದ ದರ ಇಳಿಕೆ, ಬೆಳ್ಳಿ ಏರಿಕೆ

Closing Bell: ಮುಂಬೈ ಷೇರುಪೇಟೆಯ ವಾರಾಂತ್ಯದಲ್ಲಿ ಸೆನ್ಸೆಕ್ಸ್ 732 ಅಂಕಗಳ ಕುಸಿತ; ಈ ಪರಿ ಮಾರುಕಟ್ಟೆ ತಲ್ಲಣಕ್ಕೆ ಕಾರಣವೇನು

ಇರಲಿ, ಸದ್ಯ ಗೂಗಲ್‌ ಕಂಪನಿಯು ಬಾರ್ಡ್‌ ಎನ್ನುವ ಹೊಸ ಗೂಗಲ್‌ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಚಾಟ್‌ಬಾಟ್‌ ಆರಂಭಿಸುವುದಾಗಿ ತಿಳಿಸಿದೆ. ಈ ಕುರಿತು ಗೂಗಲ್‌ನ ಸಿಇಒ ನಮ್ಮ ಭಾರತದ ಸುಂದರ್‌ ಪಿಚ್ಚೈ ಅವರು ವಿವರ ನೀಡಿದ್ದಾರೆ. ಅಂದಹಾಗೆ, ಕೆಲವು ದಿನಗಳ ಹಿಂದೆ ಮೈಕ್ರೊಸಾಫ್ಟ್‌ ಕಂಪನಿಯು ಚಾಟ್‌ಜಿಪಿಟಿ ಎಂಬ ಎಐ ತಂತ್ರಜ್ಞಾನ ಆಧರಿತ ಚಾಟ್‌ಬಾಟ್‌ ಪರಿಚಯಿsತ್ತು. ಎಂತಹ ಸಂಕೀರ್ಣ ಪ್ರಶ್ನೆಗಳಿಗೂ ಉತ್ತರಿಸುವ ಬೇಕಿದ್ದರೆ ನಿಮಗೆ ಪ್ರಬಂಧ, ಕೋಡಿಂಗ್‌ ಬರೆದುಕೊಡುವ ಸಾಮಾರ್ಥ್ಯವಿರುವ ಈ ಚಾಟ್‌ಜಿಪಿಟಿ ಎಲ್ಲರ ಗಮನ ಸೆಳೆದಿತ್ತು. ಅತ್ತ ಮೈಕ್ರೊಸಾಫ್ಟ್‌ ಇಂತಹ ವಿಶೇಷ ತಂತ್ರಜ್ಞಾನ ಪರಿಚಯಿಸಿದ್ದೇ ತಡ, ಇತ್ತ ಗೂಗಲ್‌ ಕೂಡ ಇದೇ ರೀತಿಯ ಹೊಸ ಚಾಟ್‌ಬಾಟ್‌ ಪರಿಚಯಿಸುವ ಸೂಚನೆ ನೀಡಿದೆ. ಇದನ್ನೇ ಹೇಳಿದ್ದು, ಒಬ್ಬ ಟೀ ಅಂಗಡಿ ಇಟ್ಟರೆ ಅಲ್ಲೇ ಪಕ್ಕದಲ್ಲಿ ಮತ್ತೊಬ್ಬ ಪ್ರತಿಸ್ಪರ್ಧೆಗೆ ಬಿದ್ದು ಟೀ ಅಂಗಡಿ ಇಡುತ್ತಾನೆ ಎಂದು.

ಆಪಲ್‌ ಸಿರಿ, ಅಮೆಜಾನ್‌ ಅಲೆಕ್ಸಾ, ಗೂಗಲ್‌ ಹೋಮ್‌ ಇತ್ಯಾದಿಗಳೆಲ್ಲವೂ ಇದೇ ರೀತಿ ಕಂಪನಿಗಳ ನಡುವೆ ಪ್ರತಿಸ್ಪರ್ಧೆಯಿಂದಲೇ ಮಾರುಕಟ್ಟೆಗೆ ಬಂದಿರುವುದು. ಇದೇ ರೀತಿ ಭವಿಷ್ಯದ ಕೃತಕ ಬುದ್ಧಿಮತ್ತೆ ಜಗತ್ತಿನಲ್ಲಿ ಟೆಕ್‌ ದೈತ್ಯರು ಹೊಸ ಪ್ರಯೋಗಗಳಿಗೆ ನಾಂದಿ ಹಾಡಿದ್ದಾರೆ. ಗೂಗಲ್‌ ಕಂಪನಿಯು 'Bard' ಎಂಬ ಹೆಸರಿನ ಹೊಸ ಪ್ರಾಯೋಗಿಕ AI ಚಾಟ್‌ಬಾಟ್ ಅನ್ನು ಪರಿಚಯಿಸಿದೆ. ಸಾನ್ ಫ್ರಾನ್ಸಿಸ್ಕೋ ಮೂಲದ ಚಾಟ್‌ಜಿಪಿಟಿ ಓಪನ್‌ ಎಐಗೆ ಹಲವು ಶತಕೋಟಿ ಡಾಲರ್‌ ಹೂಡಿಕೆ ಮಾಡುವುದಾಗಿ ಮೈಕ್ರೊಸಾಫ್ಟ್‌ ಬಹಿರಂಗಪಡಿಸಿದ ಎರಡು ವಾರಗಳಲ್ಲಿಯೂ ಗೂಗಲ್‌ ಬಾರ್ಡ್‌ ಹೆಸರಿನ ಹೊಸ ಎಐ ಚಾಟ್‌ಬಾಟ್‌ ಪರಿಚಯಿಸುವುದಾಗಿ ಘೋಷಿಸಿದೆ.

OpenAI ಕಂಪನಿಯ ChatGPTಯು ಕೆಲವೇ ಸೆಕೆಂಡ್‌ಗಳಲ್ಲಿ ಬಳಕೆದಾರರರು ವಿನಂತಿಸಿದ ಪ್ರಬಂಧಗಳು, ಕವಿತೆಗಳು ಅಥವಾ ಪ್ರೋಗ್ರಾಮಿಂಗ್ ಕೋಡ್ ಅನ್ನು ಬರೆಯುವ ಸಾಮರ್ಥ್ಯ ಹೊಂದಿದೆ. ಇದೇ ಕಾರಣಕ್ಕಾಗಿ ಇದು ಜಗತ್ತಿನಾದ್ಯಂತ ಸುದ್ದಿಯಲ್ಲಿತ್ತು.

ಇದೀಗ ಹೊಸ ಗೂಗಲ್‌ ಬಾರ್ಡ್‌ ಕುರಿತು ಬ್ಲಾಗ್‌ ಲೇಖನದಲ್ಲಿ ಸುಂದರ ಪಿಚ್ಚೈ ಅವರು ಹೀಗೆ ಬರೆದಿದ್ದಾರೆ. "ನಮ್ಮ ಭಾಷಾ ಮಾದರಿಗಳ ಶಕ್ತಿ, ಬುದ್ಧಿವಂತಿಕೆ ಮತ್ತು ಸೃಜನಶೀಲತೆಯೊಂದಿಗೆ ಬಾರ್ಡ್‌ ಜಗತ್ತಿನ ಜ್ಞಾನದ ವಿಸ್ತಾರವನ್ನು ಸಂಯೋಜಿಸಲಿದೆ" ಎಂದಿದ್ದಾರೆ. ಜನರೇಟಿವ್ ಎಐ ಒಂದು ಗೇಮ್ ಚೇಂಜರ್. ಇಂಟರ್‌ನೆಟ್‌ ಜಮಾನವು ನೆಟ್‌ವರ್ಕಿಂಗ್‌ ದೈತ್ಯರನ್ನು ಮುಳುಗಿಸಿದಂತೆ ಹುಡುಕಾಟ ಮತ್ತು ಮಾಹಿತಿ ಜಗತ್ತಿನಲ್ಲಿ ಹೊಸ ಸ್ಪರ್ಧೆ ಒಡ್ಡುವ ನಿರೀಕ್ಷೆಯಿದೆ.

ಏನಿದು ಬಾರ್ಡ್‌?

LaMDA ಆಧರಿಸಿ ಗೂಗಲ್‌ ಕಂಪನಿಯು ಬಾರ್ಡ್‌ ಅನ್ನು ಪರಿಚಯಿಸುತ್ತಿದೆ. ಇದು ಭಾಷಾ ಮಾದರಿ ಸಂವಾದ ಅಪ್ಲಿಕೇಷನ್‌ ಸಿಸ್ಟಮ್‌ ಆಗಿದ್ದು, ಹಲವು ವರ್ಷಗಳಿಂದ ಇದನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ತಾಜಾ, ಉತ್ತಮ-ಗುಣಮಟ್ಟದ ಪ್ರತಿಕ್ರಿಯೆಗಳನ್ನು ಒದಗಿಸಲು ಇದು ವೆಬ್‌ನಿಂದ ಮಾಹಿತಿಯನ್ನು ಸೆಳೆಯುತ್ತದೆ ಎಂದು ಸುಂದರ್‌ ಪಿಚ್ಚೈ ವಿವರಿಸಿದ್ದಾರೆ. ಚಾಟ್‌ ಜಿಪಿಟಿಗೆ ಮಾಡಲು ಸಾಧ್ಯವಿಲ್ಲದ ಅಪ್‌ಡೇಟ್‌ ಮಾಹಿತಿ ನೀಡಲು ಇದರಿಂದ ಸಾಧ್ಯವಿದೆ ಎಂಬ ಸುಳಿವನ್ನು ಅವರು ಈ ಮೂಲಕ ನೀಡಿದ್ದಾರೆ.

ಗೂಗಲ್‌ನ ಚಾಟ್‌ಬಾಟ್‌ ಇನ್ನೂ ಹಲವು ಕೆಲಸಗಳಿಗೆ ನೆರವಾಗಲಿದೆಯಂತೆ. ಅಂದರೆ, ಪಾರ್ಟಿ ಯೋಜಿಸಲು ಸಲಹೆಯನ್ನು ಇದರಲ್ಲಿ ಕೇಳಬಹುದು. ರೆಫ್ರಿಜರೇಟರ್‌ನ ಬಾಗಿಲು ತೆರೆಯದೆ ಅದರಲ್ಲಿ ಏನು ಆಹಾರ ಉಳಿದಿದೆ ಎಂದು ಇದರ ಮೂಲಕ ತಿಳಿದುಕೊಳ್ಳಬಹುದು. ಮಕ್ಕಳಿಗೆ ಸರಳವಾಗಿ ಕಠಿಣ ವಿಷಯಗಳನ್ನೂ ಹೇಳಿಕೊಡಲು ಈ ಚಾಟ್‌ಬಾಟ್‌ಗೆ ಸಾಧ್ಯವಿದೆಯಂತೆ. ಬಾಹ್ಯಾಕಾಶ ತಂತ್ರಜ್ಞಾನ ಇತ್ಯಾದಿಗಳನ್ನು ಮಕ್ಕಳಿಗೆ ಇದು ಸರಳವಾಗಿ ಅರ್ಥಮಾಡಿಸಲಿದೆಯಂತೆ. "ಬಾರ್ಡ್‌ ಎನ್ನುವುದು ಸೃಜನಶೀಲತೆಯ ತಾಣವಾಗಬಹುದು, ಕುತೂಹಲದ ಲಾಂಚ್‌ಪ್ಯಾಡ್‌ ಆಗಬಹುದು" ಎಂದು ಪಿಚ್ಚೈ ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಈ ಚಾಟ್‌ಬಾಟ್‌ ಎಲ್ಲರಿಗೂ ಲಭಿಸಲಿದೆ ಎಂದು ಗೂಗಲ್‌ ತಿಳಿಸಿದೆ. ಆರಂಭದಲ್ಲಿ ಇದು ಬೇಟಾ ಹಂತದಲ್ಲಿ ಆಯ್ದ ಡೆವಲಪರ್‌ಗಳಿಗೆ ಲಭ್ಯವಾಗಲಿದೆ. ಹೆಚ್ಚಿನ ವಿವರ ಪಡೆಯಲು ಇಲ್ಲಿ ಕ್ಲಿಕ್‌ ಮಾಡಿ.

    ಹಂಚಿಕೊಳ್ಳಲು ಲೇಖನಗಳು