logo
ಕನ್ನಡ ಸುದ್ದಿ  /  Nation And-world  /  'Why Is Divorce Criminal For Muslims?': Kerala Cm Pinarayi Vijayan Defends Triple Talaq

Triple talaq: ಉಳಿದವರಿಗೆ ಡಿವೋರ್ಸ್‌ ಸಿವಿಲ್‌ ಕೇಸ್‌, ಆದ್ರೆ, ಮುಸ್ಲಿಂ ಸಮುದಾಯಕ್ಕೆ ಕ್ರಿಮಿನಲ್‌ ಕೇಸ್‌ ಏಕೆ? ಕೇರಳ ಸಿಎಂ ಪ್ರಶ್ನೆ

Praveen Chandra B HT Kannada

Feb 21, 2023 03:59 PM IST

Triple talaq: ಉಳಿದವರಿಗೆ ಡಿವೋರ್ಸ್‌ ಸಿವಿಲ್‌ ಕೇಸ್‌, ಆದ್ರೆ, ಮುಸ್ಲಿಂ ಸಮುದಾಯಕ್ಕೆ ಕ್ರಿಮಿನಲ್‌ ಕೇಸ್‌ ಏಕೆ? ಕೇರಳ ಸಿಎಂ ಪ್ರಶ್ನೆ (PTI)

    • ವಿಚ್ಛೇದನವನ್ನು ಇತರ ಎಲ್ಲ ಧರ್ಮಗಳಿಗೆ ಸಿವಿಲ್ ಪ್ರಕರಣಗಳಾಗಿ ನೋಡುವಾಗ ತ್ರಿವಳಿ ತಲಾಖ್‌ ನೀಡುವ ಮುಸ್ಲಿಮರಿಗೆ ಮಾತ್ರ ಅದು ಕ್ರಿಮಿನಲ್ ಅಪರಾಧವೇಕೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಪ್ರಶ್ನಿಸಿದ್ದಾರೆ. 
Triple talaq: ಉಳಿದವರಿಗೆ ಡಿವೋರ್ಸ್‌ ಸಿವಿಲ್‌ ಕೇಸ್‌, ಆದ್ರೆ, ಮುಸ್ಲಿಂ ಸಮುದಾಯಕ್ಕೆ ಕ್ರಿಮಿನಲ್‌ ಕೇಸ್‌ ಏಕೆ? ಕೇರಳ ಸಿಎಂ ಪ್ರಶ್ನೆ  (PTI)
Triple talaq: ಉಳಿದವರಿಗೆ ಡಿವೋರ್ಸ್‌ ಸಿವಿಲ್‌ ಕೇಸ್‌, ಆದ್ರೆ, ಮುಸ್ಲಿಂ ಸಮುದಾಯಕ್ಕೆ ಕ್ರಿಮಿನಲ್‌ ಕೇಸ್‌ ಏಕೆ? ಕೇರಳ ಸಿಎಂ ಪ್ರಶ್ನೆ (PTI) (HT_PRINT)

ತಿರುವನಂತಪುರಂ: ತ್ರಿವಳಿ ತಲಾಖ್ ಅನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸಿರುವ ಕೇಂದ್ರ ಸರ್ಕಾರವನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಟೀಕಿಸಿದ್ದಾರೆ. ವಿಚ್ಛೇದನವನ್ನು ಇತರ ಎಲ್ಲ ಧರ್ಮಗಳಿಗೆ ಸಿವಿಲ್ ಪ್ರಕರಣಗಳಾಗಿ ನೋಡುವಾಗ ತ್ರಿವಳಿ ತಲಾಖ್‌ ನೀಡುವ ಮುಸ್ಲಿಮರಿಗೆ ಮಾತ್ರ ಅದು ಕ್ರಿಮಿನಲ್ ಅಪರಾಧವೇಕೆ ಎಂದು ಅವರು ಪ್ರಶ್ನಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Gold Rate: ಬಡವರಿಗೆ ಗಗನ ಕುಸುಮವಾಯ್ತು ಚಿನ್ನ; ಭಾನುವಾರ ಮತ್ತಷ್ಟು ಹೆಚ್ಚಾಯ್ತು ಬೆಳ್ಳಿ , ಬಂಗಾರದ ಬೆಲೆ

ಇವಿಎಂ ವಿವಿಪ್ಯಾಟ್ ಪ್ರಕರಣ; ಅಡ್ಡ ಪರಿಶೀಲನೆ ಮಾಡಿ ಎಂದವರ ವಿರುದ್ಧ ಸುಪ್ರೀಂ ಕೋರ್ಟ್ ಗರಂ, ಎಲ್ಲಾ ಅರ್ಜಿಗಳು ವಜಾ

ರಸ್ತೆ ಮೇಲೆ ಕಾಣಸಿಕ್ತು ತಲೆಕೆಳಗಾದ ಕಾರು, ಅಪಘಾತವಾಗಿಲ್ಲ, ಪಲ್ಟಿಯಾಗಿಲ್ಲ, ಕುತೂಹಲ ಕೆರಳಿಸಿದೆ ಈ ವೈರಲ್ ವಿಡಿಯೋ

Chicken or Egg: ಕೋಳಿ ಮೊದಲಾ ಅಥವಾ ಮೊಟ್ಟೆ ಮೊದಲಾ; ದಶಕಗಳ ಪ್ರಶ್ನೆಗೆ ಕೊನೆಗೂ ಸಿಕ್ಕಿದೆ ಉತ್ತರ

ಭಾರತದಲ್ಲಿ ವಿವಿಧ ಧಾರ್ಮಿಕ ಹಿನ್ನಲೆಯವರು ಇದ್ದಾರೆ. ನಾವು ಪ್ರತಿ ವ್ಯಕ್ತಿಗೆ ವಿಭಿನ್ನ ಶಿಕ್ಷೆಯ ವಿಧಾನವನ್ನು ಬಳಸಬಹುದೇ? ಒಂದು ನಿರ್ದಿಷ್ಟ ಧರ್ಮವನ್ನು ಅನುಸರಿಸುವ ವ್ಯಕ್ತಿಗೆ ಒಂದು ಕಾನೂನು ಮತ್ತು ಇನ್ನೊಂದು ಧರ್ಮವನ್ನು ಅನುಸರಿಸುವವರಿಗೆ ಮತ್ತೊಂದು ಕಾನೂನು ಏಕೆ? ತ್ರಿವಳಿ ತಲಾಖ್ ವಿಷಯದಲ್ಲಿ ಈಗ ಆಗಿರುವುದು ಇದೇ ಅಲ್ಲವೇ?" ಎಂದು ಅವರು ಪ್ರಶ್ನಿಸಿದ್ದಾರೆ.

“ತ್ರಿವಳಿ ತಲಾಖ್ ಅನ್ನು ಅಪರಾಧವೆಂದು ಪರಿಗಣಿಸಲಾಗಿದೆ. ವಿಚ್ಛೇದನ ಎಲ್ಲಾ ಧರ್ಮಗಳಲ್ಲಿ ನಡೆಯುತ್ತದೆ. ಉಳಿದೆಲ್ಲವನ್ನೂ ಸಿವಿಲ್ ಪ್ರಕರಣಗಳಾಗಿ ನೋಡಲಾಗುತ್ತದೆ. ಇದು ಮುಸ್ಲಿಮರಿಗೆ ಮಾತ್ರ ಏಕೆ ಕ್ರಿಮಿನಲ್ ಅಪರಾಧ? ಇದು ಏನೆಂದರೆ, ಮುಸ್ಲಿಂ ವ್ಯಕ್ತಿ ಡಿವೋರ್ಸ್‌ ನೀಡಿದರೆ ಆತನನ್ನು ಜೈಲಿಗೆ ಹಾಕಬಹುದು. ಉಳಿದವರಿಗೆ ಅದು ಸಿವಿಲ್‌ ಕೇಸ್‌. ನಾವೆಲ್ಲ ಭಾರತೀಯರು. ನಾವು ಒಂದು ನಿರ್ದಿಷ್ಟ ಧರ್ಮದಲ್ಲಿ ಹುಟ್ಟಿದ್ದರಿಂದ ನಮಗೆ ನಮ್ಮ ಪೌರತ್ವ ಸಿಕ್ಕಿದೆ ಎಂದು ಹೇಳಬಹುದೇ? ಪೌರತ್ವಕ್ಕೆ ಧರ್ಮವು ಎಂದಾದರೂ ಆಧಾರವಾಗಿದೆಯೇ?" ಎಂದು ಪಿಣರಾಯಿ ವಿಜಯನ್‌ ಪ್ರಶ್ನಿಸಿದ್ದಾರೆ.

ಮುಸ್ಲಿಂ ಮಹಿಳೆಯರಿಗೆ ಕೌಟುಂಬಿಕ ದೌರ್ಜನ್ಯದಿಂದ ಮುಕ್ತಿ ಕಲ್ಪಿಸಿದ ತ್ರಿವಳಿ ತಲಾಕ್‌ ನಿಷೇಧ ಕಾಯಿದೆಯ ಕುರಿತು ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ಮಹಿಳೆಯರ (ವಿವಾಹದ ಮೇಲಿನ ಹಕ್ಕುಗಳ ಸಂರಕ್ಷಣೆ) ಕಾಯಿದೆ 2019 ಎನ್ನುವುದು ತ್ರಿವಳಿ ತಲಾಕ್‌ ನಿಷೇಧಿಸುವ ಕಾಯಿದೆಯಾಗಿದೆ. ಈ ವಿಧೇಯಕಕ್ಕೆ 2019, ಜು.26ರಂದು ಸಂಸತ್ತಿನ ಅಂಗೀಕಾರ ದೊರಕಿದೆ. 2019ರ ಆ.01ರಂದು ವಿಧೇಯಕ ಕಾನೂನಾಗಿ ದೇಶಾದ್ಯಂತ ಜಾರಿಗೆ ಬಂತು.

ಈ ಕಾಯಿದೆಯನ್ವಯ ತ್ರಿವಳಿ ತಲಾಖ್‌ ನೀಡುವುದು ಕ್ರಿಮಿನಲ್‌ ಅಪರಾಧ. ಬಾಯಿಮಾತಿನ ಮೂಲಕ, ಮೆಸೆಜ್‌, ವಾಟ್ಸಪ್‌, ಬರಹದ ಮೂಲಕ ಸೇರಿದಂತೆ ಯಾವುದೇ ರೂಪದಲ್ಲಿ ತ್ರಿವಳಿ ತಲಾಖ್‌ ನೀಡುವುದನ್ನು ಈ ಕಾಯಿದೆ ಅಪರಾಧವಾಗಿ ಪರಿಗಣಿಸುತ್ತದೆ. ಈ ನಿಯಮ ಉಲ್ಲಂಘಿಸಿದರೆ ಗರಿಷ್ಠ 3 ವರ್ಷದವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶವಿದೆ. ಜತೆಗೆ, ಪತ್ನಿಗೆ ಜೀವನಾಂಶವನ್ನೂ ನೀಡಬೇಕು. ಸಂತ್ರಸ್ತೆಗೆ ಮಕ್ಕಳ ಹಕ್ಕು ದೊರಕುತ್ತದೆ.

ಆರ್‌ಎಸ್‌ಎಸ್‌ ಜತೆ ಜಮಾತೆ ಇಸ್ಲಾಮಿ ಸಭೆ, ಇದು ಆಷಾಢಭೂತಿತನ ಎಂದ ಕೇರಳ ಸಿಎಂ ಪಿಣರಾಯಿ

ಜಮಾತೆ ಇಸ್ಲಾಮಿಯು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಜತೆ ಸಂವಾದ ನಡೆಸುತ್ತಿರುವುದಕ್ಕೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಕಟುವಾಗಿ ಟೀಕಿಸಿದ್ದಾರೆ. ಸಂಘ ಪರಿವಾರದ ಜತೆ ಭಿನ್ನಾಭಿಪ್ರಾಯಗಳನ್ನು ಮೀರಿ ಮಾತುಕತೆಯ ಅಗತ್ಯವಿದೆ ಎನ್ನುವ ಜಮಾತೆ ಇಸ್ಲಾಮಿ ವಾದವು ಮುಸ್ಲಿಂ ಸಂಘಟನೆಯ ಆಷಾಢಭೂತಿತನವನ್ನು ತೋರ್ಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.

ಕಳೆದ ತಿಂಗಳು ದೆಹಲಿಯಲ್ಲಿ ಜಮಾತೆ ಇಸ್ಲಾಮಿ ಮತ್ತು ಆರ್‌ಎಸ್‌ಎಸ್‌ ನಡುವೆ ನಡೆದ ಸಂವಾದದ ಕುರಿತು ಕೇರಳ ಮುಖ್ಯಮಂತ್ರಿ ಇದೀಗ ಟೀಕಿಸಿದ್ದು, " ಆ ಸಭೆಯಲ್ಲಿ ಆರ್‌ಎಸ್‌ಎಸ್‌ ಜತೆ ಜಮಾತೆ ಎ ಇಸ್ಲಾಮಿಯು ಏನು ಚರ್ಚಿಸಿದೆ? ಆ ಸಭೆಯ ವಿಷಯ ಏನು ಎನ್ನುವುದು ಜಮಾತೆ ಇಸ್ಲಾಮಿಯ ನಾಯಕರು ಸ್ಪಷ್ಟಪಡಿಸಬೇಕು" ಎಂದರು. ಪೂರ್ತಿ ವರದಿ ಓದಿ.

    ಹಂಚಿಕೊಳ್ಳಲು ಲೇಖನಗಳು