logo
ಕನ್ನಡ ಸುದ್ದಿ  /  Photo Gallery  /  All You Need To Know About Amritpal Singh And Why Amritsar Is In Flames

Amritpal Singh: ಯಾರೀತ ಅಮೃತಪಾಲ್‌ ಸಿಂಗ್?: ಅಮೃತಸರ್‌ ಮತ್ತೆ ಕುದಿಯುವ ಅಗ್ನಿಕುಂಡವಾಗಿದೆ ಏಕೆ?

Feb 24, 2023 05:11 PM IST

ಪಂಜಾಬ್‌ನಲ್ಲಿ ಮತ್ತೆ ಖಲಿಸ್ತಾನ ವಿವಾದ ಭುಗಿಲೆದ್ದಿದ್ದು, ವಾರಿಸ್ ಪಂಜಾಬ್ ದೇ ಮುಖ್ಯಸ್ಥ ಅಮೃತಪಾಲ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಎಚ್ಚರಿಕೆಯ ಸಂದೇಶ ಕಳುಹಿಸುವ ಧೈರ್ಯ ತೋರಿದ್ದಾನೆ. ಅಮೃತಪಾಲ್‌ ಸಿಂಗ್‌ನ ಆಪ್ತ ಸಹಾಯಕ ಲವ್‌ಪ್ರೀತ್ ತೂಫಾನ್ ಬಂಧನ ವಿರೋಧಿಸಿ, ನೂರಾರು ಬೆಂಬಲಿಗರು ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿದ ಒಂದು ದಿನದ ಬಳಿಕ, ಇದೀಗ ಲವ್‌ಪ್ರೀತ್‌ ಸಿಂಗ್‌ನನ್ನು ಬಿಡುಗಡೆ ಮಾಡಲಾಗಿದೆ. ಈ ಕುರಿತ ಬೆಳವಣಿಗೆಗಳ ಕುರಿತು ಇಲ್ಲಿದೆ ಮಾಹಿತಿ..

  • ಪಂಜಾಬ್‌ನಲ್ಲಿ ಮತ್ತೆ ಖಲಿಸ್ತಾನ ವಿವಾದ ಭುಗಿಲೆದ್ದಿದ್ದು, ವಾರಿಸ್ ಪಂಜಾಬ್ ದೇ ಮುಖ್ಯಸ್ಥ ಅಮೃತಪಾಲ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಎಚ್ಚರಿಕೆಯ ಸಂದೇಶ ಕಳುಹಿಸುವ ಧೈರ್ಯ ತೋರಿದ್ದಾನೆ. ಅಮೃತಪಾಲ್‌ ಸಿಂಗ್‌ನ ಆಪ್ತ ಸಹಾಯಕ ಲವ್‌ಪ್ರೀತ್ ತೂಫಾನ್ ಬಂಧನ ವಿರೋಧಿಸಿ, ನೂರಾರು ಬೆಂಬಲಿಗರು ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿದ ಒಂದು ದಿನದ ಬಳಿಕ, ಇದೀಗ ಲವ್‌ಪ್ರೀತ್‌ ಸಿಂಗ್‌ನನ್ನು ಬಿಡುಗಡೆ ಮಾಡಲಾಗಿದೆ. ಈ ಕುರಿತ ಬೆಳವಣಿಗೆಗಳ ಕುರಿತು ಇಲ್ಲಿದೆ ಮಾಹಿತಿ..
ಖಲಿಸ್ತಾನ ಪರ ಸಂಘಟನೆ 'ವಾರಿಸ್ ಪಂಜಾಬ್ ದೇ' ಮುಖ್ಯಸ್ಥ ಅಮೃತಪಾಲ್ ಸಿಂಗ್, ಖಲಿಸ್ತಾನ ವಿಚಾರವನ್ನು ಸರ್ಕಾರಗಳು ಬೌದ್ಧಿಕ ದೃಷ್ಟಿಕೋನದಿಂದ ಅರ್ಥ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಲವ್‌ಪ್ರೀತ್ ತೂಫಾನ್‌ ಬಿಡುಗಡೆಗೆ ಒತ್ತಾಯಿಸಿ, ಗುರುವಾರ ಪಂಜಾಬ್‌ನ ಅಜ್ನಾಲಾದಲ್ಲಿ ಪೊಲೀಸರು ಮತ್ತು ಅಮೃತಪಾಲ್ ಬೆಂಬಲಿಗರ ನಡುವೆ ಘರ್ಷಣೆ ನಡೆದಿರುವುದು ಗಮನಿಸಬೇಕಾದ ಸಂಗತಿ.
(1 / 5)
ಖಲಿಸ್ತಾನ ಪರ ಸಂಘಟನೆ 'ವಾರಿಸ್ ಪಂಜಾಬ್ ದೇ' ಮುಖ್ಯಸ್ಥ ಅಮೃತಪಾಲ್ ಸಿಂಗ್, ಖಲಿಸ್ತಾನ ವಿಚಾರವನ್ನು ಸರ್ಕಾರಗಳು ಬೌದ್ಧಿಕ ದೃಷ್ಟಿಕೋನದಿಂದ ಅರ್ಥ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಲವ್‌ಪ್ರೀತ್ ತೂಫಾನ್‌ ಬಿಡುಗಡೆಗೆ ಒತ್ತಾಯಿಸಿ, ಗುರುವಾರ ಪಂಜಾಬ್‌ನ ಅಜ್ನಾಲಾದಲ್ಲಿ ಪೊಲೀಸರು ಮತ್ತು ಅಮೃತಪಾಲ್ ಬೆಂಬಲಿಗರ ನಡುವೆ ಘರ್ಷಣೆ ನಡೆದಿರುವುದು ಗಮನಿಸಬೇಕಾದ ಸಂಗತಿ.(ANI)
ಖಲಿಸ್ತಾನದೊಂದಿಗಿನ ನಮ್ಮ ಗುರಿಯನ್ನು ಕೆಟ್ಟ ದೃಷ್ಟಿಯಲ್ಲಿ ನೋಡುವುದು ಸರಿಯಲ್ಲ. ಇದನ್ನು ಬೌದ್ಧಿಕ ದೃಷ್ಟಿಕೋನದಿಂದ ನೋಡಬೇಕು. ಇದು ಅನೇಕ ಭೌಗೋಳಿಕ ರಾಜಕೀಯ ಪ್ರಯೋಜನಗಳನ್ನು ಹೊಂದಿದೆ. ಖಲಿಸ್ತಾನ ಒಂದು ಆದರ್ಶವಾಗಿದ್ದು, ಆದರ್ಶಗಳು ಎಂದಿಗೂ ಸಾಯುವುದಿಲ್ಲ. ಈ ಬಗ್ಗೆ ನಾವು ಕೇಂದ್ರ ಸರ್ಕಾರದಿಂದ ಏನನ್ನೂ ಕೇಳುತ್ತಿಲ್ಲ ಎಂದು ಅಮೃತಪಾಲ್‌ ಸಿಂಗ್‌ ಹೇಳಿದ್ದಾರೆ.
(2 / 5)
ಖಲಿಸ್ತಾನದೊಂದಿಗಿನ ನಮ್ಮ ಗುರಿಯನ್ನು ಕೆಟ್ಟ ದೃಷ್ಟಿಯಲ್ಲಿ ನೋಡುವುದು ಸರಿಯಲ್ಲ. ಇದನ್ನು ಬೌದ್ಧಿಕ ದೃಷ್ಟಿಕೋನದಿಂದ ನೋಡಬೇಕು. ಇದು ಅನೇಕ ಭೌಗೋಳಿಕ ರಾಜಕೀಯ ಪ್ರಯೋಜನಗಳನ್ನು ಹೊಂದಿದೆ. ಖಲಿಸ್ತಾನ ಒಂದು ಆದರ್ಶವಾಗಿದ್ದು, ಆದರ್ಶಗಳು ಎಂದಿಗೂ ಸಾಯುವುದಿಲ್ಲ. ಈ ಬಗ್ಗೆ ನಾವು ಕೇಂದ್ರ ಸರ್ಕಾರದಿಂದ ಏನನ್ನೂ ಕೇಳುತ್ತಿಲ್ಲ ಎಂದು ಅಮೃತಪಾಲ್‌ ಸಿಂಗ್‌ ಹೇಳಿದ್ದಾರೆ.(HT_PRINT)
ಪಂಜಾಬ್‌ನಲ್ಲಿ ಭುಗಿಲೆದ್ದಿರುವ ಈ ಹೊಸ ವಿವಾದ ಮುಖ್ಯಮಂತ್ರಿ ಭಗವಂತ್‌ ಮಾನ್‌ ನೇತೃತ್ವದ ಆಪ್‌ ಸರ್ಕಾರಕ್ಕೆ ಹೊಸ ಸವಾಲಾಗಿ ಪರಿಣಮಿಸಿದೆ. ಈಗಾಗಲೇ ಲವ್‌ಪ್ರೀತ್‌ ತೂಫಾನ್‌ ಅವರನ್ನು ಬಿಡುಗಡೆ ಮಾಡಲಾಗಿದ್ದು, ಅಮೃತಸರ್‌ದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
(3 / 5)
ಪಂಜಾಬ್‌ನಲ್ಲಿ ಭುಗಿಲೆದ್ದಿರುವ ಈ ಹೊಸ ವಿವಾದ ಮುಖ್ಯಮಂತ್ರಿ ಭಗವಂತ್‌ ಮಾನ್‌ ನೇತೃತ್ವದ ಆಪ್‌ ಸರ್ಕಾರಕ್ಕೆ ಹೊಸ ಸವಾಲಾಗಿ ಪರಿಣಮಿಸಿದೆ. ಈಗಾಗಲೇ ಲವ್‌ಪ್ರೀತ್‌ ತೂಫಾನ್‌ ಅವರನ್ನು ಬಿಡುಗಡೆ ಮಾಡಲಾಗಿದ್ದು, ಅಮೃತಸರ್‌ದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.(PTI)
ಬಂಧಿತ ಲವಪ್ರೀತ್ ಅಲಿಯಾಸ್ ತೂಫಾನ್ ವಿರುದ್ಧ ಅಪಹರಣ ಸೇರಿದಂತೆ ಹಲವು ಪ್ರಕರಣಳು ದಾಖಲಾಗಿವೆ. ಶುಕ್ರವಾರ ಲವ್‌ಪ್ರೀತ್ ಬಿಡುಗಡೆಯಾದ ಬಳಿಕ, ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಪವಿತ್ರ ಸ್ವರ್ಣ ಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಸಿದ್ದಾರೆ.
(4 / 5)
ಬಂಧಿತ ಲವಪ್ರೀತ್ ಅಲಿಯಾಸ್ ತೂಫಾನ್ ವಿರುದ್ಧ ಅಪಹರಣ ಸೇರಿದಂತೆ ಹಲವು ಪ್ರಕರಣಳು ದಾಖಲಾಗಿವೆ. ಶುಕ್ರವಾರ ಲವ್‌ಪ್ರೀತ್ ಬಿಡುಗಡೆಯಾದ ಬಳಿಕ, ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಪವಿತ್ರ ಸ್ವರ್ಣ ಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಸಿದ್ದಾರೆ.(PTI)
ಅಮೃತಸರದ ಅಜ್ನಾಲಾದಲ್ಲಿ ಶುಕ್ರವಾರ ಬೆಳಗ್ಗೆಯಿಂ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಗುರುವಾರದ ಘಟನೆಯ ನಂತರ ಈ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
(5 / 5)
ಅಮೃತಸರದ ಅಜ್ನಾಲಾದಲ್ಲಿ ಶುಕ್ರವಾರ ಬೆಳಗ್ಗೆಯಿಂ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಗುರುವಾರದ ಘಟನೆಯ ನಂತರ ಈ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.(PTI)

    ಹಂಚಿಕೊಳ್ಳಲು ಲೇಖನಗಳು