logo
ಕನ್ನಡ ಸುದ್ದಿ  /  Photo Gallery  /  In Pics Radhika Pandit Celebrated Her Birthday With Her Husband Yash

Radhika Pandit Birthday: ವಿದೇಶದಲ್ಲಿ ಪತಿ ಯಶ್‌ ಜತೆಗೆ ಕೇಕ್‌ ಕತ್ತರಿಸಿ ಬರ್ತ್‌ಡೇ ಆಚರಿಸಿದ ರಾಧಿಕಾ ಪಂಡಿತ್‌

Mar 08, 2023 04:16 PM IST

Radhika Pandit Birthday: ಸ್ಯಾಂಡಲ್‌ವುಡ್‌ ಸಿಂಡ್ರೆಲಾ ರಾಧಿಕಾ ಪಂಡಿತ್‌ ಸಿನಿಮಾದಿಂದ ದೂರ ಉಳಿದರೂ, ಸೋಷಿಯಲ್‌ ಮೀಡಿಯಾ ಮೂಲಕ ಅಭಿಮಾನಿಗಳಿಗೆ ಸದಾ ಹತ್ತಿರ. ಇದೀಗ ಬರ್ತ್‌ಡೇ ಸಂಭ್ರಮದಲ್ಲಿರುವ ರಾಧಿಕಾ, ತಮ್ಮ ಹುಟ್ಟುಹಬ್ಬದ ಕ್ಷಣಗಳ ಫೋಟೋಗಳನ್ನು ಜಾಲತಾಣದಲ್ಲಿ ಶೇರ್‌ ಮಾಡಿದ್ದಾರೆ. ವಿದೇಶದಲ್ಲಿ ಪತಿ ಯಶ್‌ ಮತ್ತು ಕುಟುಂಬದ ಜತೆಗೆ ಸೆಲೆಬ್ರೇಟ್‌ ಮಾಡಿದ್ದಾರೆ.

  • Radhika Pandit Birthday: ಸ್ಯಾಂಡಲ್‌ವುಡ್‌ ಸಿಂಡ್ರೆಲಾ ರಾಧಿಕಾ ಪಂಡಿತ್‌ ಸಿನಿಮಾದಿಂದ ದೂರ ಉಳಿದರೂ, ಸೋಷಿಯಲ್‌ ಮೀಡಿಯಾ ಮೂಲಕ ಅಭಿಮಾನಿಗಳಿಗೆ ಸದಾ ಹತ್ತಿರ. ಇದೀಗ ಬರ್ತ್‌ಡೇ ಸಂಭ್ರಮದಲ್ಲಿರುವ ರಾಧಿಕಾ, ತಮ್ಮ ಹುಟ್ಟುಹಬ್ಬದ ಕ್ಷಣಗಳ ಫೋಟೋಗಳನ್ನು ಜಾಲತಾಣದಲ್ಲಿ ಶೇರ್‌ ಮಾಡಿದ್ದಾರೆ. ವಿದೇಶದಲ್ಲಿ ಪತಿ ಯಶ್‌ ಮತ್ತು ಕುಟುಂಬದ ಜತೆಗೆ ಸೆಲೆಬ್ರೇಟ್‌ ಮಾಡಿದ್ದಾರೆ.
ಸ್ಯಾಂಡಲ್‌ವುಡ್‌ ನಟಿ ರಾಧಿಕಾ ಪಂಡಿತ್‌ ಮಂಗಳವಾರ 39ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಈ ಸಲದ ಬರ್ತ್‌ಡೇಯನ್ನು ವಿದೇಶದಲ್ಲಿ ಆಚರಿಸಿಕೊಂಡಿದ್ದಾರೆ ರಾಧಿಕಾ.  (Instagram/ Radhika Pandit)
(1 / 5)

''ಈ ಬಾರಿ ನಾನು ಹುಟ್ಟುಹಬ್ಬಕ್ಕೆ ಹೊರ ಹೋಗುತ್ತಿದ್ದೇನೆ. ಆದ್ದರಿಂದ ಈ ಬಾರಿ ನಿಮ್ಮೊಂದಿಗೆ ಬರ್ತ್‌ಡೇ ಆಚರಿಸಿಕೊಳ್ಳಲಾಗುತ್ತಿಲ್ಲ. ನನಗೆ ಗೊತ್ತು ಇದು ನಿಮಗೆ ಬೇಸರವಾಗಿದೆ, ಆದರೆ ಮತ್ತೆ ನಿಮ್ಮೆಲ್ಲರನ್ನೂ ಭೇಟಿ ಮಾಡುತ್ತೇನೆ'' ಎಂದು ರಾಧಿಕಾ ಪಂಡಿತ್‌ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದರು. (Instagram/ Radhika Pandit)
(2 / 5)

ಬರ್ತ್‌ಡೇ ಸಂಭ್ರಮದಲ್ಲಿರುವ ರಾಧಿಕಾ, ತಮ್ಮ ಹುಟ್ಟುಹಬ್ಬದ ಕ್ಷಣಗಳ ಫೋಟೋಗಳನ್ನು ಜಾಲತಾಣದಲ್ಲಿ ಶೇರ್‌ ಮಾಡಿದ್ದಾರೆ. ವಿದೇಶದಲ್ಲಿ ಪತಿ ಯಶ್‌ ಮತ್ತು ಕುಟುಂಬದ ಜತೆಗೆ ಸೆಲೆಬ್ರೇಟ್‌ ಮಾಡಿದ್ದಾರೆ.
(3 / 5)

ಪತಿ ಯಶ್‌ ಮತ್ತು ಮಕ್ಕಳ ಜತೆಗೂಡಿ ವಿದೇಶಕ್ಕೆ ಹಾರಿದ್ದಾರೆ. ಅಲ್ಲಿಯೇ ಕೇಕ್‌ ಕತ್ತರಿಸಿ ಬರ್ತ್‌ಡೇ ಆಚರಿಸಿಕೊಂಡಿದ್ದಾರೆ ರಾಧಿಕಾ. (Instagram/ Radhika Pandit)  
(4 / 5)

ಸೋಷಿಯಲ್‌ ಮೀಡಿಯಾದಲ್ಲಿ ಶುಭಾಶಯ ತಿಳಿಸಿದ ಎಲ್ಲರಿಗೂ ಮನದುಂಬಿ ಧನ್ಯವಾದ ತಿಳಿಸಿದ್ದಾರೆ. (Instagram/ Radhika Pandit)
(5 / 5)

    ಹಂಚಿಕೊಳ್ಳಲು ಲೇಖನಗಳು