logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mayanti Langer: ಭಾರತದ ಪ್ರಸಿದ್ಧ ಕ್ರೀಡಾ ಪತ್ರಕರ್ತೆ ಕುರಿತ ಕೆಲ ಆಸಕ್ತಿದಾಯಕ ಸಂಗತಿಗಳು

Mayanti Langer: ಭಾರತದ ಪ್ರಸಿದ್ಧ ಕ್ರೀಡಾ ಪತ್ರಕರ್ತೆ ಕುರಿತ ಕೆಲ ಆಸಕ್ತಿದಾಯಕ ಸಂಗತಿಗಳು

Mar 29, 2023 10:34 AM IST

mayanti langer interesting facts : ಮಯಾಂತಿ ಲ್ಯಾಂಗರ್ ಭಾರತ ಕ್ರೀಡಾ ಜಗತ್ತಿನಲ್ಲಿ ಪ್ರಸಿದ್ಧ ಹೆಸರು. ಕಳೆದ ಹಲವು ವರ್ಷಗಳಿಂದ ಅವರು ದೇಶದ ಅಗ್ರ ಕ್ರೀಡಾ ನಿರೂಪಕಿಯಾಗಿ ಹೆಸರು ಗಳಿಸಿದ್ದಾರೆ. ಪ್ರಮುಖ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾ ಚಾನೆಲ್‌ಗಳಲ್ಲಿ ಮುಖ್ಯವಾಣಿಗೆ ಬಂದು ದೇಶ-ವಿದೇಶಗಳ ಕ್ರೀಡಾಭಿಮಾನಿಗಳ ನೆಚ್ಚಿನ ನಿರೂಪಕಿಯಾಗಿದ್ದಾರೆ. 2010ರ ಕಾಮನ್‌ವೆಲ್ತ್ ಗೇಮ್ಸ್, 2010ರ ಫಿಫಾ ವಿಶ್ವಕಪ್, 2011ರ ಏಕದಿನ ಕ್ರಿಕೆಟ್ ವಿಶ್ವಕಪ್ ಸೇರಿದಂತೆ ಐಪಿಎಲ್‌ ಹಾಗೂ ಇಂಡಿಯನ್ ಸೂಪರ್ ಲೀಗ್‌ನಲ್ಲೂ ಲ್ಯಂಗರ್‌ ನಿರೂಪಣೆ ಇದ್ದೇ ಇದೆ. ಇವರಿಗೆ ಒಂದು ಅಭಿಮಾನಿ ಬಳಗವೇ ಇದೆ ಎಂಬುದು ಕೂಡಾ ಸತ್ಯ.

ಕ್ರೀಡಾ ಪತ್ರಕರ್ತೆ ಮಯಾಂತಿ ಲ್ಯಾಂಗರ್‌ ಅವರ ಕುರಿತ ಆಸಕ್ತಿದಾಯಕ ಅಂಶಗಳು ಇಲ್ಲಿವೆ.
(1 / 8)

ಭಾರತೀಯ ಕ್ರೀಡಾಲೋಕದಲ್ಲಿ ಪರಿಚಿತ ಮುಖ ಮಯಾಂತಿ ಲ್ಯಾಂಗರ್.  ಪ್ರಸ್ತುತ ಮಯಾಂತಿ ಲ್ಯಾಂಗರ್ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಒಂದು ಭಾಗವಾಗಿದ್ದಾರೆ. ತಮ್ಮ ವೃತ್ತಿಜೀವನವನ್ನು ಫುಟ್‌ಬಾಲ್‌ನೊಂದಿಗೆ ಪ್ರಾರಂಭಿಸಿದ ಲ್ಯಾಂಗರ್‌,  ಈಗೀಗ ಹೆಚ್ಚಾಗಿ ಕ್ರಿಕೆಟ್ ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ.
(2 / 8)

ಆಟದ ಸೂಕ್ಷ್ಮ ವ್ಯತ್ಯಾಸಗಳನ್ನು ಅರ್ಥಮಾಡಿಕೊಂಡು, ಅದನ್ನು ಆಕರ್ಷಕವಾಗಿ ಪ್ರೇಕ್ಷಕರಿಗೆ ತಲುಪಿಸುವಲ್ಲಿ ಮಯಾಂತಿ ಹೆಚ್ಚು ಮೆಚ್ಚುಗೆ ಪಡೆದಿದ್ದಾರೆ. ಇದರೊಂದಿಗೆ ಅವರ ಸೌಂದರ್ಯದ ಬಗ್ಗೆಯೂ ಸಾಕಷ್ಟು ಚರ್ಚೆಯಾಗುತ್ತದೆ.
(3 / 8)

ಮಯಾಂತಿ 2006ರಿಂದ ಕ್ರೀಡಾ ಪತ್ರಕರ್ತೆಯಾಗಿ ವೃತ್ತಿಜೀವನ ಪ್ರಾರಂಭಿಸಿದರು. ಆರಂಭದಲ್ಲಿ ಅವರು ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದರು. ಅಮೆರಿಕದಲ್ಲಿ ಓದುತ್ತಿದ್ದಾಗ ಮಯಾಂತಿ ಫುಟ್ಬಾಲ್ ಬಗ್ಗೆ ಹೆಚ್ಚು ಒಲವು ಹೊಂದಿದ್ದರು. ಫುಟ್ಬಾಲ್ ತಂಡದ ಸದಸ್ಯೆಯೂ ಆಗಿದ್ದರು. ಕಾಲ್ಚೆಂಡು ಆಟದ ಎಲ್ಲಾ ನಿಯಮಗಳನ್ನು ತಿಳಿದಿದ್ದ ಅವರು, ಬೀಚ್ ಫುಟ್‌ಬಾಲ್‌ಗೆ ಸೇರಿಕೊಂಡರು. ನಂತರ ಆಂಕರ್ ಆಗಿ ಮಿಂಚಲು ಆರಂಭಿಸಿದರು. ಆರಂಭದಲ್ಲೇ ಅವರ ಕೆಲಸ ಹೆಚ್ಚು ಪ್ರಶಂಸೆಗೊಳಗಾಯಿತು.
(4 / 8)

ಆರಂಭದಲ್ಲಿ ಝೀ ಸ್ಪೋರ್ಟ್ಸ್‌ನಲ್ಲಿ ಅವಕಾಶ ಪಡೆದ ಲ್ಯಾಂಗರ್, ನಂತರ ESPN ತಂಡದ ಭಾಗವಾದರು. ಅಲ್ಲಿ ಅವರು 2010ರ ಫಿಫಾ ವಿಶ್ವಕಪ್ ಅನ್ನು ಕವರ್ ಮಾಡಿದರು. ಆ ವರ್ಷ ದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಕೂಡಾ ಮಾಯಾಂತಿ ನಡೆಸಿಕೊಟ್ಟಿದ್ದರು.
(5 / 8)

ನಂತರ ಮಯಾತಿ ಸ್ಟಾರ್ ಸ್ಪೋರ್ಟ್ಸ್‌ ಮೂಲಕ ಐಪಿಎಲ್‌ನ ಭಾಗವಾದರು. ಅವರು 2011, 2015 ಮತ್ತು 2019ರ ವಿಶ್ವಕಪ್‌ನಲ್ಲೂ ಗುರುತಿಸಿಕೊಂಡಿದ್ದಾರೆ.
(6 / 8)

ಮಯಾಂತಿ ಲ್ಯಾಂಗರ್ ಅವರು ಕ್ರಿಕೆಟಿಗ ಸ್ಟುವರ್ಟ್ ಬಿನ್ನಿ ಅವರನ್ನು ವಿವಾಹವಾದರು. ಇಬ್ಬರಿಗೂ ಒಬ್ಬ ಮಗನಿದ್ದಾನೆ. ಸ್ಟುವರ್ಟ್ ಬಿನ್ನಿ ಅವರು ಕರ್ನಾಟಕ, ರಾಜಸ್ಥಾನ ರಾಯಲ್ಸ್ ಮತ್ತು ಭಾರತದ ಪರ ಕ್ರಿಕೆಟ್ ಆಡಿದ್ದಾರೆ.
(7 / 8)

ಮಯಾಂತಿ ಅವರ ಮಾವ, ಅಂದರೆ ಪತಿ ಸ್ಟುವರ್ಟ್ ಬಿನ್ನಿ ತಂದೆ ರೋಜರ್ ಬಿನ್ನಿ ಕೂಡ ಕ್ರಿಕೆಟಿಗ. ಪ್ರಸ್ತುತ ಅವರು ಬಿಸಿಸಿಐ ಅಧ್ಯಕ್ಷರಾಗಿದ್ದಾರೆ.
(8 / 8)

    ಹಂಚಿಕೊಳ್ಳಲು ಲೇಖನಗಳು