logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Gujarat Assembly Election 2022: ಗುಜರಾತ್‌ ಮೊದಲ ಹಂತದಲ್ಲಿ ಕಡಿಮೆ ಮತದಾನ: ಚುನಾವಣಾ ಆಯೋಗ ಹೇಳುವುದೇನು?

Gujarat Assembly Election 2022: ಗುಜರಾತ್‌ ಮೊದಲ ಹಂತದಲ್ಲಿ ಕಡಿಮೆ ಮತದಾನ: ಚುನಾವಣಾ ಆಯೋಗ ಹೇಳುವುದೇನು?

Dec 03, 2022 09:01 PM IST

ಅಹಮದಾಬಾದ್:‌ ಗುಜರಾತ್‌ ವಿಧಾನಸಭೆ ಚುನಾವಣೆಗೆ ಇದೇ ಡಿ.01(ಗುರರುವಾರ) ಮೊದಲ ಹಂತದ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದೆ. ಆದರೆ ಮೊದಲ ಹಂತದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮತ ಚಲಾವಣೆಯಾಗಿದ್ದು, ಈ ಕುರಿತು ಚುನಾವಣಾ ಆಯೋಗ ಬೇಸರ ವ್ಯಕ್ತಪಡಿಸಿದೆ. ಚುನಾವಣೆಗಳ ಬಗ್ಗೆ ನಗರ ಪ್ರದೇಶದಲ್ಲಿ ಕಂಡುಬರುವ ನಿರಾಸಕ್ತಿಗೆ ಯಾವುದೇ ಮದ್ದಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ. ಈ ಕುರಿತಾದ ಮಾಹಿತಿ ಇಲ್ಲಿದೆ..

  • ಅಹಮದಾಬಾದ್:‌ ಗುಜರಾತ್‌ ವಿಧಾನಸಭೆ ಚುನಾವಣೆಗೆ ಇದೇ ಡಿ.01(ಗುರರುವಾರ) ಮೊದಲ ಹಂತದ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದೆ. ಆದರೆ ಮೊದಲ ಹಂತದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮತ ಚಲಾವಣೆಯಾಗಿದ್ದು, ಈ ಕುರಿತು ಚುನಾವಣಾ ಆಯೋಗ ಬೇಸರ ವ್ಯಕ್ತಪಡಿಸಿದೆ. ಚುನಾವಣೆಗಳ ಬಗ್ಗೆ ನಗರ ಪ್ರದೇಶದಲ್ಲಿ ಕಂಡುಬರುವ ನಿರಾಸಕ್ತಿಗೆ ಯಾವುದೇ ಮದ್ದಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ. ಈ ಕುರಿತಾದ ಮಾಹಿತಿ ಇಲ್ಲಿದೆ..
ಗುಜರಾತ್‌ನಲ್ಲಿ ಮೊದಲ ಹಂತದ ಚುನಾವಣೆಯಲ್ಲಿ ನಿರಾಶಾದಾಯಕ ಮತದಾನ ಬೇಸರದ ಸಂಗತಿ ಎಂದು ಚುನಾವಣಾ ಆಯೋಗ ಹೇಳಿದೆ. "ನಗರ ನಿರಾಸಕ್ತಿ" ಯನ್ನು ಹಿಮ್ಮೆಟ್ಟಿಸಬೇಕಿರುವುದು ಇಂದಿನ ತುರ್ತು ಅವಶ್ಯ ಎಂದು ಚುನಾವಣಾ ಆಯೋಗ ಮಾರ್ಮಿಕವಾಗಿ ಹೇಳಿದೆ. (ಸಂಗ್ರಹ ಚಿತ್ರ)
(1 / 5)
ಗುಜರಾತ್‌ನಲ್ಲಿ ಮೊದಲ ಹಂತದ ಚುನಾವಣೆಯಲ್ಲಿ ನಿರಾಶಾದಾಯಕ ಮತದಾನ ಬೇಸರದ ಸಂಗತಿ ಎಂದು ಚುನಾವಣಾ ಆಯೋಗ ಹೇಳಿದೆ. "ನಗರ ನಿರಾಸಕ್ತಿ" ಯನ್ನು ಹಿಮ್ಮೆಟ್ಟಿಸಬೇಕಿರುವುದು ಇಂದಿನ ತುರ್ತು ಅವಶ್ಯ ಎಂದು ಚುನಾವಣಾ ಆಯೋಗ ಮಾರ್ಮಿಕವಾಗಿ ಹೇಳಿದೆ. (ಸಂಗ್ರಹ ಚಿತ್ರ)(HT_PRINT)
ಗುಜರಾತ್ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನದಲ್ಲಿ ಸೂರತ್, ರಾಜ್‌ಕೋಟ್ ಮತ್ತು ಜಾಮ್‌ನಗರದಲ್ಲಿ, ರಾಜ್ಯದ ಸರಾಸರಿ ಶೇ. 63.3 ರಷ್ಟು ಮತದಾನವಾಗಿದೆ. 2017ರ ಮೊದಲ ಹಂತದ ಚುನಾವಣೆಯಲ್ಲಿ ರಾಜ್ಯದಲ್ಲಿ ಶೇ.66.75ರಷ್ಟು ಮತದಾನವಾಗಿತ್ತು ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. (ಸಂಗ್ರಹ ಚಿತ್ರ)
(2 / 5)
ಗುಜರಾತ್ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನದಲ್ಲಿ ಸೂರತ್, ರಾಜ್‌ಕೋಟ್ ಮತ್ತು ಜಾಮ್‌ನಗರದಲ್ಲಿ, ರಾಜ್ಯದ ಸರಾಸರಿ ಶೇ. 63.3 ರಷ್ಟು ಮತದಾನವಾಗಿದೆ. 2017ರ ಮೊದಲ ಹಂತದ ಚುನಾವಣೆಯಲ್ಲಿ ರಾಜ್ಯದಲ್ಲಿ ಶೇ.66.75ರಷ್ಟು ಮತದಾನವಾಗಿತ್ತು ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. (ಸಂಗ್ರಹ ಚಿತ್ರ)(ANI)
ಹಲವು ಕ್ಷೇತ್ರಗಳಲ್ಲಿ ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಳವಾಗಿದ್ದರೂ, ಈ ಪ್ರಮುಖ ಜಿಲ್ಲೆಗಳ ನಗರ ನಿರಾಸಕ್ತಿಯಿಂದ ಸರಾಸರಿ ಮತದಾನದ ಅಂಕಿ ಅಂಶವು ಕಡಿಮೆಯಾಗಿದೆ ಎಂದು ಚುನಾವಣಾ ಆಯೋಗ ಬೇಸರ ವ್ಯಕ್ತಪಡಿಸಿದೆ. (ಸಂಗ್ರಹ ಚಿತ್ರ)
(3 / 5)
ಹಲವು ಕ್ಷೇತ್ರಗಳಲ್ಲಿ ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಳವಾಗಿದ್ದರೂ, ಈ ಪ್ರಮುಖ ಜಿಲ್ಲೆಗಳ ನಗರ ನಿರಾಸಕ್ತಿಯಿಂದ ಸರಾಸರಿ ಮತದಾನದ ಅಂಕಿ ಅಂಶವು ಕಡಿಮೆಯಾಗಿದೆ ಎಂದು ಚುನಾವಣಾ ಆಯೋಗ ಬೇಸರ ವ್ಯಕ್ತಪಡಿಸಿದೆ. (ಸಂಗ್ರಹ ಚಿತ್ರ)(Ashok Munjani)
ಅದೇ ರೀತಿ ಹಿಮಾಚಲ ಪ್ರದೇಶದಲ್ಲಿ ಶಿಮ್ಲಾದ ನಗರ ವಿಧಾನಸಭಾ ಕ್ಷೇತ್ರವು, ಅತ್ಯಂತ ಕಡಿಮೆ ಅಂದರೆ ಶೇ.62.53ರಷ್ಟು ಮತದಾನವನ್ನು ದಾಖಲಿಸಿದೆ. ರಾಜ್ಯದ ಸರಾಸರಿ ಶೇಕಡಾವಾರು ಮತದಾನ ಶೇ. 75.6ರಷ್ಟಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. (ಸಂಗ್ರಹ ಚಿತ್ರ)
(4 / 5)
ಅದೇ ರೀತಿ ಹಿಮಾಚಲ ಪ್ರದೇಶದಲ್ಲಿ ಶಿಮ್ಲಾದ ನಗರ ವಿಧಾನಸಭಾ ಕ್ಷೇತ್ರವು, ಅತ್ಯಂತ ಕಡಿಮೆ ಅಂದರೆ ಶೇ.62.53ರಷ್ಟು ಮತದಾನವನ್ನು ದಾಖಲಿಸಿದೆ. ರಾಜ್ಯದ ಸರಾಸರಿ ಶೇಕಡಾವಾರು ಮತದಾನ ಶೇ. 75.6ರಷ್ಟಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. (ಸಂಗ್ರಹ ಚಿತ್ರ)(AP)
ಸೌರಾಷ್ಟ್ರ, ಕಚ್ ಮತ್ತು ದಕ್ಷಿಣ ಗುಜರಾತ್‌ನ 89 ಸ್ಥಾನಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆದಿದ್ದು, ಅಹಮದಾಬಾದ್, ವಡೋದರಾ ಮತ್ತು ಗಾಂಧಿನಗರ ಸೇರಿದಂತೆ ಉತ್ತರ ಮತ್ತು ಮಧ್ಯ ಗುಜರಾತ್‌ನ 14 ಜಿಲ್ಲೆಗಳಲ್ಲಿ ಹರಡಿರುವ, 93 ಕ್ಷೇತ್ರಗಳಿಗೆ ಇದೇ ಡಿ.05(ಸೋಮವಾರ) ಮತದಾನ ನಡೆಯಲಿದೆ. (ಸಂಗ್ರಹ ಚಿತ್ರ)
(5 / 5)
ಸೌರಾಷ್ಟ್ರ, ಕಚ್ ಮತ್ತು ದಕ್ಷಿಣ ಗುಜರಾತ್‌ನ 89 ಸ್ಥಾನಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆದಿದ್ದು, ಅಹಮದಾಬಾದ್, ವಡೋದರಾ ಮತ್ತು ಗಾಂಧಿನಗರ ಸೇರಿದಂತೆ ಉತ್ತರ ಮತ್ತು ಮಧ್ಯ ಗುಜರಾತ್‌ನ 14 ಜಿಲ್ಲೆಗಳಲ್ಲಿ ಹರಡಿರುವ, 93 ಕ್ಷೇತ್ರಗಳಿಗೆ ಇದೇ ಡಿ.05(ಸೋಮವಾರ) ಮತದಾನ ನಡೆಯಲಿದೆ. (ಸಂಗ್ರಹ ಚಿತ್ರ)(AP)

    ಹಂಚಿಕೊಳ್ಳಲು ಲೇಖನಗಳು